ಕೊಪ್ಪಳದಲ್ಲಿ ಪಿಹೆಚ್ಸಿ ವೈದ್ಯರ ನಿರ್ಲಕ್ಷ್ಯದಿಂದ ಬಾಲಕ ಸಾವು ಆರೋಪ; ಕಿಟಕಿ, ಬಾಗಿಲು ಮುರಿದು ಬಾಲಕನ ಸಂಬಂಧಿಕರ ಆಕ್ರೋಶ
ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ರೂ ವೈದ್ಯರಿಲ್ಲದ ಕಾರಣ ಬಾಲಕನಿಗೆ ಚಿಕಿತ್ಸೆ ನೀಡಿಲ್ಲ. ಸುಮಾರು 2 ಗಂಟೆ ಕಾಲ ಬಾಲಕ ಸಾವು ಬದುಕಿನ ಹೋರಾಟ ನಡೆಸಿದ್ದ. ವೈದ್ಯರಿಲ್ಲದೆ ಚಿಕಿತ್ಸೆ ಸಿಗದೆ ಬಾಲಕ ಮೂರ್ತಿ ಮೃತಪಟ್ಟಿದ್ದಾನೆಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ: ಪಿಹೆಚ್ಸಿ ವೈದ್ಯರ ನಿರ್ಲಕ್ಷ್ಯದಿಂದ ಬಾಲಕ ಮೃತಪಟ್ಟ ಆರೋಪ ಕೊಪ್ಪಳದಲ್ಲಿ ಕೇಳಿ ಬಂದಿದೆ. ಕೊಪ್ಪಳ ಜಿಲ್ಲೆಯ ಕನಕಗಿರಿ ಆರೋಗ್ಯ ಕೇಂದ್ರದ ಮೇಲೆ ಮೃತ ಬಾಲಕನ ಸಂಬಂಧಿಕರು ದಾಳಿ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.ಯುಗಾದಿ ಹಬ್ಬದ ಮರುದಿನ ಬಣ್ಣದೋಕುಳಿ ಹಿನ್ನೆಲೆ ಬಣ್ಣದೋಕುಳಿ ಆಡಿ ಬಳಿಕ ಕೆರೆಯಲ್ಲಿ ಈಜಲು ಹೋಗಿದ್ದ 13 ವರ್ಷದ ಬಾಲಕ ಮೂರ್ತಿ, ಕೆರೆಯಲ್ಲಿ ಮುಳುಗಿ ಅಸ್ವಸ್ಥನಾಗಿದ್ದ. ಹೀಗಾಗಿ ಅಸ್ವಸ್ಥನನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ರೂ ವೈದ್ಯರಿಲ್ಲದ ಕಾರಣ ಬಾಲಕನಿಗೆ ಚಿಕಿತ್ಸೆ ನೀಡಿಲ್ಲ. ಸುಮಾರು 2 ಗಂಟೆ ಕಾಲ ಬಾಲಕ ಸಾವು ಬದುಕಿನ ಹೋರಾಟ ನಡೆಸಿದ್ದ. ವೈದ್ಯರಿಲ್ಲದೆ ಚಿಕಿತ್ಸೆ ಸಿಗದೆ ಬಾಲಕ ಮೂರ್ತಿ ಮೃತಪಟ್ಟಿದ್ದಾನೆಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲಿ ಇವತ್ತು ಬಣ್ಣದ ಸಂಭ್ರಮ. ಅಲ್ಲಿನ ಜನ ಇವತ್ತು ಖುಷಿಯಿಂದನೇ ಬಣ್ಣ ಎರಚಿ ಖುಷಿ ಪಟ್ಟಿದ್ರು. ಆದ್ರೆ ಸಂಜೆ ಆ ಇಡೀ ನಗರಕ್ಕೆ ಶಾಕ್ ಎದುರಾಗಿತ್ತು.ಯಾಕಂದ್ರೆ ಬಣ್ಣ ಆಡಿ ಸ್ನಾನಕ್ಕೆ ಹೋದ ಇಬ್ಬರು ಅಲ್ಲಿ ಸಾವನ್ನಪ್ಪಿದರು. ಆದ್ರೆ ಓರ್ವ ಬಾಲಕ ವೈದ್ಯರ ನಿರ್ಲಕ್ಷ್ಯ ದಿಂದ ಬಲಿಯಾಗಿರೋ ಆರೋಪ ಕೇಳಿ ಬಂದಿತ್ತು. ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕ ಬಲಿಯಾಗಿದ್ದೇ ತಡ, ಇಡೀ ಪ್ರಾಥಮಿಕ ಆರೋಗ್ಯ ಕೇಂದ್ರ ರಣಾಂಗಣವಾಗಿತ್ತು.
