AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮದುವೆ ಆಗಿ ಎರಡು ಮಕ್ಕಳಿದ್ದರು ಅಕ್ರಮ ಸಂಬಂಧ ಹೊಂದಿದ್ದ ಯುವಕನೊಂದಿಗೆ ವಿವಾಹಿತೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಟ್ರಾಕ್‌ನಲ್ಲಿ ನಡೆದಿದೆ. ಸದ್ಯ ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ
ಆತ್ಮಹತ್ಯೆಗೆ ಶರಣಾದವರು
ದಿಲೀಪ್​, ಚೌಡಹಳ್ಳಿ
| Edited By: |

Updated on: Nov 06, 2026 | 4:14 PM

Share

ಮುಖ್ಯಾಂಶಗಳು

  • ಮಂಡ್ಯದಲ್ಲಿ ವಿವಾಹಿತೆ ಜೊತೆ ಯುವಕ ಆತ್ಮಹತ್ಯೆ
  • ರೈಲಿಗೆ ತಲೆಕೊಟ್ಟು ಸಹನಾ(25) ಮತ್ತು ರಾಹುಲ್(23) ಸಾವು
  • ಇಬ್ಬರ ನಡುವೆ ಅಕ್ರಮ ಸಂಬಂಧವಿತ್ತು

ಮಂಡ್ಯ, ನವೆಂಬರ್​ 06: ರೈಲಿಗೆ ತಲೆಕೊಟ್ಟು ವಿವಾಹಿತೆ ಜೊತೆ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಟ್ರಾಕ್‌ನಲ್ಲಿ ನಡೆದಿದೆ. ಬೆಂಗಳೂರು ಮೂಲದ ಸಹನಾ(25) ಮತ್ತು ರಾಹುಲ್(23) ಆತ್ಮಹತ್ಯೆಗೆ ಶರಣಾದವರು. ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಸದ್ಯ ಮೃತದೇಹಗಳನ್ನ ಮಂಡ್ಯ ಮಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ. ರೈಲ್ವೆ ಪೊಲೀಸರು‌ ಮೃತರ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ.

ನಡೆದಿದ್ದೇನು?

8 ವರ್ಷದ ಹಿಂದೆ ಪ್ರೀತಿಸಿ ವೀರೇಶ್​ನನ್ನು ಸಹನಾ ವಿವಾಹವಾಗಿದ್ದಳು. ದಂಪತಿಗೆ 6 ವರ್ಷದ ಹೆಣ್ಣು ಮತ್ತು 2 ವರ್ಷದ ಗಂಡು ಮಗುವಿದೆ. ವೀರೇಶ್ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ. ಕಳೆದ 2-3 ವರ್ಷಗಳಿಂದ ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ವಾಸವಾಗಿದ್ದರು. ದಂಪತಿ ಇದ್ದ ಕಟ್ಟಡದಲ್ಲೇ ರಾಹುಲ್​​ ಕೂಡ ವಾಸವಿದ್ದ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಒಂದೇ ಕುಟುಂಬದ 7 ಜನರ ಹತ್ಯೆ: ಹಂತಕನಿಂದ 11 ವರ್ಷದ ಬಾಲಕ ಬದುಕುಳಿದಿದ್ದೇ ರೋಚಕ

ಮದುವೆ ಆಗಿ ಮಕ್ಕಳಿದ್ದರು ಕೂಡ ಇತ್ತೀಚೆಗೆ ರಾಹುಲ್ ಜೊತೆ ಸಹನಾ ಆತ್ಮೀಯತೆ ಬೆಳೆಸಿಕೊಂಡಿದ್ದಳು. ಪರಿಚಯ ಪ್ರೀತಿಗೆ ತಿರುಗಿ ಇಬ್ಬರ ನಡುವೆ ಅಕ್ರಮ ಸಂಬಂಧವಿತ್ತು. ಈ ವಿಚಾರ ತಿಳಿದ ಪತಿ ವೀರೇಶ್, ಸಹನಾಳೊಂದಿಗೆ ಜಗಳ ಮಾಡಿದ್ದ. ಮದನಾಯಕನಹಳ್ಳಿ ಬಿಟ್ಟು ಬೇರೆ ಕಡೆ ಮನೆ ಮಾಡಿದ್ದ. ಹಲವು ಬಾರಿ ಹಿರಿಯರ ಸಮ್ಮುಖದಲ್ಲಿ ರಾಜೀ ಪಂಚಾಯಿತಿ ಆಗಿತ್ತು. ರಾಹುಲ್ ಸಹವಾಸ ಬಿಟ್ಟುಬಿಡುವಂತೆ ಸಹನಾಗೆ ಬುದ್ಧಿ ಹೇಳಿದ್ದರು. ಆದರೆ ಯಾರ ಮಾತನ್ನೂ ಕೇಳದೆ ಹಳೇ ಚಾಳಿ ಮುಂದುವರಿಸಿದ್ದಳು.

