AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕಕ್ಕೆ ಸಾವಿರ ಕೋಟಿ ರೂ. ಅನುದಾನದೊಂದಿಗೆ 1122 ಹೆಚ್ಚುವರಿ ವೈದ್ಯಕೀಯ ಸೀಟು ಮಂಜೂರು ಮಾಡಿದ ಕೇಂದ್ರ

ಕರ್ನಾಟಕದ ವೈದ್ಯಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಕರ್ನಾಟಕಕ್ಕೆ 1,122 ಹೆಚ್ಚುವರಿ ಸರ್ಕಾರಿ ವೈದ್ಯಕೀಯ (UG/PG) ಸೀಟುಗಳು ಮಂಜೂರಾಗಿವೆ. ಇದರ ಮೂಲಸೌಕರ್ಯಕ್ಕಾಗಿ ಕೇಂದ್ರದಿಂದ 1,090 ಕೋಟಿ ರೂ. ಅನುದಾನ ಸಿಗಲಿದ್ದು, ಹಿಂದುಳಿದ ಜಿಲ್ಲೆಗಳ ವೈದ್ಯಕೀಯ ಆಕಾಂಕ್ಷಿಗಳಿಗೆ ಇದು ವರವಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ತಿಳಿಸಿದ್ದಾರೆ.

ಕರ್ನಾಟಕಕ್ಕೆ ಸಾವಿರ ಕೋಟಿ ರೂ. ಅನುದಾನದೊಂದಿಗೆ 1122 ಹೆಚ್ಚುವರಿ ವೈದ್ಯಕೀಯ ಸೀಟು ಮಂಜೂರು ಮಾಡಿದ ಕೇಂದ್ರ
ಸಾಂದರ್ಭಿಕ ಚಿತ್ರImage Credit source: TV9 Network
ಗಣಪತಿ ಶರ್ಮಾ
|

Updated on: May 18, 2026 | 8:52 AM

Share

ಬೆಂಗಳೂರು, ಮೇ 18: ಕರ್ನಾಟಕದ (Karnataka) ವೈದ್ಯಕೀಯ ಶಿಕ್ಷಣ (Medical Education) ಕ್ಷೇತ್ರಕ್ಕೆ ಕೇಂದ್ರ ಸರ್ಕಾರದಿಂದ ಬಂಪರ್ ಕೊಡುಗೆ ಸಿಕ್ಕಿದ್ದು, ಬರೋಬ್ಬರಿ 1,122 ಹೆಚ್ಚುವರಿ ಯುಜಿ (UG) ಮತ್ತು ಪಿಜಿ (PG) ವೈದ್ಯಕೀಯ ಸೀಟುಗಳು ಮಂಜೂರಾಗಿವೆ. ವಿಕಾಸಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಈ ಮಾಹಿತಿ ನೀಡಿದ್ದಾರೆ. ಮೇ 15ರಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಇದಕ್ಕೆ ಅಂತಿಮ ಅನುಮೋದನೆ ನೀಡಿದೆ ಎಂದು ಅವರು ತಿಳಿಸಿದ್ದಾರೆ. ದೇಶದಲ್ಲೇ ಒಂದೇ ಬಾರಿಗೆ ಒಂದೇ ರಾಜ್ಯಕ್ಕೆ 1,000ಕ್ಕೂ ಹೆಚ್ಚು ಹೆಚ್ಚುವರಿ ಸೀಟುಗಳು ಹಂಚಿಕೆಯಾಗಿರುವುದು ಇದೇ ಮೊದಲು ಹಾಗೂ ಇದು ಒಂದು ಐತಿಹಾಸಿಕ ದಾಖಲೆಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

ಮುಖ್ಯಾಂಶಗಳು

  • ಕರ್ನಾಟಕಕ್ಕೆ ಒಟ್ಟು 1,122 ಹೆಚ್ಚುವರಿ ಸೀಟುಗಳು ಮಂಜೂರು.
  • ಇವುಗಳಲ್ಲಿ 550 ಸೀಟುಗಳು ಪದವಿ (UG-MBBS) ಮತ್ತು 572 ಸೀಟುಗಳು ಸ್ನಾತಕೋತ್ತರ (PG) ಕೋರ್ಸ್‌ಗಳಿಗೆ ಸೇರಿವೆ.
  • ಈ ಹೆಚ್ಚುವರಿ ಸೀಟುಗಳ ಮೂಲಸೌಕರ್ಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ 1,090 ಕೋಟಿ ಅನುದಾನ ನೀಡುತ್ತಿದೆ.

