ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯ್ತು ಬೆಂಗಳೂರು ಐಐಐಟಿ: ಒಟ್ಟಿಗೆ ಡಿಗ್ರಿ ಪಡೆದ ತಾಯಿ, ಮಗ

ಭಾನುವಾರ ಬೆಂಗಳೂರಿನ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಸಂಸ್ಥೆ ಒಂದು ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. 48 ವರ್ಷದ ತಾಯಿ ತನ್ನ 22 ವರ್ಷದ ಮಗನೊಂದಿಗೆ ಪದವಿ ಪಡೆದುಕೊಂಡಿದ್ದಾರೆ. ಆ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ನಮ್ಮ ಸಾಧನೆಗೆ ತಂದೆಯೇ ಬೆನ್ನೆಲುಬು ಎಂದು ಮಗ ಹೇಳಿದ್ದಾರೆ.  

ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯ್ತು ಬೆಂಗಳೂರು ಐಐಐಟಿ: ಒಟ್ಟಿಗೆ ಡಿಗ್ರಿ ಪಡೆದ ತಾಯಿ, ಮಗ
ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯ್ತು ಬೆಂಗಳೂರು ಐಐಐಟಿ: ಒಟ್ಟಿಗೆ ಡಿಗ್ರಿ ಪಡೆದುಕೊಂಡ ತಾಯಿ, ಮಗ
Follow us
|

Updated on:Jul 08, 2024 | 6:59 PM

ಬೆಂಗಳೂರು, ಜುಲೈ 08: ಒಂದೇ ವೇದಿಕೆ ಮೇಲೆ ತಾಯಿ (Mother) ಮತ್ತು ಮಗ (son) ಇಬ್ಬರೂ ಶೈಕ್ಷಣಿಕ ಪದವಿಯನ್ನು ಪಡೆದುಕೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಇಂತಹದೊಂದು ಅಪರೂಪದ ಕ್ಷಣಕ್ಕೆ ಬೆಂಗಳೂರಿನ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಿಂದ (ಐಐಐಟಿ-ಬಿ) ಸಾಕ್ಷಿಯಾಗಿದೆ. 48 ವರ್ಷದ ರಂಜನಿ ನಿರಂಜನ್ ಅವರು ಪಿಹೆಚ್​ಡಿ ಪಡೆದರೆ, 22 ವರ್ಷದ ಮಗ ರಾಘವ ಎಸ್. ಎನ್​ ಎಂ ಟೆಕ್ ಪದವಿಯನ್ನು ಪಡೆದುಕೊಂಡಿದ್ದಾರೆ.

ಪದವಿ ಪಡೆದು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿರುವ ತಾಯಿ ರಂಜನಿ, ಮಗ ರಾಘವನೊಂದಿಗೆ ನಾನು ಪದವಿ ಪಡೆಯಲು ಉತ್ಸುಕನಾಗಿದ್ದೇನೆ. ಇದು ತಮ್ಮ ಕುಟುಂಬಕ್ಕೆ ಗಮನಾರ್ಹ ಸಾಧನೆಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆ: ಗುಜರಿ ಕೆಲಸ ಮಾಡುವ ಕುಟುಂಬದ ಅಜರುದ್ಧೀನ್ ಅಸಿಸ್ಟೆಂಟ್​ ಕಮಾಂಡೆಂಟ್​ ಹುದ್ದೆಗೆ ಆಯ್ಕೆ

ಎಲ್ಲರಿಗೂ ಇಂತಹ ಅವಕಾಶ ಸಿಗುವುದಿಲ್ಲ. ನಾನು ತುಂಬಾ ಕೃತಜ್ಞಳಾಗಿದ್ದೇನೆ. ನಾನು ನನಗಿಂತ 13 ವರ್ಷ ಕಿರಿಯ ವಿದ್ಯಾರ್ಥಿಗಳೊಂದಿಗೆ ತರಗತಿಯಲ್ಲಿ ಕುಳಿತಿದ್ದೇನೆ. ಇದು ಮೊದಲು ಕಷ್ಟವಾಗಿದ್ದರೂ ಸಮಯ ಕಳೆದಂತೆ ಎಲ್ಲವು ಸರಿಯಾಯಿತು. ಕೊನೆಯಲ್ಲಿ ನಾವೆಲ್ಲರೂ ಕೇವಲ ಕಲಿಯುವವರು ಎಂದು ಅವರು ಹೇಳಿಕೊಂಡಿದ್ದಾರೆ.

