ತುಮಕೂರು: ಬಾಲ ಮಂದಿರದಲ್ಲಿ ಸಂತ್ರಸ್ತ ಬಾಲಕಿ ನೇಣುಬಿಗಿದುಕೊಂಡು ಆತ್ಮಹತ್ಯೆ
ತುಮಕೂರು(Tumakuru) ನಗರದ ಬಾಲಕಿಯರ ಬಾಲ ಮಂದಿರದಲ್ಲಿ ಮೈಸೂರು ಮೂಲದ ಅಪ್ರಾಪ್ತ ಬಾಲಕಿಗೆ ಆಶ್ರಯ ನೀಡಲಾಗಿತ್ತು. ಇದೀಗ ಬೆಳ್ಳಂ ಬೆಳಗ್ಗೆ ಬಾಲ ಮಂದಿರದಲ್ಲಿಯೇ ನೇಣಿಗೆ ಶರಣಾಗಿದ್ದಾರೆ.
ತುಮಕೂರು, ಜ.25: ಸಂತ್ರಸ್ತ ಬಾಲಕಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು(Tumakuru) ನಗರದ ಬಾಲಕಿಯರ ಬಾಲ ಮಂದಿರದಲ್ಲಿ ನಡೆದಿದೆ. ಮೈಸೂರು ಮೂಲದ ಅಪ್ರಾಪ್ತ ಬಾಲಕಿಗೆ ಆಶ್ರಯ ನೀಡಲಾಗಿತ್ತು. ಇದೀಗ ಬೆಳ್ಳಂ ಬೆಳಗ್ಗೆ ಬಾಲ ಮಂದಿರದಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ಇನ್ನು ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಘಟನೆ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೊತ್ತಿ ಉರಿದ ಕಾರು; ಕಾರ್ನಲ್ಲಿದ್ದ ಒಂದು ಮಗು ಸೇರಿ ಐವರು ಪ್ರಾಣಾಪಾಯದಿಂದ ಪಾರು
ಕೋಲಾರ: ಜಿಲ್ಲೆಯ ಮುಳಬಾಗಿಲು ಎನ್.ವಡ್ಡಹಳ್ಳಿ ಬಳಿಯ ಹೆದ್ದಾರಿಯಲ್ಲಿ ಕಾರು ಹೊತ್ತಿ ಉರಿದ ಘಟನೆ ನಡೆದಿದೆ. ಅದೃಷ್ಟವಶಾತ್ ಕಾರ್ನಲ್ಲಿದ್ದ ಒಂದು ಮಗು ಸೇರಿ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನ ಮಹೇಶ್ ಎಂಬುವರಿಗೆ ಸೇರಿದ ಕಾರು ಇದಾಗಿದ್ದು, ಕಾರಿನಲ್ಲಿ ತಾಂತ್ರಿಕ ದೋಷದ ಹಿನ್ನೆಲೆ ಹೊತ್ತಿ ಉರಿದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ನಂಗಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಮೀಟರ್ ಬಡ್ಡಿ ದಂಧೆ ಹಾವಳಿ, ವ್ಯಕ್ತಿ ಆತ್ಮಹತ್ಯೆಗೆ ಯತ್ನ: ಎಚ್ಚೆತ್ತ ತುಮಕೂರು ಪೊಲೀಸರಿಂದ ಸಹಾಯವಾಣಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಅಪ್ಡೇಟ್ ಆಗುತ್ತಿದೆ….
Published On - 4:58 pm, Thu, 25 January 24