AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​​​ಐಆರ್​ ನೋಟಿಸ್ ಬಂದಿದೆಯೇ?: ಕಾರಣಗಳೇನು, ಪರಿಹಾರವೇನು?; ಆತಂಕ ಬೇಡ, ನಿಮ್ಮ ಮತದಾನದ ಹಕ್ಕು ಉಳಿಸಿಕೊಳ್ಳಲು ಹೀಗೆ ಮಾಡಿ

ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನೋಟಿಸ್ ಬಂದಿದ್ದರೆ ಚಿಂತಿಸಬೇಕಿಲ್ಲ. ನಿಮ್ಮ ಮತದಾರರ ಪಟ್ಟಿಗೆ ಸಂಬಂಧಿಸಿದ ಗೊಂದಲಗಳನ್ನು ನಿವಾರಿಸಲು, ಚುನಾವಣಾ ಆಯೋಗವು ಫಾರಂ 6, 7, ಮತ್ತು 8 ರ ಮೂಲಕ ಅರ್ಜಿಗಳನ್ನು ಸ್ವೀಕರಿಸುತ್ತಿದೆ. ಅಕ್ಟೋಬರ್ 27ರಂದು ಅಂತಿಮ ಪಟ್ಟಿ ಪ್ರಕಟವಾಗಲಿದ್ದು, ಇಆರ್‌ಒಗಳನ್ನು ಸಂಪರ್ಕಿಸಿ ನಿಮ್ಮ ಹಕ್ಕುಗಳನ್ನು ದೃಢಪಡಿಸಿಕೊಳ್ಳಿ.

ಎಸ್​​​ಐಆರ್​ ನೋಟಿಸ್ ಬಂದಿದೆಯೇ?: ಕಾರಣಗಳೇನು, ಪರಿಹಾರವೇನು?; ಆತಂಕ ಬೇಡ, ನಿಮ್ಮ ಮತದಾನದ ಹಕ್ಕು ಉಳಿಸಿಕೊಳ್ಳಲು ಹೀಗೆ ಮಾಡಿ
ಮತದಾರರ ಪಟ್ಟಿ ಪರಿಷ್ಕರಣೆImage Credit source: Tv9 kannada
Shivaraj
| Edited By: |

Updated on:Sep 25, 2026 | 12:24 PM

Share

ಬೆಂಗಳೂರು, ಸೆ.25: ಕರ್ನಾಟಕದಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯು ಬಿರುಸಿನಿಂದ ಸಾಗುತ್ತಿದೆ. 2002ರ ನಂತರ ಇದೇ ಮೊದಲ ಬಾರಿಗೆ, 2026ರ ಮತದಾರರ ಪಟ್ಟಿ ತಯಾರಿಯ ಭಾಗವಾಗಿ, ಚುನಾವಣಾ ಆಯೋಗವು ಮತದಾರರ ಮಾಹಿತಿ ಪರಿಷ್ಕರಣೆ ಮಾಡುತ್ತಿದೆ. ಹಲವು ಮತದಾರರಿಗೆ ಎಸ್ಐಆರ್ ನೋಟಿಸ್‌ಗಳು ಬಂದಿದ್ದು, ಇದರಿಂದ ಗೊಂದಲಗಳು ಉಂಟಾಗಿವೆ. ಈ ನೋಟಿಸ್‌ಗಳು ಬರಲು ಕಾರಣಗಳೇನು?, ಇದಕ್ಕೆ ಪ್ರತಿಕ್ರಿಯಿಸುವುದು ಹೇಗೆ? ಹಾಗೂ ಪ್ರಮುಖ ಅರ್ಜಿ ನಮೂನೆಗಳ ಬಗ್ಗೆ ಮಾಹಿತಿ ಪಡೆಯುವ ಬಗ್ಗೆ ಇಲ್ಲಿದೆ ಮಾಹಿತಿ.

ಎಸ್ಐಆರ್ ಎಂದರೇನು ಮತ್ತು ನೋಟಿಸ್‌ಗಳು ಏಕೆ ಬರುತ್ತವೆ?

