AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗ: ಎಸ್​ಐಆರ್ ಪ್ರಕ್ರಿಯೆ ವೇಳೆ ಹೃದಯಾಘಾತದಿಂದ ಮತ್ತೋರ್ವ ಬಿಎಲ್‌ಒ ಸಾವು!

SIR ಕರ್ತವ್ಯಕ್ಕೆ ತೆರಳುವಾಗ ಬೈಕ್​​​ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬಳಿಕ ಚಿಕಿತ್ಸೆ ಫಲಿಸದೆ ವಿಎಒ ಭುವನಾ ಮೃತಪಟ್ಟಿದ್ದಾರೆ. ಬಳಿಕ ಬೀದರ್​ನಲ್ಲಿ ಹೃದಯಾಘಾತದಿಂದ ಬಿಎಲ್‌ಒ ಸಾವನ್ನಪ್ಪಿದ್ದಾರೆ. ಇವೆರಡು ಘಟನೆಗಳು ಮಾಸುವ ಮುನ್ನವೇ ಇಂದು ಭದ್ರಾವತಿ ತಾಲೂಕಿನಲ್ಲಿ ಕರ್ತವ್ಯ ವೇಳೆ ಮತ್ತೋರ್ವ ಬಿಎಲ್‌ಒ ಅಧಿಕಾರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಶಿವಮೊಗ್ಗ: ಎಸ್​ಐಆರ್ ಪ್ರಕ್ರಿಯೆ ವೇಳೆ ಹೃದಯಾಘಾತದಿಂದ ಮತ್ತೋರ್ವ ಬಿಎಲ್‌ಒ ಸಾವು!
ಬಿಎಲ್​ಒ ಮಂಜುಳಾImage Credit source: tv9 kannada
Basavaraj Yaraganavi
| Edited By: |

Updated on:Jul 06, 2026 | 7:19 PM

Share

ಮುಖ್ಯಾಂಶಗಳು

  • ಎಸ್​ಐಆರ್​ ವೇಳೆ ಹೃದಯಾಘಾತವಾಗಿ ಬಿಎಲ್​ಒ ಸಾವು
  • ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕಲ್ಲಾಪುರ ಗ್ರಾಮದಲ್ಲಿ ಘಟನೆ
  • ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲು

ಶಿವಮೊಗ್ಗ, ಜುಲೈ 06: ರಾಜ್ಯದಲ್ಲಿ ಎಸ್​ಐಆರ್ (SIR) ವೇಳೆ ಹಲವು ಎಡವಟ್ಟುಗಳು ನಡೆದಿವೆ. ಮನೆ ಮನೆಗೆ ತೆರಳುವ ಬದಲು ಕಲ್ಯಾಣ ಮಂಟಪ, ಮಸೀದಿ ದೇಗುಲ ಹಾಗೂ ಅಂಗನವಾಡಿಗಳಲ್ಲಿ ಬಿಎಲ್​​ಓಗಳು ಎಸ್​ಐಆರ್ ಫಾರ್​ಮ್ ಹಂಚಿಕೆ ಮಾಡುತ್ತಿದ್ದಾರೆ. ಈ ಮಧ್ಯೆ ಎಸ್​ಐಆರ್ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಕೆಲ ಸಿಬ್ಬಂದಿ ಹೃದಯಾಘಾತದಿಂದ (Heart attack) ಸಾವನ್ನಪ್ಪಿದ್ದಾರೆ. ಇದೀಗ ಇಂತಹದೊಂದು ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಎಸ್​ಐಆರ್​ ವೇಳೆ ಹೃದಯಾಘಾತವಾಗಿ ಬಿಎಲ್​ಒ ಸಾವನ್ನಪ್ಪಿದ್ದಾರೆ.

ನಡೆದಿದ್ದೇನು?

