ಸರ್ಕಾರಿ ಹಣ ದುರುಪಯೋಗ: 2 ಕೋಟಿ ರೂ. ಹಿಂದಿರುಗಿಸಲು ಸಹಾಯಕನಿಗೆ ಕೋರ್ಟ್ ಆದೇಶ
ಚಿಕ್ಕಮಗಳೂರು: ಮೇಲಧಿಕಾರಿಯ ಸಹಿ ನಕಲು ಮಾಡಿ ಸರ್ಕಾರಿ ಹಣವನ್ನು ದುರುಪಯೋಗ ಮಾಡಿದ್ದ ಆರೋಪಿಗೆ ನ್ಯಾಯಾಲಯವು 2 ವರ್ಷ ಶಿಕ್ಷೆಯ ಜೊತೆಗೆ ಸರ್ಕಾರಕ್ಕೆ 2 ಕೋಟಿ ರೂಪಾಯಿ ಹಿಂದಿರುಗಿಸುವಂತೆ ಆದೇಶ ನೀಡಿದೆ. ಜಿಲ್ಲೆಯ ತರೀಕೆರೆಯ ಅರಣ್ಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದ ಮೋಹನ್ ಕುಮಾರ್ 2009ರಲ್ಲಿ ತನ್ನ ಮೇಲಧಿಕಾರಿಯ ಸಹಿ ನಕಲು ಮಾಡಿ 1 ಕೋಟಿಗೂ ಹೆಚ್ಚು ಸರ್ಕಾರಿ ಹಣವನ್ನು ದುರುಪಯೋಗ ಮಾಡಿದ್ದ. ಈ ಹಿನ್ನೆಲೆಯಲ್ಲಿ ಸುಧೀರ್ಘ ವಿಚಾರಣೆ ನಡೆಸಿದ ತರೀಕೆರೆ JMFC ನ್ಯಾಯಾಲಯವು ಆರೋಪಿ ಮೋಹನ್ ಕುಮಾರ್ಗೆ […]

ಚಿಕ್ಕಮಗಳೂರು: ಮೇಲಧಿಕಾರಿಯ ಸಹಿ ನಕಲು ಮಾಡಿ ಸರ್ಕಾರಿ ಹಣವನ್ನು ದುರುಪಯೋಗ ಮಾಡಿದ್ದ ಆರೋಪಿಗೆ ನ್ಯಾಯಾಲಯವು 2 ವರ್ಷ ಶಿಕ್ಷೆಯ ಜೊತೆಗೆ ಸರ್ಕಾರಕ್ಕೆ 2 ಕೋಟಿ ರೂಪಾಯಿ ಹಿಂದಿರುಗಿಸುವಂತೆ ಆದೇಶ ನೀಡಿದೆ.
ಜಿಲ್ಲೆಯ ತರೀಕೆರೆಯ ಅರಣ್ಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದ ಮೋಹನ್ ಕುಮಾರ್ 2009ರಲ್ಲಿ ತನ್ನ ಮೇಲಧಿಕಾರಿಯ ಸಹಿ ನಕಲು ಮಾಡಿ 1 ಕೋಟಿಗೂ ಹೆಚ್ಚು ಸರ್ಕಾರಿ ಹಣವನ್ನು ದುರುಪಯೋಗ ಮಾಡಿದ್ದ.
ಈ ಹಿನ್ನೆಲೆಯಲ್ಲಿ ಸುಧೀರ್ಘ ವಿಚಾರಣೆ ನಡೆಸಿದ ತರೀಕೆರೆ JMFC ನ್ಯಾಯಾಲಯವು ಆರೋಪಿ ಮೋಹನ್ ಕುಮಾರ್ಗೆ 2 ವರ್ಷ ಶಿಕ್ಷೆ ವಿಧಿಸುವ ಜೊತೆಗೆ ಸರ್ಕಾರಕ್ಕೆ 2 ಕೋಟಿ ರೂಪಾಯಿ ಮೊತ್ತ ಹಿಂದಿರುಗಿಸುವಂತೆ ಆದೇಶ ಹೊರಡಿಸಿದೆ.




