ಜಮೀನು ವಿಚಾರ: ಬಾಮೈದನ ಮೇಲೆ ಇಬ್ಬರು ಭಾವಂದಿರಿಂದ ಹಲ್ಲೆ, ಯಾವೂರಲ್ಲಿ?

ವ್ಯಕ್ತಿಯೊಬ್ಬನ ಮೇಲೆ ಆತನ ಇಬ್ಬರು ಭಾವಂದಿರಿಂದ ಹಲ್ಲೆ ನಡೆದಿರುವ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನ ಬಿಟ್ಟಸಂದ್ರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಳಿ ಪರಮೇಶ್ ಎಂಬಾತನ ಮೇಲೆ ಅತನ ಭಾವಂದಿರು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ.

  • TV9 Web Team
  • Published On - 23:15 PM, 17 Jan 2021
ಜಮೀನು ವಿಚಾರ: ಬಾಮೈದನ ಮೇಲೆ ಇಬ್ಬರು ಭಾವಂದಿರಿಂದ ಹಲ್ಲೆ, ಯಾವೂರಲ್ಲಿ?
ಬಾಮೈದನ ಮೇಲೆ ಇಬ್ಬರು ಭಾವಂದಿರಿಂದ ಹಲ್ಲೆಯ ದೃಶ್ಯಗಳು

ರಾಮನಗರ: ವ್ಯಕ್ತಿಯೊಬ್ಬನ ಮೇಲೆ ಆತನ ಇಬ್ಬರು ಭಾವಂದಿರಿಂದ ಹಲ್ಲೆ ನಡೆದಿರುವ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನ ಬಿಟ್ಟಸಂದ್ರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಳಿ ಪರಮೇಶ್ ಎಂಬಾತನ ಮೇಲೆ ಅತನ ಭಾವಂದಿರು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ.

ಸದ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಯಡೇಹಳ್ಳಿ ನಿವಾಸಿಯಾಗಿರುವ ಪರಮೇಶ್ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಪರಮೇಶ್​ ಮೇಲೆ ಆತನ ಭಾವಂದಿರಾದ ಧರಣೇಶ್ ಮತ್ತು ಷಡಕ್ಷರಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಜಮೀನು ವಿಚಾರವಾಗಿ ಬಾಮೈದನ ಮೇಲೆ ಭಾವಂದಿರಿಂದ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ. ಗಾಯಾಳು ಪರಮೇಶ್​ನನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೈಕ್​ಗೆ ಹಿಂದಿನಿಂದ ಕಾರ್​ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು