ಹೆದ್ದಾರಿ, ಬೆಂಗಳೂರು ರಸ್ತೆಗಳಲ್ಲಿ ವಾಹನ ಸಂಚಾರ ಎಂದಿನಂತೆ ಸಹಜ
ಬೆಂಗಳೂರು: ಎಪಿಎಂಸಿ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ರೈತರು ನಿರ್ಧರಿಸಿದ್ದರು. ಆದರೆ ಪ್ರತಿಭಟನೆ ಬಿಸಿ ವಾಹನ ಸವಾರರಿಗೆ ತಟ್ಟಿಲ್ಲ. ಬಹುತೇಕ ಕಡೆ ಎಂದಿನಂತೆ ವಾಹನಗಳು ಸಂಚರಿಸುತ್ತಿವೆ. ಕೆಲ ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ರಸ್ತೆ ತಡೆಯ ಬಗ್ಗೆ ಮೊದಲೇ ಟ್ರಾಫಿಕ್ ಪೊಲೀಸರ ಮುನ್ನೆಚ್ಚರಿಕೆ ಕ್ರಮಕೈಗೊಂಡಿದ್ರು. ಹೀಗಾಗಿ ಪ್ರತಿಭಟನೆ ನೆಡೆಯುವ ಸ್ಥಳದ ರಸ್ತೆಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿತ್ತು. ಪ್ರತಭಟನಾಕಾರರಿಗೆ ರಸ್ತೆ ತಡೆಗೂ ಅವಕಾಶವಿತ್ತು. ಆದರೆ ಹೆಚ್ಚು ಕಾಲ ರಸ್ತೆ ತಡೆಗೆ ಅವಕಾಶ […]
ಬೆಂಗಳೂರು: ಎಪಿಎಂಸಿ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ರೈತರು ನಿರ್ಧರಿಸಿದ್ದರು. ಆದರೆ ಪ್ರತಿಭಟನೆ ಬಿಸಿ ವಾಹನ ಸವಾರರಿಗೆ ತಟ್ಟಿಲ್ಲ. ಬಹುತೇಕ ಕಡೆ ಎಂದಿನಂತೆ ವಾಹನಗಳು ಸಂಚರಿಸುತ್ತಿವೆ. ಕೆಲ ಕಡೆ ಪ್ರತಿಭಟನೆಗಳು ನಡೆಯುತ್ತಿವೆ.
ರಸ್ತೆ ತಡೆಯ ಬಗ್ಗೆ ಮೊದಲೇ ಟ್ರಾಫಿಕ್ ಪೊಲೀಸರ ಮುನ್ನೆಚ್ಚರಿಕೆ ಕ್ರಮಕೈಗೊಂಡಿದ್ರು. ಹೀಗಾಗಿ ಪ್ರತಿಭಟನೆ ನೆಡೆಯುವ ಸ್ಥಳದ ರಸ್ತೆಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿತ್ತು. ಪ್ರತಭಟನಾಕಾರರಿಗೆ ರಸ್ತೆ ತಡೆಗೂ ಅವಕಾಶವಿತ್ತು. ಆದರೆ ಹೆಚ್ಚು ಕಾಲ ರಸ್ತೆ ತಡೆಗೆ ಅವಕಾಶ ನೀಡದೆ ಪೊಲೀಸರು ಸಂಚಾರದಲ್ಲಿ ವ್ಯತ್ಯಯವಾಗದಂತೆ ನಿರ್ವಹಣೆ ಮಾಡಿದ್ದಾರೆ.
ಬೆಂಗಳೂರು ನಗರದ ಕೆಲವೆಡೆ ಮಾತ್ರ ರೈತರಿಂದ ಪ್ರತಿಭಟನೆ ನಡೆಯುತ್ತಿದೆ. ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಕಾಣಿಸುತ್ತಿಲ್ಲ. ನಗರದ ಬಳ್ಳಾರಿ ರಸ್ತೆ, ತುಮಕೂರು ರಸ್ತೆ, ಮೈಸೂರು ರಸ್ತೆ, ಹೊಸೂರು ರಸ್ತೆ, ಕನಕಪುರ ರಸ್ತೆಯಲ್ಲಿ ಟ್ರಾಫಿಕ್ ಕಂಡು ಬಂದಿಲ್ಲ. ಸದ್ಯಕ್ಕೆ ಬೆಂಗಳೂರು ನಗರದಲ್ಲಿ ಎಂದಿನಂತೆ ವಾಹನ ಸಂಚಾರ ಸುಗಮವಾಗಿ ಸಾಗುತ್ತಿದೆ.
ನಗರದ ಯಾವ ಭಾಗದಲ್ಲೂ ಸದ್ಯಕ್ಕೆ ಟ್ರಾಫಿಕ್ ಎಫೆಕ್ಟ್ ಇಲ್ಲ. 11 ಗಂಟೆ ನಂತರ ಪ್ರತಿಭಟನೆ ಸ್ಥಳಕ್ಕೆ ರೈತರು ಆಗಮಿಸಿ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಇನ್ನು ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ವಾಹನಗಳು ಯಥಾ ರೀತಿಯಲ್ಲಿ ಸಾಗುತ್ತಿವೆ. ಬೆಂಗಳೂರಿನ 8ನೇ ಮೈಲಿ ನವಯುಗ ಟೋಲ್ ಹೆದ್ದಾರಿಯಲ್ಲಿ ಸದ್ಯ ಯಾವುದೇ ತಡೆ ಇಲ್ಲ. ಇಂದಿನ ರೈತರ ಪ್ರತಿಭಟನೆಗೆ ವ್ಯರ್ಥವಾಗಿದೆ.