AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ: ಸುವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹಿರ್ಗಾಣ ಗ್ರಾಮದ ಬಳಿ ಸುವರ್ಣ ನದಿಯಲ್ಲಿ ಭರತ್ ಪೂಜಾರಿ (29) ಹಾಗೂ ಹರ್ಷನ್ ಆಚಾರ್ಯ (23) ಎಂಬ ಇಬ್ಬರು ಯುವಕರು ನೀರಿನ ಆಳ ತಿಳಿಯದೆ ಮುಳುಗಿ ಮೃತಪಟ್ಟಿದ್ದಾರೆ. ಸ್ನೇಹಿತರೊಂದಿಗೆ ನದಿಯ ಸೌಂದರ್ಯ ಸವಿಯಲು ತೆರಳಿದ್ದ ವೇಳೆ ಈ ದಾರುಣ ಘಟನೆ ಸಂಭವಿಸಿದೆ. ಸುಸಜ್ಜಿತ ರಸ್ತೆ ಇಲ್ಲದಿದ್ದರೂ, ಅಗ್ನಿಶಾಮಕ ದಳ ಮತ್ತು ಪೊಲೀಸರು ಮೂರು ಗಂಟೆಗೂ ಹೆಚ್ಚು ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ. ಇಡೀ ಹಿರ್ಗಾಣ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.

ಉಡುಪಿ: ಸುವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು
ಸಾಮದರ್ಭಿಕ ಚಿತ್ರ Image Credit source: Google
ಪ್ರಜ್ವಲ್ ಅಮೀನ್​, ಉಡುಪಿ
| Edited By: |

Updated on:Sep 29, 2026 | 8:58 PM

Share

ಉಡುಪಿ, ಸೆ.29: ಸ್ನೇಹಿತರೊಂದಿಗೆ ನದಿಯ ಸೌಂದರ್ಯ ಸವಿಯಲು ಹಾಗೂ ಈಜಾಡಲು ತೆರಳಿದ್ದ ಇಬ್ಬರು ಯುವಕರು ನೀರಿನ ಆಳ ತಿಳಿಯದೆ ನದಿಗೆ ಇಳಿದು ನೀರುಪಾಲಾಗಿರುವ ದಾರುಣ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಹೆರ್ಮುಂಡೆ ಬಳಿ ನಡೆದಿದೆ. ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ನಿವಾಸಿಗಳಾದ ಭರತ್ ಪೂಜಾರಿ (29) ಹಾಗೂ ಹರ್ಷನ್ ಆಚಾರ್ಯ (23) ಮೃತಪಟ್ಟ ದುರದೃಷ್ಟಕರ ಯುವಕರು.

ಹಿರ್ಗಾನದ ಐವರು ಸ್ನೇಹಿತರ ತಂಡವು ಮಂಗಿಲಾರು ಮಾರ್ಗವಾಗಿ ಸುವರ್ಣ ನದಿಯ ತೀರಕ್ಕೆ ತೆರಳಲು ಯೋಜಿಸಿತ್ತು. ವಾಹನ ಸಂಚಾರವಿಲ್ಲದ ಕಾರಣ ಸುಮಾರು 2 ಕಿಲೋಮೀಟರ್‌ಗೂ ಅಧಿಕ ಕಾಲ ಅರಣ್ಯ ಹಾಗೂ ದುರ್ಗಮ ಕಾಲುದಾರಿಯಲ್ಲೇ ನಡೆದುಕೊಂಡು ಹೋಗಿ ನದಿ ತೀರ ತಲುಪಿದ್ದರು. ನದಿ ತೀರ ತಲುಪಿದ ಬಳಿಕ ಭರತ್ ಹಾಗೂ ಹರ್ಷನ್ ಇಬ್ಬರೂ ನೀರಿನ ಸೆಳೆತ ಹಾಗೂ ಆಳದ ಅರಿವಿಲ್ಲದೆ ನದಿಗೆ ಇಳಿದಿದ್ದಾರೆ. ಈ ವೇಳೆ ಕ್ಷಣಾರ್ಧದಲ್ಲೇ ಇಬ್ಬರೂ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಲಾರಂಭಿಸಿದ್ದಾರೆ. ದಡದಲ್ಲಿದ್ದ ಸಹಚರರು ರಕ್ಷಣೆಗೆ ಯತ್ನಿಸಿದರೂ ಫಲಕಾರಿಯಾಗಲಿಲ್ಲ.

