ಬಳ್ಳಾರಿ ವಿಮ್ಸ್ ಹಾಸ್ಟೆಲ್ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ನೇಣಿಗೆ ಶರಣು! ರಾಮನಗರದಲ್ಲಿ ಬಸ್ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು
ಶ್ರೇಯಸ್ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರ ಗ್ರಾಮದವನು. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದನಂತೆ. ಕಾಯಿಲೆಯಿಂದ ನರಳುತ್ತಿದ್ದ ಈತ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಬಳ್ಳಾರಿ: ಎಂಬಿಬಿಎಸ್ ವಿದ್ಯಾರ್ಥಿ (MMBS Student) ವಿಮ್ಸ್ ಹಾಸ್ಟೆಲ್ನಲ್ಲಿ ನೇಣಿಗೆ ಶರಣಾಗಿದ್ದಾನೆ. ಶುಕ್ರವಾರ ಸಂಜೆ ಶ್ರೇಯಸ್ ಜೋಶಿ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದ. ಸ್ನೇಹಿತರು ಕೂಡಲೇ ಶ್ರೇಯಸ್ನನ್ನು ವಿಮ್ಸ್ ಆಸ್ಪತ್ರೆಗೆ (Vims Hospital) ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಬೆಳಿಗ್ಗೆ 6.30ಕ್ಕೆ ಕೊನೆಯುಸಿರೆಳೆದಿದ್ದಾನೆ. ಶ್ರೇಯಸ್ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರ ಗ್ರಾಮದವನು. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದನಂತೆ. ಬೈಪೋಲಾರ್ ಡಿಸಾರ್ಡರ್ ಕಾಯಿಲೆಯಿಂದ ನರಳುತ್ತಿದ್ದ ಈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ನೇಣು ಬಿಗಿದುಕೊಳ್ಳುವ ಮೊದಲು ತನ್ನ ಅಕ್ಕ ಶ್ರದ್ಧಾಗೆ ಕಾಲ್ ಮಾಡಿದ್ದ.
ಬಸ್ ಡಿಕ್ಕಿಯಾಗಿ ಮೂವರು ಮೃತ: ರಾಮನಗರ: ಸರ್ಕಾರಿ ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೆಮ್ಮಾಳೆ ಗೇಟ್ ಬಳಿ ನಡೆದಿದೆ. ಇನ್ನೋವಾ ಕಾರು ಚಾಲಕ ಉಮೇಶ್(24), ಹಾಗೂ ಪತ್ನಿ ಅಕ್ಷತಾ(28) ಸಾವನ್ನಪ್ಪಿದ್ದಾರೆ. ಅಕ್ಷತಾಳ ಆರು ತಿಂಗಳ ಮಗ ಸುಮಂತ್ ಕೂಡಾ ಸ್ಥಳದಲ್ಲೇ ದುರ್ಮರಣ ಹೊಂದಿದೆ. ಅಕ್ಷತಾ ಪತಿ ಸುರೇಂದ್ರ ಹಾಗೂ ನವನೀತ್ಗೆ ಗಂಭೀರ ಗಾಯವಾಗಿದೆ. ಕುಟುಂಬ ಕನಕಪುರದ ಹೋಟೆಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಿಷನ್ ವಿಚಾರಕ್ಕೆ ಕೊಲೆ; ಮೂವರ ಬಂಧನ: ಮೈಸೂರು: ಕಮಿಷನ್ ವಿಚಾರಕ್ಕೆ ಎಪಿಎಂಸಿ ಏಜೆಂಟ್ ರವಿಯನ್ನು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಮೈಸೂರು ಗ್ರಾಮಾಂತರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಂಧಿತರು ಮೈಸೂರಿನ ಕೈಲಾಸಪುರಂ ನಿವಾಸಿಗಳು. ಮೇ 3ರಂದು ರವಿ ಕೊಲೆಗೈದು ಆರೋಪಿಗಳು ಪರಾರಿಯಾಗಿದ್ದರು. ಈ ಬಗ್ಗೆ ಮೈಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಗನಿಗೆ ಈಜು ಕಲಿಸಲು ಹೋಗಿದ್ದ ತಂದೆ ನೀರು ಪಾಲು: ರಾಯಚೂರು: ತನ್ನ ಮಗನಿಗೆ ಈಜು ಕಲಿಸಲು ಹೋಗಿದ್ದ ತಂದೆ ನೀರು ಪಾಲಾಗಿರುವ ಘಟನೆ ಸಿರವಾರ ತಾಲೂಕಿನ ಅತ್ತನೂರು ಕ್ಯಾಂಪ್ನಲ್ಲಿ ಸಂಭವಿಸಿದೆ. ಕೆ.ಲಿಂಗಣ್ಣ(38) ಮೃತ ವ್ಯಕ್ತಿ. ಬಿಸಿಲಿನ ಹಿನ್ನೆಲೆ ಇದೇ ಗುರುವಾರ ಲಿಂಗಣ್ಣ ಈಜಲು ತೆರಳಿದ್ದ. ಮಗನಿಗೆ ಈಜು ಕಲಿಸಲು ಮಗನನ್ನು ಕರೆದೊಯ್ದಿದ್ದ. ಆಗ ಮಗನಿಗೆ ಈಜು ಕಲಿಸಿ ಕೆರೆ ದಡಕ್ಕೆ ಕಳುಹಿಸಿದ್ದ. ನಂತರ ಲಿಂಗಣ್ಣ ಒಬ್ಬನೇ ಈಜಲು ಕೆರೆಗೆ ಧುಮುಕಿದ್ದ. ಆಗ ಕೆರೆಯಲ್ಲಿ ಮುಳುಗಿದ್ದ. ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಹೊರತೆಗೆದು ಕುಟುಂಬಸ್ಥರಿಗೆ ಹಸ್ತಾಂತರಿಸಿದೆ.
ಇದನ್ನೂ ಓದಿ
ಹಿಂದಿನ ಸರ್ಕಾರಗಳ ಅವಧಿಯಲ್ಲಿ ಭ್ರಷ್ಟಾಚಾರಕ್ಕೆ ಇತಿಮಿತಿ ಇತ್ತು: ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿಕೆ
ನನಗೆ, ನನ್ನ ಹೆಂಡತಿ ಮಕ್ಕಳಿಗೆ ದಯಾಮರಣ ಕೊಡಿ; ರಾಷ್ಟ್ರಪತಿ, ಪ್ರಧಾನಿಗೆ ಪತ್ರ ಬರೆದ ಬಿಎಂಟಿಸಿ ಡ್ರೈವರ್
Published On - 9:36 am, Sat, 7 May 22