ನೈತಿಕತೆ ಆಧಾರದಲ್ಲಿ ಈಶ್ವರಪ್ಪ ರಾಜೀನಾಮೆ ಕೊಡಲಿ; ಪ್ರಕರಣದ ತನಿಖೆಗೆ ಒತ್ತಾಯಿಸಿದ ಹೆಚ್​ಡಿ ಕುಮಾರಸ್ವಾಮಿ, ಶಿವಲಿಂಗೇಗೌಡ

ಕೆಲಸ ಮಾಡುವುದಕ್ಕೆ ಅನುಮತಿ ನೀಡಿದವರು ಯಾರು? ಸರ್ಕಾರದ ಗಮನಕ್ಕೂ ಬಾರದೆ ಕೆಲಸ ಮಾಡಿರುವುದಾದರೆ ಇಲ್ಲಿ ತಾಂತ್ರಿಕ ಸಮಸ್ಯೆ ಇದೆ, ಸಮಗ್ರ ತನಿಖೆಯಾಗಬೇಕಾಗಿದೆ ಎಂದು ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತನಿಖೆಗೆ ಆಗ್ರಹ ವ್ಯಕ್ತಪಡಿಸಿದ್ದಾರೆ.

ನೈತಿಕತೆ ಆಧಾರದಲ್ಲಿ ಈಶ್ವರಪ್ಪ ರಾಜೀನಾಮೆ ಕೊಡಲಿ; ಪ್ರಕರಣದ ತನಿಖೆಗೆ ಒತ್ತಾಯಿಸಿದ ಹೆಚ್​ಡಿ ಕುಮಾರಸ್ವಾಮಿ, ಶಿವಲಿಂಗೇಗೌಡ
ಹೆಚ್​ಡಿ ಕುಮಾರಸ್ವಾಮಿ
Follow us
TV9 Web
| Updated By: ganapathi bhat

Updated on:Apr 14, 2022 | 3:26 PM

ರಾಮನಗರ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡುವುದು ಸೂಕ್ತ. ಸಂತೋಷ್ ಸಾವಿನ ಹಿಂದೆ ಹಲವು ಸಂಶಯಗಳು ಇವೆ. ಸತ್ಯಾಂಶವನ್ನು ಹೊರತರುವುದು ಸರ್ಕಾರದ ಜವಾಬ್ದಾರಿ. ಇದರ ಹಿಂದೆ ಕಾಣದ ಕೈಗಳಿವೆ ಎಂದು ಮೇಲ್ನೋಟಕ್ಕೆ ಕಾಣ್ತಿವೆ. ವರ್ಕ್ ಆರ್ಡರ್ ಇಲ್ಲದೆ ₹4 ಕೋಟಿ ಕೆಲಸ ಆಗಿದ್ದು ಹೇಗೆ. ಕೆಲಸ ಮಾಡುವುದಕ್ಕೆ ಅನುಮತಿ ನೀಡಿದವರು ಯಾರು? ಸರ್ಕಾರದ ಗಮನಕ್ಕೂ ಬಾರದೆ ಕೆಲಸ ಮಾಡಿರುವುದಾದರೆ ಇಲ್ಲಿ ತಾಂತ್ರಿಕ ಸಮಸ್ಯೆ ಇದೆ, ಸಮಗ್ರ ತನಿಖೆಯಾಗಬೇಕಾಗಿದೆ ಎಂದು ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತನಿಖೆಗೆ ಆಗ್ರಹ ವ್ಯಕ್ತಪಡಿಸಿದ್ದಾರೆ.

