ಸರ್ಕಾರಿ ಆಸ್ಪತ್ರೆಯಲ್ಲಿ ಮೊಮ್ಮಗನನ್ನು ನೋಡಲು ಬಂದ ಅತ್ತೆಗೆ ಚಾಕು ಹಾಕಿದ ಅಳಿಯ ಭೂಪ!
ದಾಂಡೇಲಿ ಮೂಲದ ಆರೋಪಿ ಅಳಿಯ ರಮಜಾನ್ ನಶೆಯಲ್ಲಿ ಕದ್ರಾದ ಮೂಲದ ತನ್ನ ಅತ್ತೆಯ ಹೊಟ್ಟೆ ಭಾಗಕ್ಕೆ ಚಾಕು ಇರಿದಿದ್ದಾನೆ ಎನ್ನಲಾಗಿದೆ. ಆಸ್ಪತ್ರೆಯ SICU ವಿಭಾಗದಲ್ಲಿ ಮಮ್ಮದಬೀ ಗೆ ಚಾಕು ಇರಿಯಲಾಗಿದೆ.
ಕಾರವಾರ: ಮಗು ನೋಡಲು ಬಂದ ಅತ್ತೆಗೆ ಅಳಿಯ ಚಾಕು ಹಾಕಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಕುಟುಂಬ ಕಲಹದ ಹಿನ್ನೆಲೆ ಅತ್ತೆಯ ಮೇಲೆ ಅಳಿಯ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ರಮಜಾನ್ (25) ಎಂಬ ಅಳೀಮಯ್ಯ (Son in Law) ಚಾಕುವಿನಿಂದ ತನ್ನ ಅತ್ತೆಯನ್ನ (Mother in Law) ಇರಿದಿದ್ದಾನೆ. ಮಮ್ಮದಬೀ ಎಂಬ ಮಹಿಳೆಯ ಹೊಟ್ಟೆ ಭಾಗಕ್ಕೆ ಚಾಕು ಇರಿದಿದ್ದಾನೆ ರಮಜಾನ್. ತಮ್ಮ ಮಗಳ ಮಗುವನ್ನ ನೋಡಲು ಆಸ್ಪತ್ರೆಗೆ (Government Hospital in Karwar) ಬಂದಿದ್ದ ಮಮ್ಮದಬೀ ಅವರಿಗೆ ನನ್ನ ಮಗುವನ್ನ ಮೋಡಲು ನೀನು ಯಾಕೆ ಬಂದೆ? ಎಂದು ಏಕಾಏಕಿ ಹಲ್ಲೆ ಮಾಡಿದ್ದಾನೆ ಆರೋಪಿ ಅಳಿಯ.
ದಾಂಡೇಲಿ ಮೂಲದ ಆರೋಪಿ ಅಳಿಯ ರಮಜಾನ್ ನಶೆಯಲ್ಲಿ ಕದ್ರಾದ ಮೂಲದ ತನ್ನ ಅತ್ತೆಯ ಹೊಟ್ಟೆ ಭಾಗಕ್ಕೆ ಚಾಕು ಇರಿದಿದ್ದಾನೆ ಎನ್ನಲಾಗಿದೆ. ಆಸ್ಪತ್ರೆಯ SICU ವಿಭಾಗದಲ್ಲಿ ಮಮ್ಮದಬೀ ಗೆ ಚಾಕು ಇರಿಯಲಾಗಿದೆ. ಚಾಕು ಇರಿತದಿಂದ ಗಂಭೀರ ಗಾಯಗೊಂಡಿರುವ ಮಮ್ಮದಬೀ ಅಲ್ಲೇ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಆರೋಪಿ ರಮಜಾನನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಳ್ಳಾರಿ: ವನ್ಯ ಜೀವಿಗಳ ಚರ್ಮ, ಕೊಂಬು, ಚಿಪ್ಪು, ಮೂಳೆಗಳ ಮಾರಾಟಕ್ಕೆ ಯತ್ನ
