ಸಿಎಂ ಯಡಿಯೂರಪ್ಪರಿಂದ ರಾಜ್ಯದ ಮೊದಲ RO-RO ರೈಲು ಉದ್ಘಾಟನೆ
[lazy-load-videos-and-sticky-control id=”NzrIsPfSyvw”] ನೆಲಮಂಗಲ: ರಾಜ್ಯದ ಮೊದಲ ರೋ ರೋ (ರೋಲ್ ಆನ್ ರೋಲ್ ಆಫ್) ರೈಲು ಯೋಜನೆ ಇಂದಿನಿಂದ ಕಾರ್ಯಾರಂಭವಾಗಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಉದ್ಘಾಟನೆ ಮಾಡಿದ್ದು ಇಂದಿನಿಂದ ಸೇವೆಗೆ ಲಭ್ಯವಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದ ರೈಲು ನಿಲ್ದಾಣದಿಂದ ಪ್ರಾಯೋಗಿಕವಾಗಿ ಮಹಾರಾಷ್ಟ್ರಾದ ಸೊಲ್ಲಾಪುರಕ್ಕೆ ಮೊದಲ ರೈಲು ಪ್ರಯಾಣ ಬೆಳೆಸಿದೆ. ಸಿಎಂ ತಮ್ಮ ಗೃಹಕಚೇರಿ ಕೃಷ್ಣದಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ರೈಲು ಯೋಜನೆಗೆ ಹಸಿರು ನಿಶಾನೆ ತೋರಿಸಿದ್ದಾರೆ. ಇನ್ನೂ ರೈಲಿನ ಮೇಲೆ ಲಾರಿಗಳನ್ನ ಸಾಗಿಸುವ ಯೋಜನೆ […]
[lazy-load-videos-and-sticky-control id=”NzrIsPfSyvw”]
ನೆಲಮಂಗಲ: ರಾಜ್ಯದ ಮೊದಲ ರೋ ರೋ (ರೋಲ್ ಆನ್ ರೋಲ್ ಆಫ್) ರೈಲು ಯೋಜನೆ ಇಂದಿನಿಂದ ಕಾರ್ಯಾರಂಭವಾಗಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಉದ್ಘಾಟನೆ ಮಾಡಿದ್ದು ಇಂದಿನಿಂದ ಸೇವೆಗೆ ಲಭ್ಯವಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದ ರೈಲು ನಿಲ್ದಾಣದಿಂದ ಪ್ರಾಯೋಗಿಕವಾಗಿ ಮಹಾರಾಷ್ಟ್ರಾದ ಸೊಲ್ಲಾಪುರಕ್ಕೆ ಮೊದಲ ರೈಲು ಪ್ರಯಾಣ ಬೆಳೆಸಿದೆ. ಸಿಎಂ ತಮ್ಮ ಗೃಹಕಚೇರಿ ಕೃಷ್ಣದಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ರೈಲು ಯೋಜನೆಗೆ ಹಸಿರು ನಿಶಾನೆ ತೋರಿಸಿದ್ದಾರೆ.
ಇನ್ನೂ ರೈಲಿನ ಮೇಲೆ ಲಾರಿಗಳನ್ನ ಸಾಗಿಸುವ ಯೋಜನೆ ಇದಾಗಿದ್ದು, ಸರಕು ಸಾಗಾಣಿಕೆಗಳ ಸಂಚಾರಕ್ಕೆ ತಗುಲುವ ವೆಚ್ಚವನ್ನ ಇಳಿಸಬಹುದಾಗಿದೆ. ಈಗಾಗಲೇ ಕೇರಳ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಈ ಯೋಜನೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಇಂದಿನಿಂದ ನೆಲಮಂಗಲದಿಂದ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಸೇವೆ ಆರಂಭವಾಗಿದೆ.
