GST ಲೆಕ್ಕದಲ್ಲಿ ನಮಗೆ ದೊಡ್ಡ ಅನ್ಯಾಯವಾಗಿದೆ; ಈ ನಷ್ಟಕ್ಕೆ ಯಾರು ಹೊಣೆ? ಸಿದ್ದರಾಮಯ್ಯರಿಂದ ‘ಅಮಿತ’ ಪ್ರಶ್ನೆ!
ಅಮಿತ್ ಶಾ ಸುಳ್ಳನ್ನೇ ದೇವರು ಎಂದು ನಂಬಿದ್ದಾರೆ. ರಾಜ್ಯಕ್ಕೆ ಬಂದ ಅಮಿತ್ ಶಾ ಸುಳ್ಳಿನ ಮೂಟೆ ಉರುಳಿಸಿ ಕಾಂಗ್ರೆಸ್‌ನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಹೇಳಿದರು. ಈಗ ನಾನು ಹೇಳುವ ಲೆಕ್ಕವನ್ನು ಅವರು ಗಮನವಿಟ್ಟು ಓದಿ ಅದಕ್ಕೆ ತಾಳ್ಮೆಯಿಂದ ಉತ್ತರ ಕೊಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ಗಳ ಸುರಿಮಳೆಗೈದಿದ್ದಾರೆ.

ಬೆಂಗಳೂರು: ಅಮಿತ್ ಶಾ ಸುಳ್ಳನ್ನೇ ದೇವರು ಎಂದು ನಂಬಿದ್ದಾರೆ. ರಾಜ್ಯಕ್ಕೆ ಬಂದ ಅಮಿತ್ ಶಾ ಸುಳ್ಳಿನ ಮೂಟೆ ಉರುಳಿಸಿ ಕಾಂಗ್ರೆಸ್‌ನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಹೇಳಿದರು. ಈಗ ನಾನು ಹೇಳುವ ಲೆಕ್ಕವನ್ನು ಅವರು ಗಮನವಿಟ್ಟು ಓದಿ ಅದಕ್ಕೆ ತಾಳ್ಮೆಯಿಂದ ಉತ್ತರ ಕೊಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ಗಳ ಸುರಿಮಳೆಗೈದಿದ್ದಾರೆ. ಕೇಂದ್ರ ಬಜೆಟ್ಗೆ ಇನ್ನೇನು ಕೆಲವೇ ದಿನಗಳು ಇರುವ ಬೆನ್ನಲ್ಲೇ ಸಿದ್ದರಾಮಯ್ಯ ತಮ್ಮ ಲೆಕ್ಕಾಚಾರವನ್ನು ಒಪ್ಪಿಸಿದ್ದಾರೆ.
ಟ್ವೀಟ್ ಮೂಲಕ ಅಮಿತ್ ಶಾಗೆ ಲೆಕ್ಕ ಕೊಟ್ಟ ಸಿದ್ದರಾಮಯ್ಯ UPA ಆಡಳಿತದಲ್ಲಿ 45,713 ಕೋಟಿ ರೂಪಾಯಿ ನಿಗದಿಯಾಗಿದೆ. 2010/11-2013/14ರ ಅವಧಿಯಲ್ಲಿ ಹಣಕಾಸು ಆಯೋಗ ರಾಜ್ಯಕ್ಕೆ ನಿಗದಿಪಡಿಸಿದ್ದ ಕೇಂದ್ರ ತೆರಿಗೆ ಪಾಲು 45,713 ಕೋಟಿ ರೂ. ಆದರೆ ನಾವು ಪಡೆದದ್ದು 47,036 ಕೋಟಿ ರೂಪಾಯಿ. ನಿಗದಿಪಡಿಸಿದ್ದಕ್ಕಿಂತ ₹ 1.323 ಕೋಟಿ (ಶೇ. 2.9ರಷ್ಟು) ಹೆಚ್ಚು ಮೊತ್ತ ದೊರೆತಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಆದ್ರೆ ಬಿಜೆಪಿ ಆಡಳಿತ ಅವಧಿಯಲ್ಲಿ ₹ 2,03,039 ಕೋಟಿ ನಿಗದಿಯಾಗಿದೆ. 2014/15ರಿಂದ 2019/20ರವರೆಗೆ ಹಣಕಾಸು ಆಯೋಗ ರಾಜ್ಯಕ್ಕೆ ನಿಗದಿಪಡಿಸಿದ್ದ ತೆರಿಗೆ ಪಾಲು ₹2,03,039 ಕೋಟಿ. ಆದರೆ, ಸಿಕ್ಕಿದ್ದು ಕೇವಲ 1,65 963 ಕೋಟಿ ರೂಪಾಯಿ ಮಾತ್ರ. ಅಂದರೆ ₹48,768 ಕೋಟಿ (ಶೇಕಡಾ 18.2ರಷ್ಟು) ಕಡಿಮೆಯಾಗಿದೆ.
ಜೊತೆಗೆ, 2019-20ರ ವರ್ಷಕ್ಕೆ ಹಣಕಾಸು ಆಯೋಗ ರಾಜ್ಯಕ್ಕೆ ನಿಗದಿಪಡಿಸಿದ್ದ ತೆರಿಗೆ ಪಾಲು ₹ 48,768 ಕೋಟಿ. ಆದರೆ, ನಮಗೆ ಸಿಕ್ಕಿರುವುದು 30,919 ಕೋಟಿ ರೂಪಾಯಿ ಮಾತ್ರ. ಇದರ ಜೊತೆಗೆ ಬಜೆಟ್ ಗಾತ್ರ ಗಣನೆಗೆ ತೆಗೆದುಕೊಳ್ಳಬೇಕು. ಪ್ರತಿವರ್ಷ ಹೆಚ್ಚಾಗುವ ಕೇಂದ್ರ ಸರ್ಕಾರದ ಬಜೆಟ್ ಗಾತ್ರದಲ್ಲಿ ರಾಜ್ಯ ಬಜೆಟ್ 2010-21ನೇ ವರ್ಷದ ನಿರೀಕ್ಷಿತ ತೆರಿಗೆ ಪಾಲು ₹28,591 ಕೋಟಿ. ಆದರೆ, ನನ್ನ ಪ್ರಕಾರ ಪ್ರಸಕ್ತ ವರ್ಷದ ಪಾಲು ₹15,017 ಕೋಟಿಗೆ ಇಳಿದರೂ ಅಚ್ಚರಿ ಇಲ್ಲ. ಹೀಗಾದರೆ, ಇದು 2019-20ರ ಅಂದಾಜಿಗಿಂತ ನಮ್ಮ ಪಾಲು ₹33,751 ಕೋಟಿ ಕಡಿಮೆಯಾಗುತ್ತದೆ ಎಂದು ಹೇಳಿದರು.
‘GST ಪರಿಹಾರದಲ್ಲಿ ನಮಗೆ ದೊಡ್ಡ ಅನ್ಯಾಯವಾಗಿದೆ’ GST ಪರಿಹಾರದಲ್ಲಿ ನಮಗೆ ದೊಡ್ಡ ಅನ್ಯಾಯವಾಗಿದೆ. ₹25ರಿಂದ 27 ಸಾವಿರ ಕೋಟಿ ಖೋತಾ ಆಗಬಹುದು. ಇತ್ತೀಚೆಗೆ ಕೇಂದ್ರ ಸರ್ಕಾರ ಪರಿಹಾರ ನೀಡುವುದಾಗಿ ಹೇಳಿದೆ. ಆದರೆ, ₹18-19,000 ಕೋಟಿಯಷ್ಟೇ ನೀಡುವುದಾಗಿ ಹೇಳಿದೆ. ಈ ನಷ್ಟಕ್ಕೆ ಯಾರು? ಹೊಣೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಸಿದ್ದರಾಮಯ್ಯ ನೇರ ಪ್ರಶ್ನೆ ಹಾಕಿದ್ದಾರೆ.
ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಲಿರುವ ಅನುದಾನ ₹31,570 ಕೋಟಿಗಳಷ್ಟಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಅದು 17,372 ಕೋಟಿ ರೂಪಾಯಿ ಮೀರಲಾರದು. ಇದರಿಂದ 14,198 ಕೋಟಿ ರೂಪಾಯಿ ಖೋತಾ ಆಗಲಿದೆ. ರಾಜ್ಯದ ಹಣಕಾಸು ಪರಿಸ್ಥಿತಿಗೆ ಇದು ಅತಿದೊಡ್ಡ ಹೊಡೆತ ಎಂದು ಹೇಳಿದರು.
