AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿರು ಬಿಸಿಲಿಗೆ ಕಾದ ಕಾವಲಿಯಾದ ಕರಾವಳಿ: ಪ್ರವಾಸೋದ್ಯಮಕ್ಕೂ ತಟ್ಟಿದ ತಾಪಮಾನ ಏರಿಕೆ ಎಫೆಕ್ಟ್!

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ, ವಿಶೇಷವಾಗಿ ಉತ್ತರ ಕನ್ನಡದಲ್ಲಿ ತಾಪಮಾನ ವಿಪರೀತ ಹೆಚ್ಚುತ್ತಿದೆ. ಮಳೆ ಕೊರತೆ ಮತ್ತು ಎಲ್ ನಿನೋ ಪ್ರಭಾವದಿಂದ ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಏರುತ್ತಿದೆ. ಇದು ಪ್ರವಾಸೋದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದ್ದು, ಕಡಲತೀರಗಳು ಬಿಕೋ ಎನ್ನುತ್ತಿವೆ. ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

ಬಿರು ಬಿಸಿಲಿಗೆ ಕಾದ ಕಾವಲಿಯಾದ ಕರಾವಳಿ: ಪ್ರವಾಸೋದ್ಯಮಕ್ಕೂ ತಟ್ಟಿದ ತಾಪಮಾನ ಏರಿಕೆ ಎಫೆಕ್ಟ್!
ತಾಪಮಾನ ಹೆಚ್ಚಳImage Credit source: tv9 kannada
ಅಶೋಕ್​ ಪೂಜಾರಿ
| Edited By: |

Updated on: Oct 15, 2026 | 6:36 PM

Share

ಮುಖ್ಯಾಂಶಗಳು

  • ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲ ಝಳ ಹೆಚ್ಚಳ
  • ಸೆಕೆಯಿಂದ ಹೈರಾಣಾದ ಜಿಲ್ಲೆಯ ಜನರು
  • ಪ್ರವಾಸೋದ್ಯಮಕ್ಕೂ ತಟ್ಟಿದ ತಾಪಮಾನ ಏರಿಕೆ ಎಫೆಕ್ಟ್

ಕಾರವಾರ, ಅಕ್ಟೋಬರ್​​ 15: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಜನರು ಈ ತಾಪಮಾನ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಮಳೆ ಕೊರತೆ ಹಾಗೂ ಎಲ್​ ನಿನೋ ಪ್ರಭಾವದಿಂದಾಗಿ ದಾಖಲೆ ಮಟ್ಟಕ್ಕೆ ತಾಪಮಾನ ಏರಿಕೆ ಆಗುತ್ತಿದೆ. ಹೀಗಾಗಿ ಪ್ರವಾಸಿ ತಾಣಗಳು ಬಿಕೋ ಎನ್ನುತ್ತಿದ್ದು, ಆರೋಗ್ಯ ಇಲಾಖೆ ಕೂಡ ಸಾರ್ವಜನಿಕರಿಗೆ ವಿಶೇಷ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ.

ಪ್ರವಾಸೋದ್ಯಮಕ್ಕೂ ಹೊಡೆತ 

ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿರು ಬಿಸಿಲಿನ ಜ್ವಾಲೆಗೆ ಇಡೀ ಕರಾವಳಿಯೇ ಕಾದ ಕಾವಲಿಯಂತಾಗಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸೆಕೆಯ ಹೊಡೆತಕ್ಕೆ ಜನರು ಕಂಗೆಟ್ಟಿದ್ದಾರೆ. ಸಾಮಾನ್ಯವಾಗಿ ಮಾರ್ಚ್ ಹಾಗೂ ಏಪ್ರಿಲ್​​ ತಿಂಗಳಲ್ಲಿ ದಾಖಲಾಗಬೇಕಿದ್ದ ಗರಿಷ್ಠ ತಾಪಮಾನ ಈ ಬಾರಿ ಅಕ್ಟೋಬರ್​ ತಿಂಗಳಲ್ಲಿ ದಾಖಲಾಗುತ್ತಿರುವುದು ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದೆ.

