AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತ್ತವರ ಹೆಸರಿನಲ್ಲಿ ಕೋಟ್ಯಂತರ ರೂ. ಅಕ್ರಮ! ತಾಲೂಕು ಪಂಚಾಯಿತಿಯ ಸಿಬ್ಬಂದಿ ಅಮಾನತು

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕು ಪಂಚಾಯಿತಿಯಲ್ಲಿ ನಿವೃತ್ತ ಹಾಗೂ ಮರಣ ಹೊಂದಿದ ಸರ್ಕಾರಿ ನೌಕರರ ಹೆಸರನ್ನು ದುರುಪಯೋಗಪಡಿಸಿಕೊಂಡು 4.24 ಕೋಟಿ ರೂ. ಅಕ್ರಮ ನಡೆದಿದೆ. ಈ ಹಿನ್ನೆಲೆ ದ್ವಿತೀಯ ದರ್ಜೆ ಸಹಾಯಕಿ ಅಮಾನತುಗೊಂಡಿದ್ದು, ಕಳೆದ ಐದು ವರ್ಷಗಳಿಂದ ನಕಲಿ ಖಾತೆಗಳ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಹುಕೋಟಿ ವಂಚನೆ ಪ್ರಕರಣ ತನಿಖೆಯಲ್ಲಿದೆ.

ಸತ್ತವರ ಹೆಸರಿನಲ್ಲಿ ಕೋಟ್ಯಂತರ ರೂ. ಅಕ್ರಮ! ತಾಲೂಕು ಪಂಚಾಯಿತಿಯ ಸಿಬ್ಬಂದಿ ಅಮಾನತು
ತಾಲೂಕು ಪಂಚಾಯಿತಿಯ ಸಿಬ್ಬಂದಿ ಸೌಮ್ಯ ಅಮಾನತು
ಜಗದೀಶ ಬಿ.
| Edited By: |

Updated on: Apr 11, 2026 | 12:28 PM

Share

ತುಮಕೂರು, ಏಪ್ರಿಲ್ 11: ನಿವೃತ್ತಿ ಹಾಗೂ ಮರಣ ಹೊಂದಿದ ಸರ್ಕಾರಿ ನೌಕರರ ಹೆಸರನ್ನು ದುರುಪಯೋಗಪಡಿಸಿಕೊಂಡು ಕೋಟ್ಯಂತರ ರೂಪಾಯಿ ಅಕ್ರಮ ನಡೆಸಿದ ಪ್ರಕರಣ ತುಮಕೂರು (Tumkur) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮಧುಗಿರಿ ತಾಲ್ಲೂಕು ಪಂಚಾಯಿತಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಸೌಮ್ಯ ಅವರನ್ನು ಅಮಾನತು ಮಾಡಲಾಗಿದೆ.

ಆಡಿಟ್ ವೇಳೆ ಸತ್ಯ ಬಯಲು

ಪಂಚಾಯಿತಿ ವ್ಯಾಪ್ತಿಯ ನಿವೃತ್ತಿ ಮತ್ತು ಮರಣ ಹೊಂದಿದ ನೌಕರರ ಗಳಿಕೆ ರಜೆ ನಗದೀಕರಣ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಅನುಮಾನ ಮೊದಲಿಗೆ ಮೂಡಿತ್ತು. ಬಳಿಕ ಬೆಂಗಳೂರಿನ ಕೇಂದ್ರ ಕಚೇರಿಯಿಂದ ನಡೆದ ಆಡಿಟ್ ವೇಳೆ ದಾಖಲೆಗಳಲ್ಲಿ ವ್ಯತ್ಯಾಸ ಪತ್ತೆಯಾಯಿತು. ಈ ಮಾಹಿತಿ ತುಮಕೂರು ಜಿಲ್ಲಾ ಪಂಚಾಯಿತಿ ಸಿಇಒ ಅಶ್ವಿಜಾ ಅವರಿಗೆ ತಲುಪಿದ ನಂತರ ಸಮಗ್ರ ಪರಿಶೀಲನೆ ಕೈಗೊಳ್ಳಲಾಯಿತು.

ತನಿಖೆಯಲ್ಲಿ ನೌಕರರ ರೆಸಿಪಿಯಂಟ್ ಐಡಿ ಮತ್ತು ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆದಾರರ ಹೆಸರಿನಲ್ಲಿ ವ್ಯತ್ಯಾಸ ಕಂಡುಬಂದಿದೆ. ಒಟ್ಟು 21 ನೌಕರರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, 18 ನಿವೃತ್ತ ಹಾಗೂ 3 ಮರಣ ಹೊಂದಿದ ನೌಕರರ ಹೆಸರನ್ನು ಬಳಸಿಕೊಂಡು ಅಕ್ರಮ ನಡೆದಿದೆ ಎಂಬುದು ಬಹಿರಂಗವಾಗಿದೆ.

ಇದನ್ನೂ ಓದಿ ಕೆಜಿಗಟ್ಟಲೆ ಚಿನ್ನ, 14 ಕೋಟಿ ರೂ. ಅಕ್ರಮ ಆಸ್ತಿ: ದಿನಗೂಲಿ ನೌಕರ ಕೋಟಿ ಕುಬೇರನಾಗಿದ್ದೇ ರೋಚಕ!

5 ವರ್ಷಗಳಿಂದ ಅವ್ಯವಹಾರ

ಕಳೆದ ಐದು ವರ್ಷಗಳಲ್ಲಿ 29 ಬ್ಯಾಂಕ್ ಖಾತೆಗಳ ಮೂಲಕ 118 ವ್ಯವಹಾರಗಳ ಮೂಲಕ ಸುಮಾರು 4.24 ಕೋಟಿ ರೂಪಾಯಿ ಸೌಮ್ಯ ಮತ್ತು ಆಕೆಯ ಕುಟುಂಬದ ಐದು ಸದಸ್ಯರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಣವನ್ನು ಹಂತ ಹಂತವಾಗಿ ವರ್ಗಾಯಿಸಿ ಅಂತಿಮವಾಗಿ ಕುಟುಂಬದ ಖಾತೆಗಳಿಗೆ ಸೇರಿಸಲಾಗಿದೆ.

