People tree: ಸ್ವಾತಂತ್ರ್ಯ ಪಡೆದ ದಿನವೇ ನೆಟ್ಟ ಅಶ್ವತ್ಥ ವೃಕ್ಷ ಇಂದು ವಿಶ್ರಾಂತಿ ತಾಣವಾಗಿ, ಹೆಮ್ಮರವಾಗಿದೆ!

ಈ ವೃಕ್ಷ ಇದೀಗ ಬೃಹದಾಕಾರವಾಗಿ ಬೆಳೆದಿದ್ದು, ಸುತ್ತಮುತ್ತಲಿನ ಜನರಿಗೆ ನೆರಳಾಗಿದೆ. 

People tree: ಸ್ವಾತಂತ್ರ್ಯ ಪಡೆದ ದಿನವೇ ನೆಟ್ಟ ಅಶ್ವತ್ಥ ವೃಕ್ಷ ಇಂದು ವಿಶ್ರಾಂತಿ ತಾಣವಾಗಿ, ಹೆಮ್ಮರವಾಗಿದೆ!
ಸ್ವಾತಂತ್ರ್ಯ ಪಡೆದ ದಿನವೇ ನೆಟ್ಟ ಅಶ್ವತ್ಥ ವೃಕ್ಷ : ವಿಶ್ರಾಂತಿ ತಾಣವಾಗಿ, ಹೆಮ್ಮರವಾಗಿದೆ!
TV9kannada Web Team

| Edited By: Apurva Kumar Balegere

Sep 07, 2022 | 4:00 PM

ಎಲ್ಲೆಡೆ 75 ನೇ ಸ್ವಾಂತ್ರ್ಯತ್ಸೋವದ ಸಂಭ್ರಮ (Azadi Ka Amrit Mahotsav) ಮುಗಿಲುಮುಟ್ಟಿದೆ. ದೇಶಕ್ಕಾಗಿ ಪ್ರಾಣವನ್ನೆ ಮುಡಿಪಾಗಿಟ್ಟು ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಿ, ಅವರ ಹೋರಾಟಗಳನ್ನು ಸ್ಮರಣೆ ಮಾಡಲಾಗುತ್ತಿದೆ. ಅದರಂತೆಯೇ ಕಾರವಾರದ ಸುಂಕೇರಿಯ (Karawar) ಸ್ವಾತಂತ್ರ್ಯ ಹೋರಾಟಗಾರ ಹನುಮಂತರಾವ್ ಮಾಂಜ್ರೇಕರ್ ಸೇರಿದಂತೆ ಹಲವರು ಸೇರಿ ಸ್ವಾತಂತ್ರ್ಯ ಸಿಕ್ಕ ಸವಿನೆನಪಿಗಾಗಿ ಅಗಸ್ಟ್​ 14ರ ಮಧ್ಯ ರಾತ್ರಿ ನೆಟ್ಟ ಅಶ್ವತ್ಥ ವೃಕ್ಷವೊಂದು (ಅರಳೀ ಮರ people tree) ಇದೀಗ ಬೃಹದಾಕಾರವಾಗಿ ಬೆಳೆದು ಜನರಿಗೆ ವಿಶ್ರಾಂತಿ ತಾಣವಾಗಿದೆ.

ಹೌದು,ಭಾರತಸ್ವಾತಂತ್ರ್ಯಹೋರಾಟದಲ್ಲಿ ದೇಶಾಭಿಮಾನ ಮೆರೆದಿದ್ದ ಉತ್ತರಕನ್ನಡದ ಜನರುತಮ್ಮ ಜಿಲ್ಲೆಯಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳವಳಿ, ಕರಬಂಧಿ ಚಳವಳಿ, ಚಲೇಜಾವ್ ಚಳವಳಿ ಸೇರಿದಂತೆ ಹಲವು ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅದರಂತೆ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿದವರ ಪೈಕಿ ಕಾರವಾರದ ಸುಂಕೇರಿಯ ದಿವಂಗತ ಹನುಮಂತರಾವ್ ಮಾಂಜ್ರೇಕರ್ ಕೂಡ ಒಬ್ಬರು.

