ಯಲಬುರ್ಗಾ: ಕೊಟ್ಟ ಮಾತಿನಂತೆ ಸಂಕನೂರು ಗ್ರಾಮದ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಭೂಮಿಪೂಜೆ ಮಾಡಿದ ಸಚಿವ ಹಾಲಪ್ಪ ಆಚಾರ್
ಸಂಕನೂರು ಗ್ರಾಮದ ಹೊರವಲಯದಲ್ಲಿ ಹಳ್ಳ ದಾಟುವಾಗ ಗ್ರಾಮದ ಭುವನೇಶ್ವರಿ ಪೋಲಿಸಪಾಟೀಲ, ಗಿರಿಜವ್ವ ಕಲ್ಲನಗೌಡ ಮಾಲಿಪಾಟೀಲ, ವೀಣಾ ಬಸವನಗೌಡ ಪಾಟೀಲ, ಪವಿತ್ರ ಸಿದ್ದಯ್ಯ ಪೋಲಿಸಪಾಟೀಲ ಕೊಚ್ಚಿಕೊಂಡು ಹೋಗಿದ್ದರು.
ಅಂದು ಬರದನಾಡು ಕೊಪ್ಪಳದಲ್ಲಿ ಮಳೆರಾಯ (Koppal Rains) ಬಿಟ್ಟು ಬಿಡದೆ ಸುರಿಯುತ್ತಿದ್ದ. ಹಳ್ಳಕೊಳ್ಳಗಳು ಭರ್ತಿಯಾಗಿದ್ದವು, ಹಳ್ಳದಲ್ಲಿ ಹಲವರು ಕೊಚ್ಚಿಹೋಗಿ ಪ್ರಾಣ ಕಳೆದುಕೊಂಡಿದ್ದರು. ಇದರಲ್ಲಿ ಅಂದು ಮರೆಯದ ಘಟನೆ ಅಂದ್ರೆ ಯಲಬುರ್ಗಾ (yelburga) ತಾಲೂಕಿನ ಸಂಕನೂರು (Sankanur) ಗ್ರಾಮದ ಹಳ್ಳದಲ್ಲಿ ಕೊಚ್ಚಿ ಹೋಗಿ ನಾಲ್ಕು ಮಹಿಳೆಯರು ಸಾವನ್ನಪ್ಪಿದರು. ಅಂದು ಆ ಘಟನೆಯಿಂದ ಗ್ರಾಮವೇ ಕಣ್ಣೀರು ಹಾಕಿತ್ತು. ಆ ಭಾಗದ ಶಾಸಕ, ಸಚಿವ ಹಾಲಪ್ಪ ಆಚಾರ್ (Halappa Achar) ಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಸೇತುವೆ ನಿರ್ಮಾಣ ಮಾಡುವಂತೆ ಒತ್ತಾಯಿಸಿದ್ದರು. ಅಂದು ಪ್ರಮಾಣ ಮಾಡಿದ ಹಾಲಪ್ಪ ಆಚಾರ್ ಮಾತಿನಂತೆ ನಡೆದುಕೊಂಡು ಇಂದು ಗ್ರಾಮಕ್ಕೆ ಕಾಲಿಟ್ಟಿದ್ದಾರೆ. ಸೇತುವೆ ನಿರ್ಮಾಣಕ್ಕೆ ಹಣ ಮಂಜೂರು ಮಾಡಿಸಿ, ಭೂಮಿ ಪೂಜೆ ಮಾಡಿದ್ದಾರೆ.
ಹೌದು! ಕಳೆದ ಅಕ್ಟೋಬರ್ 1 ಜೋರಾಗಿ ಸುರಿಯುತ್ತಿದ್ದ ಮಳೆ, ಕೂಲಿ ಕೆಲಸಕ್ಕಾಗಿ ಹೋಗಿದ್ದ, ಯಲಬುರ್ಗಾ ಕ್ಷೇತ್ರದ ಸಂಕನೂರು ಗ್ರಾಮದ ಸಂಪರ್ಕ ಹಳ್ಳದಲ್ಲಿ ಗ್ರಾಮದ ನಾಲ್ಕು ಮಹಿಳೆಯರು ಕೊಚ್ಚಿಹೋಗಿದ್ದರು.
