AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೇಪಾಳ ಪ್ರವಾಹ, ದುರಂತ: ಕರ್ನಾಟಕದವರ ರಕ್ಷಣೆಗೆ ವಿಶೇಷ ನೋಡಲ್ ಅಧಿಕಾರಿ ನೇಮಕ, ಸಿಎಂ ವಿಶೇಷ ಕರ್ತವ್ಯಾಧಿಕಾರಿ ಅಭಿಜಿತ್ ಗೌಡಗೆ ಹೊಣೆ

ನೇಪಾಳ ಪ್ರವಾಹ ಮತ್ತು ಅದರಿಂದಾಗಿ ಸಂಭವಿಸಿದ ದುರಂತದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕದವರ ಪತ್ತೆ ಹಾಗೂ ರಕ್ಷಣೆಗೆ ಸರ್ಕಾರ ವಿಶೇಷ ನೋಡಲ್ ಅಧಿಕಾರಿ ಅಭಿಜಿತ್ ಗೌಡ ಅವರನ್ನು ನೇಮಿಸಿದೆ. 33 ಕನ್ನಡಿಗರ ಪೈಕಿ 14 ಮಂದಿ ಇನ್ನೂ ಪತ್ತೆಯಾಗಬೇಕಿದ್ದು, ಸುರಕ್ಷಿತ ವಾಪಸಾತಿಗೆ ಕ್ರಮ ಮುಂದುವರಿದಿದೆ.

ನೇಪಾಳ ಪ್ರವಾಹ, ದುರಂತ: ಕರ್ನಾಟಕದವರ ರಕ್ಷಣೆಗೆ ವಿಶೇಷ ನೋಡಲ್ ಅಧಿಕಾರಿ ನೇಮಕ, ಸಿಎಂ ವಿಶೇಷ ಕರ್ತವ್ಯಾಧಿಕಾರಿ ಅಭಿಜಿತ್ ಗೌಡಗೆ ಹೊಣೆ
ಕರ್ನಾಟಕದವರ ರಕ್ಷಣೆಗೆ ವಿಶೇಷ ನೋಡಲ್ ಅಧಿಕಾರಿ ನೇಮಕImage Credit source: PTI
ಪ್ರಸನ್ನ ಗಾಂವ್ಕರ್​
| Edited By: |

Updated on: Aug 31, 2026 | 10:34 AM

Share

ಮುಖ್ಯಾಂಶಗಳು

  • ನೇಪಾಳ ಪ್ರವಾಹ: ಕರ್ನಾಟಕದವರ ರಕ್ಷಣೆಗೆ ನೋಡಲ್ ಅಧಿಕಾರಿ ನೇಮಕ
  • 14 ಕನ್ನಡಿಗರ ಪತ್ತೆ ಕಾರ್ಯ ಇನ್ನೂ ಬಾಕಿ
  • ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಕರೆತರಲು ಸಿದ್ಧತೆ

ಬೆಂಗಳೂರು, ಆಗಸ್ಟ್ 31: ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹ (Nepal Flood) ಮತ್ತು ದುರಂತದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಹಾಗೂ ನಾಪತ್ತೆಯಾಗಿರುವ ಕರ್ನಾಟಕದವರ (Karnataka) ಪತ್ತೆ ಮತ್ತು ರಕ್ಷಣಾ ಕಾರ್ಯಕ್ಕೆ ರಾಜ್ಯ ಸರ್ಕಾರ ವಿಶೇಷ ನೋಡಲ್ ಅಧಿಕಾರಿಯನ್ನು ನೇಮಿಸಿದೆ. ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ (OSD) ಅಭಿಜಿತ್ ಗೌಡ ಅವರಿಗೆ ಈ ಜವಾಬ್ದಾರಿ ವಹಿಸಲಾಗಿದೆ. ಕರ್ನಾಟಕದಿಂದ ನೇಪಾಳಕ್ಕೆ ತೆರಳಿ ಸದ್ಯ ಸಂಕಷ್ಟದಲ್ಲಿರುವವರನ್ನು ಪತ್ತೆಹಚ್ಚುವುದು, ರಕ್ಷಣಾ ಕಾರ್ಯಾಚರಣೆಯ ಸಮನ್ವಯ ಮಾಡುವುದು ಹಾಗೂ ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್ ಕರೆತರುವ ಹೊಣೆಯನ್ನು ಅವರಿಗೆ ವಹಿಸಲಾಗಿದೆ.

