ನವ ಜೋಡಿ ಮಾಸ್ಕ್ ಧರಿಸಿದರೆ ಮಾತ್ರ ಗ್ರೂಪ್ ಫೋಟೋ ಅಂದ ಶಾಸಕ!
ದಾವಣಗೆರೆ: ಮದುವೆ ಮುಂಜಿ ಸಮಾರಂಭಗಳಿಗೆ ರಾಜಕೀಯ ನಾಯಕರು ಮತ್ತು ಸ್ಥಳೀಯ ಶಾಸಕರನ್ನು ಆಹ್ವಾನಿಸೋದು ಸಾಮಾನ್ಯ. ಅದರಂತೆಯೇ ರಾಜಕೀಯ ನಾಯಕರೂ ಇಂಥ ಸಮಾರಂಭಗಳಿಗೆ ಭೇಟಿ ಕೊಟ್ಟು ಶುಭ ಹಾರೈಸುವ ಮೂಲಕ ತಮ್ಮ ಮತದಾರರೊಂದಿಗೆ ಉತ್ತಮ ಸಂಬಂಧ ಉಳಿಸಿಕೊಳ್ಳುತ್ತಾರೆ. ನವಜೋಡಿಗೆ ಶಾಸಕ ಎಂ.ಪಿ. ರೇಣುಕಾಚಾರ್ಯ ವಿಭಿನ್ನ ಉಡುಗೊರೆ! ಆದರೆ ದಾವಣಗೆರೆಯ ಹೊನ್ನಾಳಿ ಕ್ಷೇತ್ರದ ಶಾಸಕರಾದ ಎಂ.ಪಿ. ರೇಣುಕಾಚಾರ್ಯ ನವಜೋಡಿಗಳಿಗೆ ಕೊಂಚ ವಿಭಿನ್ನವಾಗಿಯೇ ಶುಭ ಹಾರೈಸುತ್ತಿದ್ದಾರೆ. ಹೌದು, ಲಾಕ್ಡೌನ್ ನಂತರ ಮದುವೆ ಸಮಾರಂಭಗಳನ್ನು ನೆರವೇರಿಸಲು ಸರ್ಕಾರ ರಿಲೀಫ್ ಕೊಟ್ಟಿರೋದ್ರಿಂದ ಜಿಲ್ಲೆಯಲ್ಲೆಲ್ಲಾ ಈಗ […]
ದಾವಣಗೆರೆ: ಮದುವೆ ಮುಂಜಿ ಸಮಾರಂಭಗಳಿಗೆ ರಾಜಕೀಯ ನಾಯಕರು ಮತ್ತು ಸ್ಥಳೀಯ ಶಾಸಕರನ್ನು ಆಹ್ವಾನಿಸೋದು ಸಾಮಾನ್ಯ. ಅದರಂತೆಯೇ ರಾಜಕೀಯ ನಾಯಕರೂ ಇಂಥ ಸಮಾರಂಭಗಳಿಗೆ ಭೇಟಿ ಕೊಟ್ಟು ಶುಭ ಹಾರೈಸುವ ಮೂಲಕ ತಮ್ಮ ಮತದಾರರೊಂದಿಗೆ ಉತ್ತಮ ಸಂಬಂಧ ಉಳಿಸಿಕೊಳ್ಳುತ್ತಾರೆ.
ನವಜೋಡಿಗೆ ಶಾಸಕ ಎಂ.ಪಿ. ರೇಣುಕಾಚಾರ್ಯ ವಿಭಿನ್ನ ಉಡುಗೊರೆ! ಆದರೆ ದಾವಣಗೆರೆಯ ಹೊನ್ನಾಳಿ ಕ್ಷೇತ್ರದ ಶಾಸಕರಾದ ಎಂ.ಪಿ. ರೇಣುಕಾಚಾರ್ಯ ನವಜೋಡಿಗಳಿಗೆ ಕೊಂಚ ವಿಭಿನ್ನವಾಗಿಯೇ ಶುಭ ಹಾರೈಸುತ್ತಿದ್ದಾರೆ. ಹೌದು, ಲಾಕ್ಡೌನ್ ನಂತರ ಮದುವೆ ಸಮಾರಂಭಗಳನ್ನು ನೆರವೇರಿಸಲು ಸರ್ಕಾರ ರಿಲೀಫ್ ಕೊಟ್ಟಿರೋದ್ರಿಂದ ಜಿಲ್ಲೆಯಲ್ಲೆಲ್ಲಾ ಈಗ ಮದುವೆ ಸೀಜನ್.
ಅದರಂತೆಯೇ ತಮ್ಮನ್ನು ಆಹ್ವಾನಿಸಿದ ಮದುವೆಗಳಿಗೆ ಭೇಟಿ ನೀಡುತ್ತಿರುವ ರೇಣುಕಾಚಾರ್ಯ ವಧು-ವರರಿಗೆ ಮಾಸ್ಕನ್ನು ಉಡುಗೊರೆಯಾಗಿ ನೀಡಿ ಕೊರೊನಾ ಬಗ್ಗೆ ಜಾಗೃತಿಯನ್ನು ಸಹ ಮೂಡಿಸುತ್ತಿದ್ದಾರೆ. ಸದ್ಯಕ್ಕೆ ಸುಮಾರು 10ಕ್ಕೂ ಹೆಚ್ಚು ಮದುವೆಗಳಲ್ಲಿ ಭಾಗಿಯಾಗಿರುವ ರೇಣುಕಾಚಾರ್ಯ ಸಾಮಾಜಿಕ ಅಂತರವನ್ನು ಹೇಗೆ ಕಾದುಕೊಳ್ಳಬೇಕೆಂದು ಸಹ ತಿಳಿ ಹೇಳುವುದರ ಮೂಲಕ ನವಜೋಡಿಗೆ ಶುಭ ಹಾರೈಸುತ್ತಿದ್ದಾರೆ.
ನವಜೋಡಿ ಮಾಸ್ಕ್ ಧರಿಸಿದರೆ ಮಾತ್ರ ಗ್ರೂಪ್ ಫೋಟೋ ಅಂದ ಶಾಸಕ! ನಮ್ಮ ಜನರ ಅಸಡ್ಡೆ ಮನೋಭಾವವನ್ನ ಸೂಕ್ಷ್ಮವಾಗಿ ಗಮನಿಸಿರುವ ಶಾಸಕರು ವಧು-ವರರಿಬ್ಬರೂ ಪರಸ್ಪರ ಮಾಸ್ಕ್ ತೊಡಿಸಿದ ಮೇಲೆಯೇ ಗ್ರೂಪ್ ಫೋಟೋ ತೆಗೆಸಿಕೊಳ್ಳಲು ಮುಂದಾಗೋದು. ಹೀಗಾಗಿ ಈಗಿನ ಮಹಾಮಾರಿ ನಡುವೆ ಸುಖಿ ದಾಂಪತ್ಯಕ್ಕೆ ಬೇಕು ಎರಡು ಮಾಸ್ಕು ಎಂಬ ಸಂದೇಶವನ್ನು ರೇಣುಕಾಚಾರ್ಯ ಎಲ್ಲರಿಗೆ ನೀಡ್ತಿದ್ದಾರೆ.
Published On - 3:56 pm, Sun, 14 June 20