KSRTC E-Bus: ರಾಜ್ಯದಲ್ಲಿ ಇ-ಬಸ್‌ಗಳಿಗೆ ಮೂಲಸೌಕರ್ಯ ಹೆಚ್ಚಿಸಿದ ಕೆಎಸ್‌ಆರ್‌ಟಿಸಿ
ರಾಜ್ಯದಲ್ಲಿ ಇ-ಬಸ್‌ಗಳಿಗೆ ಮೂಲಸೌಕರ್ಯಗಳನ್ನು ನಿರ್ಮಿಸುವ ಕಾಮಗಾರಿ ನಡೆಯುತ್ತಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬೆಂಗಳೂರು, ಮೈಸೂರು, ವಿರಾಜಪೇಟೆ, ಮಡಿಕೇರಿ, ದಾವಣಗೆರೆ, ಶಿವಮೊಗ್ಗ ಮತ್ತು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ (ಮೆಜೆಸ್ಟಿಕ್) ಸೌಲಭ್ಯಗಳನ್ನು ಹೆಚ್ಚಿಸಲು ಒತ್ತು ನೀಡಿದೆ.
ಬೆಂಗಳೂರು: ರಾಜ್ಯದಲ್ಲಿ ಇ-ಬಸ್‌ಗಳಿಗೆ (Electric bus) ಮೂಲಸೌಕರ್ಯಗಳನ್ನು ನಿರ್ಮಿಸುವ ಪ್ರಯತ್ನದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಬೆಂಗಳೂರು, ಮೈಸೂರು, ವಿರಾಜಪೇಟೆ, ಮಡಿಕೇರಿ, ದಾವಣಗೆರೆ, ಶಿವಮೊಗ್ಗ ಮತ್ತು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ (ಮೆಜೆಸ್ಟಿಕ್) ಸೌಲಭ್ಯಗಳನ್ನು ಹೆಚ್ಚಿಸಲು ಒತ್ತು ನೀಡಿದೆ.
ಮೊದಲ ಇ-ಬಸ್ ಬೆಂಗಳೂರು-ಮೈಸೂರು ನಡುವೆ ಸಂಚರಿಸಿದರೆ, ಯೋಜನೆಯ 1ನೇ ಹಂತದ ಅಡಿಯಲ್ಲಿ ರಾಜ್ಯ ರಾಜಧಾನಿ ಮತ್ತು ಮಡಿಕೇರಿ, ವಿರಾಜಪೇಟೆ, ಚಿಕ್ಕಮಗಳೂರು, ದಾವಣಗೆರೆ ಮತ್ತು ಶಿವಮೊಗ್ಗ ನಡುವೆಯೂ ಬಸ್‌ಗಳು ಸಂಚರಿಸಲಿವೆ ಎಂದು ರಸ್ತೆ ನಿಗಮ ತಿಳಿಸಿದೆ. ಕೋವಿಡ್-19ನಿಂದಾಗಿ ನಮ್ಮ ಫ್ಲೀಟ್‌ಗೆ ಹೆಚ್ಚಿನ ಬಸ್‌ಗಳನ್ನು ಸೇರಿಸಲು ಸಾಧ್ಯವಾಗಲಿಲ್ಲ. ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ವೇಗದ ಅಡಾಪ್ಷನ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಯೋಜನೆಯಡಿ ನಾವು 50 ಎಲೆಕ್ಟ್ರಿಕ್ ಬಸ್‌ಗಳಿಗೆ ಆರ್ಡರ್ ಮಾಡಿದ್ದೇವೆ.
ಇದನ್ನು ಓದಿ:KSRTC: ಅತ್ಯಾಧುನಿಕ ಇ-ಬಸ್ ಸೇವೆ ಶೀಘ್ರ ಆರಂಭ; ಬ್ರಾಂಡಿಂಗ್ ಐಡಿಯಾ ಕೊಟ್ಟರೆ 25 ಸಾವಿರ ಬಹುಮಾನ
ಮೊದಲ ಬಸ್ ಶೀಘ್ರದಲ್ಲೇ ನಮಗೆ ತಲುಪಿಸುವ ನಿರೀಕ್ಷೆಯಿದೆ. ಡಿಸೆಂಬರ್ ಅಂತ್ಯದ ವೇಳೆಗೆ ನಾವು ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತೇವೆ. ಎಲೆಕ್ಟ್ರಿಕ್ ಬಸ್‌ಗಳನ್ನು ಹಂತಹಂತವಾಗಿ ನಮಗೆ ತಲುಪಿಸಲಾಗುವುದು ಮತ್ತು ಪ್ರತಿ ಎರಡು ತಿಂಗಳಿಗೊಮ್ಮೆ 10 ಬಸ್‌ಗಳನ್ನು ವಿತರಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಎಂಡಿ ಅನ್ಬು ಕುಮಾರ್ ಹೇಳಿದ್ದಾರೆ.
ಮೆಜೆಸ್ಟಿಕ್, ಮೈಸೂರು ಮತ್ತು ವಿರಾಜಪೇಟೆ ಬಸ್ ನಿಲ್ದಾಣಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳು ನಿರ್ಮಾಣ ಹಂತದಲ್ಲಿವೆ / ಬರಲು ಯೋಜಿಸಲಾಗಿದೆ ಎಂದು ಅವರು ಹೇಳಿದರು. ಮಡಿಕೇರಿ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಡಿಪೋಗಳಲ್ಲೂ ಕಾಮಗಾರಿ ನಡೆಯುತ್ತಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:29 pm, Tue, 20 December 22