ಇದನ್ನೂ ಓದಿ: ಹವಾಮಾನ ಇಲಾಖೆ ಎಚ್ಚರಿಕೆ: ಮುಂದಿನ 5 ದಿನಗಳ ಕಾಲ ಕರ್ನಾಟಕದ ಈ ಮೂರು ಜಿಲ್ಲೆಗಳಲ್ಲಿ ಭಾರೀ ಮಳೆ

ಈ ಭೀಕರ ತಾಪಮಾನದ ಹೊಡೆತ ಇದೀಗ ನೇರವಾಗಿ ಪ್ರವಾಸೋದ್ಯಮದ ಮೇಲೂ ಬಿದ್ದಿದೆ. ದಸರಾ ರಜೆಗಳಿದ್ದರು ಸಹ ಬಿಸಿಲಿನ ತೀವ್ರತೆಗೆ ಹೆದರಿ ಪ್ರವಾಸಿಗರು ಕಡಲತೀರಗಳ ಕಡೆಗೆ ಬರುತ್ತಿಲ್ಲ. ಕಾರವಾರದ ಪ್ರಸಿದ್ಧ ಟಾಗೋರ್ ಬೀಚ್ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿವೆ.

LIVE TV

ಆರೋಗ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಸೂಚನೆ 

ಮಧ್ಯಾಹ್ನದ ವೇಳೆ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದು, ಬಿಸಿಲಿನಿಂದ ಬಚಾವಾಗಲು ತಂಪು ಪಾನೀಯ ಹಾಗೂ ಜ್ಯೂಸ್​ ಮೊರೆ ಹೋಗುತ್ತಿದ್ದಾರೆ. ಈಗಾಗಲೇ ಕಾರವಾರದಲ್ಲಿ ಗರಿಷ್ಠ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗಬಹುದು ಎಂಬ ಆತಂಕ ಜನರನ್ನು ಕಾಡುತ್ತಿದೆ.

ಇದನ್ನೂ ಓದಿ: ಕಾರವಾರ: ಸ್ವಾತಂತ್ರ್ಯ ಬಂದು 8 ದಶಕ ಕಳೆದರೂ ಈ ಗ್ರಾಮಕ್ಕಿಲ್ಲ ರಸ್ತೆ

ಇನ್ನು ಜಿಲ್ಲೆಯಲ್ಲಿ ಉಷ್ಣಾಂಶ ಹೆಚ್ಚಾಗುತ್ತಿರುವ ಹಿನ್ನೆಲೆ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಕಟ್ಟೆಚ್ಚರ ನೀಡಿದೆ. ಸನ್ ಸ್ಟ್ರೋಕ್ ಭೀತಿ ಹಿನ್ನೆಲೆ ಮಧ್ಯಾಹ್ನದ ವೇಳೆ ಅನಗತ್ಯವಾಗಿ ಸಂಚರಿಸದಂತೆ ವೈದ್ಯರು ಸಲಹೆ ನೀಡಿದ್ದಾರೆ. ಅದರಲ್ಲೂ ವಿಶೇಷವಾಗಿ ಮಕ್ಕಳು, ಹಿರಿಯ ನಾಗರಿಕರು ಹಾಗೂ ಅನಾರೋಗ್ಯ ಪೀಡಿತರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ಎಚ್ಚರಿಕೆ ನೀಡಿದೆ.

