ಗಂಧದ ನಾಡು ಆಗುವತ್ತ ಕಲ್ಪತರು ನಾಡು
ತುಮಕೂರು: ಅರಣ್ಯ ಪ್ರದೇಶಕ್ಕೆ ಮಾತ್ರ ಸೀಮಿತವಾಗಿ ರೈತರಿಗೆ ಅಪರೂಪದ ಕೃಷಿ ಎನಿಸಿಕೊಂಡಿದ್ದ ಶ್ರೀಗಂಧ ಈಗ ರೈತರ ಮನ ಗೆದ್ದಿದೆ. ಬಹುತೇಕ ರೈತರು ಶ್ರೀಗಂಧದ ಕೃಷಿಯತ್ತ ಮುಖ ಮಾಡಿದ್ದು, ಕಲ್ಪತರು ನಾಡು ಈಗ ಶ್ರೀಗಂಧದ ನಾಡಾಗುವತ್ತ ಸಾಗಿದೆ. ಹೌದು, ಬರದ ಬೇಗೆಯ ನಡುವೆಯೂ ಅಡಕೆ, ತೆಂಗು ಕೃಷಿಯಲ್ಲಿ ಯಶಸ್ಸು ಕಂಡಿದ್ದ ಜಿಲ್ಲೆಯ ರೈತರೀಗ, ಶ್ರೀಗಂಧ ಸೇರಿದಂತೆ ಅರಣ್ಯಕ್ಕೆ ಸಂಬಂಧಿಸಿದ ಕೃಷಿಯನ್ನು ಉಪ ಕೃಷಿಯನ್ನಾಗಿ ಬೆಳೆಯಲು ಮುಂದಾಗಿದ್ದಾರೆ. ಮುಂಗಾರು ಆರಂಭದಲ್ಲೇ ಅರಣ್ಯ ಇಲಾಖೆ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ರೈತರಿಗಾಗಿಯೇ […]
ತುಮಕೂರು: ಅರಣ್ಯ ಪ್ರದೇಶಕ್ಕೆ ಮಾತ್ರ ಸೀಮಿತವಾಗಿ ರೈತರಿಗೆ ಅಪರೂಪದ ಕೃಷಿ ಎನಿಸಿಕೊಂಡಿದ್ದ ಶ್ರೀಗಂಧ ಈಗ ರೈತರ ಮನ ಗೆದ್ದಿದೆ. ಬಹುತೇಕ ರೈತರು ಶ್ರೀಗಂಧದ ಕೃಷಿಯತ್ತ ಮುಖ ಮಾಡಿದ್ದು, ಕಲ್ಪತರು ನಾಡು ಈಗ ಶ್ರೀಗಂಧದ ನಾಡಾಗುವತ್ತ ಸಾಗಿದೆ.
ಹೌದು, ಬರದ ಬೇಗೆಯ ನಡುವೆಯೂ ಅಡಕೆ, ತೆಂಗು ಕೃಷಿಯಲ್ಲಿ ಯಶಸ್ಸು ಕಂಡಿದ್ದ ಜಿಲ್ಲೆಯ ರೈತರೀಗ, ಶ್ರೀಗಂಧ ಸೇರಿದಂತೆ ಅರಣ್ಯಕ್ಕೆ ಸಂಬಂಧಿಸಿದ ಕೃಷಿಯನ್ನು ಉಪ ಕೃಷಿಯನ್ನಾಗಿ ಬೆಳೆಯಲು ಮುಂದಾಗಿದ್ದಾರೆ. ಮುಂಗಾರು ಆರಂಭದಲ್ಲೇ ಅರಣ್ಯ ಇಲಾಖೆ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ರೈತರಿಗಾಗಿಯೇ ಬೆಳೆಸಿದ್ದ ಸಸಿಗಳು ಖಾಲಿಯಾಗಿವೆ.
ಪ್ರಸಕ್ತ ವರ್ಷ 13, 921 ಲಕ್ಷ ಸಸಿಗಳನ್ನ ಬೆಳೆಸಿದ್ದ ಅರಣ ಇಲಾಖೆ ಅರಣ್ಯ ಇಲಾಖೆ ರೈತರಿಗೆ ವಿತರಿಸಲು ಪ್ರಸಕ್ತ ವರ್ಷ 3.5 ಲಕ್ಷ ಶ್ರೀಗಂಧ, 2 ಲಕ್ಷ ಮ್ಯಾಘನಿ ಹಾಗೂ 1.5 ಲಕ್ಷ ರಕ್ತ ಚಂದನ ಸೇರಿ ಇತರೆ ಜಾತಿಯ ವಿವಿಧ 13,921 ಲಕ್ಷ ಸಸಿಗಳನ್ನು ಬೆಳೆಸಿತ್ತು.
ಪ್ರತಿ ವರ್ಷ ರೈತರಿಗೆ ವಿತರಣೆ ಮಾಡುವುದೆ ಇಲಾಖೆಗೆ ಸವಾಲಾಗಿತ್ತು. ಅರಣ್ಯ ಕೃಷಿಯನ್ನು ಬೆಳೆಯಲು ಬಹುತೇಕ ರೈತರು ಮುಂದಾಗದ ಹಿನ್ನಲೆಯಲ್ಲಿ ಇಲಾಖೆಯೇ ಮುಂದೆ ನಿಂತು ರೈತರಿಗೆ ವಿತರಣೆ ಮಾಡುತ್ತಿತ್ತು. ಆದರೆ, ಪ್ರಸಕ್ತ ವರ್ಷ ಮುಂಗಾರು ಆರಂಭದಲ್ಲೇ ರೈತರು ಸಸಿಗಳನ್ನು ತೆಗೆದುಕೊಂಡಿದ್ದಾರೆ. ಅದರಲ್ಲೂ ಶ್ರೀಗಂಧ, ರಕ್ತಚಂದನ, ಮಹಾಗನಿ ಸಸಿಗಳತ್ತ ಬಹುತೇಕ ರೈತರು ಉತ್ಸುಕತೆ ತೋರಿದ್ದಾರೆ.
ಈ ವರ್ಷ ಯಾಕಿಷ್ಟು ಬೇಡಿಕೆ ? ಮೊದಲೆಲ್ಲಾ ಶ್ರೀಗಂಧ ಸೇರಿದಂತೆ ಬೆಲೆ ಬಾಳುವ ಮರಗಳನ್ನು ಬೆಳೆದರೆ ಕಳ್ಳತನವಾಗುವ ಭಯಕ್ಕೆ ರೈತರು ಈ ಕೃಷಿ ಮಾಡಲು ಹಿಂದೇಟು ಹಾಕುತ್ತಿದ್ದರು. ಆದರೆ, ಈಗ ಕಾನೂನು ಬಿಗಿಯಾಗಿದ್ದು ಕಳ್ಳತನ ಕಡಿಮೆಯಾಗಿದೆ. ಅಲ್ಲದೆ ಮೊದಲು ರೈತರಿಗೆ ಶ್ರೀಗಂಧ, ಮಹಾಘನಿ, ರಕ್ತಚಂದನ ಬೆಳೆಯುವ ಬಗ್ಗೆ ಅಷ್ಟಾಗಿ ಅರಿವಿರಲಿಲ್ಲ. ಈಗ ಇಲಾಖೆ ಅರಿವು ಮೂಡಿಸಿದೆ.
ಜತೆಗೆ ಶ್ರೀಗಂದದ ಕೃಷಿಗೆ ಅರಣ್ಯ ಇಲಾಖೆ ಪ್ರೋತ್ಸಾಹ ದನ ನೀಡುತ್ತಿದೆ. ಅರಣ್ಯ ಪ್ರದೇಶಕ್ಕೆ ಮಾತ್ರ ಸೀಮಿತವಾಗಿ ರೈತರಿಗೆ ಅಪರೂಪವಾರಗಿದ್ದ ಶ್ರೀಗಂಧ ಈಗ ರೈತರ ಮನ ಗೆದ್ದಿದೆ. ಹೀಗಾಗಿ ಬಹುತೇಕ ರೈತರು ಶ್ರೀಗಂಧದ ಕೃಷಿಯತ್ತ ಮುಖ ಮಾಡಿದ್ದು, ಕಲ್ಪತರು ನಾಡು ಈಗ ಶ್ರೀಗಂಧದ ನಾಡಾಗುವತ್ತ ಸಾಗಿದೆ.
ಶ್ರೀಗಂಧ ಬೆಳೆಯುವುದರಿಂದ ಆದಾಯಾ ಹೆಚ್ಚು ಇದೆಲ್ಲದರ ಜೊತೆಗೆ ಶ್ರೀಗಂಧ, ರಕ್ತಚಂದನ, ಮಹಾಗನಿ ಬೆಳೆಯುವುದರಿಂದ ಹೆಚ್ಚಿನ ಆದಾಯ ಸಿಗುತ್ತದೆ. ಇದು ಕೂಡಾ ರೈತರು ಈ ಮರಗಳನ್ನು ಬೆಳೆಯಲು ಮುಂದಾಗಲು ಕಾರಣ. ಈಗಾಗಲೇ ಅರಣ್ಯ ಇಲಾಖೆಯಲ್ಲಿ ವಿತರಣೆಗೆಂದು ಬೆಳೆಸಿದ್ದ ಸಸಿಗಳು ಖಾಲಿಯಾಗಿವೆ. ಬಹುತೇಕ ಅರ್ಜಿ ಸಲ್ಲಿಸಿದ ರೈತರಿಗೆ ಅವರು ಕೇಳಿದಷ್ಟು ಸಸಿಗಳು ಸಿಕ್ಕಿಲ್ಲ. ಈಗಲೂ ರೈತರಿಂದ ಈ ಸಸಿಗಳಿಗೆ ಬೇಡಿಕೆಯಿದೆ. ಆದರೆ ಇಲಾಖೆಯಲ್ಲಿ ಸಸಿಗಳು ಇಲ್ಲ. ಹಾಗಾಗಿ ಮುಂದಿನ ವರ್ಷದವರೆಗೆ ರೈತರು ಕಾಯಬೇಕಿದೆ. -ಮಹೇಶ್
Published On - 7:38 pm, Fri, 26 June 20