ಕನ್ಯಾಕುಮಾರಿ ಟು ಕಾಶ್ಮೀರ ಒಂಟಿ ಪಯಣ! ಗಜಗಾತ್ರದ ಬೈಕ್ ಓಡಿಸಿ ಶಹಬ್ಬಾಸ್ ಎನ್ನಿಸಿಕೊಂಡ ಯುವತಿ: ಯಾಕೀ ಸಾಹಸ?
ಬೆಂಗಳೂರಿನ ಖಾಸಗೀ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಕೃಷ್ಣಾಪುರದೊಡ್ಡಿಯ ಚೈತ್ರಾ ರಾವ್ ತಮ್ಮ ತಾಯಿಯ ಆದರ್ಶದಂತೆ ಅನಾಥರು, ನಿರ್ಗತಿಕರಿಗೆ ಸಹಾಯ ಆಗಬೇಕು ಅನ್ನುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾಳೆ. 20 ದಿನಗಳ ವರೆಗೆ ಸತತ ಬೈಕ್ ಓಡಿಸುವ ಮೂಲಕ ದೇಶದ ಬಹುತೇಕ ರಾಜ್ಯಗಳಲ್ಲಿ ತಮ್ಮ ಸಂದೇಶವನ್ನು ಪರಿಣಾಮಕಾರಿಯಾಗಿ ರವಾನಿಸಿದ್ದಾರೆ.
ಆಕೆಗೆ ಏನೋ ಸಾಧನೆ ಮಾಡಬೇಕೆಂಬ ತುಡಿತ, ಸಮಾಜದ ಕಟ್ಟಳೆಗನ್ನು ಒಡೆದು ಹಾಕಿ ಸೆಟೆದೆದ್ದು ನಿಲ್ಲಬೇಕೆಂಬ ಹಂಬಲ, ವೃದ್ಧರನ್ನು ಅನಾಥ ಆಶ್ರಮಕ್ಕೆ ಬಿಡದೇ ಅವರ ಜೊತೆಯಲ್ಲಿ ಬದುಕಿ ಅನ್ನೋ ಸಂದೇಶವಿಟ್ಟುಕೊಂಡು (noble cause) ಆ ಯುವತಿ ಮಾಡಿದ್ದು ಎಂಥಾ ಕೆಲಸ ಗೊತ್ತಾ… ಈ ಸ್ಟೋರಿ ನೋಡಿ…. ಏನಾದ್ರೂ ಸಾಧನೆ ಮಾಡಲೇಬೆಂಕಂತ ದೃಢ ನಿಶ್ಚಯ ಮಾಡಿದ್ರೆ ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ … ಇಪ್ಪತ್ನಾಲ್ಕು ವರ್ಷದ ಈ ಯುವತಿ ಮಾಡಿದ ಸಾಧನೆ ಎಂಥಾದ್ದು ಗೊತ್ತಾ..! ಕಾಲೇಜಿನಿಂದ ಮನೆಗೆ ಹೊರಡುವ ಲಾಸ್ಟ್ ಬಸ್ ಮಿಸ್ ಆದರೆ ಏನ್ಮಾಡಬೇಕು ಎಂದು ಭಯ ಪಡುವಂತಹ ಈ ಕಾಲದಲ್ಲಿ ಇಡೀ ದೇಶವನ್ನು ಏಕಾಂಗಿಯಾಗಿ ಅದೂ ಬೈಕ್ ಓಡಿಸುವ ಮೂಲಕ ಮಹಿಳೆಯರು ಎಷ್ಟು ಸ್ಡ್ರಾಂಗ್ ಅನ್ನೋದನ್ನು ಈ ಯುವತಿ ತೋರಿಸಿಕೊಟ್ಟಿದ್ದಾಳೆ. ರಾಮನಗರ (Ramanagara) ಸಮೀಪದ ಕೃಷ್ಣಾಪುರದೊಡ್ಡಿಯ ಚೈತ್ರಾ ರಾವ್ ಚಿಕ್ಕ ವಯಸ್ಸಿಗೆ ಅತಿ ದೊಡ್ಡ ಸಾಧನೆ ಮಾಡಿ ಯುವತಿಯರ ಪಾಲಿಗೆ ಹೀರೋ ಆಗಿದ್ದಾಳೆ (Kashmir from Kanyakumari).