ಅಂದು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಜೈಲುವಾಸವನ್ನು ಅನುಭವಿಸಿದ್ದ ಅವರು ಸ್ವಾತಂತ್ರ್ಯ ಸಿಕ್ಕ ಹಿನ್ನೆಲೆಯಲ್ಲಿ ಆಗಸ್ಟ್14 ಗುರುವಾರರಾತ್ರಿಯೇ ಕಾರವಾರದಲ್ಲಿ ಬೃಹತ್ ಗಾತ್ರದ ಪಟಾಕಿ ಸಿಡಿಸಲಾಗಿತ್ತು. ಈ ಮೂಲಕವೇ ಸ್ವಾತಂತ್ರ್ಯಗೊಂಡಿರುವುದನ್ನು ತಿಳಿದುಕೊಂಡುಹನುಮಂತರಾವ್ ಮಾಂಜ್ರೇಕರ್, ಗೋವಿಂದರಾವ್ ಮಾಂಜ್ರೇಕರ್ ಸೇರಿದಂತೆ ನಾವೆಲ್ಲರೂ ಸೇರಿ ನಮ್ಮದೇ ಜಾಗದಲ್ಲಿ ಸ್ವಾತಂತ್ರ್ಯೊತ್ಸವದ ಸವಿ ನೆನಪಿಗಾಗಿ ಅಶ್ವತ್ ವೃಕ್ಷ ನೆಟ್ಟಿದ್ದೆವು. ಅದೀಗ ದೊಡ್ಡದಾಗಿದೆ ಎನ್ನುತ್ತಾರೆ ದಿ. ಹನುಮಂತರಾಯ್ ಅವರ ಹಿರಿಯ ಮಗ ನಿವೃತ್ತ ಶಿಕ್ಷಕ ಕಮಲಾಕ್ಷ ಮಾಂಜ್ರೇಕರ್‌.

ಇನ್ನು ಈ ವೃಕ್ಷ ಇದೀಗ ಬೃಹದಾಕಾರವಾಗಿ ಬೆಳೆದಿದ್ದು, ಸುತ್ತಮುತ್ತಲಿನ ಜನರಿಗೆ ನೆರಳಾಗಿದೆ. ಮಾತ್ರವಲ್ಲದೆ ಜನರು ವಿಶ್ರಾಂತಿ ಪಡೆಯುತ್ತಿದ್ದ ಕಾರಣ ಕಳೆದ ಕೆಲ‌ ವರ್ಷ ಹಿಂದೆ ವಿಶ್ರಾಂತಿಗಾಗಿ ಕಟ್ಟಡ ಕೂಡ ನಿರ್ಮಿಸಲಾಗಿದೆ. ಅದೆಲ್ಲದಕ್ಕೂ ಹೆಚ್ಚಾಗಿ ಸ್ವಾತಂತ್ರ್ಯ ಸಿಕ್ಕ ಸವಿನೆನಪಿಗಾಗಿ ನೆಟ್ಟ ವೃಕ್ಷ ಇದೀಗ ದೊಡ್ಡ ಮರವಾಗಿ ನೆರಳಾಗಿರುವುದು ಖುಷಿ ತಂದಿದೆ ಎನ್ನುತ್ತಾರೆ ದಿ. ಹನುಮಂತರಾವ್ ಅವರ ಮತ್ತೊಬ್ಬ ಮಗ ಶ್ರೀರಂಗ ಮಂಜ್ರೇಕರ್.

ಇನ್ನುಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದಹನುಮಂತರಾವ್ ಮಾಂಜರೇಕರ್ ಗಾಂಧೀಜಿ ಅನುಯಾಯಿಯಾಗಿದ್ದವರು. ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ಖಾದಿ ಪ್ರಸಾರದಲ್ಲಿ ಪಾಲ್ಗೊಂಡಿದ್ದ ಅವರು 1930 ರ ವೇಳೆ 15 ತಿಂಗಳುಗಳಕಾಲ ಜೈಲು ಶಿಕ್ಷೆಗೂ ಗುರಿಯಾಗಿದ್ದರು.ಅಪ್ರತಿಮ ದೇಶಭಕ್ತಿ ಮೈಗೂಡಿಸಿಕೊಂಡಿದ್ದರು. ಸ್ವಾತಂತ್ರ್ಯಾನಂತರ ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ್ದರು.1925 ರಲ್ಲಿ ರಹಿಂ ಖಾನ್ ಯುನಿಟಿ ಹೈಸ್ಕೂಲ್ ಸ್ಥಾಪಿಸುವಲ್ಲಿ ಪ್ರಮುಖಪಾತ್ರವಹಿಸಿದ್ದರು. ಪಾನ ನಿಷೇಧ ಪ್ರಚಾರಾಧಿಕಾರಿ ಹಾಗೂ ಕಾರವಾರದ ಜಿಲ್ಲಾ ವಾರ್ತಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು.

– ವಿನಾಯಕ ಬಡಿಗೇರ, ಟಿವಿ 9, ಕಾರವಾರ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada