ರಣಭೂಮಿಯಾದ ರುದ್ರಭೂಮಿ: ಸೋಂಕಿತರ ಶವಸಂಸ್ಕಾರಕ್ಕೆ ಸ್ಥಳೀಯರಿಂದ ಭಾರಿ ವಿರೋಧ
ಹಾಸನ: ನಗರದಲ್ಲಿ ಮೃತ ಸೋಂಕಿತರ ಶವಸಂಸ್ಕಾರಕ್ಕೂ ಸಂಕಷ್ಟ ಎದುರಾಗಿದೆ. ನಿತ್ಯ ಮೃತಪಡುತ್ತಿರುವ ಸೋಂಕಿತರ ಹತ್ತಾರು ಶವಸಂಸ್ಕಾರದಿಂದ ಸ್ಥಳೀಯರಿಗೆ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸ್ಥಳೀಯರು ಪ್ರತಿಭಟನೆಗೆ ಮುಂದಾದರು. ಕೂಡಲೇ ಚಿತಾಗಾರವನ್ನು ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ. ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿಯಿರುವ ಸ್ಮಶಾನದಲ್ಲಿ ನಿತ್ಯ ಹತ್ತಾರು ಶವಗಳನ್ನ ಸುಡುವುದರಿಂದ ಹೊಗೆ ಆವರಿಸುತ್ತಿದೆ. ಮರದ ಕಟ್ಟಿಗೆಯಿಂದ ಶವಗಳನ್ನ ಸುಡುವುದರಿಂದ ಸ್ಮಶಾನದ ಸುತ್ತಮುತ್ತಲಿನ ಮನೆಗಳಿಗೆ ಹೊಗೆ ಆವರಿಸುತ್ತಿದೆ. ಹೊಗೆಯಿಂದಾಗಿ ಮಕ್ಕಳು ಮತ್ತು ವೃದ್ಧರು ಮನೆಯಿಂದ ಹೊರಬರಲಾಗದೆ ಕಿರಿಕಿರಿ ಅನುಭವಿಸುತ್ತಿದ್ದಾರೆ. ಕೊರೊನಾದಿಂದ ಜಿಲ್ಲೆಯಲ್ಲಿ […]

ಹಾಸನ: ನಗರದಲ್ಲಿ ಮೃತ ಸೋಂಕಿತರ ಶವಸಂಸ್ಕಾರಕ್ಕೂ ಸಂಕಷ್ಟ ಎದುರಾಗಿದೆ. ನಿತ್ಯ ಮೃತಪಡುತ್ತಿರುವ ಸೋಂಕಿತರ ಹತ್ತಾರು ಶವಸಂಸ್ಕಾರದಿಂದ ಸ್ಥಳೀಯರಿಗೆ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸ್ಥಳೀಯರು ಪ್ರತಿಭಟನೆಗೆ ಮುಂದಾದರು. ಕೂಡಲೇ ಚಿತಾಗಾರವನ್ನು ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ.
ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿಯಿರುವ ಸ್ಮಶಾನದಲ್ಲಿ ನಿತ್ಯ ಹತ್ತಾರು ಶವಗಳನ್ನ ಸುಡುವುದರಿಂದ ಹೊಗೆ ಆವರಿಸುತ್ತಿದೆ. ಮರದ ಕಟ್ಟಿಗೆಯಿಂದ ಶವಗಳನ್ನ ಸುಡುವುದರಿಂದ ಸ್ಮಶಾನದ ಸುತ್ತಮುತ್ತಲಿನ ಮನೆಗಳಿಗೆ ಹೊಗೆ ಆವರಿಸುತ್ತಿದೆ. ಹೊಗೆಯಿಂದಾಗಿ ಮಕ್ಕಳು ಮತ್ತು ವೃದ್ಧರು ಮನೆಯಿಂದ ಹೊರಬರಲಾಗದೆ ಕಿರಿಕಿರಿ ಅನುಭವಿಸುತ್ತಿದ್ದಾರೆ.
ಕೊರೊನಾದಿಂದ ಜಿಲ್ಲೆಯಲ್ಲಿ ನಿತ್ಯ ಐವರು ಮೃತಪಡುತ್ತಿದ್ದಾರೆ. ಜೊತೆಗೆ, ಇತರೆ ಕಾರಣದಿಂದ ಮೃತಪಟ್ಟವರನ್ನು ಸುಡಬೇಕಾದ ಪರಿಸ್ಥಿತಿಯಿದೆ. ಏಕಕಾಲದಲ್ಲಿ ಹತ್ತಾರು ಶವಸಂಸ್ಕಾರ ನಡೆಸುತ್ತಿರುವುದರಿಂದ ಜನರಿಗೆ ಸಮಸ್ಯೆಯಾಗಿದೆ. ಕೂಡಲೇ ಸ್ಮಶಾನ ಸ್ಥಳಾಂತರ ಮಾಡುವಂತೆ ಸ್ಮಶಾನ ಬಳಿಯ KHB ಬಡಾವಣೆ ನಿವಾಸಿಗಳಿಂದ ಪ್ರತಿಭಟನೆ ನಡೆದಿದೆ.




