ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವಿಭಿನ್ನ ಕಥೆಯುಳ್ಳ ಬ್ರಹ್ಮಗಂಟು ಧಾರಾವಾಹಿ ಮೂಲಕ ಗುಂಡಮ್ಮನೆಂದೆ ಫೇಮಸ್ ಆದ ನಟಿ ಗೀತಾ ಭಾರತಿ ಭಟ್ ಅವರು ಈ ಬಾರಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಕೇವಲ ಕಿರುತೆರೆಯಲ್ಲದೆ, ಹಿರಿತರೆಯಲ್ಲೂ ಗೀತಾ ತಮ್ಮ ಛಾಪೂ ಮೂಡಿಸಿದ್ದಾರೆ. ಈತ್ತೀಚೆಗೆ ಬಿಡುಗಡೆಯಾಗಿ ಪ್ರೇಕ್ಷಕರ ಮನಗೆದ್ದ ಲವ್ ಮಾಕ್‌ಟೇಲ್ ಚಿತ್ರದಲ್ಲಿ ಗೀತಾ ಒಂದು ಚಿಕ್ಕ ಪಾತ್ರ ಮಾಡಿ ಮಿಂಚಿದ್ದರು. ಗೀತಾ ಬಿಗ್ ಬಾಸ್ ಕನ್ನಡ ಸೀಸನ್ 8 ಮನೆಗೆ 9ನೇ ಅಭ್ಯರ್ಥಿಯಾಗಿ ಆಗಮಿಸಿದ್ದಾರೆ.
ಬ್ರಹ್ಮಗಂಟು’ ಧಾರಾವಾಹಿಯ ಗೀತಾ ಪಾತ್ರದಲ್ಲಿ ಗೀತಾ ಭಾರತಿ ಭಟ್ ನಟಿಸುತ್ತಿದ್ದರು. ಈ ಕಾರ್ಕಳದ ಹುಡುಗಿ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ. ಸಂಗೀತದ ಮೇಲೆ ಹೆಚ್ಚು ಒಲವಿರುವ ಗೀತಾ ತಮ್ಮ ಮಧುರ ಧ್ವನಿಯಿಂದ ಕೇಳುಗರ ಕಿವಿ ಇಂಪಾಗಿಸುತ್ತಾರೆ. ಕಾಲೇಜು ನಂತರದಲ್ಲಿ ಇವರು ಇನ್ವೆಸ್ಟ್‌ಮೆಂಟ್ ಬ್ಯಾಕಿಂಗ್‌ನಲ್ಲಿ 2 ವರ್ಷ ಕೆಲಸ ಮಾಡಿದ್ದರಂತೆ. ಆದರೆ ಇದು ಇಷ್ಟವಾಗದೆ ಇದ್ದಕ್ಕಿದ್ದಂತೆ ಕೆಲಸ ಬಿಟ್ಟರಂತೆ ಗೀತಾ.
ಗೀತಾ ಚಿಕ್ಕ ವಯಸ್ಸಿನಲ್ಲಿದ್ದಾಗ ಬಾಸ್ಕೆಟ್ ಬಾಲ್ ಆಡುತ್ತಿದ್ದರು. ಆಗ ಕಾಲು ಜಾರಿ ಬಿದ್ದರಂತೆ. ತದನಂತರದಲ್ಲಿ ವೈದ್ಯರು ಆಪರೇಶನ್ ಮಾಡಿದ್ದಾರೆ. ನಾಲ್ಕು ತಿಂಗಳು ಬೆಡ್ ಮೇಲಿದ್ದ ಗೀತಾ ತೂಕ ಇನ್ನಷ್ಟು ಜಾಸ್ತಿಯಾಯ್ತು. ನಮ್ಮನ್ನು ನಾವು ಪ್ರೀತಿಸಿದರೆ ಬೇರೆಯವರು ನಮ್ಮನ್ನು ಪ್ರೀತಿಸುತ್ತಾರೆ. ಜೀವನವನ್ನು ಪ್ರೀತಿಸಬೇಕು. ಆಗ ಎಲ್ಲವೂ ಪಾಸಿಟಿವ್ ಆಗಿ ಕಾಣತ್ತೆ, ಬೇರೆಯವರ ವ್ಯಂಗ್ಯ, ಟೀಕೆಗಳಿಗೆ ಕಿವಿಕೊಡಬಾರದು ಎಂಬುದು ಗೀತಾ ಭಾರತಿ ಭಟ್ ಅವರ ಸಂತೋಷದ ಮಂತ್ರ.
ಬಿಗ್ ಬಾಸ್ ವೀಕ್ಷಣೆ ಮಾಡೋದು ಎಲ್ಲಿ? ಭಾನುವಾರ ಸಂಜೆ 6 ಗಂಟೆಗೆ ಬಿಗ್ ಬಾಸ್ 8ಕ್ಕೆ ಅದ್ದೂರಿಯಾಗಿ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಪ್ರತಿ ದಿನ ರಾತ್ರಿ 9:30ರಿಂದ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರವಾಗಲಿದೆ. ಬಿಗ್ ಬಾಸ್ ಎಲ್ಲಿ ವೀಕ್ಷಣೆ ಮಾಡಬೇಕು ಎನ್ನುವುದು ಅನೇಕರ ಪ್ರಶ್ನೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ 8 ಪ್ರಸಾರವಾಗುತ್ತದೆ. ಆನ್ಲೈನ್ನಲ್ಲಿ ಬಿಗ್ ಬಾಸ್ ನೋಡಬೇಕು ಎಂದಾದರೆ ನೀವು ವೂಟ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಜಿಯೋ ಟಿವಿಯಲ್ಲಿ ಕೂಡ ನೀವು ಬಿಗ್ ಬಾಸ್ ವೀಕ್ಷಣೆ ಮಾಡಬಹುದಾಗಿದೆ. ಜಿಯೋ ಟಿವಿಗೆ ತೆರಳಿ ಕಲರ್ಸ್ ಕನ್ನಡ ಎಂದು ಸರ್ಚ್ ಮಾಡಿದರೆ ಕಲರ್ಸ್ ಕನ್ನಡ ವಾಹಿನಿ ಸಿಗಲಿದೆ. ಅದರಲ್ಲಿ ನೀವು ಬಿಗ್ ಬಾಸ್ ವೀಕ್ಷಿಸಬಹುದು.
ಇದನ್ನೂ ಓದಿ: Shankar Ashwath Profile: ಚಾಮಯ್ಯ ಮೇಸ್ಟ್ರ ಮಗ ಶಂಕರ್ ಅಶ್ವಥ್ ಬಿಗ್ ಬಾಸ್ ಮನೆಯ ಹಿರಿಯ ಅಭ್ಯರ್ಥಿ
Bigg Boss Kannada 8 Launch LIVE Updates: ಐದನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ ವೈಷ್ಣವಿ ಗೌಡ