ಸಂಕನೂರು ಗ್ರಾಮದ ಹೊರವಲಯದಲ್ಲಿ ಹಳ್ಳ ದಾಟುವಾಗ ಗ್ರಾಮದ ಭುವನೇಶ್ವರಿ ಪೋಲಿಸಪಾಟೀಲ (35), ಗಿರಿಜವ್ವ ಕಲ್ಲನಗೌಡ ಮಾಲಿಪಾಟೀಲ (30), ವೀಣಾ ಬಸವನಗೌಡ ಪಾಟೀಲ (20), ಪವಿತ್ರ ಸಿದ್ದಯ್ಯ ಪೋಲಿಸಪಾಟೀಲ (40) ಕೊಚ್ಚಿಕೊಂಡು ಹೋಗಿದ್ದರು.
ಅಂದು ಇಡೀ ಗ್ರಾಮವೇ ಕಣ್ಣೀರು ಹಾಕಿತ್ತು. ಜನಪ್ರತಿನಿಧಿ ಹಾಗೂ ಅಧಿಕಾರಿಗಳ ವಿರುದ್ಧ ಶಾಪ ಹಾಕಿತ್ತು. ಅಲ್ಲದೆ ಸ್ಥಳಕ್ಕೆ ಬಂದಿದ್ದ ಹಾಲಪ್ಪ ಆಚಾರ್ (Yelburga Constituency MLA) ವಿರುದ್ಧ ಗ್ರಾಮದ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದು, ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಸೇತುವೆ ನಿರ್ಮಿಸುವಂತೆ ಸಚಿವರಿಗೆ ಘೇರಾವ್ ಹಾಕಿದ್ದರು.
ಸೇತುವೆ ನಿರ್ಮಿಸಲು ಹಣ ಮಂಜೂರು ಮಾಡಿಸಿ, ನಿಮ್ಮ ಊರಿಗೆ ಕಾಲಿಡುವೆ ಅಂತಾ ಪ್ರತಿಜ್ಞೆ ಮಾಡಿದ್ದರು:
ಅಂದು ಸಚಿವ ಹಾಲಪ್ಪ ಆಚಾರ್ ನಾನು ಸೇತುವೆ ನಿರ್ಮಿಸಲು ಹಣ ಮಂಜೂರು ಮಾಡಿಸಿ, ನಿಮ್ಮ ಊರಿಗೆ ಕಾಲಿಡುವೆ ಅಂತಾ ಪ್ರತಿಜ್ಞೆ ಮಾಡಿದ್ದರು. ಮಾತಿನಂತೆ ಹಾಲಪ್ಪ ಆಚಾರ್ ನಡೆದುಕೊಂಡಿದ್ದು, ಸಂಕನೂರು ಗ್ರಾಮದ ರಾರಾವಿ-ಬೇಲೂರು ರಸ್ತೆಯ ಸೇತುವೆ ನಿರ್ಮಾಣಕ್ಕೆ 4.95 ಕೋಟಿ ಹಣ ಮಂಜೂರು ಮಾಡಿದ್ದಾರೆ, ಅಲ್ದೆ ಇಂದು ಭೂಮಿ ಪೂಜೆ ನೆರವೇರಿಸಿದ್ದಾರೆ. ಇನ್ನು ನನ್ನ ಮೂಲ ಉದ್ದೇಶ ಕ್ಷೇತ್ರದಲ್ಲಿರುವ ಎಲ್ಲಾ ಸಂಪರ್ಕ ಸೇತುವೆ ಹಾಗೂ ರಸ್ತೆಗಳ ಅಭಿವೃದ್ಧಿ ಮಾಡುವುದು ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ. ವರದಿ: ದತ್ತಾತ್ರೇಯ ಪಾಟೀಲ್, ಟಿವಿ 9, ಕೊಪ್ಪಳ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