AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಷಾರ್! ಮಹಿಳೆಯರ ಸುರಕ್ಷತೆಗೆ ಟೊಂಕ ಕಟ್ಟಿದ ‘ಅಕ್ಕ ಪಡೆ’: ಏನಿದು ಯೋಜನೆ?

ಬೀದರ್​ನ ಬಸವಕಲ್ಯಾಣದಲ್ಲಿ ಸಿಎಂ ಡಿಕೆ ಶಿವಕುಮಾರ್​ ಅಕ್ಕ ಪಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಕ್ಕ ಪಡೆ ಪ್ರತಿ ಪಂಚಾಯಿತಿಗೆ ವಿಸ್ತರಿಸುವಂತೆ ಕರೆ ನೀಡಿದರು. ಹಾಗಾದರೆ ಏನಿದು ಅಕ್ಕ ಪಡೆ, ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಈ ಯೋಜನೆಯ ಉದ್ದೇಶವೇನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಹುಷಾರ್! ಮಹಿಳೆಯರ ಸುರಕ್ಷತೆಗೆ ಟೊಂಕ ಕಟ್ಟಿದ ‘ಅಕ್ಕ ಪಡೆ’: ಏನಿದು ಯೋಜನೆ?
ಅಕ್ಕ ಪಡೆImage Credit source: tv9 kannada
ದತ್ತಾತ್ರೇಯ ಪಾಟೀಲ, ಕಲಬುರಗಿ
| Edited By: |

Updated on:Jul 06, 2026 | 8:26 PM

Share

ಮುಖ್ಯಾಂಶಗಳು

  • ಬೀದರ್​ನಲ್ಲಿ ಅಕ್ಕ ಪಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಡಿಕೆ ಶಿವಕುಮಾರ್
  • ಅಕ್ಕ ಪಡೆ ಸಂಘಟನೆ ಪ್ರತಿ ಪಂಚಾಯಿತಿಗೂ ವಿಸ್ತರಿಸುವಂತೆ ಸಿಎಂ ಕರೆ
  • ಅಕ್ಕ ಪಡೆ ಯೋಜನೆ ಬಗ್ಗೆ ತಿಳಿಯಿರಿ

ಬೀದರ್​, ಜುಲೈ 06: ಸಂಕಷ್ಟದಲ್ಲಿರುವ ಹೆಣ್ಣುಮಕ್ಕಳ ರಕ್ಷಣೆ ಮತ್ತು ಆಸರೆಗಾಗಿಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಸರ್ಕಾರ ಅತ್ಯಂತ ಮಹತ್ವಾಕಾಂಕ್ಷೆಯ ‘ಅಕ್ಕ ಪಡೆ’ (Akka pade) ಯೋಜನೆಯನ್ನು ಜಾರಿಗೆ ತಂದಿದೆ. 2023ರಲ್ಲಿ ಈ ಯೋಜನೆ ರಾಜ್ಯದಲ್ಲಿ ಜಾರಿಗೆ ಬಂದಿದೆ. ಮಹಿಳೆಯರು, ಹೆಣ್ಣುಮಕ್ಕಳ ರಕ್ಷಣೆ ಮತ್ತು ಜಾಗೃತಿಗಾಗಿ ಮೂಡಿಸುವ ಒಂದು ವಿಶೇಷ ಕಾರ್ಯಪಡೆಯಾಗಿದೆ. ಅಷ್ಟೇ ಅಲ್ಲದೆ ತುರ್ತು ಸಂದರ್ಭಗಳಲ್ಲಿ ತಕ್ಷಣವೇ ನೆರವಿಗೆ ಧಾವಿಸುತ್ತದೆ.

ಅಕ್ಕ ಪಡೆಯ ಕಾರ್ಯವೇನು? 

  • ಶಾಲೆ, ಕಾಲೇಜುಗಳು, ಬಸ್ ನಿಲ್ದಾಣಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿ ಹೆಣ್ಣುಮಕ್ಕಳಿಗೆ ಚುಡಾಯಿಸುವ ಕಿಡಿಗೇಡಿಗಳ ಮೇಲೆ ನಿಗಾ ಇಡುವುದು ಮತ್ತು ಗಸ್ತು ತಿರುಗುವುದು.
  • ಸಂಕಷ್ಟದಲ್ಲಿರುವ ಮಹಿಳೆಯರು ಕರೆ ಮಾಡಿದ ತಕ್ಷಣ ಸ್ಥಳಕ್ಕೆ ಧಾವಿಸಿ ನೆರವು ನೀಡುವುದು.
  • ಗ್ರಾಮೀಣ ಭಾಗದ ಮಹಿಳೆಯರಿಗೆ ಕೌಟುಂಬಿಕ ದೌರ್ಜನ್ಯ, ಸೈಬರ್ ಅಪರಾಧಗಳು, ಮೂಢನಂಬಿಕೆ ಮತ್ತು ಹೆಣ್ಣುಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು.