3 ಗಂಟೆಗೂ ಹೆಚ್ಚು ಕಾಲ ನಡೆದ ರಕ್ಷಣಾ ಕಾರ್ಯಾಚರಣೆ:

ಘಟನೆ ನಡೆದ ಸ್ಥಳಕ್ಕೆ ಯಾವುದೇ ರೀತಿಯ ವಾಹನ ಸಂಚಾರಕ್ಕೆ ಸುಸಜ್ಜಿತ ರಸ್ತೆ ಇರಲಿಲ್ಲ. ಹೀಗಾಗಿ ಮಾಹಿತಿ ಲಭಿಸಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸುಮಾರು 3 ಕಿಲೋಮೀಟರ್‌ ದೂರ ಕಾಲ್ನಡಿಗೆಯಲ್ಲೇ ಉಪಕರಣಗಳನ್ನು ಹೊತ್ತುಕೊಂಡು ಘಟನಾ ಸ್ಥಳ ತಲುಪಬೇಕಾಯಿತು.

ಇದನ್ನೂ ಓದಿ; ನಿಗೂಢವಾಗಿ ನಾಪತ್ತೆಯಾಗಿದ್ದ ನವ ವಿವಾಹಿತೆ ಪ್ರಿಯಾಂಕಾ ಶವವಾಗಿ ಪತ್ತೆ: ಬರೋಬ್ಬರಿ 11 ದಿನಗಳ ಬಳಿಕ ಕೆರೆಯಲ್ಲಿ ಕಂಡುಬಂತು ಮೃತದೇಹ

ಬಳಿಕ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರ ಸಹಕಾರದೊಂದಿಗೆ ಸತತ 3 ಗಂಟೆಗಳಿಗೂ ಹೆಚ್ಚು ಕಾಲ ತೀವ್ರ ರಕ್ಷಣಾ ಕಾರ್ಯಾಚರಣೆ ನಡೆಸಿ, ಕೊನೆಗೂ ಭರತ್ ಪೂಜಾರಿ ಮತ್ತು ಹರ್ಷನ್ ಆಚಾರ್ಯ ಅವರ ಮೃತದೇಹಗಳನ್ನು ನದಿಯಿಂದ ಮೇಲಕ್ಕೆತ್ತಲಾಯಿತು. ಈ ಸಂಬಂಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕರ ಅಕಾಲಿಕ ಮರಣದಿಂದ ಹಿರ್ಗಾನ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:57 pm, Tue, 29 September 26

Follow Us
ಪ್ರಜ್ವಲ್ ಅಮೀನ್​, ಉಡುಪಿ
ಪ್ರಜ್ವಲ್ ಅಮೀನ್​, ಉಡುಪಿ

ಪ್ರಜ್ವಲ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪಡೆದಿರುತ್ತಾರೆ. ಉಡುಪಿ ಜಿಲ್ಲೆಯ ಸ್ಥಳೀಯ ಖಾಸಗಿ ಸುದ್ದಿವಾಹಿನಿಯ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ ಇವರು ಬಳಿಕ ಪ್ರಜಾವಾಣಿಯ ವರದಿಗಾರನಾಗಿ ಕೆಲಸ ಮಾಡಿರುತ್ತಾರೆ. ನಂತರ 6 ವರ್ಷ ಟಿ.ವಿ 5ನ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರನಾಗಿ ನಂತರ ದಿಗ್ವಿಜಯ ನ್ಯೂಸ್ ನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವರದಿಗಾರನಾಗಿ ಕಾರ್ಯನಿರ್ವಾಹಸಿದ್ದಾರೆ. ಕಳೆದ ಹನ್ನೊಂದು ತಿಂಗಳಿನಿಂದ ಟಿ.ವಿ 9 ಸಂಸ್ಥೆಯಲ್ಲಿ ಉಡುಪಿ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ.

Read More