ಕಲ್ಲಾಪುರ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯೂ ಆಗಿದ್ದ ಬಿಎಲ್‌ಒ (BLO) ಮಂಜುಳಾ (52) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಮಂಜುಳಾ ಅವರು ಇಂದು ಕಲ್ಲಾಪುರ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಎಸ್‌ಐಆರ್​ ಕಾರ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಅವರಿಗೆ ದಿಢೀರನೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಭದ್ರಾವತಿ ತಾಲೂಕು ಆಸ್ಪತ್ರೆಗೆ ರವಾನಿಸುವ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: SIR ಕರ್ತವ್ಯಕ್ಕೆ ತೆರಳುವಾಗ ಭೀಕರ ಅಪಘಾತ: ಚಿಕಿತ್ಸೆ ಫಲಿಸದೆ ಭುವನಾ ಸಾವು; ಸಿಬ್ಬಂದಿಯಿಂದ ಪ್ರತಿಭಟನೆ

ಸದ್ಯ ಮೃತದೇಹವನ್ನು ಭದ್ರಾವತಿ ತಾಲೂಕಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಒತ್ತಡದಿಂದಲೇ ಸಾವುವಾಗಿದೆ: ಮಂಜುಳಾ ಪತಿ ಸಂಗಯ್ಯ ಗಂಭೀರ ಆರೋಪ

ಇನ್ನು ಪತ್ನಿ ಮಂಜುಳಾ ಸಾವಿಗೆ ಪತಿ ಸಂಗಯ್ಯ ಕಣ್ಣೀರು ಹಾಕಿದ್ದಾರೆ. ನಿರಂತರವಾಗಿ ಅಧಿಕಾರಿಗಳು ಹೇರುತ್ತಿದ್ದ ಒತ್ತಡದಿಂದಲೇ ಸಾವಾಗಿದೆ ಎಂದು ಟಿವಿ9 ವಾಹಿನಿ ಎದುರು ಆಕ್ರೋಶ ವ್ಯಕ್ತಪಡಿಸಿದರು. ‘ನನ್ನ ಪತ್ನಿಗೆ ಸಕ್ಕರೆ ಕಾಯಿಲೆ ಇತ್ತು. ಅವರು ಎಸ್​ಐಆರ್ ಕರ್ತವ್ಯ ಬೇಡ ಅಂದರೂ ಒತ್ತಡ ಹಾಕಲಾಗಿದೆ’ ಎಂದು ಗಂಭೀರ ಆರೋಪ ಮಾಡಿದರು.

ಇದನ್ನೂ ಓದಿ: ಗ್ರಾಮ ಆಡಳಿತ ಅಧಿಕಾರಿ ಭುವನಾ ದುರ್ಮರಣ: ಮಗಳ ಮದುವೆ ಕನಸು ಕಂಡಿದ್ದ ಕುಟುಂಬಕ್ಕೆ ಬರಸಿಡಿಲು

‘ಇಂದು ಕರ್ತವ್ಯ ಸಮಯದಲ್ಲಿ ಪತ್ನಿ ಸಾವು ಆಗಿದೆ. ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇದೆ. ವೈದ್ಯಕೀಯ ಪರೀಕ್ಷೆ ಬಳಿಕ ಸಾವಿನ ಕಾರಣ ಗೊತ್ತಾಗಲಿದೆ. ಅಂಗನವಾಡಿ ಕೆಲಸದ ಜೊತೆ ಈ ಕೆಲಸ ಹೆಚ್ಚಿನ ಹೊರೆ ಆಗಿತ್ತು’ ಎಂದು ಮಂಜುಳಾ ಸಹೋದ್ಯೋಗಿಗಳು ಕಣ್ಣೀರು ಹಾಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:03 pm, Mon, 6 July 26

