ನ್ಯೂ ಇಯರ್ಗೆ ನಗರದಲ್ಲೆಲ್ಲಾ ಹದ್ದಿನ ಕಣ್ಣಿಟ್ಟ ಖಾಕಿ ಪಡೆ
ಬೆಂಗಳೂರು: ಹೊಸ ವರ್ಷದ ಆಚರಣೆಗೆ ನಗರ ಸಜ್ಜಾಗಿದೆ. ಪಾರ್ಟಿ, ಮೋಜು ಮಸ್ತಿ ಮಾಡಲು ಯುವ ಪೀಳಿಗೆ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಹಳೆ ವರ್ಷಕ್ಕೆ ಗುಡ್ ಬೈ ಹೇಳಿ ಹೊಸ ವರ್ಷವನ್ನು ಸ್ವಾಗತಿಸಲಿದ್ದೇವೆ. ಆದರೆ ಈ ರೀತಿಯ ಸೆಲೆಬ್ರೇಷನ್ನಲ್ಲಿ ಅಹಿತಕರ ಘಟನೆ ಸಂಭವಿಸಬಹುದು ಎಂದು ಪೊಲೀಸ್ ಪಡೆ ತಯಾರಿ ನಡೆಸಿದೆ. ಯಾರೇ ಕಮಕ್ ಕಿಮಕ್ ಅಂದ್ರೆ ಪಕ್ಕಾ ಲಾಕ್. ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಬಾಲ ಬಿಚ್ಚಿದ್ರೆ ಹುಷಾರ್. ಯಾಕಂದ್ರೆ ಕಳೆದ ಬಾರಿ ಆದ ಘಟನೆ […]

ಬೆಂಗಳೂರು: ಹೊಸ ವರ್ಷದ ಆಚರಣೆಗೆ ನಗರ ಸಜ್ಜಾಗಿದೆ. ಪಾರ್ಟಿ, ಮೋಜು ಮಸ್ತಿ ಮಾಡಲು ಯುವ ಪೀಳಿಗೆ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಹಳೆ ವರ್ಷಕ್ಕೆ ಗುಡ್ ಬೈ ಹೇಳಿ ಹೊಸ ವರ್ಷವನ್ನು ಸ್ವಾಗತಿಸಲಿದ್ದೇವೆ. ಆದರೆ ಈ ರೀತಿಯ ಸೆಲೆಬ್ರೇಷನ್ನಲ್ಲಿ ಅಹಿತಕರ ಘಟನೆ ಸಂಭವಿಸಬಹುದು ಎಂದು ಪೊಲೀಸ್ ಪಡೆ ತಯಾರಿ ನಡೆಸಿದೆ.
ಯಾರೇ ಕಮಕ್ ಕಿಮಕ್ ಅಂದ್ರೆ ಪಕ್ಕಾ ಲಾಕ್. ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಬಾಲ ಬಿಚ್ಚಿದ್ರೆ ಹುಷಾರ್. ಯಾಕಂದ್ರೆ ಕಳೆದ ಬಾರಿ ಆದ ಘಟನೆ ಮರುಕಳಿಸದಿರಲಿ ಎಂದು ಪೊಲೀಸರು ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ. ಆಯಾ ವಿಭಾಗದ ಡಿಸಿಪಿಗಳ ನೇತೃತ್ವದಲ್ಲಿ 45 ಕ್ಕೂ ಹೆಚ್ಚು ಎಸಿಪಿ 231 ಕ್ಕೂ ಹೆಚ್ಚು ಇನ್ಸ್‌ಪೆಕ್ಟರ್‌ಗಳು, 591 ಸಬ್ ಇನ್ಸ್‌ಪೆಕ್ಟರ್‌ಗಳು, 941 ಎಎಸ್‌ಐಗಳು, 1000 ಪೇದೆಗಳು ಮತ್ತು 1,500 ಹೋಂ ಗಾರ್ಡ್ಸ್ ನಿಯೋಜನೆ ಮಾಡಲಾಗಿದೆ.
ಹೊಸವರ್ಷದ ಆಚರಣೆ ವೇಳೆ ಅನುಚಿತ ವರ್ತನೆ ಮಾಡದಂತೆ ಎಚ್ಚರ ವಹಿಸಲಾಗಿದೆ. ಅನುಚಿತವಾಗಿ ವರ್ತಿಸಿದರೆ ನಿಮ್ಮ ಕರ್ಮಕಾಂಡದ ವಿಡಿಯೋ ಸಮೇತ ಕೇಸ್ ಹಾಕ್ತಾರೆ. ಬ್ರಿಗೇಡ್ ರಸ್ತೆ, ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್ಗೆ ಬರೋ ಸಾರ್ವಜನಿಕರು ಹೆಚ್ಚಿನ ಎಚ್ಚರಿಗೆ ವಹಿಸಬೇಕು. ಯಾಕೆಂದರೆ ನಿಮ್ಮ ಮೇಲೆ ಸಿಸಿಟಿವಿಗಳು ತೀವ್ರ ನಿಗಾವಹಿಸಿವೆ. ನಗರದ ಹಲವೆಡೆ 1,500 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಸಿಸಿಟಿವಿಗಳ ಮಾನಿಟರ್ ರೂಂನಲ್ಲಿ ಪ್ರತಿಯೊಂದು ಚಲನವಲನ ಸೆರೆಯಾಗಲಿದೆ.
Published On - 3:46 pm, Tue, 31 December 19