ಈ ಪ್ರಕರಣದಲ್ಲಿ ಇತರ ಅಧಿಕಾರಿಗಳ ಭಾಗವಿರುವ ಸಾಧ್ಯತೆಯೂ ಇದ್ದು, ಅದರ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಸದ್ಯ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಜಗದೀಶ ಬಿ.
ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More
ಪಟಾಕಿ ಸಿಡಿಸಿದರೆ ಕಾಯಿಲೆ ಗುಣವಾಗುತ್ತವೆ ಎಂದ ಬಂಗಾಳದ ಬಿಜೆಪಿ ಶಾಸಕಿ
ಪಟಾಕಿ ಸಿಡಿಸಿದರೆ ಕಾಯಿಲೆ ಗುಣವಾಗುತ್ತವೆ ಎಂದ ಬಂಗಾಳದ ಬಿಜೆಪಿ ಶಾಸಕಿ
ಮಗುವಿನ ಪ್ರಾಣಾಪಾಯ ತಪ್ಪಿದೆ, ಉಚಿತ ಚಿಕಿತ್ಸೆ ನೀಡುತ್ತೇವೆ ಎಂದು ಆಸ್ಪತ್ರೆ
ಮಗುವಿನ ಪ್ರಾಣಾಪಾಯ ತಪ್ಪಿದೆ, ಉಚಿತ ಚಿಕಿತ್ಸೆ ನೀಡುತ್ತೇವೆ ಎಂದು ಆಸ್ಪತ್ರೆ
ಎಥೆನಾಲ್​​ ಹೆಸರಲ್ಲಿ 1.68 ಲಕ್ಷ ಕೋಟಿ ಲೂಟಿ? ಲಕ್ಷ್ಮಣ್ ಗಂಭೀರ ಆರೋಪ
ಎಥೆನಾಲ್​​ ಹೆಸರಲ್ಲಿ 1.68 ಲಕ್ಷ ಕೋಟಿ ಲೂಟಿ? ಲಕ್ಷ್ಮಣ್ ಗಂಭೀರ ಆರೋಪ
ನಿರ್ದೇಶಕನ ಮೇಲೆ ಕಾನೂನು ಕ್ರಮ ಕೈಗೋಳ್ಳುತ್ತೇವೆ: ಪ್ರಿಯಾಂಕಾ ಎಚ್ಚರಿಕೆ
ನಿರ್ದೇಶಕನ ಮೇಲೆ ಕಾನೂನು ಕ್ರಮ ಕೈಗೋಳ್ಳುತ್ತೇವೆ: ಪ್ರಿಯಾಂಕಾ ಎಚ್ಚರಿಕೆ
ಮರಿ ನೀರಾನೆಗೆ 'ಡಾ. ಸಮೀಕ್ಷಾ ರೆಡ್ಡಿ' ಹೆಸರು ನಾಮಕರಣ
ಮರಿ ನೀರಾನೆಗೆ 'ಡಾ. ಸಮೀಕ್ಷಾ ರೆಡ್ಡಿ' ಹೆಸರು ನಾಮಕರಣ
ಬಿಜೆಪಿ ಡಿಕ್ಷನರಿ ಓದಲಿ; ಖರ್ಗೆಯ ದೀಪಾವಳಿ ಶುಭಾಶಯಕ್ಕೆ ಕಾಂಗ್ರೆಸ್ ಸಮರ್ಥನೆ
ಬಿಜೆಪಿ ಡಿಕ್ಷನರಿ ಓದಲಿ; ಖರ್ಗೆಯ ದೀಪಾವಳಿ ಶುಭಾಶಯಕ್ಕೆ ಕಾಂಗ್ರೆಸ್ ಸಮರ್ಥನೆ
ಚೌಡೇಶ್ವರಿ ದೇವಾಲಯಕ್ಕೆ ವಿಜಯಲಕ್ಷ್ಮಿ ಭೇಟಿ, ದರ್ಶನ್​​ಗಾಗಿ ವಿಶೇಷ ಪೂಜೆ
ಚೌಡೇಶ್ವರಿ ದೇವಾಲಯಕ್ಕೆ ವಿಜಯಲಕ್ಷ್ಮಿ ಭೇಟಿ, ದರ್ಶನ್​​ಗಾಗಿ ವಿಶೇಷ ಪೂಜೆ
ಸಿದ್ದರಾಮಯ್ಯರೊಂದಿಗೆ ಡಿಕೆಶಿ ಚರ್ಚೆ: ಕೆಲ ವಿಚಾರ ತಿಳಿಸಿದ್ದೇನೆ; ಸಿಎಂ
ಸಿದ್ದರಾಮಯ್ಯರೊಂದಿಗೆ ಡಿಕೆಶಿ ಚರ್ಚೆ: ಕೆಲ ವಿಚಾರ ತಿಳಿಸಿದ್ದೇನೆ; ಸಿಎಂ
ಇಡೀ ರಾಜ್ಯದ ಮಹಿಳೆಯರಿಗಿದೆ 'ಉಚಿತ ಬಸ್', ನಮಗೇಕಿಲ್ಲ?
ಇಡೀ ರಾಜ್ಯದ ಮಹಿಳೆಯರಿಗಿದೆ 'ಉಚಿತ ಬಸ್', ನಮಗೇಕಿಲ್ಲ?
ರಸ್ತೆ ಗುಂಡಿಗಳ ಕಾಟ: ಖುದ್ದು ಗುಂಡಿ ಮುಚ್ಚಿದ ಸಂಚಾರಿ ಪೊಲೀಸರು
ರಸ್ತೆ ಗುಂಡಿಗಳ ಕಾಟ: ಖುದ್ದು ಗುಂಡಿ ಮುಚ್ಚಿದ ಸಂಚಾರಿ ಪೊಲೀಸರು