ಮಂಡ್ಯ ಅಭಿವೃದ್ಧಿ ಬಗ್ಗೆ ಸಚಿವ ಚಲುವರಾಯಸ್ವಾಮಿಗೆ ಬಹಿರಂಗ ಸವಾಲು ಹಾಕಿದ ಸಿಎಸ್ ಪುಟ್ಟರಾಜು
ಕೆರಗೋಡು ಧ್ವಜ ವಿವಾದ ಸಂಬಂಧ ಮಂಡ್ಯ ಜಿಲ್ಲೆಯ ಜೆಡಿಎಸ್ (JDS) ನಾಯಕರು ಸುದ್ದಿಗೋಷ್ಠಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಅವರು ಮಂಡ್ಯ ಅಭಿವೃದ್ಧಿ ಬಗ್ಗೆ ಚರ್ಚೆಗೆ ಬರಲು ಸಚಿವ ಚಲುವರಾಯಸ್ವಾಮಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ಮಂಡ್ಯ, ಫೆ.01: ಕೆರಗೋಡು ಧ್ವಜ ವಿವಾದ ಸಂಬಂಧ ಮಂಡ್ಯ ಜಿಲ್ಲೆಯ ಜೆಡಿಎಸ್ (JDS) ನಾಯಕರು ಸುದ್ದಿಗೋಷ್ಠಿ ನಡೆಸಿದ್ದಾರೆ. ಕೆರಗೋಡು ಹನುಮಧ್ವಜ ತೆರವು ಪ್ರಕರಣ ಸಂಬಂಧ ಪಾದಯಾತ್ರೆ ಸಮಯದಲ್ಲಿ ನಡೆದ ಅಹಿತಕರ ಘಟನೆಗಳಿಗೆ ಜೆಡಿಎಸ್ ಕಾರಣ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ (N Chaluvaraya Swamy) ಅವರು ಆರೋಪಿಸಿದ್ದರು. ಇದಕ್ಕೆ ಸುದ್ದಿಗೋಷ್ಠಿ ಮೂಲಕ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು (CS Puttaraju) ತಿರುಗೇಟು ನೀಡಿದ್ದಾರೆ. ಕೆರಗೋಡಿನಲ್ಲಿ ಧ್ವಜ ಸ್ತಂಭದ ವಿಚಾರವಾಗಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆ ಮೂಲ ಕಾರಣ ಮಂಡ್ಯ ಶಾಸಕ ಗಣಿಗ ರವಿ ಎಂದು ಆರೋಪಿಸಿದ್ದಾರೆ. ಹಾಗೂ ಇದೇ ವೇಳೆ ಮಂಡ್ಯ ಅಭಿವೃದ್ಧಿ ಬಗ್ಗೆ ಬಹಿರಂಗ ಸವಾಲು ಹಾಕಿದ್ದಾರೆ.