ಎಸ್ಐಆರ್ ಎಂದರೆ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ. ಮತದಾರರ ಪಟ್ಟಿಯಲ್ಲಿ ಯಾವುದೇ ತಪ್ಪಾಗದಂತೆ, ನಕಲುಗಳನ್ನು ತೆಗೆದುಹಾಕಲು ಮತ್ತು ಹೊಸ ಅರ್ಹ ಮತದಾರರನ್ನು ಸೇರಿಸಲು ಇದು ನಿರ್ಣಾಯಕ ಪ್ರಕ್ರಿಯೆ. 2026ರ ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವ ಮೊದಲು, ಸೆಪ್ಟೆಂಬರ್ 5ರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು ಮತ್ತು ನೋಟಿಸ್‌ಗಳನ್ನು ವಿತರಿಸಲಾಗಿತ್ತು. ಈ ಪ್ರಕ್ರಿಯೆಯು ಸೆಪ್ಟೆಂಬರ್ 23ರಂದು ಮುಕ್ತಾಯಗೊಂಡಿದೆ.

ನೋಟಿಸ್ ಬರುವ ಮುಖ್ಯ ಕಾರಣಗಳೇನು?:

ಅರ್ಜಿ ಭರ್ತಿಯಲ್ಲಿ ದೋಷ: ಬಿಎಲ್‌ಒ ಗಳ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡದಿರುವುದು.

2002ರ ಮತದಾರರ ಪಟ್ಟಿಯೊಂದಿಗೆ ಹೊಂದಾಣಿಕೆ ಇಲ್ಲದಿರುವುದು: ನಿಮ್ಮ ಮತದಾರರ ಗುರುತು 2002ರ ಪಟ್ಟಿಯೊಂದಿಗೆ ಹೊಂದಾಣಿಕೆ ಆಗದಿರುವುದು.

ಹೆಸರು ಹೊಂದಾಣಿಕೆ ಇಲ್ಲದಿರುವುದು: ನಿಮ್ಮ ಹೆಸರು ಅಥವಾ ಇತರ ವಿವರಗಳು ಇತರೆ ದಾಖಲೆಗಳೊಂದಿಗೆ ಹೊಂದಾಣಿಕೆಯಾಗದಿರುವುದು.

ಇಂತಹ ಕಾರಣಗಳಿಗಾಗಿ ನೋಟಿಸ್ ಬಂದಿದ್ದರೆ, ಆತಂಕ ಪಡಬೇಕಾಗಿಲ್ಲ. ಇಆರ್‌ಒ ಅನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಉದಾಹರಣೆಗೆ, ಬೆಂಗಳೂರಿನಲ್ಲಿ ಸುಮಾರು 45 ಲಕ್ಷ ಜನರಿಗೆ ನೋಟಿಸ್ ಬಂದಿದ್ದು, ಅದರಲ್ಲಿ 13 ಲಕ್ಷ ಜನರು ಈಗಾಗಲೇ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಪ್ರಮುಖ ಅರ್ಜಿ ನಮೂನೆಗಳು ಮತ್ತು ಅವುಗಳ ಬಳಕೆ:

ಮತದಾರರ ಪಟ್ಟಿಗೆ ಸಂಬಂಧಿಸಿದ ಯಾವುದೇ ಬದಲಾವಣೆ ಅಥವಾ ಸೇರ್ಪಡೆಗಾಗಿ ಮೂರು ಪ್ರಮುಖ ನಮೂನೆಗಳನ್ನು ಬಳಸಲಾಗುತ್ತದೆ:

ಫಾರಂ 6:

  • 18 ವರ್ಷ ತುಂಬಿದ ಹೊಸ ಮತದಾರರು ಮತದಾನದ ಹಕ್ಕು ಪಡೆಯಲು.
  • ಇದುವರೆಗೆ ಮತದಾರರ ಗುರುತಿನ ಚೀಟಿ ಪಡೆಯದವರು ಅಥವಾ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು.
  • ಒಂದು ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ಸ್ಥಳಾಂತರಗೊಂಡವರು.

 ಫಾರಂ 7:

  • ನಿಮ್ಮ ಹೆಸರು ಮತದಾರರ ಪಟ್ಟಿಯಿಂದ ತೆಗೆದುಹಾಕಲು.
  • ಉದಾಹರಣೆಗೆ, ನೀವು ನಗರ ಮತ್ತು ಹಳ್ಳಿ ಎರಡೂ ಕಡೆ ಮತದಾರರ ಗುರುತು ಹೊಂದಿದ್ದರೆ, ನಿಮಗೆ ಬೇಡವಾದ ಕಡೆಯ
  • ಹೆಸರನ್ನು ರದ್ದುಗೊಳಿಸಲು ಈ ಫಾರಂ ಬಳಸಬಹುದು. ಇದು ನಕಲುಗಳನ್ನು ತೆಗೆದುಹಾಕಲು ಸಹಕಾರಿ.