LIVE TV

ನಿಮ್ಮಿಬ್ಬರನ್ನು ಬಾಳಲು ಬಿಡಲ್ಲ ಎಂದಿದ್ದ ವೀರೇಶ್ 

ಇನ್ನು ಸೋಮವಾರ ಇದೇ ವಿಚಾರಕ್ಕೆ ಸಹನಾ ಮತ್ತು ವೀರೇಶ್ ನಡುವೆ​ ಜಗಳ‌ವಾಗಿದೆ. ಈ ವೇಳೆ ರಾಹುಲ್ ಜೊತೆಯಲ್ಲೇ ಬಾಳುವುದಾಗಿ ಹೇಳಿದ್ದಳು. ಈ ವೇಳೆ ನಿಮ್ಮಿಬ್ಬರನ್ನು ಬಾಳಲು ಬಿಡಲ್ಲ ಎಂದು ವೀರೇಶ್ ಗದರಿದ್ದಾನೆ. ಗಂಡನ ಮನೆಯಿಂದ ಹೊರಟ ಸಹನಾ ಮಂಡ್ಯದ ಗುನ್ನಾಯಕನಹಳ್ಳಿಯಲ್ಲಿರುವ ತನ್ನ ಅಜ್ಜಿ ಮನೆಗೆ ಬಂದಿದ್ದಾಳೆ. ಗುರುವಾರ ಗುನ್ನಾಯಕನಹಳ್ಳಿ ಬಳಿ ಸಹನಾ ಪಿಕ್ ಮಾಡಿದ್ದ ರಾಹುಲ್, ವಿರೇಶ್ ವಿರುದ್ಧ ದೂರು ನೀಡಲು ತೀರ್ಮಾನಿಸಿದ್ದರು. ಆದರೆ ವೀರೇಶ್ ನಮ್ಮನ್ನು ಬಾಳಲು ಬಿಡಲ್ಲ ಎಂದು ಮನನೊಂದು ಬೆಳಗ್ಗೆ ರೈಲಿಗೆ ತಲೆಕೊಟ್ಟು ಸಹನಾ ಮತ್ತು ರಾಹುಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ದಿಲೀಪ್​, ಚೌಡಹಳ್ಳಿ
ದಿಲೀಪ್​, ಚೌಡಹಳ್ಳಿ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದವನು. ಕಳೆದ 13 ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.‌ಪತ್ರಿಕೋಧ್ಯಮ ಪದವಿದರನಾಗಿದ್ದೇನೆ.ಮೊದಲಿಗೆ ಮೈಸೂರಿನ ಸ್ಥಳಿಯ ವಾಹಿನ ಹಾಗೂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದೆ.ನಂತರ ಪಬ್ಲಿಕ್ ಟಿವಿಯಲ್ಲಿ ಚಾಮರಾಜನಗರ ಜಿಲ್ಲಾವರದಿಗಾರನಾಗುವ ಅವಕಾಶ ಸಿಕ್ಕಿತು. ಅದಾದ ಬಳಿಕ ಐದು ವರ್ಷಗಳ ಕಾಲ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಬಳಿಕ 2018 ರಲ್ಲಿ ಟಿರ್ವಿ ಮೈಸೂರು ವರದಿಗಾರನಾಗುವ ಅವಕಾಶ ಸಿಕ್ಕಿತು. ಅಂದಿನಿಂದ ಮೈಸೂರು ಜಿಲ್ಲಾ ವರದಿಗಾರರನಾಗಿ ಕೆಲಸ ನಿರ್ವಹಿಸಿದ್ದೇನೆ. ಸಧ್ಯ ಮಂಡ್ಯ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕೃಷಿ, ಸಾಹಿತ್ಯ ಆಸಕ್ತಿ ಇದೆ.

Read More