Shivamogga Blast ಶೋಧ ಕಾರ್ಯಾಚರಣೆ ಮುಕ್ತಾಯ, ಇದುವರೆಗೆ ಐದು ಮಂದಿ ಮೃತದೇಹಗಳು ಪತ್ತೆ
ದುರಂತ ನಡೆದ ಸ್ಥಳದಲ್ಲಿ ಶೋಧ ಕಾಱಚರಣೆ ಮುಕ್ತಾಯಗೊಂಡಿದೆ. ಇದುವರೆಗೆ ಐವರ ಮೃತದೇಹಗಳು ಪತ್ತೆಯಾಗಿದೆ ಈ ಬಗ್ಗೆ ಟಿವಿ9ಗೆ ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.

ಶಿವಮೊಗ್ಗ: ಜನವರಿ 21ರಂದು ರಾತ್ರಿ 10.30ರ ಸುಮಾರಿಗೆ ನಡೆದ ಭಾರಿ ಸ್ಫೋಟದಿಂದ ಇಡೀ ರಾಜ್ಯವೇ ಬೆಚ್ಚಿಬಿದ್ದಿದೆ. ಜಿಲೆಟಿನ್ ತುಂಬಿದ್ದ ಲಾರಿಯೊಂದು ಶಿವಮೊಗ್ಗದ ಹುಣಸೋಡು ಬಳಿಯಿರುವ ರೈಲ್ವೆ ಕ್ವಾರಿಯತ್ತ ತೆರಳುತ್ತಿತ್ತು. ಇನ್ನೇನು ಕ್ವಾರಿ ರೀಚ್ ಆಗ್ಬೇಕೆನ್ನುವಷ್ಟರಲ್ಲಿ ಲಾರಿ ಬ್ಲಾಸ್ಟ್ ಆಗಿದೆ. ಇದರ ತೀವ್ರತೆ ಎಷ್ಟಿತ್ತೆಂದರೆ ಲಾರಿಯಲ್ಲಿದ್ದ ಕಾರ್ಮಿಕರ ದೇಹಗಳು ಛಿದ್ರ ಛಿದ್ರವಾಗಿದೆ. ಮೃತ ದೇಹಗಳನ್ನು ಹುಡುಕುವುದೂ ಅಸಾಧ್ಯವಾಗಿದೆ.
ಸದ್ಯ ಈಗ ದುರಂತ ನಡೆದ ಸ್ಥಳದಲ್ಲಿ ವಿಧಿವಿಜ್ಞಾನ ತಜ್ಞರ ತಂಡದ ಶೋಧ ಕಾರ್ಯಾಚರಣೆ ಮುಕ್ತಾಯಗೊಂಡಿದೆ. ತನಿಖೆಗೆ ಬೇಕಿದ್ದ ಅವಶೇಷಗಳನ್ನು ಸಂಗ್ರಹಿಸಲಾಗಿದೆ. ಇದುವರೆಗೆ ಐವರ ಮೃತದೇಹಗಳು ಪತ್ತೆಯಾಗಿದೆ ಈ ಬಗ್ಗೆ ಟಿವಿ9ಗೆ ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.
ಇನ್ನು ಸ್ಫೋಟಕ ತುಂಬಿದ್ದ ಲಾರಿ ಎಲ್ಲಿಂದ ಬಂದಿತ್ತೆಂಬ ಬಗ್ಗೆ ತನಿಖೆ ನಡೆಸಿ ಪೊಲೀಸರು, ಎಫ್ಎಸ್ಎಲ್ ತಜ್ಞರು ವರದಿ ನೀಡುತ್ತಾರೆ. ಅಕ್ರಮ ಗಣಿಗಾರಿಕೆ ಸಂಬಂಧ ಈವರೆಗೆ ದೂರು ಬಂದಿಲ್ಲ. ಒಂದು ವೇಳೆ ದೂರು ಬಂದಿದ್ದರೆ ಕ್ರಮಕೈಗೊಳ್ಳುತ್ತಿದ್ದೆವು. ಸ್ಫೋಟಕ ವಸ್ತುಗಳು ಹೇಗೆ ಬಂತು ? 20 ಎಕರೆ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಗೆ ಲೈಸೆನ್ಸ್ ಇತ್ತಾ? ಎಂಬುದರ ಬಗ್ಗೆ ತನಿಖೆ ನಂತರವಷ್ಟೇ ಹೇಳಬಹುದು. ಸ್ಫೋಟ ದುರಂತ ಪ್ರಕರಣ ಸಂಬಂಧ ಮೂವರ ಬಂಧನವಾಗಿದೆ. ಗಣಿ ಪ್ರದೇಶದ ಮಾಲೀಕ ಅವಿನಾಶ್ ಕುಲಕರ್ಣಿ, ಕಲ್ಲು ಗಣಿಗಾರಿಕೆ ಗುತ್ತಿಗೆ ಪಡೆದಿದ್ದ ಸುಧಾಕರ್, ಕಲ್ಲು ಗಣಿಗಾರಿಕೆಗೆ ಮಧ್ಯಸ್ಥಿಕೆ ವಹಿಸಿದ್ದ ನರಸಿಂಹನನ್ನು ಬಂಧಿಸಿ ಶಿವಮೊಗ್ಗ ಗ್ರಾಮಾಂತರ ಪೊಲೀಸರಿಂದ ವಿಚಾರಣೆ ನಡೆಸಲಾಗುತ್ತಿದೆ ಎಂದು ಟಿವಿ9ಗೆ ಕೆ.ಬಿ.ಶಿವಕುಮಾರ್ ಮಾಹಿತಿ ನೀಡಿದ್ದಾರೆ.

Shivamogga Blast ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ
Published On - 2:33 pm, Fri, 22 January 21




