ಸಾವರ್ಕರ್ ವಿರೋಧಿ ಕಾಂಗ್ರೆಸ್ಗೆ ತೀವ್ರ ಮುಖಭಂಗ: ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ತುಮಕೂರಿನಲ್ಲಿ ಪಾರ್ಕ್ವೊಂದಕ್ಕೆ ಸಾವರ್ಕರ್ ಹೆಸರು
ತುಮಕೂರಿನ ಹಳೆ ಹೊಸ ಬಡವಾಣೆ ಪೊಲೀಸ್ ಠಾಣೆ ಹಿಂಭಾಗದಲ್ಲಿ ಇರುವ ಪಾರ್ಕ್ಗೆ ಕಳೆದ 2016ರಲ್ಲಿ ತುಮಕೂರು ಮಹಾನಗರ ಪಾಲಿಕೆ ವತಿಯಿಂದ ಸಾವರ್ಕರ್ ಹೆಸರು ಇಡಲಾಗಿತ್ತು. ಮಾಜಿ ಡಿಸಿಎಂ ಪರಮೇಶ್ವರ್ ಹಾಗೂ ಮಾಜಿ ಸಚಿವ ರೋಷನ್ ಬೇಗ್ ಈ ಸಾವರ್ಕರ್ ಪಾರ್ಕ್ಗೆ ಉದ್ವಾಟನೆ ಮಾಡಿದ್ದರು.
ತುಮಕೂರು: ಸಾವರ್ಕರ್ ವಿರೋಧಿ(Veer Savarkar) ಕಾಂಗ್ರೆಸ್ಗೆ(Congress) ತೀವ್ರ ಮುಖಭಂಗವಾಗಿದೆ. ತುಮಕೂರಿನ ಎಸ್ಎಸ್ ಪುರಂ ಬಳಿಯಿರುವ ಪಾರ್ಕ್ವೊಂದಕ್ಕೆ ಸಾವರ್ಕರ್ ಹೆಸರು ಇಡಲಾಗಿದೆ. ಸಿದ್ದರಾಮಯ್ಯ(Siddaramaiah) ಸಿಎಂ ಆಗಿದ್ದಾಗ 2016ರಲ್ಲಿ ನಿರ್ಮಾಣವಾಗಿದ್ದ ಪಾರ್ಕ್ಗೆ ಸಾವರ್ಕರ್ ಹೆಸರಿಡಲಾಗಿದೆ.
ತುಮಕೂರಿನ ಹಳೆ ಹೊಸ ಬಡವಾಣೆ ಪೊಲೀಸ್ ಠಾಣೆ ಹಿಂಭಾಗದಲ್ಲಿ ಇರುವ ಪಾರ್ಕ್ಗೆ ಕಳೆದ 2016ರಲ್ಲಿ ತುಮಕೂರು ಮಹಾನಗರ ಪಾಲಿಕೆ ವತಿಯಿಂದ ಸಾವರ್ಕರ್ ಹೆಸರು ಇಡಲಾಗಿತ್ತು. ಮಾಜಿ ಡಿಸಿಎಂ ಪರಮೇಶ್ವರ್ ಹಾಗೂ ಮಾಜಿ ಸಚಿವ ರೋಷನ್ ಬೇಗ್ ಈ ಸಾವರ್ಕರ್ ಪಾರ್ಕ್ಗೆ ಉದ್ವಾಟನೆ ಮಾಡಿದ್ದರು. ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ವೀರ ಸಾವರ್ಕರ್ ಹೆಸರಲ್ಲಿ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಸ್ವಾತಂತ್ರ್ಯ ವೀರ ಶ್ರೀ ವಿ.ದಾ. ಸಾವರ್ಕರ್ ಪಾರ್ಕ್ ಎಂದು ಹೆಸರಿಟ್ಟು 2016 ಸೆಪ್ಟೆಂಬರ್ 06 ರಂದು ಪಾರ್ಕ್ ಲೋಕಾರ್ಪಣೆ ಮಾಡಲಾಗಿದೆ.
ಅಂದಿನ ನಗರಾಭಿವೃದ್ಧಿ ಸಚಿವ ರೋಶನ್ ಬೇಗ್, ತುಮಕೂರು ನಗರ ಕಾಂಗ್ರೆಸ್ ಶಾಸಕ ರಫಿಕ್ ಅಹಮದ್, ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಗೃಹಸಚಿವರಾಗಿದ್ದ ಜಿ.ಪರಮೇಶ್ವರ, ಸಂಸದರಾಗಿದ್ದ ಮುದ್ದಹನುಮೇಗೌಡ, ಘಟಾನುಘಟಿ ನಾಯಕರೆಲ್ಲಾ ಭಾಗಿಯಾಗಿ ಈ ಪಾರ್ಕನ್ನು ಉದ್ಘಾಟನೆ ಮಾಡಿದ್ರು. ಆದ್ರೆ ಈಗ ಇದೇ ಸಾವರ್ಕರ್ ವಿರುದ್ಧ ಕಾಂಗ್ರೆಸ್ ಆಕ್ರೋಶ ಹೊರ ಹಾಕುತ್ತಿದೆ.
