TV9 Impact: ಕರ್ನಾಟಕದ 50 ಲಕ್ಷಕ್ಕೂ ಅಧಿಕ ಅಂಗನವಾಡಿ ಮಕ್ಕಳಿಗೆ ಇನ್ಮುಂದೆ ಪೌಷ್ಟಿಕ ಆಹಾರ ಪೂರೈಕೆ
ರಾಜ್ಯದ ಅಂಗನವಾಡಿ(Anganwadi) ಮಕ್ಕಳು ಇನ್ನುಮುಂದೆ ಸರಿಯಾದ ಪೌಷ್ಟಿಕಾಂಶಯುಕ್ತ ಆಹಾರವನ್ನು ಪಡೆಯಲಿದ್ದಾರೆ. ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಮಕ್ಕಳ ಪಾಲಿಗೆ ಇದು ಸಂಜೀವಿನಿ ಎಂದೇ ಹೇಳಬಹುದು.
ರಾಜ್ಯದ ಅಂಗನವಾಡಿ(Anganwadi) ಮಕ್ಕಳು ಇನ್ನುಮುಂದೆ ಸರಿಯಾದ ಪೌಷ್ಟಿಕಾಂಶಯುಕ್ತ ಆಹಾರವನ್ನು ಪಡೆಯಲಿದ್ದಾರೆ. ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಮಕ್ಕಳ ಪಾಲಿಗೆ ಇದು ಸಂಜೀವಿನಿ ಎಂದೇ ಹೇಳಬಹುದು. ಮಾತೃದ್ರೋಹ ಮತ್ತು ಬಡವರ ಅನ್ನಕ್ಕೆ ಕನ್ನ ಶೀರ್ಷಿಕೆ ಅಡಿ TV9 ಅಲ್ಲಿ ವಿಶೇಷ ತನಿಖಾ ವರದಿ ಮಾಡಲಾಗಿತ್ತು. 2019ರಲ್ಲೆ ಟಿವಿ9 ಈ ಕರ್ಮಕಾಂಡ ಕುರಿತು ತನಿಖಾ ವರದಿ ಪ್ರಸಾರ ಮಾಡಿತ್ತು, ಇದೀಗ ವರದಿಗೆ ಉತ್ತಮ ಫಲಿತಾಂಶ ದೊರೆತಿದೆ.
60 ಸಾವಿರ ಅಂಗನವಾಡಿಗಳು ಅಂದರೆ 50 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಇನ್ನುಮುಂದೆ ಪೌಷ್ಟಿಕಾಂಶಯುಕ್ತ ಆಹಾರ ಪೂರೈಕೆಯಾಗಲಿದೆ. ರಾಜ್ಯದ ಮೂರು BIS ಪ್ರಮಾಣ ಪತ್ರ ಹೊಂದಿದ ಮಹಿಳಾ ಸಂಘಗಳ ಹೆಗಲಿಗೆ ಪೂರೈಕೆ ಜವಾಬ್ದಾರಿ ಕೊಡಲಾಗಿದೆ. ರಾಜ್ಯದಲ್ಲಿ ಇಲ್ಲಿಯವರೆಗೂ ಅಂಗನವಾಡಿ ಮಕ್ಕಳಿಗೆ 137 MSPTCಗಳು ಪೂರಕ ಪೌಷ್ಟಿಕ ಆಹಾರ ಪೂರೈಕೆ ಮಾಡಲಾಗುತ್ತಿತ್ತು.
BIS ಮಾನ್ಯತೆ ಹೊಂದಿದ ಮಹಿಳಾ ಗುಂಪುಗಳೊಂದಿಗೆ 137 MSPTC ಗಳು ಒಪ್ಪಂದ ಮಾಡಿಕೊಳ್ಳಬೇಕು. BIS ಮಾನ್ಯತೆ ಇರುವ ರಾಜ್ಯದ 3 ಸಂಘಗಳು ಪೌಷ್ಠಿಕ ಆಹಾರ ಪೂರೈಕೆ 137 MSPTC ಗಳ ಮೂಲಕ ಮಾಡಬೇಕು.
ಮತ್ತಷ್ಟು ಓದಿ: ಶೇಂಗಾ, ಬದಾಮಿ, ಮೀನಿಗಿಂತ ಅತ್ಯಧಿಕ ಪೌಷ್ಟಿಕಾಂಶ ಅಗಸೆ ಬೀಜದಲ್ಲಿದೆ! ಇದರ ಆರೋಗ್ಯ ಪ್ರಯೋಜನ ಹೀಗಿದೆ
ಹೈಕೋರ್ಟ್ನಿಂದ ರಾಜ್ಯ ಸರ್ಕಾರಕ್ಕೆ ಖಡಕ್ ನಿರ್ದೇಶನ ನೀಡಲಾಗಿದೆ. ಪದೇ ಪದೇ ರಾಜ್ಯದಲ್ಲಿ ಮಕ್ಕಳ ಅಪೌಷ್ಟಿಕತೆ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಮದ್ಯ ಪ್ರವೇಶ ಮಾಡಿದೆ. ಒಂದು ತಿಂಗಳು ಒಳಗಾಗಿ ರಾಜ್ಯದ ಎಲ್ಲಾ MSPTC ಗಳು BIS ಗುಂಪಿನೊಂದಿಗೆ ಒಪ್ಪಂದ ಮಾಡಿಕೊಳ್ಳಲು ಗಡುವು ನೀಡಲಾಗಿದೆ.