ಕರ್ನಾಟಕ ರಾಜ್ಯಕ್ಕೆ ವಿಶೇಷ ಅನುದಾನಕ್ಕೆ ₹5,495 ಕೋಟಿ ನೀಡಬೇಕೆಂದು ಶಿಫಾರಸು ಮಾಡಿತ್ತು. ಹಣಕಾಸು ಆಯೋಗ ಶಿಫಾರಸು ಮಾಡಿತ್ತು. ಈ ಅನುದಾನಕ್ಕೆ ರಾಜ್ಯದಿಂದ ಆಯ್ಕೆಯಾಗಿ ಹೋದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಡ್ಡಗಾಲು ಹಾಕಿದ್ದಾರೆ. ಇದು ಕೇಂದ್ರ ಸಚಿವ ಅಮಿತ್ ಶಾ ಗಮನಕ್ಕೆ ಬಂದಿಲ್ಲವೇ? ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದರು.
‘ಕರ್ನಾಟಕ ಕಡಿಮೆ ಅನುದಾನ ಪಡೆಯಬಹುದು’ ಒಟ್ಟಾರೆ, ಕರ್ನಾಟಕ ಕಡಿಮೆ ಅನುದಾನ ಪಡೆಯಬಹುದು. 50,000 ಕೋಟಿಯಷ್ಟು ಕಡಿಮೆ ಅನುದಾನ ಪಡೆಯಬಹುದು. ಇದರಿಂದ ಪ್ರಸಕ್ತ ಹಣಕಾಸು ವರ್ಷದ ಆದಾಯ ₹1,80,217 ಕೋಟಿಯಿಂದ ₹1,14,758 ಕೋಟಿಗೆ ಇಳಿಕೆ ಆಗಲಿದೆ ಎಂದು ಹೇಳಿದರು.
ದಶಕಗಳ ನಮ್ಮ ಒಟ್ಟು ಸಾಲ ಅಂದಾಜು ₹3.2 ಲಕ್ಷ ಕೋಟಿ. ಆದರೆ, ಈಗ ಒಂದೇ ವರ್ಷದಲ್ಲಿ ಸಿಎಂ ₹90,000 ಕೋಟಿ ಸಾಲ ಪಡೆಯಲು ನಿರ್ಧರಿಸಿದ್ದಾರೆ. ಈ ಮೂಲಕ ಶಾಶ್ವತ ಸಾಲಗಾರ ರಾಜ್ಯ ಮಾಡಲು ಬಿಜೆಪಿ ಸರ್ಕಾರ ಹೊರಟಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಜಿಎಸ್ ಟಿ ಪರಿಹಾರದಲ್ಲಿ ನಮಗೆ ದೊಡ್ಡ ಅನ್ಯಾಯವಾಗಿದೆ. ಇತ್ತೀಚಿನ ಅಂದಾಜಿನಂತೆ ಜಿಎಸ್ ಟಿ ಪರಿಹಾರದಲ್ಲಿ 25 ರಿಂದ 27 ಸಾವಿರ ಕೋಟಿ ರೂಪಾಯಿ ಖೋತಾ ಆಗಬಹುದು.
ಕೇಂದ್ರ ಸರ್ಕಾರ ಇತ್ತೀಚೆಗೆ 18-19,000 ಕೋಟಿಯಷ್ಟೇ ಪರಿಹಾರ ನೀಡುವುದಾಗಿ ಹೇಳಿದೆ. ಈ ನಷ್ಟಕ್ಕೆ ಯಾರು ಹೊಣೆ?@AmitShah#BJPBitrayKtaka6/11
— Siddaramaiah (@siddaramaiah) January 18, 2021
ಅಮಿತ್ ಶಾ ಭಾಷಣ ನೋಡಿ ನಗು ಬಂತು! ಮೋದಿಯ ‘ಆತ್ಮನಿರ್ಭರ’ ನನ್ನ ಯೋಜನೆಯ ಕಾಪಿ -ಹೆಚ್ ಡಿ ಕುಮಾರಸ್ವಾಮಿ
Published On - 5:50 pm, Mon, 18 January 21