ಕೈತಪ್ಪಿದ ಅಧ್ಯಕ್ಷ ಸ್ಥಾನ: ಬಳ್ಳಾರಿ ಕಾಂಗ್ರೆಸ್ ಕೇಂದ್ರ ಕಚೇರಿಗೆ ಬೀಗ
ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಇತ್ತೀಚೆಗೆ ಮಹತ್ವದ ಬದಲಾವಣೆ ಮಾಡಲಾಗಿತ್ತು. ಮೊಮ್ಮದ್ ರಫೀಕ್ ಈ ಹಿಂದೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದರು. ಆದರೆ ಈಗ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಅಲ್ಲಮ್ ಪ್ರಶಾಂತ್ ಎಂಬುವರನ್ನು ನೇಮಕ ಮಾಡಲಾಗಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ಕೈತಪ್ಪಿದ ಹಿನ್ನೆಲೆ ಮೊಮ್ಮದ್ ರಫೀಕ್ ಬೀಗ ಹಾಕಿದ್ದಾರೆ.
ಬಳ್ಳಾರಿ, ಏಪ್ರಿಲ್ 05: ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಬದಲಾವಣೆ ಹಿನ್ನೆಲೆ ನಗರದ ಕಂಟೋನ್ಮೆಂಟ್ ಏರಿಯಾದಲ್ಲಿರುವ ಕಾಂಗ್ರೆಸ್ ಕೇಂದ್ರ ಕಚೇರಿಗೆ ಕಳೆದ ಎರಡು ದಿನಗಳಿಂದ ಬೀಗ (locked) ಹಾಕಲಾಗಿದೆ. ಮೊಮ್ಮದ್ ರಫೀಕ್ ಈ ಹಿಂದೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದರು. ಆದರೆ ಈಗ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಅಲ್ಲಮ್ ಪ್ರಶಾಂತ್ ಎಂಬುವರನ್ನು ನೇಮಕ ಮಾಡಲಾಗಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ಕೈತಪ್ಪಿದ ಹಿನ್ನೆಲೆ ಮೊಮ್ಮದ್ ರಫೀಕ್ ಬೀಗ ಹಾಕಿದ್ದಾರೆ.
ಹಿಂದಿನ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಫೀಕ್ ಕೇಂದ್ರ ಕಚೇರಿಗೆ ಬಾಡಿಗೆ ಕೊಟ್ಟು ನಡೆಸುತ್ತಿದ್ದರು. ಅಧ್ಯಕ್ಷ ಸ್ಥಾನ ಕೈ ತಪ್ಪಿದ್ದಕ್ಕೆ ಮುನಿಸಿಕೊಂಡು ಲೋಕಸಭಾ ಚುನಾವಣೆ ಹೊತ್ತಲ್ಲಿ ಕೇಂದ್ರ ಕಚೇರಿಗೆ ಬೀಗ ಹಾಕಿದ್ದಾರೆ. ಸದ್ಯ ಕಾಂಗ್ರೆಸ್ ವಲಯದಲ್ಲಿ ಬೀಗ ಹಾಕಲಾದ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ಅಸಮಾಧಾನ ಬೆನ್ನಲ್ಲೇ ಕೆಪಿಸಿಸಿ ಪದಾಧಿಕಾರಿಗಳ ನೇಮಕದಲ್ಲಿ ಬದಲಾವಣೆ
ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಇತ್ತೀಚೆಗೆ ಮಹತ್ವದ ಬದಲಾವಣೆ ಮಾಡಲಾಗಿತ್ತು. ಹಳೆಬರನ್ನು ಕೈಬಿಟ್ಟು ಹೊಸ-ಹೊಸ ಮುಖಗಳಿಗೆ ಕೆಪಿಸಿಸಿ ನೂತನ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಅದೇ ರೀತಿಯಾಗಿ ಮೊಮ್ಮದ್ ರಫೀಕ್ರನ್ನು ಕೈಬಿಟ್ಟು ಅಲ್ಲಮ್ ಪ್ರಶಾಂತ್ರನ್ನು ನೇಮಕ ಮಾಡಲಾಗಿದೆ.
ಲೋಕಸಭಾ ಚುನಾವಣೆ ಹೊತ್ತಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಇತ್ತೀಚೆಗೆ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ಆದರೆ ತಾವು ಕೊಟ್ಟಿದ್ದ ಪಟ್ಟಿಯಲ್ಲಿ ಬದಲಾವಣೆ ಆಗಿದ್ದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಕೆಪಿಸಿಸಿ ನೂತನ ತಂಡ ರಚನೆ: 7 ಜಿಲ್ಲಾಧ್ಯಕ್ಷ, ರಾಜ್ಯ ಉಪಾಧ್ಯಕ್ಷರ ನೇಮಕ: ಇಲ್ಲಿದೆ ನೂತನ ಪದಾಧಿಕಾರಿಗಳ ಪಟ್ಟಿ
ಹೀಗಾಗಿ ಇತ್ತೀಚೆಗೆ ಎಐಸಿಸಿ ಮತ್ತೆ ಪಟ್ಟಿಯಲ್ಲಿ ಕೆಲವು ಬದಲಾವಣೆ ಮಾಡಿ ಹೊಸದಾಗಿ ಕೆಲವು ನಾಯಕರ ಹೆಸರನ್ನು ಸೇರಿಸಿತ್ತು. ಪ್ರಧಾನ ಕಾರ್ಯದರ್ಶಿ 138 ಇದ್ದಿದ್ದನ್ನು 140ಕ್ಕೆ ಹೆಚ್ಚಿಸಿ ಎಐಸಿಸಿ ಆದೇಶ ಹೊರಡಿಸಿತ್ತು.
ಏಳು ಜಿಲ್ಲೆಗಳ ಜಿಲ್ಲಾಧ್ಯಕ್ಷರ ನೇಮಕ
- ಬಳ್ಳಾರಿ ನಗರ- ಪ್ರಶಾಂತ್ ಅಲ್ಲಂ ವೀರಭದ್ರಪ್ಪ
- ಬೆಂಗಳೂರು ಪೂರ್ವ – ಕೆ. ನಂದಕುಮಾರ್
- ಹಾವೇರಿ – ಸಂಜೀವ್ ಕುಮಾರ್ ನೀರಲಂಗಿ
- ಕೊಪ್ಪಳ – ಅಮರೇಗೌಡ ಬಯ್ಯಾಪುರ
- ಉಡುಪಿ – ಕಿಶನ್ ಹೆಗ್ಡೆ
- ರಾಯಚೂರು – ಬಸವರಾಜ ಇಟಗಿ
- ಶಿವಮೊಗ್ಗ – ಪ್ರಸನ್ನ ಕುಮಾರ್
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.