ನೀರು ಸಂಗ್ರಹ ಪ್ರಮಾಣವೂ ಕುಸಿತ

ತಾಪಮಾನ ಏರಿಕೆಯಿಂದ ಕೆರೆಯಲ್ಲಿ ನೀರು ಸಂಗ್ರಹ, ಹಳ್ಳ ಕೊಳ್ಳದಲ್ಲಿ ಹರಿವಿನ ಪ್ರಮಾಣವು ತೀವ್ರ ಕುಸಿದಿದೆ. ಒಟ್ಟಿನಲ್ಲಿ ಬಿರು ಬಿಸಿಲು ಜನರ ಆರೋಗ್ಯದ ಮೇಲೆ ಎಫೆಕ್ಟ್ ತಟ್ಟಿದೆ. ಮುಂದಿನ ಎರಡು ತಿಂಗಳಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರು ಇಲ್ಲದ ಸ್ಥಿತಿ ನಿರ್ಮಾಣವಾಗುವ ಆತಂಕ ಉಂಟಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಅಶೋಕ್​ ಪೂಜಾರಿ
ಅಶೋಕ್​ ಪೂಜಾರಿ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸ್ಥಳೀಯ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಖಾಸಗಿ ಸುದ್ದಿ ವಾಹಿನಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಕೆಲಕಾಲ ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ ನಂತರ ಟಿವಿ9 ಸುದ್ದಿ ವಾಹಿನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ indiatelevision.com 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More
ಸಿಎಂ ಫಡ್ನವೀಸ್ ನೇತೃತ್ವದಲ್ಲಿ ಲೋಕತಂತ್ರ ಬಚಾವೋ, ಅರಾಜಕತಾ ಹಠಾವೋ ರ್‍ಯಾಲಿ
ಸಿಎಂ ಫಡ್ನವೀಸ್ ನೇತೃತ್ವದಲ್ಲಿ ಲೋಕತಂತ್ರ ಬಚಾವೋ, ಅರಾಜಕತಾ ಹಠಾವೋ ರ್‍ಯಾಲಿ
ಚಿಕ್ಕಮಗಳೂರು: ನಕಲಿ ಜೇನುತುಪ್ಪ ತಯಾರಿಸುತ್ತಿದ್ದ ಅಸ್ಸಾಂ ಗ್ಯಾಂಗ್ ಲಾಕ್
ಚಿಕ್ಕಮಗಳೂರು: ನಕಲಿ ಜೇನುತುಪ್ಪ ತಯಾರಿಸುತ್ತಿದ್ದ ಅಸ್ಸಾಂ ಗ್ಯಾಂಗ್ ಲಾಕ್
ಹುಬ್ಬಳ್ಳಿ-ಧಾರವಾಡ ಪೊಲೀಸರ ಬಿಗ್ ಆಪರೇಷನ್
ಹುಬ್ಬಳ್ಳಿ-ಧಾರವಾಡ ಪೊಲೀಸರ ಬಿಗ್ ಆಪರೇಷನ್
'ಎಸ್​​ಐಆರ್​​ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿ ಗೆಲ್ಲಲ್ಲ'
'ಎಸ್​​ಐಆರ್​​ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿ ಗೆಲ್ಲಲ್ಲ'
ಬಿಗ್ ಬಾಸ್ ಕನ್ನಡ 13: ಕ್ಯಾಪ್ಟನ್ ಆಗಲು ಯೋಗ್ಯತೆ ಇಲ್ಲದ ಸ್ಪರ್ಧಿಗಳು ಯಾರು?
ಬಿಗ್ ಬಾಸ್ ಕನ್ನಡ 13: ಕ್ಯಾಪ್ಟನ್ ಆಗಲು ಯೋಗ್ಯತೆ ಇಲ್ಲದ ಸ್ಪರ್ಧಿಗಳು ಯಾರು?
ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರು: ಬರಿದಾಗುತ್ತಿರುವ KRS!
ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರು: ಬರಿದಾಗುತ್ತಿರುವ KRS!
ಎಳೆದಾಡಿದ ಪೊಲೀಸ್ರು: ಅಂಗಿ ಬಿಚ್ಚಿ ಗಾಯ ತೋರಿಸಿದ ರವಿಕುಮಾರ್
ಎಳೆದಾಡಿದ ಪೊಲೀಸ್ರು: ಅಂಗಿ ಬಿಚ್ಚಿ ಗಾಯ ತೋರಿಸಿದ ರವಿಕುಮಾರ್
ಅಣ್ಣನ ಆರೋಗ್ಯ ವಿಚಾರಿಸಲು ಬೆಂಗಳೂರಿಗೆ ಬಂದ ರಜನೀಕಾಂತ್
ಅಣ್ಣನ ಆರೋಗ್ಯ ವಿಚಾರಿಸಲು ಬೆಂಗಳೂರಿಗೆ ಬಂದ ರಜನೀಕಾಂತ್
ಬಸ್ ದರ ಏರಿಕೆ ಖಂಡಿಸಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಬಿಜೆಪಿ ಪ್ರತಿಭಟನೆ
ಬಸ್ ದರ ಏರಿಕೆ ಖಂಡಿಸಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಬಿಜೆಪಿ ಪ್ರತಿಭಟನೆ
‘ಎಲ್ಲರೂ ನೋಡಲೇಬೇಕಾದ ಸಿನಿಮಾ’; ರಾಮಾಯಣ ನೋಡಿ ವಿಮರ್ಶೆ ಕೊಟ್ಟ ಫ್ಯಾನ್ಸ್
‘ಎಲ್ಲರೂ ನೋಡಲೇಬೇಕಾದ ಸಿನಿಮಾ’; ರಾಮಾಯಣ ನೋಡಿ ವಿಮರ್ಶೆ ಕೊಟ್ಟ ಫ್ಯಾನ್ಸ್