ಕೊಪ್ಪಳ ಜಿಲ್ಲೆ ಕನಕಗಿರಿ ಸಮುದಾಯ ಆರೋಗ್ಯ ಕೇಂದ್ರ ಇವತ್ತು ಅಕ್ಷರಶಃ ರಣಾಂಗಣವಾಗಿತ್ತು.ಬಾಗಿಲು ಕಿಟಕಿ, ಖುರ್ಚಿ ಚೆಲ್ಲಾಪಿಲ್ಲಿಯಾಗಿದ್ವು.ಇದಕ್ಕೆಲ್ಲ ಕಾರಣ ಬಾಲಕನ ಸಾವು. ಇಂದು ವೈದ್ಯರ ನಿರ್ಲಕ್ಷ್ಯಕ್ಜೆ 13 ವರ್ಷದ ಬಾಲಕ ಮೂರ್ತಿ ಸಾವನ್ನಪ್ಪಿದ್ದಾನೆ.ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಾಲಕನ ದಾಖಲಿಸಿ ಎರಡು ಗಂಟೆ ಕಳೆದ್ರೂ ವೈದ್ಯರು ಚಿಕಿತ್ಸೆ ನೀಡಿಲ್ಲ. ವೈದ್ಯರ ನಿರ್ಲಕ್ಷ್ಯಕ್ಜೆ ಬಾಲಕ ಬಲಿಯಾಗಿರೋ ಆರೋಪದ ಹಿನ್ನಲೆ ಬಾಲಕನ ಸಂಬಂಧಿಕರು ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಇದಲ್ಲದೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಂಧಲೆ ಮಾಡಿ ಕಿಟಕಿ, ಬಾಗಿಲು ಖುರ್ಚಿ ಎಲ್ಲ ಮುರಿದು ಹಾಕಿದ್ದಾರೆ. ಸಾವು ಬದುಕಿನ ಮಧ್ಯೆ ಹೋರಾಟ ಮಾಡ್ತಿದ್ದ ಬಾಲಕನಿಗೆ ಚಿಕಿತ್ಸೆ ನೀಡಲು ವಿಳಂಬ ಮಾಡಿದ ವೈದ್ಯರ ವಿರುದ್ದ ಬಾಲಕನ ಸಂಭಂದಿಕರು ಹಿಡಿಶಾಪ ಹಾಕಿದ್ರು.ಎರಡು ಗಂಟೆ ಕಾದ್ರೂ ಒಬ್ಬನೇ ವೈದ್ಯ ಬರಲಿಲ್ಲ, ಹೀಗಾಗಿ 13 ವರ್ಷದ ಬಾಲಕ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ. ಇದರಿಂದ ರೊಚ್ಚಿಗೆದ್ದ ಬಾಲಕನ ಸಂಬಂಧಿಕರು ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ಸಹಿತ ಮಾಡಿದ್ರು.
