ರಾಜ್ಯ ಸಚಿವ ಸಂಪುಟದಲ್ಲಿ ಈಶ್ವರಪ್ಪರದ್ದು ಮೊದಲ ವಿಕೆಟ್, 2-3 ದಿನಗಳ ಬಳಿಕ 2ನೇ ವಿಕೆಟ್ ಬೀಳುತ್ತದೆ -ರವಿ ಬೋಸರಾಜ್ ಸ್ಫೋಟಕ ಹೇಳಿಕೆ
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಏಪ್ರಿಲ್ 15ರ ಸಂಜೆ ಸಚಿವ ಈಶ್ವರಪ್ಪ ರಾಜೀನಾಮೆ ನೀಡಲಿದ್ದಾರೆ. ಬಿಜೆಪಿಯಲ್ಲಿ ಈಶ್ವರಪ್ಪನವರದ್ದು ಮೊದಲನೇ ವಿಕೆಟ್, ಎರಡು ಮೂರು ದಿನ ಆದ ಮೇಲೆ ಎರಡನೇ ವಿಕೇಟ್ ಬೀಳೋದು ಇದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ರಾಯಚೂರು: ರಾಜ್ಯ ಸಚಿವ ಸಂಪುಟದಲ್ಲಿ ಈಶ್ವರಪ್ಪರದ್ದು(KS Eshwarappa) ಮೊದಲ ವಿಕೆಟ್. ಎರಡು ಮೂರು ದಿನಗಳ ಬಳಿಕ 2ನೇ ವಿಕೆಟ್ ಬೀಳುತ್ತದೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್(Dr K Sudhakar) ರಾಜೀನಾಮೆ ನೀಡಲಿದ್ದಾರೆ ಎಂದು ರಾಯಚೂರಿನಲ್ಲಿ ಕಾಂಗ್ರೆಸ್ ಮುಖಂಡ ರವಿ ಬೋಸರಾಜ್(Ravi Bhosraj) ಸ್ಫೋಟಕ ಹೇಳಿಕೆ ನೀಡಿದ್ದಾರೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಏಪ್ರಿಲ್ 15ರ ಸಂಜೆ ಸಚಿವ ಈಶ್ವರಪ್ಪ ರಾಜೀನಾಮೆ ನೀಡಲಿದ್ದಾರೆ. ಬಿಜೆಪಿಯಲ್ಲಿ ಈಶ್ವರಪ್ಪನವರದ್ದು ಮೊದಲನೇ ವಿಕೆಟ್, ಎರಡು ಮೂರು ದಿನ ಆದ ಮೇಲೆ ಎರಡನೇ ವಿಕೇಟ್ ಬೀಳೋದು ಇದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಸಚಿವ ಡಾ.ಕೆ.ಸುಧಾಕರ್ ವಿಕೆಟ್ ಕೂಡ ಬೀಳೋದು ಇದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರೇ ಈ ಬಗ್ಗೆ ಹೇಳಿದ್ದಾರೆ. ಒಬ್ಬರದ್ದೇ ಮಿನಿಸ್ಟರ್ಗಳ ಭ್ರಷ್ಟಾಚಾರ ಇವತ್ತು ಬಯಲಾಗ್ತಿದೆ. ಇದು 40 ಪರ್ಸೆಂಟ್ ಸರ್ಕಾರ ಅನ್ನೋದು ಸಾಬೀತಾಗಿದೆ. ಮುಖ್ಯಮಂತ್ರಿಗಳು ಕೂಡ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸಂತೋಷ್ ಸಾವಿನ ಡಿಕ್ಲರೇಶನ್ ವೇಳೆ ಈಶ್ವರಪ್ಪ ಹೆಸರು ಹೇಳ್ತಾರೆ. ಆಗ ತಕ್ಷಣ ರಾಜೀನಾಮೆ ಪಡೆದುಕೊಳ್ಳಬೇಕಿತ್ತು. ಆ ಮೇಲೆ ತನಿಖೆ ಮಾಡಬೇಕಿತ್ತು. ಎರಡು ದಿನ ವಿಳಂಬ ಮಾಡಿ, ಈಗ ರಾಜೀನಾಮೆ ಕೊಡ್ತಿನಿ ಅಂತಿದ್ದಾರೆ. ಈ ಮೂಲಕ ಈಶ್ವರಪ್ಪರನ್ನು ರಕ್ಷಣೆ ಮಾಡ್ತಿದ್ದಾರೆ. ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರಿಗೆ ಆಗ್ರಹಿಸುತ್ತೇನೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ವಿರುದ್ಧ ರವಿ ಬೋಸರಾಜ್ ಆರೋಪ ರಾಯಚೂರು ಜಿಲ್ಲೆಯಲ್ಲಿ 40% ಕಮಿಷನ್ ದಂಧೆ ಇದೆ. ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಅಣ್ಣ-ತಮ್ಮಂದಿರು ಗುತ್ತಿಗೆದಾರರಿದ್ದಾರೆ ಎಂದು ಡಾ.ಶಿವರಾಜ್ ಪಾಟೀಲ್ ವಿರುದ್ಧವೂ ರವಿ ಬೋಸರಾಜ್ ಆರೋಪ ಮಾಡಿದ್ದಾರೆ. ಶಿವರಾಜ್ ಪಾಟೀಲ್ ಅಣ್ಣ-ತಮ್ಮಂದಿರು ಗುತ್ತಿಗೆದಾರರಿದ್ದಾರೆ. ಒಳ್ಳೆಯ ಮಾರ್ಜಿನ್ ಇರುವ ಕಡೆ ಕಾಮಗಾರಿ ಮಾಡಿಸುತ್ತಾರೆ. ಬಿಜೆಪಿ ಶಾಸಕರ ಸಹೋದರರೇ ಕಾಮಗಾರಿ ಮಾಡಿಸುತ್ತಾರೆ. ಇತರೆ ಕಾಮಗಾರಿಗಳನ್ನು ಬೇರೆ ಗುತ್ತಿಗೆದಾರರಿಗೆ ಕೊಡಿಸ್ತಾರೆ. ಅವರಿಂದ ಶೇಕಡಾ 30-50ರವರೆಗೆ ಕಮಿಷನ್ ಪಡೀತಾರೆ. ರಾಯಚೂರಿನಲ್ಲೂ ಗುತ್ತಿಗೆದಾರರು ಒತ್ತಡದಲ್ಲಿಯೇ ಇದ್ದಾರೆ. ಬಹಳಷ್ಟು ಜನರು ನನಗೆ ಈ ಬಗ್ಗೆ ಹೇಳಿದ್ದಾರೆಂದು ರವಿ ಬೋಸರಾಜ್ ಹೇಳಿದ್ದಾರೆ.
ಸಚಿವ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ ಕೆ.ಎಸ್.ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡೋದಾಗಿ ಕೆ.ಎಸ್.ಈಶ್ವರಪ್ಪ ಪ್ರಕಟಿಸಿದ್ದಾರೆ.. ಸಂತೋಷ್ ಸಾವಿನ ಪ್ರಕರಣದಲ್ಲಿ ತಮ್ಮ ವಿರುದ್ಧ ಎದ್ದಿದ್ದ ಆರೋಪಗಳಿಗೆ, ವಿಪಕ್ಷಗಳ ಪ್ರತಿಭಟನೆಗೆ ಈಶ್ವರಪ್ಪ ತಲೆ ಬಾಗಿದ್ದಾರೆ.. ಈ ಮೂಲಕ ಕೋಲಾಹಲ ಎಬ್ಬಿಸಿದ್ದ ಗುತ್ತಿಗೆದಾರನ ಆತ್ಮಹತ್ಯೆ ಕೇಸ್ನಲ್ಲಿ, ಬೊಮ್ಮಾಯಿ ಸರ್ಕಾರದ ವಿಕೆಟ್ವೊಂದು ಪತನವಾಗಿದೆ. ಗುತ್ತಿಗೆದಾರ ಸಂತೋಷ್, ಈಶ್ವರಪ್ಪ ಹೆಸ್ರನ್ನ ನೇರವಾಗಿ ಉಲ್ಲೇಖಿಸಿದ್ರು. ಕಾಮಗಾರಿ ನಡೆಸಿರುವ 4 ಕೋಟಿ ಹಣವನ್ನ ಕೊಡ್ತಿಲ್ಲ ಎಂಬ ಆರೋಪ ಮಾಡಿದ್ರು. ಹೀಗಾಗಿಯೇ, ಸಾವಿಗೆ ಶರಣಾಗ್ತಿದ್ದೇನೆ ಅಂತ ಸಂತೋಷ್ ಡೆತ್ನೋಟ್ ಬರೆದಿಟ್ರು. ಆದ್ರೆ, ಸಂತೋಷ್ ನನಗೆ ಪರಿಚಯವೇ ಇಲ್ಲ ಎಂದಿದ್ದ ಈಶ್ವರಪ್ಪ, ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದಿದ್ರು. ಯಾರೂ ಏನೇ ಹೇಳಿದ್ರೂ ಡೋಂಟ್ಕೇರ್ ಎಂಬ ಜವಾಬು ಕೊಟ್ಟಿದ್ರು. ಆದ್ರೆ, ಏಪ್ರಿಲ್ 14ರ ಸಂಜೆ ಏಕಾಏಕಿ ಈಶ್ವರಪ್ಪ ಹೆಜ್ಜೆ ಬದಲಾಗಿದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡೋದಾಗಿ ಈಶ್ವರಪ್ಪ ಪ್ರಕಟಿಸಿದ್ದಾರೆ.
ಇದನ್ನೂ ಓದಿ: ಸಚಿವ ಈಶ್ವರಪ್ಪ ರಾಜೀನಾಮೆ ನೀಡೋದು ಅನುಮಾನ, ಮೊದಲು ಅವರ ಬಂಧನವಾಗಲೀ ಎಂದ ಕಾಂಗ್ರೆಸ್
Published On - 8:15 am, Fri, 15 April 22