ಕೆರಗೋಡಿನಲ್ಲಿ ನಡೆದ ಘಟನೆಗೆ ಜೆಡಿಎಸ್ ಹಾಗೂ ಕುಮಾರಸ್ವಾಮಿ ಕಾರಣ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ. ಕೆರಗೋಡಿನಲ್ಲಿ ಧ್ವಜ ಸ್ತಂಭದ ವಿಚಾರವಾಗಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆ ಮೂಲ ಕಾರಣ ಮಂಡ್ಯ ಶಾಸಕ ಗಣಿಗ ರವಿ. ಪಕ್ಷಾತೀತವಾಗಿ ಧ್ವಜಸ್ತಂಭ ನಿರ್ಮಾಣ ಮಾಡಬೇಕೆಂದು ಶಾಸಕರೇ ಹೇಳಿದ್ದಾರೆ. ಗ್ರಾಮಸ್ಥರಿಗೆ 22ನೇ ತಾರೀಖು ಉದ್ಘಾಟನೆಯನ್ನು ನಾನೇ ಜವಾಬ್ದಾರಿ ತೆಗೆದುಕೊಂಡು ಮಾಡ್ತೀನಿ ಎಂದು ಗಣಿಗ ರವಿ ಹೇಳಿದ್ದಾರೆ. ಮಾರಗೌಡನಹಳ್ಳಿಯಲ್ಲಿ ದೇವಸ್ಥಾನ ಉದ್ಘಾಟನೆಗೆ 22ನೇ ತಾರೀಖು ಕುಮಾರಸ್ವಾಮಿ ಅವರು ಬರ್ತಾ ಇದ್ದರು. ಆದರೆ 22ರಂದು ಕುಮಾರಸ್ವಾಮಿ ಅವರ ಕುಟುಂಬ ಅಯೋದ್ಯೆಗೆ ಹೋಗಬೇಕಿತ್ತು. ಹೀಗಾಗಿ 20ನೇ ತಾರೀಖು ಮಾರಗೌಡನಹಳ್ಳಿ ಬರಲು ಒಪ್ಪಿದ್ರು. ಆದರೆ ಕುಮಾರಸ್ವಾಮಿ ಅವರು ಕಾರಣಾಂತರದಿಂದ ಬರಲು ಸಾಧ್ಯವಾಗಲಿಲ್ಲ. ನಮ್ಮನ್ನು ಕುಮಾರಸ್ವಾಮಿ ಅವರು ಮಾರಗೌಡನಹಳ್ಳಿಗೆ ಹೋಗಲು ಹೇಳಿದ್ರು. 22ರಂದು ನಾವು ಮಾರಗೌಡನಹಳ್ಳಿಗೆ ಹೋಗುವಾಗ ಕೆರಗೋಡು ಗ್ರಾಮಸ್ಥರು ನಮ್ಮ ಕಾರು ಅಡ್ಡಗಟ್ಟಿದ್ರು. ನೀವು ಬಂದು ಧ್ವಜಕ್ಕೆ ಪೂಜೆ ಮಾಡಿ ಎಂದು ಕೆರಗೋಡು ಗ್ರಾಮಸ್ಥರು ಕೇಳಿಕೊಂಡರು. ನಾವು ಅದರಂತೆ ಧ್ವಜಕ್ಕೆ ಪೂಜೆ ಮಾಡಿದೆವು. ಇದನ್ನು ಗಣಿಗ ರವಿ ಅವರಿಗೆ ಸಹಿಸಲು ಸಾಧ್ಯವಾಗಿಲ್ಲ. ಇದಕ್ಕಾಗಿ ಶಾಸಕರು ಧ್ವಜ ಇಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ರಾಷ್ಟ್ರಧ್ವಜದ ವಿರುದ್ಧ ಯಾರೂ ನಿಲುವು ತಳೆಯುವ ದುಸ್ಸಾಹಸಕ್ಕೆ ಕುಮಾರಸ್ವಾಮಿ ಕೈ ಹಾಕಿದ್ದಾರೆ: ಎನ್ ಚಲುವರಾಯಸ್ವಾಮಿ
