ಶಿವಮೊಗ್ಗ: ಕೊನೆ ಕ್ಷಣದಲ್ಲಿ ಜಂಬೂ ಸವಾರಿ ರದ್ದು, ಆನೆ ಬದಲು ವಾಹನದಲ್ಲಿ ದೇವಿ ಮೂರ್ತಿ ಮೆರವಣಿಗೆಗೆ ತೀರ್ಮಾನ
ಈ ಬಾರಿ ಸಾಗರ್ ಆನೆ ಮೇಲೆ ದೇವಿ ಮೆರವಣಿಗೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಸೋಮವಾರ ರಾತ್ರಿ ಸಾಗರ್ ಆನೆಯ ಜೊತೆಗಾರ್ತಿ ನೇತ್ರಾವತಿ ಹೆಣ್ಣಾನೆಗೆ ಜನ್ಮ ನೀಡಿತು. ಹೀಗಾಗಿ ನೇತ್ರಾವತಿ ಆನೆ ಮತ್ತು ಮರಿಯನ್ನು ಸಕ್ರೆಬೈಲ್ ಆನೆ ಶಿಬಿರಕ್ಕೆ ಕಳುಹಿಸಲಾಗಿದೆ. ಜೊತೆಗಾರ್ತಿ ಇಲ್ಲದ ಕಾರಣ ಸಾಗರ್ ಆನೆ ಮೇಲೆ ದೇವಿ ಮೆರವಣಿಗೆ ಮಾಡುವುದನ್ನು ಕೈ ಬಿಡಲಾಗಿದೆ.
ಶಿವಮೊಗ್ಗ ಅ.24: ಶಿವಮೊಗ್ಗ (Shivamogga Municipal Corporation) ಮಹಾನಗರ ಪಾಲಿಕೆ ಕೊನೆ ಕ್ಷಣದಲ್ಲಿ ಜಂಬೂ ಸವಾರಿ (Jamboo Savari) ನಿಯಮವನ್ನು ಬದಲಾವಣೆ ಮಾಡಿದೆ. ಆನೆ (Elephant) ಮೇಲೆ ದೇವಿ ಮೆರವಣಿಗೆ (Ambari) ಮಾಡದಿರಲು ಮಹಾನಗರ ಪಾಲಿಕೆ ನಿರ್ಧರಿಸಿದೆ. ಶಾಸಕ ಚನ್ನಬಸಪ್ಪ ನೇತೃತ್ವದಲ್ಲಿ ನಡೆದ ಆಯುಕ್ತ ಮಾಯಣ್ಣಗೌಡ ಮತ್ತು ಪಾಲಿಕೆ ಸದಸ್ಯರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಾಲಾಗಿದೆ.
ಸಾಗರ, ನೇತ್ರಾವತಿ ಮತ್ತು ಹೇಮಾವತಿ ಆನೆಗಳು ಶಿವಮೊಗ್ಗ ದಸರಾದಲ್ಲಿ ಭಾಗವಹಿಸಲಿದ್ದವು. ಈ ಬಾರಿ ಸಾಗರ್ ಆನೆ ಮೇಲೆ ದೇವಿ ಮೆರವಣಿಗೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಸೋಮವಾರ ರಾತ್ರಿ ನಿಶಾನೆ 25 ವರ್ಷದ ನೇತ್ರಾವತಿ ಹೆಣ್ಣಾನೆಗೆ ಜನ್ಮ ನೀಡಿತು. ಹೀಗಾಗಿ ನೇತ್ರಾವತಿ ಆನೆ ಮತ್ತು ಮರಿಯನ್ನು ಸಕ್ರೆಬೈಲ್ ಆನೆ ಶಿಬಿರಕ್ಕೆ ಕಳುಹಿಸಲಾಗಿದೆ. ನಿಶಾನೆ ಇಲ್ಲದ ಕಾರಣ ಸಾಗರ್ ಆನೆ ಮೇಲೆ ದೇವಿ ಮೆರವಣಿಗೆ ಮಾಡುವುದನ್ನು ಕೈ ಬಿಡಲಾಗಿದೆ.
ಇದನ್ನೂ ಓದಿ: ಶಿವಮೊಗ್ಗ ಯೋಗ ದಸರಾ: ನಾನು 6ನೇ ತರಗತಿಯಿಂದ ಯೋಗಾಸನ ಮಾಡುತ್ತಿದ್ದೇನೆ; ಸ್ಪೀಕರ್ ಯುಟಿ ಖಾದರ್
ಎರಡು ಹೆಣ್ಣಾನೆಗಳ ಮಧ್ಯೆ ಗಂಡಾನೆ ಆನೆ ಅಂಬಾರಿಯನ್ನು ಸರಾಗವಾಗಿ ಹೋರುತ್ತಾನೆ ಎಂದು ಅಂದಾಜಿಸಲಾಗಿತ್ತು. ಆದರೆ ಒಂದು ಆನೆ ವಾಪಾಸ್ ಸಕ್ರೆಬೈಲಿ ಆನೆ ಶಿಬಿರಕ್ಕೆ ಹೋಗಿದ್ದರಿಂದ ಈ ತೀರ್ಮಾನ ಅನಿವಾರ್ಯವಾಗಿದೆ. ವಾಹನದ ಮುಂಭಾಗ ಎರಡು ಹೆಣ್ಣಾನೆಗಳು ಸಾಗಲಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:20 pm, Tue, 24 October 23