ದಾವಣಗೆರೆ: ಸದ್ಯಕ್ಕೆ ನಾನು ದೆಹಲಿಗೆ ಹೋಗುವುದಿಲ್ಲ. ಬೆಂಗಳೂರಿನಲ್ಲಿ ನಾಳೆ ಕೆಲವು ಶಾಸಕರ ಜೊತೆ ಸಭೆ ನಡೆಸುವೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಯಾವುದೇ ರೆಸಾರ್ಟ್ ಅಥವಾ ಫೈವ್ ಸ್ಟಾರ್ ಹೋಟೆಲ್ಗೆ ಹೋಗಲ್ಲ. ಈ ಹಿಂದೆ ಮಾಡಿದ್ದ ತಪ್ಪನ್ನು ಮಾಡಲ್ಲ. ಆದರೆ, ಕದ್ದುಮುಚ್ಚಿ ದೆಹಲಿಗೆ ಹೋಗಲ್ಲ, ಎಲ್ಲರಿಗೂ ತಿಳಿಸಿ ಹೋಗ್ತೇವೆ ಎಂದು ರೇಣುಕಾಚಾರ್ಯ ಹೇಳಿದರು.
ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಶಾಸಕ ಸರ್ಕಾರ ಬರಲು 9 ಕೋಟಿ ಹಣ ಖರ್ಚು ಮಾಡಿದ್ದಾನಂತೆ. ಈ ಬಗ್ಗೆ ಮಾಧ್ಯಮಗಳಿಗೆ ದಾಖಲೆ ಬಿಡುಗಡೆ ಮಾಡುವುದಿಲ್ಲ. ನೇರವಾಗಿ ಪಕ್ಷದ ವರಿಷ್ಠರಿಗೆ ದಾಖಲೆ ನೀಡುವೆ. ನಾನು ಪಲಾಯನವಾದಿಯಲ್ಲ, ಮಾಧ್ಯಮಗಳಿಗೂ ನೀಡುವೆ ಅಂತಾ ಹೇಳಿದರು.
ಈ ಹಿಂದೆ ಮಾಡಿದಂತೆ ರೆಸಾರ್ಟ್ ರಾಜಕೀಯ ಮಾಡಲ್ಲ. ಜೀವನದಲ್ಲಿ ಒಮ್ಮೆ ತಪ್ಪುಮಾಡಿದೆ, ಇನ್ಮುಂದೆ ಹಾಗೆ ಮಾಡಲ್ಲ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನಿನ್ನೆ ಸಿಡಿಮಿಡಿ.. ಇಂದು ಚಕ್ಕಡಿ ಓಡಿಸಿ ಸುಗ್ಗಿ ಆಚರಿಸಿದ ಹೊನ್ನಾಳಿ ಹೋರಿ!