ಕ್ರಿಮಿನಲ್ ಮೊಕದ್ದಮೆ: ‘ಕೈ’ ಏಜೆಂಟರನ್ನು ಬೂತ್ನಿಂದ ಹೊರಹಾಕಿದ SI
ಚಿಕ್ಕಬಳ್ಳಾಪುರ: ರೆಡ್ಡಿಗೊಲ್ಲರಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಕಾಂಗ್ರೆಸ್ ಏಜೆಂಟರನ್ನು ಪೊಲೀಸರು ಹೊರಹಾಕಿದ್ದಾರೆ. ಏಜೆಂಟರ ಮೇಲೆ ಕ್ರಿಮಿನಲ್ ಮೊಕದ್ದಮೆ ಇದೆ ಎನ್ನುವ ನೆಪ ಹೇಳಿ ಹೊರಹಾಕಿದ್ದಾರೆಂದು ಆರೋಪಿಸಿದ್ದಾರೆ. ಈ ಮೂಲಕ ಚುನಾವಣಾ ಆಯೋಗದ ನಿಯಮಕ್ಕೆ ವಿರುದ್ಧವಾಗಿ ಪೊಲೀಸರು ನಡೆದುಕೊಂಡಿದ್ದಾರೆ ಎನ್ನಲಾಗಿದೆ. ಕ್ರಿಮಿನಲ್ ಮೊಕದ್ದಮೆ ಇರುವವರು ಏಜೆಂಟ್ ಆಗಬಾರದು ಎನ್ನುವ ನಿಯಮವಿಲ್ಲ. ಆದ್ರೂ ನೆಪ ಹೇಳಿ ಕಾಂಗ್ರೆಸ್ ಏಜೆಂಟ್ ಬಿ.ಎ.ಚೇತನ್ ಕುಮಾರ್ರನ್ನು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಎಸ್ಪಿ ಚೇತನ್ ಗೌಡ ಹೊರಹಾಕಿದ್ದಾರೆ. ಪೊಲೀಸರ ಕ್ರಮದಿಂದ ಮತಗಟ್ಟೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು. […]
ಚಿಕ್ಕಬಳ್ಳಾಪುರ: ರೆಡ್ಡಿಗೊಲ್ಲರಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಕಾಂಗ್ರೆಸ್ ಏಜೆಂಟರನ್ನು ಪೊಲೀಸರು ಹೊರಹಾಕಿದ್ದಾರೆ. ಏಜೆಂಟರ ಮೇಲೆ ಕ್ರಿಮಿನಲ್ ಮೊಕದ್ದಮೆ ಇದೆ ಎನ್ನುವ ನೆಪ ಹೇಳಿ ಹೊರಹಾಕಿದ್ದಾರೆಂದು ಆರೋಪಿಸಿದ್ದಾರೆ. ಈ ಮೂಲಕ ಚುನಾವಣಾ ಆಯೋಗದ ನಿಯಮಕ್ಕೆ ವಿರುದ್ಧವಾಗಿ ಪೊಲೀಸರು ನಡೆದುಕೊಂಡಿದ್ದಾರೆ ಎನ್ನಲಾಗಿದೆ.
ಕ್ರಿಮಿನಲ್ ಮೊಕದ್ದಮೆ ಇರುವವರು ಏಜೆಂಟ್ ಆಗಬಾರದು ಎನ್ನುವ ನಿಯಮವಿಲ್ಲ. ಆದ್ರೂ ನೆಪ ಹೇಳಿ ಕಾಂಗ್ರೆಸ್ ಏಜೆಂಟ್ ಬಿ.ಎ.ಚೇತನ್ ಕುಮಾರ್ರನ್ನು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಎಸ್ಪಿ ಚೇತನ್ ಗೌಡ ಹೊರಹಾಕಿದ್ದಾರೆ. ಪೊಲೀಸರ ಕ್ರಮದಿಂದ ಮತಗಟ್ಟೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು. ಬಳಿಕ ಸ್ಥಳಕ್ಕೆ ಬಂದ ಎಸ್ಪಿ ಅಭಿನವ್ ಖರೆ, ಕಾಂಗ್ರೆಸ್ ಏಜೆಂಟ್ ಚೇತನ್ಗೆ ಮರು ಅವಕಾಶ ಮಾಡಿಕೊಟ್ಟಿದ್ದಾರೆ.
Published On - 10:43 am, Thu, 5 December 19