ಉಡುಪಿ ಜಿಲ್ಲಾಡಳಿತದಿಂದ ಕೊರಗರ ಕುಲ ಕಸುಬು ಅನಾವರಣ; ಕಲಾತ್ಮಕತೆಯ ಶ್ರೀಮಂತಿಕೆಗೆ ಮನಸೋತ ಸ್ಥಳೀಯರು
ಕನ್ನಡದಲ್ಲಿ ತಮ್ಮೆ, ತುಳುವಲ್ಲಿ ಸಿಮೆ ಎಂದು ಕರೆಯುವ ಬಿದಿರಿನ ಮಾದರಿಯಲ್ಲಿರುವ ಉತ್ಪನ್ನ ಮತ್ತು ಕಾಡಿನಲ್ಲಿ ಸಿಗುವ ಬೀಳು, ಬೇರು, ಬಳಸಿ ಈ ಪರಿಕರಗಳನ್ನು ತಯಾರಿಸಲಾಗುತ್ತದೆ. ಹಿಂದೆಲ್ಲಾ ಉಚಿತವಾಗಿ ಪರಿಸರದಲ್ಲಿಯೇ ಸಿಗುತ್ತಿತ್ತು. ಇತ್ತೀಚೆಗೆ ಕಚ್ಚ ಸಾಮಗ್ರಿಯನ್ನು ಹಣ ಕೊಟ್ಟು ಖರೀದಿಸಿ, ಈ ಪರಿಕರಗಳನ್ನು ಸ್ಥಳೀಯ ಅಂಗಡಿ, ಸಂತೆ ಮಾರುಕಟ್ಟೆಗಳಿಗೆ ಮಾರಾಟ ಮಾಡಲಾಗುತ್ತದೆ.
ಉಡುಪಿ: ಪ್ರಕೃತಿಯಲ್ಲಿ ದೊರಕುವ ವಸ್ತುಗಳನ್ನೇ ಬಳಸಿ ತಮ್ಮ ಅಪ್ರತಿಮ ಕೌಶಲದ ಮೂಲಕ ಗೃಹೋಪಯೋಗಿ ವಸ್ತುಗಳನ್ನು ತಯಾರಿಸುವುದು ಕೊರಗರ ಕುಲ ಕಸುಬು. ಇಲ್ಲಿಯ ಮೂಲ ನಿವಾಸಿಗಳ ಕಲಾತ್ಮಕತೆಯ ಶ್ರೀಮಂತಿಕೆಯನ್ನು ಅನಾವರಣಗೊಳ್ಳಿಸುವ ವಿನೂತನ ಪ್ರಯತ್ನ ಉಡುಪಿ ಜಿಲ್ಲೆಯ ಜಿಲ್ಲಾಡಳಿತ(District administration) ನಡೆಸಿದೆ. ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಕೊರಗರ ಸಾಂಪ್ರದಾಯಿಕ ಕುಲ ಕಸುಬು ಪ್ರದರ್ಶನದಲ್ಲಿ ಬುಟ್ಟಿ ಹೆಣೆಯುವುದು, ತಡ (ಗರಸ) ಕಟ್ಟುವ ಮೂಲ ಕಸುಬು ಎಲ್ಲರ ಗಮನ ಸೆಳೆಯಿತು.
ಕೊರಗರ ಕುಲ ಕಸುಬು ಮುಂದಿನ ಪೀಳಿಗೆ ಉಳಿಸಿಕೊಳ್ಳುವುದು. ಆಧುನಿಕ ಯುಗದಲ್ಲಿ ಆರೋಗ್ಯ ಪರಿಸರಸ್ನೇಹಿ ಗೃಹೋಪಯೋಗಿ ವಸ್ತುಗಳ ಬಳಕೆ ಪ್ರೇರೇಪಿಸುವ ಆಶಯದೊಂದಿಗೆ ಜಿಲ್ಲಾಡಳಿತ, ಕ್ರೀಡಾ ಇಲಾಖೆ, ಕೊರಗ ಸಂಘಟನೆಗಳ ಆಶ್ರಯದಲ್ಲಿ ಕೊರಗರ ಸಾಂಸ್ಕೃತಿಕ ಉತ್ಸವ, ಕ್ರೀಡಾಕೂಟದ ಅಂಗವಾಗಿ ಈ ಪ್ರದರ್ಶನ ನಡೆಯಿತು.
ಕೋಟ, ಕಾವಡಿ, ಬ್ರಹ್ಮಾವರ, ಸಾಲಿಗ್ರಾಮ, ಪಾಂಗಾಳ, ಹಕ್ಲಾಡಿ, ನಾಡ, ಗುಡ್ಡೆಯಂಗಡಿ, ಹೀಗೆ ಜಿಲ್ಲೆಯ ನಾನಾ ಕಡೆಗಳಿಂದ 75 ಕ್ಕೂ ಅಧಿಕ ಮಂದಿ ಕೊರಗ ಸಮುದಾಯದವರು ಈ ಪ್ರದರ್ಶನದಲ್ಲಿ ಭಾಗಿಯಾಗಿದ್ದರು. ಹಿಟ್ಟು, ದವಸ ಧಾನ್ಯಗಳನ್ನು ಕೇರುವ ಗೆರಸೆ, ಅನ್ನ ಬಸಿಯುವ ಕುಡ್ಪು, ಸಣ್ಣ ಮತ್ತು ದೊಡ್ಡದಾದ ಹೂವಿನ ಬುಟ್ಟಿ ಮೊದಲಾದ ಪರಿಕರಗಳನ್ನು ವಿವಿಧ ವಿನ್ಯಾಸದಲ್ಲಿ ಸ್ಥಳದಲ್ಲೇ ತಯಾರಿಸಿ ಗಮನ ಸೆಳೆದರು. ಒಬ್ಬೊಬ್ಬರು ನಾಲ್ಕೈದು ಬಗೆಯ ಪರಿಕರಗಳನ್ನು ತಯಾರಿಸುವ ಮೂಲಕ ವೃತ್ತಿ ಕೌಶಲ್ಯ ಸಾಬೀತು ಪಡಿಸಿದರು ಎಂದು ಕ್ರೀಡಾ ಇಲಾಖೆಯ ಅಧಿಕಾರಿ ರೋಷನ್ ಶೆಟ್ಟಿ ತಿಳಿಸಿದ್ದಾರೆ.