ಕಳೆದ 2015 ರಲ್ಲಿ ವಾರ್ಡ್ ನಂಬರ್ 15ನೇ ಬಿಜೆಪಿ ಸದಸ್ಯ ಕರುಣಾರಾಧ್ಯ ಅವರು ವೀರ್ ಸಾರ್ವಕರ್ ಹೆಸರು ಪ್ರಸ್ತಾಪ ಮಾಡಿದ್ದರು. 2015ರಲ್ಲಿ ನಡೆದ ಬೋರ್ಡ್ ಸಭೆಯಲ್ಲಿ ಪಾರ್ಕ್ ಗೆ ಸಾವರ್ಕರ್ ಹೆಸರು ಇಡಲು ಪ್ರಸ್ತಾಪ ಮಾಡಲಾಗಿತ್ತು. ಈ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇತ್ತು. ಸಿದ್ದರಾಮಯ್ಯ ಸಿಎಂ ಆಗಿದ್ದರು. 2015-16 ರಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಇತ್ತು. ಕಾಂಗ್ರೆಸ್ ಮೇಯರ್ ಜೆಡಿಎಸ್ ಉಪಮೇಯರ್ ಆಗಿತ್ತು. ಬಿಜೆಪಿಯಿಂದ ಒಟ್ಟು ಆಗ 08 ಸದಸ್ಯರು ಇದ್ದರು. ಬಿಜೆಪಿ ವಾರ್ಡ್ ನಂಬರ್ 15 ಸೋಮೇಶ್ವರ ಬಡವಾಣೆ ಕರಣಾರಾಧ್ಯ ಸಾವರ್ಕರ್ ಬಗ್ಗೆ ಪ್ರಸ್ತಾಪ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದರು. ಈ ವೇಳೆ ಯಾವುದೇ ವಿರೋಧ ಇಲ್ಲದೇ ಪಾಲಿಕೆ ಸದಸ್ಯರು ಒಪ್ಪಿಗೆ ಸೂಚಿಸಿದ್ದರು. ಪಕ್ಷಾತೀತವಾಗಿ ಸಾವರ್ಕರ್ ಹೆಸರು ಅನುಮೋದನೆ ಮಾಡಲಾಗಿತ್ತು. ಒಟ್ಟು ಒಂದೂವರೆ ಎಕರೆಯಲ್ಲಿ ಈ ಪಾರ್ಕ್ ನಿರ್ಮಾಣ ಮಾಡಲಾಗಿದೆ.
ವೀರ್ ಸಾವರ್ಕರ್ ಫೋಟೋಗೆ ಮೊಟ್ಟೆ ಹೊಡೆದು, ಕಾಲಿನಲ್ಲಿ ತುಳಿದು, ಬೆಂಕಿ ಹಚ್ಚಿ ಕಾಂಗ್ರೆಸ್ ಕಾರ್ಯಕರ್ತರಿಂದ ಆಕ್ರೋಶ
ಧಾರವಾಡ: ಕಾಂಗ್ರೆಸ್ ಪ್ರತಿಭಟನೆಯಲ್ಲಿ ವೀರ್ ಸಾವರ್ಕರ್ ಅವರ ಭಾವಚಿತ್ರಕ್ಕೆ ಮೊಟ್ಟೆ ಒಡೆದು, ಬಳಿಕ ಕಾಲಿನಲ್ಲಿ ಭಾವಚಿತ್ರ ತುಳಿದು ಅವಮಾನ ಮಾಡಿದ್ದಾರೆ. ನಂತರ ಕೈ ಕಾರ್ಯಕರ್ತರು ಸಾವರ್ಕರ್ ಭಾವಚಿತ್ರ ದಹಿಸಿರುವ ಘಟನೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದಿದೆ.
ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕೃತಿ ದಹನದ ವೇಳೆ ಕಾರ್ಯಕರ್ತರು ಏಕಾಏಕಿ ಸಾವರ್ಕರ್ ಭಾವಚಿತ್ರ ತಂದಿದ್ದಾರೆ. ಕಾರ್ಯಕರ್ತರು ಪೂರ್ವ ನಿಯೋಜಿತವಾಗಿ ಐದಾರು ಭಾವಚಿತ್ರ ತಂದಿದ್ದರು. ಪೊಲೀಸ್ ಬಂದೋಬಸ್ತ್ ಮಧ್ಯೆಯೇ ಸಾವರ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರತಿಭಟನೆ ನೇತೃತ್ವ ವಹಿಸಿದ್ದ ಎಐಸಿಸಿ ಸದಸ್ಯ ದೀಪಕ ಚಿಂಚೋರೆ ನಾನು ಅದನ್ನು ನೋಡಿಲ್ಲ. ಅದು ಪೂರ್ವನಿಯೋಜಿತವೂ ಅಲ್ಲ. ಯಾರಾದರೂ ಬಿಜೆಪಿಯವರೇ ಮಾಡಿಸಿರಬಹುದು. ನಮ್ಮಲ್ಲಿ ಅಂತಹ ಸಂಸ್ಕೃತಿ ಇಲ್ಲ. ಬಿಜೆಪಿಯಲ್ಲಿ ಆ ಸಂಸ್ಕೃತಿ ಇದೆ ಎಂದು ಹೇಳಿದರು.
Published On - 7:05 am, Sat, 20 August 22