MSPTC- ಮಹಿಳಾ ಸಪ್ಲಿಮೆಂಟರಿ ಪ್ರೊಡಕ್ಷನ್ ಅಂಡ್ ಟ್ರೈನಿಂಗ್ ಸೆಂಟರ್, ರಾಜ್ಯದ ಎಲ್ಲಾ ಅಂಗನವಾಡಿಗಳಿಗೆ ಈ ಕೇಂದ್ರಗಳಿಂದ ಪೌಷ್ಠಿಕ ಆಹಾರ ಪೂರೈಕೆ ಮಾಡಲಾಗುತ್ತಿದೆ. ಇವರಿಂದ ಉತ್ಪಾದನೆಯಾಗಿ ಅಂಗನವಾಡಿ ಮಕ್ಕಳಿಗೆ ನೀಡಲಾಗುವ ಆಹಾರದಲ್ಲಿ ಪೋಷಕಾಂಶ ಇಲ್ಲವೇ ಇಲ್ಲ ಅಂತ ಸಾಬೀತಾಗಿದೆ.
ಜನಪ್ರತಿನಿಧಿಗಳ ಮಧ್ಯಪ್ರವೇಶ,ಭ್ರಷ್ಟಾಚಾರದ ಕಮಟು,ಇವೆಲ್ಲದರ ಪರಿಣಾಮ ಈ ಕೇಂದ್ರಗಳಿಂದ ಕಳಪೆ ಆಹಾರ ಪೂರೈಕೆಯಾಗುತ್ತಿದೆ ಎಂದು ಹೇಳಲಾಗಿದೆ.
0-6 ವರ್ಷದ ಮಕ್ಕಳು, ಬಾಣಂತಿಯರು, ಗರ್ಭಿಣಿಯರು ಮತ್ತು ಕಿಶೋರಿಯರಿಗೆ ಪೌಷ್ಟಿಕ ಆಹಾರ ಪೂರೈಕೆ ಮಾಡುತ್ತಿದ್ದರು. ಸರ್ಕಾರ ಮಾತೃಪೂರ್ಣ ಯೋಜನೆಯಲ್ಲಿ ಪೌಷ್ಟಿಕ ಆಹಾರ ಸರಬರಾಜು 137 MSPTC- ಕೇಂದ್ರಗಳ ಮೂಲಕ ಪೂರೈಕೆ ಮಾಡಲಾಗುತ್ತಿದೆ. ಈ ಆಹಾರದ ಸ್ಯಾಂಪಲ್ ಗಳು 13 ಕೇಂದ್ರಗಳಿಂದ ಪಡೆದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಆಹಾರದಲ್ಲಿ ಪೋಷಕಾಂಶ ಇಲ್ಲ ..ಮಕ್ಕಳಿಗೆ, ಗರ್ಭಿಣಿಯರಿಗೆ ಬೇಕಾಗುವ ಪೌಷ್ಠಿಕ ಸತ್ವಗಳಿಲ್ಲ ಅಂತ ಚೆನ್ನೈ ಪ್ರಯೋಗಾಲಯ ವರದಿ ನೀಡಿದೆ.
ರಾಜ್ಯ ಸರ್ಕಾರ ಈ ವರದಿ ಆಧರಿಸಿ ತನಿಖೆಗೆ ಆದೇಶಿಸಿತ್ತು, ಆದರೆ ರಾಜ್ಯ ಹೈಕೋರ್ಟ್ ವಿಚಾರವನ್ನು ಗಂಭೀರವಾಗಿ ಪರಿಗಣಿಸಿತ್ತು. ಕಳಪೆ ಆಹಾರ ಪೂರೈಕೆಯಲ್ಲಿ ಹೇಗೆ ಜನ ಪ್ರತಿನಿಧಿಗಳ ಕೈವಾಡ, ಅಧಿಕಾರಿಗಳ ಪಾತ್ರದ ಬಗ್ಗೆ ವರದಿ ಬೆಳಕು ಚೆಲ್ಲಿತ್ತು. ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಲು ನೈಜ ಕಾರಣ ತನಿಖಾ ವರದಿ ಮೂಲಕ ಬಟಾ ಬಯಲು. ಇದೀಗ ಹೈಕೋರ್ಟ್ನಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಖಡಕ್ ನಿರ್ದೇಶನ ನೀಡಲಾಗಿದೆ.
ಪರಿಣಾಮ ರಾಜ್ಯದ 50ಲಕ್ಷ ಮಕ್ಕಳು ಇನ್ನುಮುಂದೆ ಪೌಷ್ಟಿಕ ಆಹಾರ ಸೇವನೆ ಮಾಡಲಿದ್ದಾರೆ. ಗರ್ಭಿಣಿಯರು, ಬಾಣಂತಿಯರು ಮತ್ತು ಕಿಶೋರಿಯರಿಗೆ ಗುಣಮಟ್ಟದ ಆಹಾರ ಪೂರೈಕೆ ಆಗಲಿದೆ.
ವರದಿ: ರಹಮತ್ ಕಂಚಗಾರ್
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:59 am, Thu, 29 December 22