ಗ್ರಾ.ಪಂ. ಚುನಾವಣೆಗೆ ಭರ್ಜರಿ ತಯಾರಿ: ಜ. 2-3ರಂದು BJP ರಾಜ್ಯ ಕಾರ್ಯಕಾರಿಣಿ ಸಭೆ
BJP ಜೊತೆಗೆ JDS ವಿಲೀನ ಆ ಪಕ್ಷಕ್ಕೆ ಬಿಟ್ಟದ್ದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದರು. ಆದ್ರೆ ಈತನಕ ಜೆಡಿಎಸ್‌ನೊಂದಿಗೆ ವಿಲೀನದ ಪ್ರಸ್ತಾಪವಾಗಿಲ್ಲ ಎಂದು ಸಹ ಹೇಳಿದರು. ಜೊತೆಗೆ, ‘ಕೈ’, ಮುಸ್ಲಿಂ ಲೀಗ್ ಹೊರತುಪಡಿಸಿ ಬೇರೆ ಪಕ್ಷಗಳೊಂದಿಗೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳುತ್ತೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದರು.
ಶಿವಮೊಗ್ಗ: BJP ಜೊತೆಗೆ JDS ವಿಲೀನ ಆ ಪಕ್ಷಕ್ಕೆ ಬಿಟ್ಟದ್ದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದರು. ಆದ್ರೆ ಈತನಕ ಜೆಡಿಎಸ್‌ನೊಂದಿಗೆ ವಿಲೀನದ ಪ್ರಸ್ತಾಪವಾಗಿಲ್ಲ ಎಂದೂ ಸಹ ಹೇಳಿದರು. ಜೊತೆಗೆ ಕಾಂಗ್ರೆಸ್, ಮುಸ್ಲಿಂ ಲೀಗ್ ಹೊರತುಪಡಿಸಿ ಬೇರೆ ಪಕ್ಷಗಳೊಂದಿಗೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳುತ್ತೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಜನವರಿ 2 ಮತ್ತು 3 ರಂದು ನಡೆಯಲಿದೆ. ಜನವರಿ 2 ರಂದು ಕಾರ್ಯಕಾರಿಣಿ ಸಭೆ ಹಾಗೂ ಜನವರಿ 3 ರಂದು ಕೋರ್ ಕಮಿಟಿ ಸಭೆ ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮತ್ತಿತರರು ಭಾಗವಹಿಸಲಿದ್ದು ಕಾರ್ಯಕ್ರಮವನ್ನು ಸಿಎಂ ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ ಎಂದು ಈಶ್ವರಪ್ಪ ಹೇಳಿದರು.
‘ಕಾರ್ಯಕಾರಿಣಿ ಸಭೆ ರಾಜ್ಯದ ರಾಜಕೀಯಕ್ಕೆ ಹೊಸ ತಿರುವು ನೀಡಲಿದೆ’ ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿರುವ ಶೇ. 80 ರಷ್ಟು ಅಭ್ಯರ್ಥಿಗಳು ಬಿಜೆಪಿ ಬೆಂಬಲಿತರಾಗಿದ್ದಾರೆ. ಇಡೀ ರಾಜ್ಯದ ಮತದಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆ ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಡೆಯುತ್ತಿರುವ ಕಾರ್ಯಕಾರಿಣಿ ಸಭೆ ರಾಜ್ಯದ ರಾಜಕೀಯಕ್ಕೆ ಹೊಸ ತಿರುವು ನೀಡಲಿದ್ದು ಕಾರ್ಯಕರ್ತರಿಗೆ ಸ್ಫೂರ್ತಿ ಸಹ ಕೊಡಲಿದೆ ಎಂದು ಹೇಳಿದರು.
ನಗರದಲ್ಲಿ ಜ. 2 ಮತ್ತು 3 ರಂದು ರಾಜ್ಯ ಕಾರ್ಯಕಾರಣಿ ಸಭೆ ನಡೆಯುವ ಹಿನ್ನಲೆ ಯಲ್ಲಿ ರವೀಂದ್ರ ನಗರದ ಗಣಪತಿ ದೇವಸ್ಥಾನದಲ್ಲಿ ಸಂಸದ ಬಿ.ವೈ ರಾಘವೇಂದ್ರ ಮತ್ತು ಸಚಿವ ಈಶ್ವರಪ್ಪರಿಂದ ವಿಶೇಷ ಪೂಜೆ ಕಾರ್ಯ ನೆರವೇರಿತು. ಜೊತೆಗೆ, ಇಬ್ಬರು ಮುಖಂಡರಿಂದ ರಾಜ್ಯ ವಿಶೇಷ ಸಭೆಯ ಪೂರ್ವಸಿದ್ಧತಾ ಕಾರ್ಯಾಲಯದ ಉದ್ಘಾಟನೆ ಸಹ ಆಯ್ತು. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಮನ್ಕಿ ಬಾತ್ ವಿರೋಧಿಸಿ ಚಪ್ಪಾಳೆ ತಟ್ಟಿ: ಭಾರತೀಯ ಕಿಸಾನ್ ಯೂನಿಯನ್ ಕರೆ