ಇನ್ನೂ ಈ ಘಟನೆಗೆ ಕಾರಣ ಬಣ್ಣ. ಇಂದು ಯುಗಾದಿ ಹಿನ್ನಲೆ ಕನಕಗಿರಿ ಭಾಗದಲ್ಲಿ ಬಣ್ಣ ಆಡ್ತಾರೆ. ಬಣ್ಣ ಆಡಿ 13 ವರ್ಷದ ಮೂರ್ತಿ ಹಾಗೂ 37 ವರ್ಷದ ಶಿವು ಕನಕಗಿರಿ ಹೊರವಲಯದ ಕೆರೆಗೆ ಈಜಾಡಲು ಹೋಗಿದ್ರು. ನೀರಿನಲ್ಲಿ ಮುಳುಗಿ ಇಬ್ಬರು ಜೀವನ್ಮರಣದ ನಡುವೆ ಹೋರಾಟ ಮಾಡ್ತಿದ್ದರು. ಕೆರೆಯಿಂದ ಆಸ್ಪತ್ರೆಗೆ ಬರೋ ಮಾರ್ಗ ಮಧ್ಯೆ ಶಿವು ಅಸುನೀಗಿದ್ದಾರೆ ಇನ್ನು 13 ವರ್ಷದ ಮೂರ್ತಿ ಇನ್ನು ಜೀವನ್ಮರಣದ ನಡುವೆ ಹೋರಾಟ ಮಾಡ್ತಿದ್ದ, ಕೂಡಲೇ ಸಂಬಂಧಿಕರು ಕನಕಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.ಆದರೆ ಎರಡು ಗಂಟೆ ಕಾಲ ಬಾಲಕನಿಗೆ ಚಿಕಿತ್ಸೆ ಸಿಕ್ಕಿಲ್ಲ, ಹೀಗಾಗಿ ಬಾಲಕ ಜೀವ ಕಳೆದುಕೊಂಡಿದ್ದಾನೆ. ಸರಿಯಾದ ಸಮಯಕ್ಕೆ ಬಾಲಕನಿಗೆ ಚಿಕಿತ್ಸೆ ಸಿಕ್ಕಿದ್ರೆ, ಬಾಲಕ ಬದುಕಬಹುದಿತ್ತು. ಇದರಿಂದ ರೊಚ್ಚಿಗೆದ್ದ ಸಂಬಂಧಿಕರು ಇಡೀ ಆಸ್ಪತ್ರೆ ದ್ವಂಸ ಮಾಡಿದ್ದಾರೆ. ಯಾವಾಗ ಗಲಾಟೆ ಜೋರಾಯ್ತೋ ಸ್ಥಳಕ್ಕೆ ಡಿಎಚ್ಒ ಹಾಗೂ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.
ಒಟ್ಟಾರೆ ವೈದ್ಯರ ನಿರ್ಲಕ್ಷ್ಯಕ್ಜೆ ಅಮಾಯಕ ಯುವಕ ಬಲಿಯಾಗಿದ್ದಾನೆ. ಸುಸಜ್ಜಿತ ಆಸ್ಪತ್ರೆ ಇದ್ರೂ ವೈದ್ಯರ ನಿರ್ಲಕ್ಷ್ಯದಿಂದ ಬಾಲಕ ಮೃತಪಟ್ಟಿದ್ದಾನೆ ಅನ್ಮೋದು ಸಂಬಂಧಿಕರ ಗಂಭೀರ ಆರೋಪ. ಬಣ್ಣ ಆಡಿ ಖುಷಿ ಪಡ್ತಿದ್ದ ಬಾಲಕ ಸಾವಿನಿಂದ ಇಡೀ ಕನಕಗಿರಿ ಜನ ಮಮ್ಮಲು ಮರಗಿದ್ದಂತೂ ಸತ್ಯ.
ಸಾಂಪ್ರದಾಯಿಕ ಉಡುಗೆಯಲ್ಲಿ ಗುಡಿ ಪಾಡ್ವಾ ಆಚರಿಸಿದ ಶ್ರದ್ಧಾ ಕಪೂರ್
Published On - 7:39 pm, Sun, 3 April 22