AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಲೂಚ್ ಬಂಡುಕೋರರಿಂದ ಮಹಿಳಾ ಪಡೆಯ ಮೊದಲ ದಾಳಿಯ ವಿಡಿಯೋ ಬಿಡುಗಡೆ; 9 ಪಾಕ್ ಸೈನಿಕರ ಹತ್ಯೆ

ಬಲೂಚಿಸ್ತಾನ್ ಲಿಬರೇಶನ್ ಫ್ರಂಟ್ (ಬಿಎಲ್​ಎಫ್) ಉಗ್ರಗಾಮಿ ಸಂಘಟನೆಯು ತನ್ನ ಹೊಸದಾಗಿ ರೂಪಿಸಲಾದ ಮಹಿಳಾ ಸಶಸ್ತ್ರ ಯುದ್ಧ ಪಡೆಯ ವೀಡಿಯೊವನ್ನು ಬಿಡುಗಡೆ ಮಾಡಿದೆ. ಪ್ರತ್ಯೇಕ ದಾಳಿಗಳಲ್ಲಿ ಪಾಕಿಸ್ತಾನ ಸೇನೆಯ 9 ಸೈನಿಕರನ್ನು ಹತ್ಯೆಗೈದು, ಹಲವಾರು ಜನರನ್ನು ಗಾಯಗೊಳಿಸಿರುವುದಾಗಿ ಬಿಎಲ್‌ಎಫ್ ಪ್ರತಿಪಾದಿಸಿದೆ. ಬಿಡುಗಡೆಯಾಗಿರುವ ವೀಡಿಯೊ ತುಣುಕಿನಲ್ಲಿ, ತುರ್ಬತ್‌ನಲ್ಲಿ ಪಾಕಿಸ್ತಾನ ಸೇನೆಯ ‘ಕ್ವಿಕ್ ರಿಯಾಕ್ಷನ್ ಫೋರ್ಸ್’ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸುವ ಮೊದಲು ಮಹಿಳಾ ಕಮಾಂಡರ್ ಒಬ್ಬರು ‘ಕರಿಮಾ ಆರ್ಮ್ಡ್ ಅಸಾಲ್ಟ್ ಡಿವಿಷನ್’ (ಕಾಡ್) ಪಡೆಯ ಮಹಿಳಾ ಹೋರಾಟಗಾರರಿಗೆ ಸೂಚನೆ ನೀಡುತ್ತಿರುವುದು ಕಂಡುಬಂದಿದೆ.

ಬಲೂಚ್ ಬಂಡುಕೋರರಿಂದ ಮಹಿಳಾ ಪಡೆಯ ಮೊದಲ ದಾಳಿಯ ವಿಡಿಯೋ ಬಿಡುಗಡೆ; 9 ಪಾಕ್ ಸೈನಿಕರ ಹತ್ಯೆ
ಬಲೂಚ್ ಮಹಿಳಾ ಪಡೆImage Credit source: TV9
ಸುಷ್ಮಾ ಚಕ್ರೆ
|

Updated on: Sep 29, 2026 | 8:52 PM

Share

ಕ್ವೆಟ್ಟಾ, ಸೆಪ್ಟೆಂಬರ್ 29: ಬಲೂಚಿಸ್ತಾನ್ ಲಿಬರೇಶನ್ ಫ್ರಂಟ್ (ಬಿಎಲ್‌ಎಫ್) ತನ್ನ ಹೊಸದಾಗಿ ಸ್ಥಾಪಿಸಲಾದ ಮಹಿಳಾ ಪಡೆ ‘ಕರಿಮಾ ಆರ್ಮ್ಡ್ ಅಸಾಲ್ಟ್ ಡಿವಿಷನ್’ (ಕಾಡ್) ನಡೆಸಿದ ಮೊದಲ ಸಶಸ್ತ್ರ ಕಾರ್ಯಾಚರಣೆಯ ವಿಡಿಯೋ ತುಣುಕನ್ನು ಬಿಡುಗಡೆ ಮಾಡಿದೆ. ಬಲೂಚಿಸ್ತಾನದಲ್ಲಿ ಪಾಕಿಸ್ತಾನಿ ಮಿಲಿಟರಿ ಬೆಂಗಾವಲು ಪಡೆಯ ಮೇಲೆ ‘ಕಾಡ್’ ಮಹಿಳಾ ಸದಸ್ಯರು ದಾಳಿ ನಡೆಸುತ್ತಿರುವುದನ್ನು ಈ ವಿಡಿಯೋ ತೋರಿಸುತ್ತದೆ. ಈ ಕಾರ್ಯಾಚರಣೆಯಲ್ಲಿ 9 ಪಾಕಿಸ್ತಾನಿ ಮಿಲಿಟರಿ ಸಿಬ್ಬಂದಿಯನ್ನು ಹತ್ಯೆ ಮಾಡಲಾಗಿದೆ ಎಂದು ಬಿಎಲ್‌ಎಫ್ ಹೇಳಿಕೊಂಡಿದೆ.