ಕನ್ನಡದಲ್ಲಿ ತಮ್ಮೆ, ತುಳುವಲ್ಲಿ ಸಿಮೆ ಎಂದು ಕರೆಯುವ ಬಿದಿರಿನ ಮಾದರಿಯಲ್ಲಿರುವ ಉತ್ಪನ್ನ ಮತ್ತು ಕಾಡಿನಲ್ಲಿ ಸಿಗುವ ಬೀಳು, ಬೇರು, ಬಳಸಿ ಈ ಪರಿಕರಗಳನ್ನು ತಯಾರಿಸಲಾಗುತ್ತದೆ. ಹಿಂದೆಲ್ಲಾ ಉಚಿತವಾಗಿ ಪರಿಸರದಲ್ಲಿಯೇ ಸಿಗುತ್ತಿತ್ತು. ಇತ್ತೀಚೆಗೆ ಕಚ್ಚ ಸಾಮಗ್ರಿಯನ್ನು ಹಣ ಕೊಟ್ಟು ಖರೀದಿಸಿ, ಈ ಪರಿಕರಗಳನ್ನು ಸ್ಥಳೀಯ ಅಂಗಡಿ, ಸಂತೆ ಮಾರುಕಟ್ಟೆಗಳಿಗೆ ಮಾರಾಟ ಮಾಡಲಾಗುತ್ತದೆ. ಸ್ಥಳೀಯ ಮಾರುಕಟ್ಟೆಯೇ ಆಧಾರವಾಗಿದ್ದು, ಹೊರ ಜಿಲ್ಲೆಗಳಿಂದ ಹೂವು, ಹಣ್ಣು ಮಾರಾಟಗಾರರು ದೊಡ್ಡ, ಸಣ್ಣ ಗಾತ್ರರು ಬುಟ್ಟಿಗೆ ಆಗಾಗ ಬೇಡಿಕೆ ಇರುತ್ತದೆ. ಸ್ಥಳೀಯ ನಿವಾಸಿಗಳು ಕೂಡ ವಿವಿಧ ಪರಿಕರಗಳು ಅಗತ್ಯವಿದ್ದಾಗ ಕೇಳಿದಾಗ ಹೋಗಿ ಮಾರಾಟ ಮಾಡುವ ಮೂಲಕ ಕೊರಗ ಸಮುದಾಯ ಕುಲ ವೃತ್ತಿ ನಂಬಿ ಇಂದಿಗೂ ಜೀವನ ಸಾಗಿಸುತ್ತಿವೆ.
ಕೊರಗ ಸಮುದಾಯದ ಕುಲಕಸುಬು ನಶಿಸಿ ಹೋಗುತ್ತಿರುವ ಹೊತ್ತಿನಲ್ಲಿ ಮುಂದಿನ ಪೀಳಿಗೆ ಇದನ್ನು ಪರಿಚಯಿಸುವುದು, ಈ ಕಸುಬು ಕಲೆಯನ್ನು ಉಳಿಸಿ, ಬೆಳಸಬೇಕು ಎಂಬ ನಿಟ್ಟಿನಲ್ಲಿ ಸಾಂಸ್ಕೃತಿಕ, ಕ್ರೀಡಾ ಕೂಟ ಕುಲ ಕಸುಬು ಪ್ರದರ್ಶನವನ್ನು ಆಯೋಜಿಸಲಾಗಿದೆ. ಇದರಲ್ಲಿ ಜಿಲ್ಲೆಯ ಸುಮಾರು 75ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಆದರೆ ಪ್ಲಾಸ್ಟಿಕ್ ಬಳಕೆಯಿಂದ ಕೊರಗ ತಯಾರಿಸುವ ಗೃಹ ಉಪಯೋಗಿ ವಸ್ತು ಬೇಡಿಕೆ ಕಡಿಮೆಯಾಗಿದೆ. ಮತ್ತೆ ಪರಿಸರ ಸ್ನೇಹಿ ವಸ್ತು ತಯಾರಿಕೆ ಮಾರಾಟಕ್ಕೆ ಕೊರಗ ಸಮುದಾಯಕ್ಕೆ ಇನ್ನಷ್ಟೂ ಪ್ರೋತ್ಸಾಹ ದೊರೆಯಬೇಕಿದೆ. ಆ ಮೂಲಕ ಸಮಾಜ ಬಡ ಕುಟುಂಬಗಳು ಸ್ವಾವಲಂಬನೆ ಜೀವನ ಸಿಗುವಂತಾಗಲಿ ಎಂಬುವುದು ನಮ್ಮ ಆಶಯ.
ವರದಿ: ಹರೀಶ್ ಪಾಲೆಚ್ಚಾರ್
ಇದನ್ನೂ ಓದಿ: Nisar Ahmed: ಚಿಕ್ಕಬಳ್ಳಾಪುರದಲ್ಲಿ ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಪುತ್ಥಳಿ ಅನಾವರಣ, ಶಿಕ್ಷಣ ಸಂಸ್ಥೆ ಉದ್ಘಾಟನೆ