ಸುಮಲತಾ ಏನೂ ಕೆಲ್ಸ ಮಾಡ್ತಿಲ್ಲ, ಮಂಡ್ಯದ ಏನೇ ಕೆಲಸ ಇದ್ರೂ ನನಗೆ ಹೇಳಿ -ಮೈಸೂರು ಸಂಸದ ಪ್ರತಾಪ್
ಮಂಡ್ಯ: ‘ಸಂಸದೆ ಸುಮಲತಾ ಏನೂ ಕೆಲಸ ಮಾಡುವುದಿಲ್ಲ, ಮಂಡ್ಯದ ಯಾವುದೇ ಕೆಲಸ ಇದ್ದರೂ ನನಗೆ ಹೇಳಿ, ಆ ಯಮ್ಮ ಏನೂ ಕೆಲಸ ಮಾಡುವುದಿಲ್ಲ’ ಎಂದು ಸಂಸದೆ ಸುಮಲತಾ ಬಗ್ಗೆ ಪ್ರತಾಪ್ ಸಿಂಹ ಟೀಕಿಸಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಬೆಂಗಳೂರು-ಮೈಸೂರು ದಶಪಥ ರಸ್ತೆ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿ ಸಂಸದರು ಕೆಲಸ ಮಾಡುವುದಕ್ಕೆ ಬಿಡಲ್ಲವೆಂದು ಸುಮಲತಾ ವಿರುದ್ಧ ಪ್ರತಾಪ್ ಸಿಂಹಗೆ ಅಧಿಕಾರಿಯೊಬ್ಬರು ದೂರು ನೀಡಿದ್ದಾರೆ. ಈ ವೇಳೆ ಅಧಿಕಾರಿ ಜೊತೆ ಕರೆ ಮಾಡಿ ಮಾತನಾಡುವ ವೇಳೆ ಪ್ರತಾಪ್ ಸಿಂಹ […]

ಮಂಡ್ಯ: ‘ಸಂಸದೆ ಸುಮಲತಾ ಏನೂ ಕೆಲಸ ಮಾಡುವುದಿಲ್ಲ, ಮಂಡ್ಯದ ಯಾವುದೇ ಕೆಲಸ ಇದ್ದರೂ ನನಗೆ ಹೇಳಿ, ಆ ಯಮ್ಮ ಏನೂ ಕೆಲಸ ಮಾಡುವುದಿಲ್ಲ’ ಎಂದು ಸಂಸದೆ ಸುಮಲತಾ ಬಗ್ಗೆ ಪ್ರತಾಪ್ ಸಿಂಹ ಟೀಕಿಸಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಬೆಂಗಳೂರು-ಮೈಸೂರು ದಶಪಥ ರಸ್ತೆ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿ ಸಂಸದರು ಕೆಲಸ ಮಾಡುವುದಕ್ಕೆ ಬಿಡಲ್ಲವೆಂದು ಸುಮಲತಾ ವಿರುದ್ಧ ಪ್ರತಾಪ್ ಸಿಂಹಗೆ ಅಧಿಕಾರಿಯೊಬ್ಬರು ದೂರು ನೀಡಿದ್ದಾರೆ. ಈ ವೇಳೆ ಅಧಿಕಾರಿ ಜೊತೆ ಕರೆ ಮಾಡಿ ಮಾತನಾಡುವ ವೇಳೆ ಪ್ರತಾಪ್ ಸಿಂಹ ಈ ರೀತಿ ಸುಮಲತಾ ಅವರನ್ನ ಟೀಕಿಸಿ ಮಾತನಾಡಿದ್ದಾರೆ.
ಪ್ರತಾಪ್ ಸಿಂಹ ವಿರುದ್ಧ ಸುಮಲತಾ ಬೆಂಬಲಿಗರು ಆಕ್ರೋಶ
ಹೆಚ್.ಡಿ. ದೇವೇಗೌಡರ ಕುಟುಂಬದವರನ್ನು ಸೋಲಿಸಲು ಮಂಡ್ಯ ಕ್ಷೇತ್ರದಲ್ಲಿ ಸಂಸದೆ ಸುಮಲತಾರನ್ನ ಗೆಲ್ಲಿಸಿದ್ದಾರೆ. ಸಂಸದೆ ಸುಮಲತಾ ಏನೂ ಕೆಲಸ ಮಾಡುವುದಿಲ್ಲ, ಯಾವುದೇ ಕೆಲಸ ಇದ್ದರೂ ನನಗೆ ಹೇಳಿ ಎಂದು ಸಂಸದೆಯನ್ನು ಟೀಕಿಸುತ್ತಾ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ. ಮಂಡ್ಯ ಜಿಲ್ಲೆ ಯಲಿಯೂರು ಗ್ರಾಮಸ್ಥರ ಅಹವಾಲು ಸ್ವೀಕಾರ ವೇಳೆ ಈ ಪ್ರಸಂಗ ನಡೆದಿದೆ. ಪ್ರತಾಪ್ ಸಿಂಹ ವಿರುದ್ಧ ಸುಮಲತಾ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published On - 10:50 am, Sat, 14 November 20