ವನ್ಯ ಜೀವಿಗಳ ಚರ್ಮ, ಕೊಂಬು ಚಿಪ್ಪು ಹಾಗೂ ಮೂಳೆಗಳ ಮಾರಾಟಕ್ಕೆ ಯತ್ನಿಸಿದ ಇಬ್ಬರನ್ನು ಬಳ್ಳಾರಿ ಘಟಕದ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಕಾರ್ಯಾಚರಣೆ ನಡೆಸಿ, ಬಂಧಿಸಿದೆ. ಬಂಧಿತರಿಂದ ಕೃಷ್ಣ ಮೃಗದ ತಲೆ ಬುರುಡೆ ಸಮೇತ ಇರುವ ಎರಡು ಕೊಂಬುಗಳು, ಕೃಷ್ಣ ಮೃಗದ ಚರ್ಮ, ಚಿಪ್ಪು ಹಂದಿಯ ಚಿಪ್ಪುಗಳು ಹಾಗೂ ಅದರ ಮೂಳೆಗಳನ್ನು ವಶಪಡಿಸಿಕೊಂಡಿದ್ದಾರೆ. ಸಂಡೂರಿನ ಹೆಚ್.ಕೆ. ವೀರೇಶ ಮತ್ತು ವಿಜಯನಗರ ಜಿಲ್ಲೆಯ ಗುಡೇಕೋಟೆ ನಿವಾಸಿ ಹುಲಿಕುಂಟೆಪ್ಪ ಬಂಧಿತ ಆರೋಪಿಗಳು. ಬಂಧಿತರ ವಿರುದ್ದ ವನ್ಯ ಜೀವಿ ಕಾಯ್ದೆ ಕಲಂಗಳಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಳ್ಳಾರಿ ಅರಣ್ಯ ಸಂಚಾರಿ ದಳದಲ್ಲಿ ಪ್ರಕರಣ ದಾಖಲಾಗಿದೆ.
ಬಾಗಲಕೋಟೆ: ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಪಿಡಿಓ:
ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಹಿರೇಸಿಂಗನಗುತ್ತಿ ಗ್ರಾಮ ಪಂಚಾಯತ್ ಪಿಡಿಓ ಶಿವಪ್ಪ ಬಿರಾದಾರ ಲಂಚ ಪಡೆಯುವ ವೇಳೆ ಎ.ಸಿ.ಬಿ. ಬಲೆಗೆ ಬಿದ್ದಿದ್ದಾರೆ. ಹಿರೇಸಿಂಗನಗುತ್ತಿ ಗ್ರಾಮದ ಎನ್.ಎ. ಪ್ಲಾಟ್ ಗಳ ಉತಾರ ನೀಡಲು ಚಿಕ್ಕ ಅದಾಪುರ ಗ್ರಾಮದ ರಾಜು ಪಾಟೀಲ್ ಎಂಬುವರಿಗೆ 25,000 ರೂಪಾಯಿ ಬೇಡಿಕೆ ಇಟ್ಟಿದ್ದರು. ರಾಜು ಪಾಟಿಲ್ ಈ ಸಂಬಂಧ ಎ.ಸಿ.ಬಿ. ಗೆ ದೂರು ನೀಡಿದ್ದರು. ಹುನಗುಂದ ತಹಶೀಲದಾರ ಕಛೇರಿ ಎದುರಿನ ಮಲ್ಲಿಕಾರ್ಜುನ ಕಂಪ್ಯೂಟರ್ಸ್ ನಲ್ಲಿ ಡೀಲ್ ನಡೆದಿತ್ತು. ರಾಜು ಪಾಟಿಲ್ ಎಂಬುವರಿಂದ ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿಯೇ ಶಿವಪ್ಪ ಬಿರಾದಾರ ಎಸಿಬಿಗೆ ಸಿಲುಕಿದ್ದರು. ಎಸಿಬಿ ಡಿ.ವೈ.ಎಸ್.ಪಿ. ಸುರೇಶ ರೆಡ್ಡಿ, ಪೊಲೀಸ್ ಅಧಿಕಾರಿಗಳಾದ ವಿಜಯ ಮಠಪತಿ, ಸಮೀರ ಮುಲ್ಲಾ ಅವರು ದಾಳಿ ನಡೆಸಿದ್ದರು. ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:06 pm, Wed, 18 May 22