ವಿಜಯಪುರ: ಆಘಾತಕಾರಿ.. ಏಪ್ರಿಲ್ ಮೇ ತಿಂಗಳಿನಲ್ಲಿಯೇ 77 ಜನರಲ್ಲಿ ಡೆಲ್ಟಾ ವೈರಸ್ ಪತ್ತೆ
ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಸಂಗ್ರಹಿಸಲಾಗಿದ್ದ ಕೊರೊನಾ ಸೋಂಕಿತರ ಕಫದ ಸ್ಯಾಂಪಲ್ಸ್ನ ಪರಿಕ್ಷಾ ವರದಿ ಜುಲೈ ಕೊನೆಯ ವಾರದಲ್ಲಿ ಲಭ್ಯವಾಗಿದ್ದು, ಆ ಪ್ರಕಾರ 77 ಜನರಿಗೆ ಡೆಲ್ಟಾ ಸೋಂಕು ಇರುವುದು ಪತ್ತೆಯಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಸುನಿಲ್‌ಕುಮಾರ್ ಮಾಹಿತಿ ನೀಡಿದ್ದಾರೆ.
ವಿಜಯಪುರ: ಮಹಾಮಾರಿ ಕೊರೊನಾದ ಎರಡನೆಯ ಅಲೆ ಮುಗಿದು, ಡೆಲ್ಟಾ ವೈರಸ್ (Delta Plus) ರೂಪದಲ್ಲಿ ಮೂರನೆಯ ಕೊರೊನಾ ಅಲೆ ಬಂದಿದೆ ಎಂದು ವೈದ್ಯ ಲೋಕ ಆತಂಕಗೊಂಡಿರುವಾಗಲೇ ವಿಜಯಪುರ ಜಿಲ್ಲೆಯಿಂದ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ತಡವಾಗಿ ಲಭ್ಯವಾಗಿರುವ ಲ್ಯಾಬ್ ಟೆಸ್ಟ್ ರಿಪೋರ್ಟ್ಗಳ ಪ್ರಕಾರ ಜಿಲ್ಲೆಯಲ್ಲಿ 77 ಜನರಲ್ಲಿ ಡೆಲ್ಟಾ ವೈರಸ್ ಪತ್ತೆಯಾಗಿದೆ. ಇನ್ನೂ ಆಘಾತಕಾರಿ ಅಂದರೆ ಇದು ಏಪ್ರಿಲ್ ಮೇ ತಿಂಗಳಿನಲ್ಲಿಯೇ ಜಿಲ್ಲೆಯಲ್ಲಿರುವುದು ದೃಢಪಟ್ಟಿದೆ.
ಕೊರೊನಾ ಎರಡನೇ ಅಲೆಯ ತೀವ್ರತೆಯನ್ನು ಅರಿತ ವಿಜಯಪುರ ಜಿಲ್ಲಾಡಳಿತ ಕೊರೊನಾ ಸೋಂಕಿತ ಗರ್ಭಿಣಿಯರು, ಮಕ್ಕಳು, ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳ ಸ್ಯಾಂಪಲ್ಸ್ ಸಂಗ್ರಹಿಸಿ ಬೆಂಗಳೂರು ಮೆಡಿಕಲ್ ಕಾಲೇಜಿನ ವೈರಾಲಜಿ ಲ್ಯಾಬ್ಗೆ ಕಳುಹಿಸಿದ್ದರು. 120 ಸ್ಯಾಂಪಲ್‌ಗಳ ಪೈಕಿ 77 ಜನರಲ್ಲಿ ಡೆಲ್ಟಾ ವೈರಸ್ ಪತ್ತೆಯಾಗಿದೆ.
ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಸಂಗ್ರಹಿಸಲಾಗಿದ್ದ ಕೊರೊನಾ ಸೋಂಕಿತರ ಕಫದ ಸ್ಯಾಂಪಲ್ಸ್ನ ಪರಿಕ್ಷಾ ವರದಿ ಜುಲೈ ಕೊನೆಯ ವಾರದಲ್ಲಿ ಲಭ್ಯವಾಗಿದ್ದು, ಆ ಪ್ರಕಾರ 77 ಜನರಿಗೆ ಡೆಲ್ಟಾ ಸೋಂಕು ಇರುವುದು ಪತ್ತೆಯಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಸುನಿಲ್‌ಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ 45 ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆ; ಜಲಗಾಂವ್ನಲ್ಲೇ ಜಾಸ್ತಿ ಇದೆ ಅಪಾಯಕಾರಿ ವೈರಸ್
ಬೆಂಗಳೂರಿನಲ್ಲಿ ಡೆಲ್ಟಾ ಪ್ಲಸ್ ಸೋಂಕಿತ ನಾಪತ್ತೆ; ಮಾಹಿತಿ ಸಂಗ್ರಹಿಸಿ ಹುಡುಕಾಡುತ್ತಿರುವ ಪೊಲೀಸರು