ಮುರುಘಾಮಠದ ಶ್ರೀ ವಿರುದ್ಧ ಫೋಕ್ಸೋ: ಇದು ನನಗೆ ಆಶ್ಚರ್ಯ ತಂದ ವಿಚಾರವಲ್ಲ, ಭಕ್ತರ ಭಾವನೆಗಳಿಗೆ ಧಕ್ಕೆಯಾಗಬಾರದು ಎಂದ ಹೆಚ್ ಡಿ ಕುಮಾರಸ್ವಾಮಿ
ಈ ಪ್ರಕರಣಕ್ಕೆ ಸಂಬಂಧಿಸಿ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಹೆಚ್ಡಿ ಕುಮಾರಸ್ವಾಮಿ, ಇದು ನನಗೆ ಆಶ್ಚರ್ಯ ತಂದ ವಿಚಾರವಲ್ಲ. ಈ ಬಗ್ಗೆ 5-6 ತಿಂಗಳ ಹಿಂದೆ ಹಲವಾರು ಚರ್ಚೆ ನಡೆದಿವೆ. ಈ ವಿಚಾರವನ್ನ ಪ್ರಾರಂಭಿಕ ಹಂತದಲ್ಲೇ ಮುಂಜಾಗ್ರತೆ ವಹಿಸಬೇಕಿತ್ತು.
ರಾಮನಗರ: ಮಕ್ಕಳ ಮೇಲೆ ಲೈಂಗಿಕ ದೌರ್ಜ್ಯ ಎಸಗಿದ್ದಾರೆ ಎನ್ನಲಾಗಿರೋ ಗುರುತರ ಆರೋಪದಡಿ ಚಿತ್ರದುರ್ಗದ ಮುರುಘಾಮಠದ ಶ್ರೀಗಳ(Murugha Mutt Seer)ವಿರುದ್ಧ ಫೋಕ್ಸೋ ಪ್ರಕರಣ(Pocso) ದಾಖಲಾಗಿದೆ. ಮೈಸೂರಿನ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣ ಸಂಬಂಧ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು ಇದು ನನಗೆ ಆಶ್ಚರ್ಯ ತಂದ ವಿಚಾರವಲ್ಲ ಎಂದಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಹೆಚ್ಡಿ ಕುಮಾರಸ್ವಾಮಿ, ಇದು ನನಗೆ ಆಶ್ಚರ್ಯ ತಂದ ವಿಚಾರವಲ್ಲ. ಈ ಬಗ್ಗೆ 5-6 ತಿಂಗಳ ಹಿಂದೆ ಹಲವಾರು ಚರ್ಚೆ ನಡೆದಿವೆ. ಈ ವಿಚಾರವನ್ನ ಪ್ರಾರಂಭಿಕ ಹಂತದಲ್ಲೇ ಮುಂಜಾಗ್ರತೆ ವಹಿಸಬೇಕಿತ್ತು. ಇದು ಧಾರ್ಮಿಕ ಕ್ಷೇತ್ರದ ಮೇಲೆ ಬೇರೆ ಪರಿಣಾಮ ಬೀರಬಾರದು. ಈಗಾಗಲೇ ಒಂದು ಬಾರಿ ಹೊಸನಗರ ಶ್ರೀಗಳ ಘಟನೆ ನಡೆದಿತ್ತು. ನಮ್ಮ ನಮ್ಮ ಭಾವನೆಗಳಿಗೆ ಧಕ್ಕೆಯಾಗಬಾರದು. ಕಾನೂನು ಬಾಹಿರವಾಗಿ ನಡೆದಿದ್ರೆ ಸರ್ಕಾರ ತೀರ್ಮಾನಕ್ಕೆ ಬರಬೇಕು ಎಂದು ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾಜಿ ಸಿಎಂ HDK ಹೇಳಿಕೆ ನೀಡಿದ್ದಾರೆ.
ಮುರುಘಾಮಠದ ಹಾಸ್ಟೆಲ್‌ನಲ್ಲಿದ್ದ ಬಾಲಕಿಯರಿಗೆ ಶ್ರೀಗಳು ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದ್ದು, ಆಹಾರದಲ್ಲಿ ಮತ್ತು ಬರೋ ಔಷಧಿ ಹಾಕಿ ವಿದ್ಯಾರ್ಥಿನಿಯರನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಹಿಂಸೆತಾಳಲಾರದೆ ಬಾಲಯಕಿಯರು ಮಠದ ಹಾಸ್ಟೆಲ್‌ನಿಂದ ನಾಯಪತ್ತೆಯಾಗಿದ್ದು, ಬಳಿಕ ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರಿನ ಕಾಟನ್‌ಪೇಟೆ ಠಾಣೆ ವ್ಯಾಪ್ತಿಯಲ್ಲಿ ಬಾಲಕಿಯರು ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಬಳಿಕ ಇಬ್ಬರೂ ವಿದ್ಯಾರ್ಥಿನಿಯರ ಸಂಕಷ್ಟ ಕೇಳಿದ ಆಟೋ ಚಾಲಕನೊಬ್ಬ, ಮೈಸೂರಿನ ಒಡನಾಡಿ ಸಂಸ್ಥೆಗೆ ಕಳಿಸಿಕೊಟ್ಟಿದ್ದಾನೆ ಎಂದು ಒಡನಾಡಿ ಸಂಸ್ಥೆಯ ಮುಖ್ಯಸ್ಥ ಪರಶು ಹೇಳಿದ್ದಾರೆ. ಬಳಿಕ ಬಾಲಕಿಯರ ಹೇಳಿಕೆ ಮೇಲೆ ಮುರುಘಾಮಠದ ಶ್ರೀಗಳ ವಿರುದ್ಧ ದೂರು ದಾಖಲಾಗಿದೆ. ಇದನ್ನೂ ಓದಿ: ಮಠದ ಹಾಸ್ಟೆಲ್ ವಿದ್ಯಾರ್ಥಿನಿಯರ ಮೇಲೆ ನಿರಂತರ ಲೈಂಗಿಕ ಆರೋಪ: ಸ್ವಾಮೀಜಿ ವಿರುದ್ಧ ಎಫ್‌ಐಆರ್ ದಾಖಲು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:11 pm, Sat, 27 August 22