ಮಂಡ್ಯ ಅಭಿವೃದ್ಧಿ ಬಗ್ಗೆ ಚಲುವರಾಯಸ್ವಾಮಿಗೆ ಬಹಿರಂಗ ಸವಾಲು ಹಾಕಿದ ಪುಟ್ಟರಾಜು
ರಾಮ ಮಂದಿರವನ್ನು ಇಡೀ ದೇಶ ಸ್ಮರಣೆ ಮಾಡಿದೆ. ಇಂತಹ ವೇಳೆ ಹನುಮ ಧ್ವಜವನ್ನು ಇಳಿಸಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಮಂಡ್ಯ ಜಿಲ್ಲೆಯಲ್ಲಿ ಈ ರೀತಿ ಘಟನೆ ಆಗಿಲ್ಲ. ನಾವು ಅಧಿಕಾರದಲ್ಲಿ ಇದ್ದಾಗ ಮಂಡ್ಯ ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ. ಬಹಿರಂಗವಾಗಿ ಈ ಬಗ್ಗೆ ಚರ್ಚೆ ಮಾಡೋಣಾ ಬನ್ನಿ. ಒಂದು ಕಡೆ ಕುಮಾರಸ್ವಾಮಿ, ನಾನು, ಇನ್ನೊಂದು ಕಡೆ ಚಲುವರಾಯಸ್ವಾಮಿ ಹಾಗೂ ಇತರರು. ಬನ್ನಿ ಮಂಡ್ಯ ಅಭಿವೃದ್ಧಿಗೆ ಶ್ರಮಿಸಿರುವ ಬಗ್ಗೆ ಚರ್ಚೆ ಮಾಡೋಣಾ. ದೇವೇಗೌಡರು ನೀರಾವರಿ ಮಂತ್ರಿ ಆಗಿದ್ದಾಗಿನಿಂದ ಇಲ್ಲಿಯವರೆಗೆ ಜೆಡಿಎಸ್ ಕಾಲದಲ್ಲಿ ಏನು ಅಭಿವೃದ್ಧಿಯಾಗಿದೆ ಎಂದು ಚರ್ಚೆ ಮಾಡೋಣಾ. ಜೆಡಿಎಸ್‌ನಿಂದ ಚಲುವರಾಯಸ್ವಾಮಿ ಜಿ.ಪಂ ಸದಸ್ಯ, ಉಪಾಧ್ಯಕ್ಷ ಹಾಗೂ ಶಾಸಕ ಎಲ್ಲಾ ಆಗಿದ್ದಾರೆ. ಯಾವ ಬಾಯಿಯಿಂದ ಹೇಳ್ತೀರಾ ಜೆಡಿಎಸ್‌ನಿಂದ ಅಭಿವೃದ್ಧಿ ಆಗಿಲ್ಲ ಅಂತಾ. ಕುಮಾರಸ್ವಾಮಿ ಅವರ ಮುಂದೆ ಚಲುವರಾಯಸ್ವಾಮಿ ಕಣ್ಣೀರು ಹಾಕೊಂಡು ಕೂರುತ್ತಾ ಇದ್ರು. ಜೆಡಿಎಸ್‌ನಲ್ಲಿ ಇದ್ದಾಗ ಮಂತ್ರಿ ಕೆಲಸವನ್ನು ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಕೆರಗೋಡಿನಲ್ಲಿ ಹನುಮ ಧ್ವಜ ಇಳಿಸಿ ಈ ರೀತಿ ಘಟನೆಗೆ ಯಾಕೆ ಕಾರಣವಾದ್ರಿ? ಹನುಮ ಧ್ವಜ ಇಳಿಸಿ ಮಧ್ಯಾಹ್ನ ರಾಷ್ಟ್ರ ಬಾವುಟ ಹಾರಿಸಿದ್ದೀರಾ? ಇದು ರಾಷ್ಟ್ರ ಬಾವುಟದ ಬಗ್ಗೆ ನಿಮಗೆ ಇರುವ ಗೌರವನಾ? ಪೊಲೀಸ್ ಫೋರ್ಸ್ ಇಟ್ಟುಕೊಂಡು ಜನರಿಗೆ ಲಾಠಿ ಚಾರ್ಜ್ ಮಾಡಿಸಿದ್ದೀರಾ? ಜೆಡಿಎಸ್ ಕಾಲದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಅಪಾರ ಅಭಿವೃದ್ಧಿ ಕೆಲಸ ಆಗಿವೆ. ಉಂಡ ಹೊಟ್ಟೆ ಮುಂದಿಟ್ಟುಕೊಂಡು ಚಲುವರಾಯಸ್ವಾಮಿ ಮಾತಾಡುತ್ತಾ ಇದ್ದಾರೆ. ದೇವೇಗೌಡರು ನಿಮ್ಮನ್ನು ನೆಟ್ಟಿದ್ದಾರೆ. ನೀವು ನಾಟಿ ಬ್ರೀಡ್, ಹೈಬ್ರೀಡ್ ಎಂದು ಮಾತಾಡುತ್ತೀರಾ? ನೀವು ಯಾವ ಬ್ರೀಡ್ ಎಂದು ಹೇಳಿ. ದೇವೇಗೌಡರ ಆಶೀರ್ವಾದಿಂದ ನೀವು ಬೆಳೆದಿದ್ದೀರಾ ಎಂದು ತಿಳಿಯಿರಿ. ದೇವೇಗೌಡರ ಆರೋಗ್ಯ ಕೆಡಲು ಕುಮಾರಸ್ವಾಮಿ ಕಾರಣ ಎನ್ನುತ್ತೀರಾ? ದೇವೇಗೌಡರ ಆರೋಗ್ಯ ಕೆಡಲು ಕಾರಣ ಸಚಿವ ಚಲುವರಾಯಸ್ವಾಮಿ. ಅಂದು ಸಿದ್ದರಾಮಯ್ಯ ಅವರನ್ನು ಜೆಡಿಎಸ್‌ನಿಂದ ತೆಗೆಯಲು ಉನ್ನಾರ ಮಾಡಿದ್ದು ಚಲುವರಾಯಸ್ವಾಮಿ. ಧರ್ಮಸಿಂಗ್ ಅವರನ್ನು ಸಿಎಂನಿಂದ ಇಳಿಸಿ ಎಲ್ಲಾ ಅನ್ಯಾಯ ಮಾಡಿದ್ರಿ. ನಿಮ್ಮಿಂದ ದೇವೇಗೌಡರು ತಲೆ ತಿರುಗಿ ಬಿದ್ರು. ಅಂದು ಡಾ.ಮಂಜುನಾಥ್ ಇಲ್ಲದಿದ್ರೆ ನಮ್ಮ ನಾಯಕರು ಇರುತ್ತಿರಲಿಲ್ಲ. ನಾವು ಮಂಡ್ಯ ಪರ ಕೆಲಸ ಮಾಡಿದ್ರೆಲ, ಇದು ಮಂಡ್ಯ ಬಜೆಟ್ ಎಂದು ಟೇಬಲ್ ಕುಟ್ಟಿದ್ರಿ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನಮ್ಮ ಕೆಲಸಗಳನ್ನು ನಿಲ್ಲಿಸಿದ್ರಿ. ಸುರೇಶ್‌ಗೌಡ ಅವರ ವಿರುದ್ಧ ನೀವು ಸೋತಾಗ ಎಂಪಿ ಮಾಡಿದ್ದು ಜೆಡಿಎಸ್. ನಾನು ಎಂಪಿ ಆಗಿದ್ದಾಗ ಮೋದಿ ಪಿಎಂ ಆದ್ರೆ ರಾಜೀನಾಮೆ ಕೊಡ್ತೀನಿ ಅಂದಿದ್ದೆ. ದೇವೇಗೌಡರು ಹಾಗೂ ನಾನು 2014ರಲ್ಲಿ ಮೋದಿ ಭೇಟಿ ಮಾಡಿದ್ದೋ. ಆಗ ನಾನು ರಾಜಿನಾಮೆ ಪತ್ರ ಕೈಯಲ್ಲಿ ಇಡಿದುಕೊಂಡಿದ್ದೆ. ನೀವು ಪಿಎಂ ಆದ್ರೆ ನಾನು ರಾಜೀನಾಮೆ ಕೊಡ್ತೀನಿ ಎಂದು ಹೇಳಿ ತಗೋಳಿ ಎಂದೆ ಎಂದು ಪುಟ್ಟರಾಜು ಅವರು ಪುಟ್ಟರಾಜು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:53 am, Thu, 1 February 24