ಈಶ್ವರಪ್ಪ ಕಾನೂನಾತ್ಮಕವಾಗಿ ರಾಜೀನಾಮೆ ಕೊಡಬೇಕು ಎಂದು ಅರಸೀಕೆರೆ JDS ಶಾಸಕ ಕೆ.ಎಂ. ಶಿವಲಿಂಗೇಗೌಡ ಕೂಡ ಆಗ್ರಹ ವ್ಯಕ್ತಪಡಿಸಿದ್ದಾರೆ. ಡೆತ್ ನೋಟ್​ನಲ್ಲಿ ಹೆಸರು ಇದೆ, ರಾಜೀನಾಮೆ ಕೊಡಬೇಕು. ತನಿಖೆ ಬಳಿಕ ತಪ್ಪಿತಸ್ಥರಲ್ಲ ಎಂದಾದರೆ ಮತ್ತೆ ಮಂತ್ರಿ ಮಾಡಿ. ಸಂತೋಷ್​ದು ಹತ್ಯೆ ಅಲ್ಲವೆಂದು ಗೃಹಸಚಿವರೇ ಹೇಳ್ತಿದ್ದಾರೆ. ಡೆತ್ ನೋಟ್​ನಲ್ಲಿ ಹೆಸರಿದ್ರೆ ಎಲ್ಲರೂ ರಾಜೀನಾಮೆ ಕೊಟ್ಟಿದ್ದಾರೆ. ಈ ಹಿಂದಿನಿಂದ ಎಲ್ಲರೂ ನಡೆದುಬಂದ ಹಾಗೆ ನಡೆದುಕೊಳ್ಳಲಿ. ಕರ್ನಾಟಕದ ಇತಿಹಾಸದಲ್ಲಿ ಬೇಕಾದಷ್ಟು ಉದಾಹರಣೆಗಳಿವೆ. ನೈತಿಕತೆ ಆಧಾರದ ಮೇಲೆ ಈಶ್ವರಪ್ಪ ರಾಜೀನಾಮೆ ಕೊಡಬೇಕು . ರಾಜೀನಾಮೆ ಕೊಡದಿದ್ದರೆ ಘನತೆ ಗೌರವ ಕಳೆದುಕೊಳ್ಳುತ್ತಾರೆ. ಬಡವರಿಗೊಂದು ಕಾನೂನು, ಇವರಿಗೊಂದು ಕಾನೂನು ಅಲ್ಲ. ಸಚಿವ ಈಶ್ವರಪ್ಪ ರಾಜೀನಾಮೆಯನ್ನ ಸಿಎಂ ಪಡೆಯಬೇಕು ಎಂದು ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ.

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಹಿನ್ನೆಲೆ ಈಶ್ವರಪ್ಪ ರಾಜೀನಾಮೆ ನೀಡುವುದು ಬೇಡ, ವಜಾಗೊಳಿಸಲಿ ಎಂದು ಕೋಲಾರದಲ್ಲಿ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಹೇಳಿಕೆ ನೀಡಿದ್ದಾರೆ. ರಾಜೀನಾಮೆ ಅನ್ನೋದು ಗೌರವಯುತವಾದ ಪದವಾಗಿದೆ. ಅಷ್ಟೊಂದು ಗೌರವಯುತ ಪದ ಇವರಿಗೆ ಬಳಸೋದು ಬೇಡ. ಇವರಿಗೆ ಆಗಬೇಕಾಗಿರುವುದು ಡಿಸ್ಮಿಸ್ ಎಂದು ರಮೇಶ್‌ಕುಮಾರ್ ಆಕ್ರೋಶ ಹೊರಹಾಕಿದ್ದಾರೆ.

ಗುತ್ತಿಗೆದಾರ ಸಂತೋಷ್ ಕೆ.ಪಾಟೀಲ್ ಆತ್ಮಹತ್ಯೆ ಪ್ರಕರಣ ಹಿನ್ನೆಲೆ ಬಾಗಲಕೋಟೆಯಲ್ಲಿ ಆಪ್‌ ಮುಖಂಡ ಭಾಸ್ಕರ್ ರಾವ್ ಹೇಳಿಕೆ ನೀಡಿದ್ದಾರೆ. ರಾಜ್ಯದ ಎಲ್ಲಾ ಇಲಾಖೆಗಳಲ್ಲಿಯೂ ಭ್ರಷ್ಟಾಚಾರವಿದೆ. ಕೊಳೆತು ಹೋಗಿರುವ ನಾಯಕತ್ವದಿಂದ ಏನೇನೂ ಆಗಲ್ಲ. ಕೊಳೆತ ನಾಯಕತ್ವ ನೋಡಿ ನಾನು ಹೊರಗೆ ಬಂದಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆತ್ಮಹತ್ಯೆಗೆ ಸ್ಥಳೀಯ ಶಾಸಕರು ಕೂಡ ಅಷ್ಟೇ ಕಾರಣ ಎಂದು ಪರೋಕ್ಷವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಬಗ್ಗೆ ಕೂಡ ಭಾಸ್ಕರರಾವ್ ಉಲ್ಲೇಖಿಸಿದ್ದಾರೆ. ನಿವೃತ್ತ ಪೊಲೀಸ್ ಕಮಿಷನರ್, ಆಪ್ ಪಕ್ಷದ ಮುಖಂಡ ಭಾಸ್ಕರರಾವ್ ಆರೋಪ ಮಾಡಿದ್ದಾರೆ.