ಬೆಂಗಳೂರಿನ ಖಾಸಗೀ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಚೈತ್ರಾ ತಮ್ಮ ತಾಯಿಯ ಆದರ್ಶದಂತೆ ಅನಾಥರು, ನಿರ್ಗತಿಕರಿಗೆ ಸಹಾಯ ಆಗಬೇಕು ಅನ್ನುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾಳೆ. ಮಕ್ಕಳು ತಮ್ಮ ವೃದ್ಧರನ್ನು ಅನಾಥಾಶ್ರಮಕ್ಕೆ ಹೆಚ್ಚಾಗಿ ಬಿಡುತ್ತಿದ್ದಾರೆ. ಅದು ನಿಲ್ಲಬೇಕು, ವೃದ್ಧರನ್ನು ಪ್ರೀತಿಯಿಂದ ಸಲುಹಬೇಕು ಎಂಬ ಸಂದೇಶವಿಟ್ಟುಕೊಳ್ಳಯವುದರ ಜೊತೆಗೆ ಮಹಿಳೆಯರು ಸರ್ವ ಕ್ಷೇತ್ರದಲ್ಲೂ ಸಾಧನೆ ಮಾಡಬೇಕು ಅಂತ ಕಳೆದ ಅಗಸ್ಟ್ ನಲ್ಲಿ ಇಡೀ ಇಂಡಿಯಾ ಸುತ್ತಾಡಿದ್ದಾರೆ. 20 ದಿನಗಳ ವರೆಗೆ ಸತತ ಬೈಕ್ ಓಡಿಸುವ ಮೂಲಕ ದೇಶದ ಬಹುತೇಕ ರಾಜ್ಯಗಳಲ್ಲಿ ತಮ್ಮ ಸಂದೇಶವನ್ನು ಪರಿಣಾಮಕಾರಿಯಾಗಿ ರವಾನಿಸಿದ್ದಾರೆ.
ಇದನ್ನೂ ಓದಿ:ಪ್ರೀತಿಸಲು ನಿರಾಕರಿಸಿದ್ದಕ್ಕೆ ವಿದ್ಯಾರ್ಥಿನಿಯ ಕತ್ತು ಸೀಳಿ ಹತ್ಯೆ: ಬಳಿಕ ರೈಲಿಗೆ ತಲೆ ಕೊಟ್ಟ ಯುವಕ
ಚೈತ್ರಾ ಬೈಕ್ ರೈಡ್ ನಲ್ಲಿದ್ದ ಸಂದರ್ಭದಲ್ಲಿ ಹಲವು ರಾಜ್ಯಗಳ ಪೊಲೀಸರು ಹಾಗೂ ಅಲ್ಲಿನ ಜಿಲ್ಲಾಡಳಿತ ಉತ್ತಮ ಸಂದೇಶಕ್ಕಾಗಿ ಅವರಿಗೆ ಸನ್ಮಾನಿಸಿ ಗೌರವ ನೀಡಿವೆ. ಕರ್ನಾಟಕ ದಿಂದ ಇದುವರೆಗೂ ಒಬ್ಬಂಟಿಯಾಗಿ ಯುವತಿಯೊಬ್ಬಳು ಕನ್ಯಾಕುಮಾರಿ ಟು ಲಡಾಕ್ ವರೆಗೂ ಬೈಕಿನಲ್ಲಿ ಹೋಗಿ-ಬಂದ ಉದಾಹರಣೆಯೇ ಇಲ್ಲ ಅಂತ ಹೌಹಾರಿ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ. ಆದರೆ ಕರ್ನಾಟಕದಲ್ಲಿ ಸಿಗಬೇಕಾದ ಅಷ್ಟೂ ಸಹಕಾರ, ಪ್ರೋತ್ಸಾಹ ಸಿಕ್ಕಿಲ್ಲ ಎಂಬುದು ಚೈತ್ರಾ ಪೋಷಕರ ಅಭಿಪ್ರಾಯ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:32 am, Sat, 9 March 24