Follow Us
ಗುಂಪು ಸೇರಿಸಿ SIR ಮಾಡ್ತಿರುವ ಸ್ಥಳಕ್ಕೆ ಮಾಜಿ ಸಂಸದರ ಸಪ್ರೈಸ್​​ ಎಂಟ್ರಿ!
ಗುಂಪು ಸೇರಿಸಿ SIR ಮಾಡ್ತಿರುವ ಸ್ಥಳಕ್ಕೆ ಮಾಜಿ ಸಂಸದರ ಸಪ್ರೈಸ್​​ ಎಂಟ್ರಿ!
ಅಪರಾಧ ಕೃತ್ಯ ಮರುಕಳಿಸಿದರೆ ಕೈ, ಕಾಲಿಗೆ ಗುಂಡು ಹಾರಿಸಿ: ಸಚಿವ ಖಾದರ್​​
ಅಪರಾಧ ಕೃತ್ಯ ಮರುಕಳಿಸಿದರೆ ಕೈ, ಕಾಲಿಗೆ ಗುಂಡು ಹಾರಿಸಿ: ಸಚಿವ ಖಾದರ್​​
ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ, ಬೆಳಗಾವಿಯಲ್ಲಿ ಪರಿಸ್ಥಿತಿ ಹೇಗಿದೆ?
ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ, ಬೆಳಗಾವಿಯಲ್ಲಿ ಪರಿಸ್ಥಿತಿ ಹೇಗಿದೆ?
ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು HMT ವಾಚ್​ ತಯಾರಾಗುತ್ತೆ ಗೊತ್ತಾ?
ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು HMT ವಾಚ್​ ತಯಾರಾಗುತ್ತೆ ಗೊತ್ತಾ?
ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಅಕ್ರಮವಾಗಿ SIR: ಪ್ರಲ್ಹಾದ್ ಜೋಶಿ
ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಅಕ್ರಮವಾಗಿ SIR: ಪ್ರಲ್ಹಾದ್ ಜೋಶಿ
ರಾಮಮಂದಿರ ನಿರ್ಮಾಣದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ: ಪ್ರಿಯಾಂಕ್​​ 
ರಾಮಮಂದಿರ ನಿರ್ಮಾಣದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ: ಪ್ರಿಯಾಂಕ್​​ 
ಮುಂದಿನ ತಿಂಗಳು ಪಿಎಸ್​ಐ, ಕಾನ್ಸ್​ಟೇಬಲ್​ ಹುದ್ದೆ ನೇಮಕಾತಿ ಅಧಿಸೂಚನೆ
ಮುಂದಿನ ತಿಂಗಳು ಪಿಎಸ್​ಐ, ಕಾನ್ಸ್​ಟೇಬಲ್​ ಹುದ್ದೆ ನೇಮಕಾತಿ ಅಧಿಸೂಚನೆ
'ಜನರ ಒಳ್ಳೆಯದಕ್ಕೆ ನಾನು ನಿಷ್ಠುರ ಆದರೂ ಪರವಾಗಿಲ್ಲ'
'ಜನರ ಒಳ್ಳೆಯದಕ್ಕೆ ನಾನು ನಿಷ್ಠುರ ಆದರೂ ಪರವಾಗಿಲ್ಲ'
ಬೆಳಗಾವಿ: ಚಲಿಸುತ್ತಿದ್ದ ಟ್ರ್ಯಾಕ್ಟರ್ ಮೇಲೆ ಮುರಿದು ಬಿದ್ದ ದೈತ್ಯ ಮರ!
ಬೆಳಗಾವಿ: ಚಲಿಸುತ್ತಿದ್ದ ಟ್ರ್ಯಾಕ್ಟರ್ ಮೇಲೆ ಮುರಿದು ಬಿದ್ದ ದೈತ್ಯ ಮರ!
SIR ವೇಳೆ ಅಕ್ರಮ: ಮುಖ್ಯ ಚುನಾವಣಾ ಅಧಿಕಾರಿಗೆ ಬಿಜೆಪಿ, ಜೆಡಿಎಸ್ ದೂರು
SIR ವೇಳೆ ಅಕ್ರಮ: ಮುಖ್ಯ ಚುನಾವಣಾ ಅಧಿಕಾರಿಗೆ ಬಿಜೆಪಿ, ಜೆಡಿಎಸ್ ದೂರು