ಆತ್ಮಹತ್ಯೆಗೆ ಸ್ಥಳೀಯ ಕಾಂಗ್ರೆಸ್ ಶಾಸಕರೂ ಕೂಡ ಅಷ್ಟೇ ಕಾರಣ. ಈಗ ಫ್ಲೈಟ್ ನಲ್ಲಿ ರಾಜ್ಯ ನಾಯಕರನ್ನು ಕರೆಸಿ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ವರ್ಕ್ ಆರ್ಡರ್ ಇಲ್ಲದೆ ಕೆಲಸ ಮಾಡಪ್ಪ ಅನ್ನೋದೇ ತಪ್ಪು. ಅಧಿಕಾರಿಗಳಿಗೆ ಪ್ರೊಟೆಸ್ಟ್ ಮಾಡೋಕೆ ಆಗಲ್ಲ. ರಾಜಕಾರಣಿಗಳು ಇರ್ತಾರೆ ತೊಂದರೆ ಕೊಡ್ತಾರೆ. ಸಸ್ಪೆಂಡ್ ಮಾಡಿಸೋದು ರಿಮಾರ್ಕ್ ಮಾಡಿಸೋದು ಮಾಡ್ತಾರೆ ಅಂತ ದೊಡ್ಡವರು ಹೇಳ್ತಾರೆ ಅಂತ ಸುಮ್ನೆ ಇರ್ತಾರೆ. ಈಗ ಪ್ರತಿಭಟನೆ ಮಾಡೋದು ಅವಿವೇಕಿತನ ಅದು. ಇಲ್ಲದಿದ್ರೆ ಈ ಸಾವು ಆಗ್ತಿರಲಿಲ್ಲ. ಭ್ರಷ್ಟಾಚಾರ ಅನ್ನೋ ಪ್ರಾಣಾಂ ಭೂತ ನೀವೇ ಸಾಕಿ, ಹುಟ್ಟಿಸಿ, ಬೆಳೆಸಿ ದಷ್ಟಪುಷ್ಟವಾಗಿ ಮಾಡಿದವರು ನೀವೆ. ಈಗ ನಿಮಗೆ ಅದು ಕಾಣದಂತಿದೆ ಎಂದು ಭಾಸ್ಕರ ರಾವ್ ಹೇಳಿದ್ದಾರೆ.

ಇದನ್ನೂ ಓದಿ: ಕೆಎಸ್ ಈಶ್ವರಪ್ಪ ಬಂಧನಕ್ಕೆ ಒತ್ತಾಯಿಸಿ ಕಾಂಗ್ರೆಸ್ ಮೆರವಣಿಗೆ; ಪ್ರತಿಭಟನಾನಿರತರನ್ನು ವಶಕ್ಕೆ ಪಡೆದ ಪೊಲೀಸರು

ಇದನ್ನೂ ಓದಿ: ಸಂತೋಷ್ ಆತ್ಮಹತ್ಯೆ, ಈಶ್ವರಪ್ಪ ವಿಚಾರದಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಇಲ್ಲ: ಸಿಎಂ ಬಸವರಾಜ ಬೊಮ್ಮಾಯಿ

Published On - 3:24 pm, Thu, 14 April 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