AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಟಿಂಗ್ ಆಪರೇಷನ್ ಕೇಸ್ ಆರೋಪಿಗೆ ಕುಮಾರಸ್ವಾಮಿ ಲಿಂಕ್: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪೊಲೀಸ್ ಆಯುಕ್ತ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಪ್ರಕರಣದ ಸಂಬಂಧ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸ್ಫೋಟ ಮಾಹಿತಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇದರ ಬೆನ್ನಲ್ಲೇ ಸ್ಟಿಂಗ್ ಆಪರೇಷನ್ ಪ್ರಕರಣ ಮಾಹಿತಿ ಬಹಿರಂಗಪಡಿಸಿದ್ದ ಕೇಂದ್ರ ಸಚಿವ ಹೆಚ್​​​​ಡಿ ಕುಮಾರಸ್ವಾಮಿ ಕುತ್ತಿಗೆಗೆ ಬಂದಿದೆ.

ಸ್ಟಿಂಗ್ ಆಪರೇಷನ್ ಕೇಸ್ ಆರೋಪಿಗೆ ಕುಮಾರಸ್ವಾಮಿ ಲಿಂಕ್: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪೊಲೀಸ್ ಆಯುಕ್ತ
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿImage Credit source: tv9
ರಾಚಪ್ಪಾಜಿ ನಾಯ್ಕ್
| Edited By: |

Updated on:Nov 01, 2026 | 2:49 PM

Share

ಬೆಂಗಳೂರು, (ನವೆಂಬರ್ 01): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರ ಹೆಸರನ್ನು ಪೊಲೀಸರು ಪ್ರಸ್ತಾಪಿಸಿದ್ದು, ಆರೋಪಿ ಜೊತೆಗೆ ಲಿಂಕ್ ಇರುವ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಪ್ರಕರಣ  ಸಂಬಂಧ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ, ನಗರ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ,  ಕೇಂದ್ರ ಸಚಿವ ಕುಮಾರಸ್ವಾಮಿ ನಿವಾಸದಲ್ಲಿ ಮೊಬೈಲ್ ಎಕ್ಸ್​​ಚೇಂಜ್ ಆಗಿದೆ ಎಂದು  ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಕೇಂದ್ರ ಸಚಿವ ಕುಮಾರಸ್ವಾಮಿ ಅವರ ವಿಳಾಸದಲ್ಲಿ ರಿತೇಶ್ ಪಾಂಡೆ ಇದ್ದರು. ಪ್ರಜ್ವಲ್ ಪ್ರಸಾದ್ ಅವರ ಸೂಚನೆ ಮೇರೆಗೆ ವಿಡಿಯೋ ಅಪ್ಲೋಡ್‌ ಆಗಿದೆ. ರಿತೀಶ್ ಮತ್ತು ಪ್ರಜ್ವಲ್ ಪ್ರಸಾದ್‌ಗೆ ಹಣ ವರ್ಗಾವಣೆ ಆಗಿದೆ ಎಂದು ತಿಳಿಸಿದರು.  ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ನೀಡಿದ್ದರಿಂದ ಪ್ರಕರಣ ಅಲ್ಲಿಗೆ ಅಂತ್ಯವಾಯ್ತು ಎನ್ನುವಷ್ಟರಲ್ಲೇ ಪೊಲೀಸ್ ಆಯುಕ್ತರ ಈ ಹೇಳಿಕೆ  ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಇದನ್ನೂ ನೋಡಿ: ಸ್ಟಿಂಗ್ ಆಪರೇಷನ್​ ಕೇಸಿಗೆ ಮತ್ತೊಂದು ಸ್ಫೋಟಕ ತಿರುವು: ಕುತೂಹಲ ಮೂಡಿಸಿದ ಸಿಸಿಬಿ ನಡೆ