ರಂಜನಿ ಅವರು ಪದವಿ ಪಡೆದುಕೊಳ್ಳುವುದಕ್ಕೂ ಮುಂಚೆ ಪಿಇಎಸ್ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ಹೊಸ ಅಲ್ಗಾರಿದಮ್ಗಳ ವರ್ಗೀಕರಣ ಎಂಬ ಸಂಶೋಧನೆಯ ವಿಷಯವಸ್ತುವಾಗಿದೆ.

ಇದನ್ನೂ ಓದಿ: ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಇನ್ನು ಮಗ ರಾಘವ ಪ್ರತಿಕ್ರಿಯಿಸಿದ್ದು, ತನ್ನ ತಾಯಿಯೊಂದಿಗೆ ಸಂತೋಷದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ತಾನು ತನ್ನ ತಾಯಿಗೆ ಹೇಗೆ ತಿಳಿಹೇಳುತ್ತಿದ್ದರು ಎಂಬುದನ್ನು ಹಂಚಿಕೊಂಡಿದ್ದಾರೆ. ಅಮ್ಮ ನನ್ನ ಸಹಾಯವನ್ನು ಗಣಿತದ ಪ್ರಶ್ನೆಗಳಿಗೆ, ಅದರಲ್ಲೂ 12ನೇ ತರಗತಿಯ ಪರಿಕಲ್ಪನೆಗಳಿಗೆ ಕೇಳುತ್ತಿದ್ದರು. ಅದು ತುಂಬಾ ರೋಮಾಂಚಕಾರಿ ಮತ್ತು ವಿನೋದಮಯವಾಗಿತ್ತು. ಅವರ ಬಗ್ಗೆ ನನಗೆ ಹೆಮ್ಮೆ ಇದೆ ಎಂದಿದ್ದಾರೆ.

ನಮ್ಮ ಸಾಧನೆಗೆ ತಂದೆಯೇ ಬೆನ್ನೆಲುಬು 

ತಮ್ಮ ಸಾಧನೆಯನ್ನು ರಂಜನಿ ಪತಿಗೆ ಅರ್ಪಿಸಿದರೆ, ಇತ್ತ ಮಗ ಕೂಡ ತಮ್ಮ ಸಾಧನೆಯನ್ನು ತಂದೆಗೆ ಸಲ್ಲಿಸಿದ್ದಾರೆ. ಏಕೆಂದರೆ ಇಬ್ಬರನ್ನು ಈ ಸಾಧನೆಗೆ ಪ್ರೋತ್ಸಾಹಿಸಿದ್ದು ಅವರೇ. ಈ ಸಾಧನೆಯಲ್ಲಿ ನನ್ನ ತಂದೆಯ ಪಾತ್ರ ದೊಡ್ಡದು. ಸ್ವತಃ ಇಂಜಿನಿಯರ್ ಆಗಿದ್ದ ಅವರು, ತಮ್ಮ ಪತ್ನಿಯ ಸಂಶೋಧನಾ ಪ್ರಬಂಧಕ್ಕೆ ಸಾಕಷ್ಟು ತಾಂತ್ರಿಕ ಸಲಹೆಗಳನ್ನು ಕೂಡ ನೀಡಿದ್ದಾರೆ.

ಅವರು ಇನ್ಫೋಸಿಸ್​ನಲ್ಲಿ ಕೆಲಸ ಮಾಡುತ್ತಾರೆ. ಕಳೆದ ಐದು ವರ್ಷಗಳಿಂದ ನನ್ನ ತಾಯಿ ಬನಶಂಕರಿ ಅವರಿಂದ ಪ್ರತಿದಿನ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಬರುವಂತೆ ನೋಡಿಕೊಳ್ಳುತ್ತಿದ್ದರು. ಅವರು ನಮ್ಮ ಬೆನ್ನೆಲುಬು ಎಂದು ಮಗ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:57 pm, Mon, 8 July 24

ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