Vijayapura News: ಅವಾಚ್ಯವಾಗಿ ಮಾತನಾಡಿದ್ದನ್ನ ಪ್ರಶ್ನಿಸಿದಕ್ಕೆ ವಿದ್ಯಾರ್ಥಿಗೆ ಹಾಸ್ಟೆಲ್ ವಾರ್ಡನ್ ಹಿಗ್ಗಾಮುಗ್ಗ ಥಳಿತ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಗರ ಬೆಟ್ಟ ಆಕ್ಸ್‌ಫರ್ಡ್ ಪಾಟೀಲ ಪದವಿ ಪೂರ್ವ ವಸತಿ ಸಹಿತ ಕಾಲೇಜಿನಲ್ಲಿ ಹಾಸ್ಟೆಲ್ ವಾರ್ಡನ್ ಹುಲ್ಲೇಶ ಎಂಬುವವರು ಸುನೀಲ್ ನೀಲಕಂಠಗೌಡ ಸಂಗನಗೌಡರ ಎಂಬ ವಿದ್ಯಾರ್ಥಿಗೆ ಸ್ಟೀಲ್ ವಾಟರ್ ಬಾಟಲ್ ಹಾಗೂ ಕೈಯಿಂದ ಥಳಿಸಿದ್ದಾರೆ.
ವಿಜಯಪುರ, ಜುಲೈ 27: ಅವಾಚ್ಯ ಶಬ್ಧಗಳನ್ನು ಬಳಸಿ ಮಾತನಾಡಬೇಡಿ, ಸರಿಯಾಗಿ ಮಾತಾಡಿ ಅಂತ ಹೇಳಿದಕ್ಕೆ ವಿದ್ಯಾರ್ಥಿಗೆ(Student) ಹಾಸ್ಟೆಲ್ ವಾರ್ಡನ್(Hostel Warden) ಹಿಗ್ಗಾಮುಗ್ಗ ಥಳಿಸಿರುವ ಅಮಾನವೀಯ ಘಟನೆ ವಿಜಯಪುರದಲ್ಲಿ(Vijayapura) ನಡೆದಿದೆ. ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಗರ ಬೆಟ್ಟ ಆಕ್ಸ್‌ಫರ್ಡ್ ಪಾಟೀಲ ಪದವಿ ಪೂರ್ವ ವಸತಿ ಸಹಿತ ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿಗೆ ವಸತಿ ಸಹಿತ ಪಿಯು ಕಾಲೇಜಿನ ಹಾಸ್ಟೆಲ್ ವಾರ್ಡನ್ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ನಿನ್ನ ನಡೆದ ಘಟನೆ ಇಂದು ತಡವಾಗಿ ಬೆಳಕಿಗೆ ಬಂದಿದೆ.
ಹಾಸ್ಟೆಲ್ ವಾರ್ಡನ್ ಹುಲ್ಲೇಶ ಎಂಬುವವರು ಸುನೀಲ್ ನೀಲಕಂಠಗೌಡ ಸಂಗನಗೌಡರ ಎಂಬ ವಿದ್ಯಾರ್ಥಿಗೆ ಸ್ಟೀಲ್ ವಾಟರ್ ಬಾಟಲ್ ಹಾಗೂ ಕೈಯಿಂದ ಥಳಿಸಿದ್ದಾರೆ. ಇದರಿಂದ ವಿದ್ಯಾರ್ಥಿಯ ಬೆನ್ನು ಹಾಗೂ ಇತರ ಭಾಗದಲ್ಲಿ ಗಾಯಗಳಾಗಿವೆ. ಘಟನೆ ಸಂಬಂಧ ವಿದ್ಯಾರ್ಥಿ ಪೋಷಕರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾರ್ಡನ್ ಅವಾಚ್ಯವಾಗಿ ಮಾತನಾಡಿದ್ದನ್ನು ಪ್ರಶ್ನೆ ಮಾಡಿದ್ದು ಸರಿಯಾಗಿ ಮಾತಾಡಿ ಅಂತ ಹೇಳಿದಕ್ಕೆ ವಾರ್ಡನ್ ಈ ರೀತಿ ಹೊಡೆಯೋದ ಎಂದು ಫೋಷಕರು ವಾಗ್ದಾಳಿ ನಡೆಸಿದ್ದಾರೆ. ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಆಡಳಿತ ಇತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಜಯಪುರಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