‎ರೋಚಕ ಕಹಾನಿಯನ್ನು ಭೇದಿಸಿದ ಸಿಸಿಬಿ ಪೊಲೀಸರು

ವಿಡಿಯೋ ಅಪ್ಲೋಡ್ ಗೆ ಬಳಕೆ ಆಗಿದ್ದ ಮೊಬೈಲ್ ಎಲ್ಲಿಯದ್ದು ಎಂದು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದೇ ರೋಚಕವಾಗಿದೆ.ರಿತೇಶ್ ಪಾಂಡೆ ವಿನೋದ್ ಶರ್ಮಾ, ‎ಸೆ.26 ರಂದು ದೆಹಲಿಯಲ್ಲಿ ಮೊಬೈಲ್ ಖರೀದಿಸಿದ್ದ. ‎ಆದ್ರೆ ಅವರಿಗೆ ಸಿಮ್ ಕಾರ್ಡ್ ಬಳಸಿ ವಿಡಿಯೋ ಅಪ್ಲೋಡ್ ಮಾಡುವ ಪ್ಲಾನ್ ಇರಲಿಲ್ಲ. ಹಾಗಾಗಿ ಮೊಬೈಲ್ ವಿಡಿಯೋ ಅಪ್ಲೋಡ್ ಆದಾಗ ಸಿಮ್ ಕಾರ್ಡ್ ಇರಲಿಲ್ಲ. ‎ಆದರೂ ಪೊಲೀಸರು, ಮೊಬೈಲ್ ಖರೀದಿ ಜಾಲ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಟಿಂಗ್ ಪ್ರಕರಣ ಸಂಬಂಧ ಪೊಲೀಸರು, ಆರೋಪಿ ರಿತೀಶ್ ಕುಮಾರ್ ಹೇಳಿಕೆ ದಾಖಲಿಸಿದ್ದರು. ಈ ವೇಳೆ ಪ್ರಜ್ವಲ್ ಪ್ರಸಾದ್ ಸೂಚನೆ ಮೇರೆಗೆ ಮೊಬೈಲ್ ಖರೀದಿಸಿದ್ದಾಗಿ ರಿತೇಶ್ ಹೇಳಿಕೆ ನೀಡಿದ್ದ. ಅಲ್ಲದೆ ಕೇಂದ್ರ ಸಚಿವರ ಮನೆ ಬಳಿ ಬರುವಂತೆ ಹೇಳಿದ್ರು. ಅಲ್ಲಿ ಅವರಿಗೆ ಮೊಬೈಲ್ ಕೊಟ್ಟಿರೋದಾಗಿ ಪೊಲೀಸ್ ವಿಚಾರಣೆ ಮುಂದೆ ಹೇಳಿದ್ದಾನೆ. ರಿತೇಶ್ ಹೇಳಿಕೆ ಸಂಬಂಧ ಸತ್ಯಾಸತ್ಯತೆ ಪರಿಶೀಲನೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಪ್ರಜ್ವಲ್ ಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದು, ಪ್ರಜ್ವಲ್ ಹೇಳಿಕೆ ಬಳಿಕ ಕೇಂದ್ರ ಸಚಿವ ಕುಮಾರಸ್ವಾಮಿ ಮನೆ ಪರಿಶೀಲನೆ ಮಾಡುವ ಸಾಧ್ಯತೆಗಳಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:42 pm, Sun, 1 November 26

Follow Us
ರಾಚಪ್ಪಾಜಿ ನಾಯ್ಕ್
ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಅವರು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನವರು. ಕಳೆದ 2 ವರ್ಷದಿಂದ ಟಿವಿ9 ಕನ್ನಡದ ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ ಅನುಭವವಿದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದಾರೆ.