ಫಾರಂ 8:

  • ಮತದಾರರ ಪಟ್ಟಿಯಲ್ಲಿರುವ ನಿಮ್ಮ ಹೆಸರು, ವಿಳಾಸ, ವಯಸ್ಸು, ಲಿಂಗ, ಪೋಟೋ ಅಥವಾ ಇತರ ಯಾವುದೇ ವಿವರಗಳನ್ನು ಸರಿಪಡಿಸಲು.
  • ಮತಕ್ಷೇತ್ರದ ಬದಲಾವಣೆಗೆ (ಒಂದೇ ಕ್ಷೇತ್ರದೊಳಗೆ ವಾಸಸ್ಥಳ ಬದಲಾದಾಗ).
  • ಮತದಾರರ ಗುರುತಿನ ಚೀಟಿಯ ಬದಲಾವಣೆ.

ಇದನ್ನೂ ಓದಿ: ‘ಬೆಂಗಳೂರಿಗೆ ಬಂದ ಹಲವು ಶಾಸಕರು ಎರಡೆರಡು ಮದುವೆ ಆಗಿದ್ದಾರೆ’: ತೀವ್ರ ಕುತೂಹಲ ಮೂಡಿಸಿದ ಸಿಎಂ ಡಿಕೆ ಶಿವಕುಮಾರ್​​ ಹೇಳಿಕೆ

ಪ್ರಮುಖ ದಿನಾಂಕಗಳು ಮತ್ತು ನೆನಪಿನಲ್ಲಿಡಬೇಕಾದ ಅಂಶಗಳು:

ಸೆಪ್ಟೆಂಬರ್ 23: ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅಂತಿಮ ದಿನಾಂಕ ಮುಗಿದಿದೆ.

ಅಕ್ಟೋಬರ್ 24: ಈ ದಿನಾಂಕದವರೆಗೂ ಹೊಸದಾಗಿ ಅರ್ಜಿ ಸಲ್ಲಿಸಲು ಅಥವಾ ಹಿಂದಿನ ಗೊಂದಲಗಳನ್ನು ಸ್ಪಷ್ಟಪಡಿಸಿಕೊಳ್ಳಲು ಅವಕಾಶವಿದೆ.

ಅಕ್ಟೋಬರ್ 27: ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು.

ನೆನಪಿನಲ್ಲಿ ಈ ದಾಖಲೆಗಳನ್ನು ತೆಗೆದುಕೊಂಡು ಹೋಗಿ:

ಆಧಾರ್​​​ ಕಾರ್ಡ್​​

ಎಸ್​​​ಎಸ್​​ಎಲ್​ಸಿ ಮಾರ್ಕ್ಸ್​​​​ ಕಾರ್ಡ್​​

ಫೋಟೋ

ಬಾಡಿಗೆದಾರರರು ಆಗಿದ್ರೆ ಅದರ ದಾಖಲೆಗಳು

ಪ್ರಸ್ತುತ ನಿಮ್ಮಲ್ಲಿರುವ ವೋಟರ್​ ಐಡಿ

ನೀವು ವಿದೇಶದಲ್ಲಿದ್ದರೆ ಅಥವಾ ಪ್ರಸ್ತುತ ಲಭ್ಯವಿಲ್ಲದಿದ್ದರೆ, ನಿಮ್ಮ ಕುಟುಂಬದ ಪ್ರಮುಖ ಸದಸ್ಯರು ನಿಮ್ಮ ಪರವಾಗಿ ಅಗತ್ಯ ದಾಖಲೆಗಳೊಂದಿಗೆ ಇಆರ್‌ಒ ಅವರನ್ನು ಸಂಪರ್ಕಿಸಬಹುದು. ಯಾವುದೇ ಗೊಂದಲಗಳಿದ್ದರೆ, ಕೂಡಲೇ ನಿಮ್ಮ ವಾರ್ಡ್ ಅಥವಾ ಬೂತ್ ಮಟ್ಟದ ಇಆರ್‌ಒ ಅನ್ನು ಸಂಪರ್ಕಿಸಿ. ಈ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಸರಿಯಾದ ದಾಖಲೆಗಳನ್ನು ಒದಗಿಸುವ ಮೂಲಕ ನಿಮ್ಮ ಮತದಾನದ ಹಕ್ಕನ್ನು ಖಚಿತಪಡಿಸಿಕೊಳ್ಳುವುದು ಪ್ರತಿಯೊಬ್ಬ ಕರ್ನಾಟಕದ ನಾಗರಿಕನ ಕರ್ತವ್ಯವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:13 pm, Fri, 25 September 26

Follow Us
Shivaraj
Shivaraj
ವೀಕೆಂಡ್ ಎಪಿಸೋಡ್​ನಲ್ಲಿ ಮತ್ತಿಬ್ಬರು ಹೊರ ಹೋಗ್ತಾರೆ; ಬಿಗ್ ಬಾಸ್ ಸೂಚನೆ
ವೀಕೆಂಡ್ ಎಪಿಸೋಡ್​ನಲ್ಲಿ ಮತ್ತಿಬ್ಬರು ಹೊರ ಹೋಗ್ತಾರೆ; ಬಿಗ್ ಬಾಸ್ ಸೂಚನೆ
ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಸಂಗ್ರಹ ತೀವ್ರ ಕುಸಿತ
ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಸಂಗ್ರಹ ತೀವ್ರ ಕುಸಿತ
ವಿಶ್ವಸಂಸ್ಥೆಯಲ್ಲಿ ಹಫೀಜ್ ಸಯೀದ್ ಪ್ರಶ್ನೆಗೆ ಮುಖ ತಿರುಗಿಸಿದ ಪಾಕ್ ಪಿಎಂ
ವಿಶ್ವಸಂಸ್ಥೆಯಲ್ಲಿ ಹಫೀಜ್ ಸಯೀದ್ ಪ್ರಶ್ನೆಗೆ ಮುಖ ತಿರುಗಿಸಿದ ಪಾಕ್ ಪಿಎಂ
ಬಿಜೆಪಿ ನಾಯಕಿ ಮಾಧವಿ ಲತಾಗೆ ಬಾಗಲಕೋಟೆ ಪ್ರವೇಶಕ್ಕೆ ನಿರ್ಬಂಧ
ಬಿಜೆಪಿ ನಾಯಕಿ ಮಾಧವಿ ಲತಾಗೆ ಬಾಗಲಕೋಟೆ ಪ್ರವೇಶಕ್ಕೆ ನಿರ್ಬಂಧ
ಧಾರಾಕಾರ ಮಳೆಗೆ ನಡುಗಿದ ಸಿಕ್ಕಿಂ, ರಿಂಬಿ ಗ್ರಾಮದಲ್ಲಿ ಭೂಕುಸಿತ
ಧಾರಾಕಾರ ಮಳೆಗೆ ನಡುಗಿದ ಸಿಕ್ಕಿಂ, ರಿಂಬಿ ಗ್ರಾಮದಲ್ಲಿ ಭೂಕುಸಿತ
ಇಂದು ಅನಂತ ಪದ್ಮನಾಭ ವ್ರತ ಆಚರಣೆಯಿಂದ ಐಶ್ವರ್ಯ ಮತ್ತು ಯಶಸ್ಸು ಲಭ್ಯ
ಇಂದು ಅನಂತ ಪದ್ಮನಾಭ ವ್ರತ ಆಚರಣೆಯಿಂದ ಐಶ್ವರ್ಯ ಮತ್ತು ಯಶಸ್ಸು ಲಭ್ಯ
ಭಾರೀ ಭೂಕುಸಿತ, ತಡೆಗೋಡೆ ಕುಸಿತದಿಂದ ಒಡಿಶಾದ ಕಳಿಂಗ ಘಾಟ್ ರಸ್ತೆ ಬಂದ್
ಭಾರೀ ಭೂಕುಸಿತ, ತಡೆಗೋಡೆ ಕುಸಿತದಿಂದ ಒಡಿಶಾದ ಕಳಿಂಗ ಘಾಟ್ ರಸ್ತೆ ಬಂದ್
ಚಿತ್ರದುರ್ಗ ಎಸ್ಪಿ ವಿರುದ್ಧ ಶಾಸಕ ವೀರೇಂದ್ರ ಪಪ್ಪಿ ಕೆಂಡಾಮಂಡಲ
ಚಿತ್ರದುರ್ಗ ಎಸ್ಪಿ ವಿರುದ್ಧ ಶಾಸಕ ವೀರೇಂದ್ರ ಪಪ್ಪಿ ಕೆಂಡಾಮಂಡಲ
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್
ಬರದಿಂದ ನಲುಗಿದ ರೈತರಿಗೆ ಗುಡ್ ನ್ಯೂಸ್:ಬರ ಪರಿಹಾರ ಘೋಷಿಸಿದ ಸರ್ಕಾರ
ಬರದಿಂದ ನಲುಗಿದ ರೈತರಿಗೆ ಗುಡ್ ನ್ಯೂಸ್:ಬರ ಪರಿಹಾರ ಘೋಷಿಸಿದ ಸರ್ಕಾರ