ಪೊಲೀಸ್ ಹತ್ಯಾಕಾಂಡ ಕೇಸ್​: 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ನಕ್ಸಲ್ ಬೆಂಗಳೂರಿನಲ್ಲಿ​ ಬಂಧನ

2005ರ ಫೆ.11ರಂದು ಪೊಲೀಸ್ ಕ್ಯಾಂಪ್​ ಮೇಲೆ ದಾಳಿ ಮಾಡಿದ್ದು, ಬಸ್ ಕ್ಲೀನರ್​ ಸೇರಿದಂತೆ 7 ಪೊಲೀಸರು ಮೃತಪಟ್ಟಿದ್ದರು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಡಮುಲ ಮುತ್ಯಾಲ ಚಂದ್ರುನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಮುತ್ಯಾಲ ಚಂದ್ರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ.

ಪೊಲೀಸ್ ಹತ್ಯಾಕಾಂಡ ಕೇಸ್​: 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ನಕ್ಸಲ್ ಬೆಂಗಳೂರಿನಲ್ಲಿ​ ಬಂಧನ
ಪೊಲೀಸ್ ಹತ್ಯಾಕಾಂಡ ಕೇಸ್​: 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ನಕ್ಸಲ್ ಬೆಂಗಳೂರಿನಲ್ಲಿ​ ಬಂಧನ
Follow us
ಮಹೇಶ್ ಇ, ಭೂಮನಹಳ್ಳಿ
| Updated By: ಗಂಗಾಧರ​ ಬ. ಸಾಬೋಜಿ

Updated on: Jul 03, 2024 | 6:41 PM

ತುಮಕೂರು, ಜುಲೈ 03: ಜಿಲ್ಲೆಯ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿ ಪೊಲೀಸ್ ಹತ್ಯಾಕಾಂಡದ ಆರೋಪಿ ನಕ್ಸಲ್ (Naxal) ಕೊಡಮುಲ ಮುತ್ಯಾಲ ಚಂದ್ರುನನ್ನು ಪೊಲೀಸರು ಬಂಧಿಸಿದ್ದಾರೆ (arrested). 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಡಮುಲ ಮುತ್ಯಾಲ ಚಂದ್ರುನನ್ನು ಇಂದು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಬಳಿಕ ಪಾವಗಡ ಜೆಎಂಎಫ್​ಸಿ ಕೋರ್ಟ್​ಗೆ ಪೊಲೀಸರು ಹಾಜರುಪಡಿಸಿದ್ದರು. ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ.

ಮುತ್ಯಾಲ ಚಂದ್ರು ಆಂಧ್ರದ ಅನಂತಪುರಂ ಜಿಲ್ಲೆಯ ಗಾರಲದಿನ್ನೆ ಮಂಡಲಂನ ಕೇಶವಪುರದ ನಿವಾಸಿಯಾಗಿದ್ದು, ಬಿಬಿಎಂಪಿಯಲ್ಲಿ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. 2005ರ ಫೆ.11ರಂದು ಪೊಲೀಸ್ ಕ್ಯಾಂಪ್​ ಮೇಲೆ ದಾಳಿ ಮಾಡಿದ್ದು, ಬಸ್ ಕ್ಲೀನರ್​ ಸೇರಿದಂತೆ 7 ಪೊಲೀಸರು ಮೃತಪಟ್ಟಿದ್ದರು.

ಇದನ್ನೂ ಓದಿ: ಚುನಾವಣೆ ಹೊತ್ತಲ್ಲಿ ಕರಾವಳಿಯಲ್ಲಿ ನಕ್ಸಲರ ಚಲನವಲನ: ಮನೆಗೆ ಬಂದು ಊಟ ಮಾಡಿದ ಶಂಕಿತರು

ಸುಮಾರು 300 ಮಾವೋವಾದಿಗಳು ಪೊಲೀಸ್ ಶಿಬಿರದ ಮೇಲೆ ದಾಳಿ ಮಾಡಿದಲ್ಲದೇ ಬಂದೂಕುಗಳು ಮತ್ತು ಬಾಂಬ್‌ಗಳೊಂದಿಗೆ ಕರ್ತವ್ಯದಲ್ಲಿದ್ದ 7 ಪೊಲೀಸರನ್ನು ಕೊಂದು ಹಾಕಿದ್ದರು. ಈ ಪ್ರಕರಣದಲ್ಲಿ 5 ಮಂದಿ ಪೊಲೀಸರು ಗಾಯಗೊಂಡಿದ್ದರು. ಕ್ಯಾಂಪ್ ಮುಂದೆ ನಿಂತಿದ್ದ ಖಾಸಗಿ ಬಸ್ಸಿನ ಚಾಲಕನ್ನನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು.

ಪಾವಗಡ ತಾಲೂಕಿನ ತಿರುಮಣಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ​ ದಾಖಲಾಗಿತ್ತು. ಕೇಸ್​ನಲ್ಲಿ 32 ಜನ ಆರೋಪಿಗಳ ಮೇಲೆ ಪಾವಗಡ ಜೆಎಂಎಫ್​ಸಿ ಕೋರ್ಟ್ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬೆಂಗಳೂರಿನ ಗೋರಿಪಾಳ್ಯದಲ್ಲಿ ಕೊಟ್ಟಗೆರೆ ಶಂಕರ ಎಂಬಾತನನ್ನು ಬಂಧಿಸಿರುವುದಾಗಿ ತುಮಕೂರಿನ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ. ವಿ ತಿಳಿಸಿದ್ದರು. ಈತ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆರೋಪಿ ಕೊಟ್ಟಗೆರೆ ಶಂಕರ ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ರಾಮಗಿರಿ ಗ್ರಾಮದ ನಿವಾಸಿ.

ಇದನ್ನೂ ಓದಿ: ಮತ್ತೆ ಆಕ್ಟಿವ್​ ಆದ ನಕ್ಸಲರು: ಉಡುಪಿ, ಚಿಕ್ಕಮಗಳೂರಿನಲ್ಲಿ 5 ದಿನ ಹೈ ಅಲರ್ಟ್​​

ತಿರುಮಣಿ ಪೊಲೀಸರು ಸ್ಫೋಟಕ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಕಾನೂನುಬಾಹಿರ ಸಭೆ, ಗಲಭೆ, ಕೊಲೆಗೆ ಯತ್ನ, ಕೊಲೆ ಮತ್ತು ಸಾರ್ವಜನಿಕ ಸೇವಕನ ಮೇಲೆ ಹಲ್ಲೆ ಅಥವಾ ಗಾಯವನ್ನು ಉಂಟುಮಾಡುವ ಮೂಲಕ ಐಪಿಸಿ ಹೀಗೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.