Read More
ಚಿಕ್ಕಣ್ಣನ ಡ್ಯಾನ್ಸ್ ನೋಡಿ ಪ್ರಭುದೇವಗೆ ಹೋಲಿಸಿದ ಶಿವಣ್ಣ
ಚಿಕ್ಕಣ್ಣನ ಡ್ಯಾನ್ಸ್ ನೋಡಿ ಪ್ರಭುದೇವಗೆ ಹೋಲಿಸಿದ ಶಿವಣ್ಣ
ಹೆಚ್​​​ಡಿಕೆ-ಡಿಕೆಶಿ ಜಟಾಪಟಿ:ಕುಮಾರಸ್ವಾಮಿ ನಡೆಗೆ ಸ್ವಾಮೀಜಿ ಅಸಮಾಧಾನ
ಹೆಚ್​​​ಡಿಕೆ-ಡಿಕೆಶಿ ಜಟಾಪಟಿ:ಕುಮಾರಸ್ವಾಮಿ ನಡೆಗೆ ಸ್ವಾಮೀಜಿ ಅಸಮಾಧಾನ
ಲಕ್ಷ್ಮೀಪುತ್ರ ಟ್ರೇಲರ್‌ಗೆ ಶಿವಣ್ಣ ಫಿದಾ; ಚಿಕ್ಕಣ್ಣ ಭವಿಷ್ಯದ ಸ್ಟಾರ್
ಲಕ್ಷ್ಮೀಪುತ್ರ ಟ್ರೇಲರ್‌ಗೆ ಶಿವಣ್ಣ ಫಿದಾ; ಚಿಕ್ಕಣ್ಣ ಭವಿಷ್ಯದ ಸ್ಟಾರ್
ಚಿನ್ನ ಗ್ರಾಂಗೆ 10 ಸಾವಿರದ ಒಳಗೆ ಬರುತ್ತಾ? ಹೂಡಿಕೆ ತಜ್ಞರು ಹೇಳಿದ್ದೇನು?
ಚಿನ್ನ ಗ್ರಾಂಗೆ 10 ಸಾವಿರದ ಒಳಗೆ ಬರುತ್ತಾ? ಹೂಡಿಕೆ ತಜ್ಞರು ಹೇಳಿದ್ದೇನು?
ಸಚಿವ ಸ್ಥಾನ ವಂಚಿತ ಹೆಬ್ಬಾಳ್ಕರ್, ಮಹದೇವಪ್ಪಗೆ ಪ್ರಮುಖ ಹುದ್ದೆ ಸಾಧ್ಯತೆ
ಸಚಿವ ಸ್ಥಾನ ವಂಚಿತ ಹೆಬ್ಬಾಳ್ಕರ್, ಮಹದೇವಪ್ಪಗೆ ಪ್ರಮುಖ ಹುದ್ದೆ ಸಾಧ್ಯತೆ
ಚಿನ್ನದ ಬೆಲೆ ದಿಢೀರ್​​ ಕುಸಿತ ಕಂಡಿದ್ದೇಕೆ? ಇಲ್ಲಿದೆ ತಜ್ಞರ ವಿವರಣೆ
ಚಿನ್ನದ ಬೆಲೆ ದಿಢೀರ್​​ ಕುಸಿತ ಕಂಡಿದ್ದೇಕೆ? ಇಲ್ಲಿದೆ ತಜ್ಞರ ವಿವರಣೆ
ದೆಹಲಿಗೆ ತೆರಳಿದ ಹರಿಪ್ರಸಾದ್​​: KPCC ಕಾರ್ಯಾಧ್ಯಕ್ಷರ ನೇಮಕ ಬಗ್ಗೆ ಚರ್ಚೆ?
ದೆಹಲಿಗೆ ತೆರಳಿದ ಹರಿಪ್ರಸಾದ್​​: KPCC ಕಾರ್ಯಾಧ್ಯಕ್ಷರ ನೇಮಕ ಬಗ್ಗೆ ಚರ್ಚೆ?
ಹಿರಿಯೂರು ಟಿಕೆಟ್ ಫೈಟ್: ಅಮಿತ್ ಶಾ ಭೇಟಿ ಬೆನ್ನಲ್ಲೇ ಕುಮಾರಸ್ವಾಮಿ ಹೇಳಿಕೆ
ಹಿರಿಯೂರು ಟಿಕೆಟ್ ಫೈಟ್: ಅಮಿತ್ ಶಾ ಭೇಟಿ ಬೆನ್ನಲ್ಲೇ ಕುಮಾರಸ್ವಾಮಿ ಹೇಳಿಕೆ
ಬಡವರಿಗೆ ವಿತರಿಸಬೇಕಿದ್ದ ಸರ್ಕಾರಿ ಆಸ್ಪತ್ರೆ ಔಷಧಿಗಳು ನದಿಯಲ್ಲಿ ಪತ್ತೆ!
ಬಡವರಿಗೆ ವಿತರಿಸಬೇಕಿದ್ದ ಸರ್ಕಾರಿ ಆಸ್ಪತ್ರೆ ಔಷಧಿಗಳು ನದಿಯಲ್ಲಿ ಪತ್ತೆ!
ಗೋಣಿಚೀಲ ಹೊದ್ದು ತಹಶೀಲ್ದಾರ್ ಕಚೇರಿ ಗೇಟ್ ಬಳಿಯೇ ಮಲಗಿದ ರೈತ!
ಗೋಣಿಚೀಲ ಹೊದ್ದು ತಹಶೀಲ್ದಾರ್ ಕಚೇರಿ ಗೇಟ್ ಬಳಿಯೇ ಮಲಗಿದ ರೈತ!