ಚೀನಾ-ಪಾಕಿಸ್ತಾನ್ ಎಕನಾಮಿಕ್ ಕಾರಿಡಾರ್​​ಗೆ ಸಂಬಂಧಿಸಿದ ಮಾರ್ಗದಲ್ಲಿ, ಸೆಪ್ಟೆಂಬರ್ 22ರಂದು ತುರ್ಬತ್ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯ ಸಮಯದಲ್ಲಿ ಈ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ ಎಂದು ಬಿಎಲ್‌ಎಫ್ ತಿಳಿಸಿದೆ. ಸಶಸ್ತ್ರ ಗುಂಪಿನ ಸದಸ್ಯರು ಶಸ್ತ್ರಸಜ್ಜಿತ ವಾಹನವೂ ಸೇರಿದಂತೆ 3 ವಾಹನಗಳ ‘ಕ್ವಿಕ್ ರಿಯಾಕ್ಷನ್ ಫೋರ್ಸ್’ ಬೆಂಗಾವಲು ಪಡೆಯ ಮೇಲೆ ಗುಂಡಿನ ದಾಳಿ ನಡೆಸುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.

ಇದನ್ನೂ ಓದಿ: ರಷ್ಯಾದ ಮಿಲಿಟರಿ ವಿಮಾನ ಪತನ; 6 ಜನ ಸಾವು

ಫೈಟರ್‌ಗಳು ಬಂದೂಕುಗಳನ್ನು ಹಿಡಿದು ಬೆಂಗಾವಲು ಪಡೆಯತ್ತ ಗುಂಡು ಹಾರಿಸುವ ದೃಶ್ಯಗಳು ಮತ್ತು ಮಹಿಳಾ ಕಮಾಂಡರ್‌ ಒಬ್ಬರು ಪಡೆಯ ಸದಸ್ಯರಿಗೆ ಸೂಚನೆ ನೀಡುವ ದೃಶ್ಯಗಳು ಇದರಲ್ಲಿವೆ. ತಮ್ಮ ಹೋರಾಟಗಾರರು ಅತ್ಯಂತ ಹತ್ತಿರದ ಅಂತರದಿಂದ ಬೆಂಗಾವಲು ಪಡೆಯನ್ನು ಎದುರಿಸಿದ್ದಾರೆ ಎಂದು ಬಿಎಲ್‌ಎಫ್ ಹೇಳಿಕೊಂಡಿದೆ. ಅಲ್ಲದೆ, ಈ ವಿಡಿಯೋವನ್ನು ತಮ್ಮ ಪಡೆಯ ತರಬೇತಿ ಮತ್ತು ಕಾರ್ಯಾಚರಣೆಯ ಸಿದ್ಧತೆಗೆ ಪುರಾವೆಯಾಗಿ ಬಲೂಚ್​​ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.

ಪಾಕಿಸ್ತಾನಿ ಭದ್ರತಾ ಪಡೆಗಳು ಮತ್ತು CPEC ಗೆ ಸೇರಿದ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಬಲೂಚಿಸ್ತಾನದಲ್ಲಿ ನಿರಂತರ ಉಗ್ರಗಾಮಿ ಚಟುವಟಿಕೆಗಳು ನಡೆಯುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More