ಪ್ರಾಥಮಿಕವಾಗಿ 42 ಲಾರಿಗಳನ್ನ ಹೊತ್ತೊಯ್ಯುವ ಸಾಮರ್ಥ್ಯದ ಬೋಗಿ ಸಿದ್ದಪಡಿಸಿದ್ದು ಮುಂದಿನ ದಿನಗಳಲ್ಲಿ ಅಗತ್ಯತೆಗೆ ತಕ್ಕಂತೆ ಬೋಗಿಗಳ ಸಂಖ್ಯೆಯನ್ನ ಹೆಚ್ಚಳ ಮಾಡಲಾಗುವುದು ಎಂದು ತಿಳಿದು ಬಂದಿದೆ. ರೋ-ರೋ ರೈಲು ಒಂದು ಟ್ರಿಪ್‌ನಲ್ಲಿ 42 ಲಾರಿಗಳನ್ನ ಕೊಂಡೊಯ್ಯುವ ಸಾಮಾರ್ಥ್ಯವಿದ್ದು 1260 ಮೆಟ್ರಿಕ್ ಟನ್‌ಗಳ ತೂಕದೊಂದಿಗೆ 682 ಕಿಲೋ ಮೀಟರ್ ದೂರವನ್ನ ಕ್ರಮಿಸುತ್ತದೆ. ಅನುಕೂಲಕರ, ಮಿತವ್ಯಯ, ಸಮಸ್ಯೆ ರಹಿತ ಹಾಗೂ ಪರಿಸರ ಸ್ನೇಹಿ ಸಾರಿಗೆ ವಿಧಾನ ಇದಾಗಿದೆ. ಲೋಡ್ ಹಾಗೂ ಅನ್ಲೋಡ್ ಮಾಡಲು 3 ಗಂಟೆಗಳ ಕಾಲ ಮುಕ್ತ ಸಮಯಾವಕಾಶ ಕಲ್ಪಿಸಲಾಗಿದೆ. ರೋ-ರೋ ಯೋಜನೆಯಿಂದ ಈಗಾಗಲೆ ಕೃಷಿ, ಕೈಗಾರಿಕಾ ಹಾಗೂ ರಾಸಾಯನಿಕ ಕ್ಷೇತ್ರಗಳು ಇದರ ಪ್ರಯೋಜನ ಪಡೆದುಕೊಂಡಿವೆ.
ಈ ಯೋಜನೆಯಿಂದ ಆಪರೇಷನ್ ಗ್ರೀನ್‌ನಂತಹ ಸರ್ಕಾರದ ಉಪಕ್ರಮಗಳಿಗೆ ಉತ್ತೇಜನ ನೀಡುತ್ತದೆ ಹಾಗೂ ರೈತರಿಗೆ ಅನುಕೂಕವಾಗುತ್ತದೆ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದ ಕೃಷಿ ಉತ್ಪಾದಿಸುವ ಪ್ರದೇಶಗಳು ಮತ್ತು ಕೃಷಿ ಬಳಕೆ ಕೇಂದ್ರಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ.ಒಟ್ಟಾರೆ ರಾಜ್ಯದಲ್ಲಿ ಕಾರ್ಯಾರಂಭಗೊಂಡ ರೋ-ರೋ ರೈಲು ಯೋಜನೆ ಬೆಂಗಳೂರು ಹಾಗೂ ಸುತ್ತಮುತ್ತಲಿನ ರಾಜ್ಯದ ಸರಕು ಸಾಗಾಣಿಕ ವಾಹನಗಳಿಗೆ ಅನುಕೂಲವಾಗಬೇಕಿದೆ.
ಇದನ್ನೂ ಓದಿ: ನೆಲಮಂಗಲದಿಂದ ಮಹಾರಾಷ್ಟ್ರದತ್ತ ರೊಯ್ಯನೆ ಹೊರಟಿರುವ ರೋ ರೋ ರೈಲು ವಿಶೇಷತೆ ಏನು ಗೊತ್ತಾ?
Published On - 11:22 am, Sun, 30 August 20