ಈ ಪ್ರಮಾಣದ ಸೀಟುಗಳ ಹೆಚ್ಚಳವು ರಾಜ್ಯದಲ್ಲಿ ಹೊಸದಾಗಿ 10 ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ತೆರೆಯುವುದಕ್ಕೆ ಸಮಾನವಾಗಿದೆ, ಆದರೆ ಇದಕ್ಕೆ ಭಾರಿ ವೆಚ್ಚದ ಅಗತ್ಯವಿರುವುದಿಲ್ಲ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಇದನ್ನೂ ಓದಿ: ರೈಲ್ವೇ ಪ್ರಯಾಣಿಕರಿಗೆ ಗುಡ್​​ನ್ಯೂಸ್​​: ಬೆಂಗಳೂರು, ಮುಂಬೈ ಎಕ್ಸ್​​ಪ್ರೆಸ್​​ ಟ್ರೈನ್​​ಗೆ ಹಸಿರು ನಿಶಾನೆ

ಪ್ರಸ್ತುತ ಕರ್ನಾಟಕದಲ್ಲಿ ಒಟ್ಟು 72 ವೈದ್ಯಕೀಯ ಕಾಲೇಜುಗಳಿದ್ದು, ಈ ಹೊಸ ಸೇರ್ಪಡೆಯಿಂದಾಗಿ ರಾಜ್ಯದ ಒಟ್ಟು ವೈದ್ಯಕೀಯ ಸೀಟುಗಳ ಲಭ್ಯತೆ ಮತ್ತಷ್ಟು ಹೆಚ್ಚಾಗಲಿದೆ. ನೀಟ್ (NEET) ಪರೀಕ್ಷೆಯ ಅಕ್ರಮಗಳ ಆತಂಕದ ನಡುವೆ ಕಂಗಾಲಾಗಿದ್ದ ವಿದ್ಯಾರ್ಥಿಗಳಿಗೆ ಈ ಸರ್ಕಾರಿ ಕೋಟಾದ ಸೀಟುಗಳು ಒಂದು ಸುವರ್ಣಾವಕಾಶವಾಗಲಿದ್ದು, ವೈದ್ಯಕೀಯ ಶಿಕ್ಷಣ ಪಡೆಯಬಯಸುವ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಚಿವರು ಕರೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕೆಪಿಎಸ್ಸಿ ರದ್ದುಗೊಳಿಸುವ ಬಗ್ಗೆ ಸಂಪುಟದಲ್ಲಿ ಚರ್ಚೆ: ಕಾರಣ ಇಲ್ಲಿದೆ
ಕೆಪಿಎಸ್ಸಿ ರದ್ದುಗೊಳಿಸುವ ಬಗ್ಗೆ ಸಂಪುಟದಲ್ಲಿ ಚರ್ಚೆ: ಕಾರಣ ಇಲ್ಲಿದೆ
ಮತ್ತೊಮ್ಮೆ ಚರ್ಚೆಗೆ ಗ್ರಾಸವಾದ ಸಚಿವ ಬಸವರಾಜ ರಾಯರೆಡ್ಡಿ ನಡೆ
ಮತ್ತೊಮ್ಮೆ ಚರ್ಚೆಗೆ ಗ್ರಾಸವಾದ ಸಚಿವ ಬಸವರಾಜ ರಾಯರೆಡ್ಡಿ ನಡೆ
ಈರುಳ್ಳಿ ತುಂಬಿದ್ದ ಕ್ಯಾಂಟರ್ ನಡು ರಸ್ತೆಯಲ್ಲೇ ಪಲ್ಟಿ
ಈರುಳ್ಳಿ ತುಂಬಿದ್ದ ಕ್ಯಾಂಟರ್ ನಡು ರಸ್ತೆಯಲ್ಲೇ ಪಲ್ಟಿ
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