ಅಕ್ಕ ಪಡೆ ಹೇಗೆ ಕೆಲಸ ಮಾಡುತ್ತದೆ?

  • ಅಕ್ಕ ಪಡೆಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ. ಇವರು ನಿಗದಿತ ಪ್ರದೇಶಗಳಲ್ಲಿ ನಿರಂತರವಾಗಿ ರೌಂಡ್ಸ್ ಹಾಕುತ್ತಾರೆ.
  • ಕೆಲವು ಜಿಲ್ಲೆಗಳಲ್ಲಿ ಸ್ಥಳೀಯ ಸ್ವಯಂಸೇವಕ ಮಹಿಳೆಯರನ್ನು ಅಂದರೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಅಥವಾ ಸಂಘಗಳ ಮಹಿಳೆಯರು ಒಳಗೊಂಡ ಸಮಿತಿಯನ್ನು ರಚಿಸಿ, ಆಯಾ ಹಳ್ಳಿ ಅಥವಾ ವಾರ್ಡ್‌ಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ವಿರುದ್ಧ ಧ್ವನಿ ಎತ್ತಲು ಈ ಯೋಜನೆ ಸಹಕಾರಿಯಾಗಿದೆ.

ಇದನ್ನೂ ಓದಿ: ಮೋಡ ಬಿತ್ತನೆಗೆ ಚಾಲನೆ ಬೆನ್ನಲ್ಲೇ ಸುರಿದ ಮಳೆ: ಪ್ರಯತ್ನ ಫಲ ನೀಡಿದೆ ಎಂದ ಶಾಸಕ; ರೈತರೂ ಖುಷ್​

ಇನ್ನು ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಮಹಿಳೆಯರ ಸುರಕ್ಷತೆಗಾಗಿ ಈ ಅಕ್ಕ ಪಡೆಯನ್ನ ಜಾರಿಗೆ ಬರುತ್ತಿದ್ದಾರೆ. ಅದರ ಭಾಗವಾಗಿ ಇಂದು ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ ಅಕ್ಕ ಪಡೆ ಕಾರ್ಯಕ್ರಮಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು.

ಅಕ್ಕ ಪಡೆ ಪ್ರತಿ ಪಂಚಾಯಿತಿಗೂ ವಿಸ್ತರಣೆಯಾಗಬೇಕು ಎಂದ ಸಿಎಂ ಡಿಕೆ ಶಿವಕುಮಾರ್​

ಬಳಿಕ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್​, ಹೆಣ್ಣಂದ್ರೆ ಶಕ್ತಿ, ಹೆಣ್ಣಂದ್ರೆ ಒಗ್ಗಟ್ಟು, ಹೆಣ್ಣು ಅಂದರೆ ಭರವಸೆ. ನಾರಿಶಕ್ತಿ ಈ ದೇಶದ ಶಕ್ತಿಯಾಗಿದೆ. ರಾಜ್ಯದಲ್ಲಿ ಮಹಿಳೆಯರು ಬೆಳೆದುಬಂದ ಇತಿಹಾಸ ನೋಡಿದ್ದೇವೆ. ಅಕ್ಕಪಡೆಗೆ ನಾನು ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ. ನಿಮ್ಮ ಹೋರಾಟ, ನಿಮ್ಮ ಧೈರ್ಯ, ನಿಮ್ಮ ಸಾಹಸಕ್ಕೆ ಫಲ ಸಿಗುತ್ತೆ. ನಿಮ್ಮ ಸಂಘಟನೆ ಪ್ರತಿ ಪಂಚಾಯಿತಿಗೂ ವಿಸ್ತರಣೆಯಾಗಬೇಕು.  ಭಾರತ್ ಜೋಡೋ ಯುವಶಕ್ತಿ ಸಂಘವನ್ನು ಮಾಡುತ್ತಿದ್ದೇವೆ. ಅಕ್ಕ ಪಡೆ ಜೊತೆಗೆ ನಾನು, ಸರ್ಕಾರ ಇರುತ್ತೆ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:19 pm, Mon, 6 July 26