ನೋಡಲ್ ಅಧಿಕಾರಿಯಾಗಿ ಅಭಿಜಿತ್ ಗೌಡ ಅವರು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹಾಗೂ ಪ್ರವಾಸಿ ಕನ್ನಡಿಗರ ನೆರವಿಗಾಗಿ ಕಾರ್ಯನಿರ್ವಹಿಸುತ್ತಿರುವ ಸಂಬಂಧಿತ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ರಕ್ಷಣಾ ಕಾರ್ಯಾಚರಣೆಯ ಮಾಹಿತಿ ಸಂಗ್ರಹಿಸಿ ರಾಜ್ಯ ಸರ್ಕಾರದೊಂದಿಗೆ ಸಮನ್ವಯ ಸಾಧಿಸಲಿದ್ದಾರೆ.

ನೇಪಾಳದಲ್ಲಿದ್ದರು 33 ಕನ್ನಡಿಗರು

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭಾನುವಾರ ಕರ್ನಾಟಕ ಭವನದ ರೆಸಿಡೆಂಟ್ ಕಮಿಷನರ್ ಸಮೀರ್ ಶುಕ್ಲಾ ಅವರಿಂದ ನೇಪಾಳದಲ್ಲಿರುವ ಕನ್ನಡಿಗರ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಒಟ್ಟು 33 ಮಂದಿ ಕರ್ನಾಟಕದವರು ನೇಪಾಳದಲ್ಲಿದ್ದರೆ, ಈ ಪೈಕಿ ಇಬ್ಬರು ಈಗಾಗಲೇ ವಾಪಸ್ ಆಗಿದ್ದಾರೆ. ಉಳಿದವರಲ್ಲಿ ಕೆಲವರನ್ನು ಪತ್ತೆಹಚ್ಚಲಾಗಿದ್ದು, 14 ಮಂದಿ ಇನ್ನೂ ಪತ್ತೆಯಾಗಬೇಕಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಸಂಕಷ್ಟದಲ್ಲಿರುವವರ ಪೈಕಿ ಇಬ್ಬರು ಮೈಸೂರು ಮೂಲದವರಾಗಿದ್ದು, ಉಳಿದವರು ಬೆಂಗಳೂರಿಗೆ ಸೇರಿದವರು ಎಂದು ಮಾಹಿತಿ ನೀಡಲಾಗಿದೆ.

ದೆಹಲಿಯಿಂದ ಬೆಂಗಳೂರಿಗೆ ಕರೆತರಲು ವ್ಯವಸ್ಥೆ

ನೇಪಾಳದಿಂದ ರಕ್ಷಣೆ ಮಾಡಲಾಗುವ ಕರ್ನಾಟಕದ ನಿವಾಸಿಗಳು ದೆಹಲಿ ತಲುಪಿದ ಬಳಿಕ ಅವರನ್ನು ಸ್ವಾಗತಿಸಿ ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಲಿದೆ. ಅಗತ್ಯವಿದ್ದರೆ ದೆಹಲಿಯಲ್ಲೇ ಒಂದು ದಿನ ಉಳಿಯಲು ವ್ಯವಸ್ಥೆ ಮಾಡುವುದರ ಜೊತೆಗೆ ಆರೋಗ್ಯ ಸೇರಿದಂತೆ ಅಗತ್ಯ ನೆರವು ನೀಡಲಾಗುವುದು ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: 10 ನಿಮಿಷದ ಟೀ ಬ್ರೇಕ್ ಉಳಿಸಿತು 28 ಯಾತ್ರಿಕರ ಪ್ರಾಣ: ನೇಪಾಳ ಜಲಪ್ರಳಯದಿಂದ ಪವಾಡಸದೃಶವಾಗಿ ಪಾರಾದ ಕನ್ನಡಿಗರು

ನೇಪಾಳದಲ್ಲಿರುವ ಕರ್ನಾಟಕದವರ ಪತ್ತೆ, ರಕ್ಷಣೆ ಹಾಗೂ ಸುರಕ್ಷಿತ ವಾಪಸಾತಿಗೆ ಕೇಂದ್ರ ಸರ್ಕಾರ ಮತ್ತು ವಿದೇಶಾಂಗ ಸಚಿವಾಲಯದೊಂದಿಗೆ ರಾಜ್ಯ ಸರ್ಕಾರ ನಿರಂತರವಾಗಿ ಸಮನ್ವಯ ಸಾಧಿಸುತ್ತಿದೆ ಎಂದು ಸಿಎಂ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರಸನ್ನ ಗಾಂವ್ಕರ್​
ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಬಿಗ್ ಬಾಸ್ ಕನ್ನಡ ಸೀಸನ್ 13: ವೈಲ್ಡ್ ಕಾರ್ಡ್ ಮೂಲಕ ಕಾಮನರ್ ಕುಮಾರಿ ಎಂಟ್ರಿ
ಬಿಗ್ ಬಾಸ್ ಕನ್ನಡ ಸೀಸನ್ 13: ವೈಲ್ಡ್ ಕಾರ್ಡ್ ಮೂಲಕ ಕಾಮನರ್ ಕುಮಾರಿ ಎಂಟ್ರಿ
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!