Follow Us
ಇಂಡೋನೇಷ್ಯಾ ತಲುಪಿದ ಪ್ರಧಾನಿ ನರೇಂದ್ರ ಮೋದಿ; ಸರ್ಕಾರಿ ಗೌರವದ ಸ್ವಾಗತ
ಇಂಡೋನೇಷ್ಯಾ ತಲುಪಿದ ಪ್ರಧಾನಿ ನರೇಂದ್ರ ಮೋದಿ; ಸರ್ಕಾರಿ ಗೌರವದ ಸ್ವಾಗತ
ಈ ತಿಂಗಳ ಅಂತ್ಯದಲ್ಲಿ ಕ್ಯಾಬಿನೆಟ್ ವಿಸ್ತರಣೆ
ಈ ತಿಂಗಳ ಅಂತ್ಯದಲ್ಲಿ ಕ್ಯಾಬಿನೆಟ್ ವಿಸ್ತರಣೆ
ಅಪರಾಧ ಕೃತ್ಯ ಮರುಕಳಿಸಿದರೆ ಕೈ, ಕಾಲಿಗೆ ಗುಂಡು ಹಾರಿಸಿ: ಸಚಿವ ಖಾದರ್​​
ಅಪರಾಧ ಕೃತ್ಯ ಮರುಕಳಿಸಿದರೆ ಕೈ, ಕಾಲಿಗೆ ಗುಂಡು ಹಾರಿಸಿ: ಸಚಿವ ಖಾದರ್​​
ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ, ಬೆಳಗಾವಿಯಲ್ಲಿ ಪರಿಸ್ಥಿತಿ ಹೇಗಿದೆ?
ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ, ಬೆಳಗಾವಿಯಲ್ಲಿ ಪರಿಸ್ಥಿತಿ ಹೇಗಿದೆ?
ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು HMT ವಾಚ್​ ತಯಾರಾಗುತ್ತೆ ಗೊತ್ತಾ?
ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು HMT ವಾಚ್​ ತಯಾರಾಗುತ್ತೆ ಗೊತ್ತಾ?
ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಅಕ್ರಮವಾಗಿ SIR: ಪ್ರಲ್ಹಾದ್ ಜೋಶಿ
ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಅಕ್ರಮವಾಗಿ SIR: ಪ್ರಲ್ಹಾದ್ ಜೋಶಿ
ರಾಮಮಂದಿರ ನಿರ್ಮಾಣದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ: ಪ್ರಿಯಾಂಕ್​​ 
ರಾಮಮಂದಿರ ನಿರ್ಮಾಣದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ: ಪ್ರಿಯಾಂಕ್​​ 
ಮುಂದಿನ ತಿಂಗಳು ಪಿಎಸ್​ಐ, ಕಾನ್ಸ್​ಟೇಬಲ್​ ಹುದ್ದೆ ನೇಮಕಾತಿ ಅಧಿಸೂಚನೆ
ಮುಂದಿನ ತಿಂಗಳು ಪಿಎಸ್​ಐ, ಕಾನ್ಸ್​ಟೇಬಲ್​ ಹುದ್ದೆ ನೇಮಕಾತಿ ಅಧಿಸೂಚನೆ
'ಜನರ ಒಳ್ಳೆಯದಕ್ಕೆ ನಾನು ನಿಷ್ಠುರ ಆದರೂ ಪರವಾಗಿಲ್ಲ'
'ಜನರ ಒಳ್ಳೆಯದಕ್ಕೆ ನಾನು ನಿಷ್ಠುರ ಆದರೂ ಪರವಾಗಿಲ್ಲ'
ಬೆಳಗಾವಿ: ಚಲಿಸುತ್ತಿದ್ದ ಟ್ರ್ಯಾಕ್ಟರ್ ಮೇಲೆ ಮುರಿದು ಬಿದ್ದ ದೈತ್ಯ ಮರ!
ಬೆಳಗಾವಿ: ಚಲಿಸುತ್ತಿದ್ದ ಟ್ರ್ಯಾಕ್ಟರ್ ಮೇಲೆ ಮುರಿದು ಬಿದ್ದ ದೈತ್ಯ ಮರ!