ಕುಡುಕರಿಗೊಂದು ಕಿಕ್ ಕೊಡುವ ಸುದ್ದಿ: ಇನ್ಮುಂದೆ ಸಿಗಲಿದೆ ಆಲ್ಕೋಹಾಲ್ ಐಸ್​ ಕ್ರೀಮ್

ಮದ್ಯಪ್ರಿಯರಿಗಾಗಿ ವಿಲ್ ರೋಜರ್ಸ್ ವಿಶೇಷ ಐಸ್​ ಕ್ರೀಮ್ ಸಿದ್ದಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರೇ ಹೇಳಿರುವಂತೆ ಅವರ ಹೊಸ ಐಸ್ ಕ್ರೀಮ್ ಯಂತ್ರವನ್ನು ಎಲ್ಲಾ ಬಾರ್​ಗಳಲ್ಲಿ ಅಳವಡಿಸಲು ಯೋಚಿಸುತ್ತಿದ್ದಾರೆ.

ಕುಡುಕರಿಗೊಂದು ಕಿಕ್ ಕೊಡುವ ಸುದ್ದಿ: ಇನ್ಮುಂದೆ ಸಿಗಲಿದೆ ಆಲ್ಕೋಹಾಲ್ ಐಸ್​ ಕ್ರೀಮ್
Alcohol Ice cream
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 12, 2021 | 9:35 PM

ಐಸ್ ಕ್ರೀಮ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಅದರಲ್ಲೂ ಚಿಕ್ಕಮಕ್ಕಳಿಗಂತು ಐಸ್ ಕ್ರೀಮ್ ಕಂಡರೆ ಸಾಕು ಬಾಯಲ್ಲಿ ನೀರೂರುತ್ತೆ. ಇನ್ನು ಐಸ್​ ಕ್ರೀಮ್ ಪ್ರಿಯರು ತಮ್ಮಿಷ್ಟದ ಐಸ್​ ಕ್ರೀಮ್​ ಅನ್ನು ಬಾಯಿಗಿಟ್ಟರೆ ತಕ್ಷಣವೇ ಮೈ ಮರೆತು ಆಸ್ವಾದಿಸುತ್ತಾರೆ. ಇದಾಗ್ಯೂ ಐಸ್​ ಕ್ರೀಮ್ ಆರೋಗ್ಯಕ್ಕೆ ಒಳ್ಳೆದಾ? ಕೆಟ್ಟದಾ ಎಂಬ ಚರ್ಚೆಗಳ ಶತಮಾನಗಳಿಂದಲೂ ಚಾಲ್ತಿಯಲ್ಲಿದೆ. ಆದರೆ ಈಗ ಬಂದಿರುವ ಐಸ್​ ಕ್ರೀಮ್​ಗೆ ಟ್ಯಾಗ್​ ಲೈನ್​ ಆರೋಗ್ಯಕ್ಕೆ ಹಾನಿಕಾರಕ ಎಂದರೆ ನಂಬಲೇಬೇಕು. ಅರೆರೆ ಅದೆಂಥಾ ಐಸ್​ ಕ್ರೀಮ್ ಎಂದು ಬಾಯಿ ಬಿಡಬೇಡಿ. ಅಂತಹದೊಂದು ಐಸ್​ ಕ್ರೀಮ್ ಅನ್ನು ಪರಿಚಯಿಸಿದ್ದಾರೆ ಅಮೆರಿಕದ ವಿಲ್ ರೋಜರ್ಸ್‌.

ಅಮೆರಿಕದ ಹಿಂಕ್ಲಿಯಲ್ಲಿರುವ ತನ್ನ WDS Dessert Station ಐಸ್​ ಕ್ರೀಮ್ ಪಾರ್ಲರ್​ನಲ್ಲಿ ನಿಮಗೆ ಆಲ್ಕೋಹಾಲ್ ಹೊಂದಿರುವ ಐಸ್ ಕ್ರೀಮ್ ಸಿಗುತ್ತೆ. ಅಂದರೆ ಆಲ್ಕೋಹಾಲ್ ಮಿಶ್ರಿತ ಐಸ್​ ಕ್ರೀಮ್ ಸೇವಿಸುವ ಮೂಲಕ ನೀವು ಮತ್ತೇರಿಸಿಕೊಳ್ಳಬಹುದು. ಆಲ್ಕೋಹಾಲ್ ಮಿಶ್ರಿತ ಐಸ್​ ಕ್ರೀಮ್ ತಯಾರಿಸುವುದು ಸುಲಭವಲ್ಲ. ಆದರೆ ವಿಲ್ ರೋಜರ್ಸ್ ಸತತ ಪ್ರಯತ್ನದ ಮೂಲಕ ಕುಡುಕರಿಗೆಂದೇ ಆಲ್ಕೋಹಾಲ್ ಐಸ್​ ಕ್ರೀಮ್ ಪರಿಚಯಿಸಿದ್ದಾರೆ.

ಇಂತಹದೊಂದು ವಿಶೇಷ ಐಸ್ ​ಕ್ರೀಮ್ ತಯಾರಿಸಲು ವಿಲ್ ರೋಜರ್ಸ್ ಹಲವು ವರ್ಷಗಳಿಂದ ಪ್ರಯತ್ನ ಪಡುತ್ತಿದ್ದರು. ಕೊನೆಗೂ ವಿಶೇಷ ಐಸ್​ ಕ್ರೀಮ್​ಗಾಗಿ ಅತ್ಯಾಧುನಿಕ ಮೆಷಿನ್​ಗಳ ಮೊರೆ ಹೋದರು. ಅದರಂತೆ ಕಡಿಮೆ ಸಾಂದ್ರತೆಯ ಐಸ್​ ಕ್ರೀಮ್ ಮೆಷಿನ್ ಅನ್ನು (Below Zero Ice Cream Machine) ರೂಪಿಸಿದ್ದರು. ಆ ಬಳಿಕ ಆಲ್ಕೋಹಾಲ್ ಹಾಗೂ ಐಸ್​ ಕ್ರೀಮ್ ಮಿಶ್ರಣಕ್ಕೆ NEA ಜೆಲ್​ ಸೇರಿಸಿ ಫ್ರೀಜ್ ಮಾಡಿದರು. ಈ ವೇಳೆ ಐಸ್​ ಕ್ರೀಮ್ ಹಾಗೂ ಆಲ್ಕೋಹಾಲ್ ಮಿಶ್ರಣ ಹೆಪ್ಪುಗಟ್ಟುತ್ತಿರುವುದು ಕಂಡು ಬಂದಿದೆ. ಇನ್ನೇನು ತಂಡ ಎಂಬಂತೆ ಆಲ್ಕೋಹಾಲ್ ಐಸ್ ಕ್ರೀಮ್​ ಅನ್ನು ಘೋಷಿಸಿಯೇ ಬಿಟ್ಟರು.

ಜೆಲ್‌ನಲ್ಲಿ ಆಲ್ಕೋಹಾಲ್ ಬೆರೆಸಿದ ನಂತರ, ಅದೇ ಐಸ್ ಕ್ರೀಮ್ ಆಲ್ಕೋಹಾಲ್ ಐಸ್ ಕ್ರೀಮ್‌ನಂತೆ ಹೊರಬರುತ್ತದೆ. ಈ ಹೊಸ ಯಂತ್ರವು ಕಾಕ್ಟೇಲ್ ಮತ್ತು ಸ್ಪಿರಿಟ್‌ಗಳ ವಿನ್ಯಾಸವನ್ನು ಸ್ವಲ್ಪ ಬದಲಾಯಿಸುತ್ತದೆ ಎಂದು ರೋಜರ್ಸ್ ವಿವರಿಸುತ್ತಾರೆ. ಆದಾಗ್ಯೂ, ಅದರ ರುಚಿಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಅಂದರೆ, ಐಸ್ ಕ್ರೀಮ್ ತಿನ್ನುವುದರ ಮೂಲಕ ಅದೇ ಆಲ್ಕೋಹಾಲ್ ಅಂಶವು ದೇಹದ ಒಳಗೆ ಹೋಗುತ್ತದೆ. ಹೀಗಾಗಿ ಐಸ್​ ಕ್ರೀಮ್ ಸೇವಿಸಿದ ಫೀಲ್​ನೊಂದಿಗೆ ಅಮಲಿನಲ್ಲಿರಬಹುದು ಎನ್ನುತ್ತಾರೆ ವಿಲ್ ರೋಜರ್ಸ್.

ಹೆಚ್ಚಿನ ಆಲ್ಕೋಹಾಲ್ ಅಂಶವಿರುವ ಐಸ್ ಕ್ರೀಮ್ ತಯಾರಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಗ್ರಾಹಕರ ಬೇಡಿಕೆಯಂತೆ ಅವರ ಮದ್ಯದ ರುಚಿಗೆ ತಕ್ಕಂತೆ WDS ಐಸ್​ ಕ್ರೀಮ್ ಪಾರ್ಲರ್​ನಲ್ಲಿ ಆಲ್ಕೋಹಾಲ್ ಐಸ್ ಕ್ರೀಮ್ ನೀಡುತ್ತಿದ್ದೇವೆ. ಅಲ್ಲದೆ ಈಗಾಗಲೇ ಹಲವು ಕಾರ್ಯಕ್ರಮಗಳಿಗೂ ನಾವು ಆಲ್ಕೋಹಾಲ್ ಐಸ್ ಕ್ರೀಮ್ ಸರಬರಾಜು ಮಾಡಿದ್ದೇನೆ. ಇನ್ನು ಈ ವಿಶೇಷ ಯಂತ್ರವನ್ನು ಬಾರ್‌ಗಳಲ್ಲಿ ಸ್ಥಾಪಿಸಲು ಯೋಜಿಸಿದ್ದೇನೆ ಎಂದಿದ್ದಾರೆ ವಿಲ್ ರೋಜರ್ಸ್.

ಒಟ್ಟಿನಲ್ಲಿ ಮದ್ಯಪ್ರಿಯರಿಗಾಗಿ ವಿಲ್ ರೋಜರ್ಸ್ ವಿಶೇಷ ಐಸ್​ ಕ್ರೀಮ್ ಸಿದ್ದಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರೇ ಹೇಳಿರುವಂತೆ ಅವರ ಹೊಸ ಐಸ್ ಕ್ರೀಮ್ ಯಂತ್ರವನ್ನು ಎಲ್ಲಾ ಬಾರ್​ಗಳಲ್ಲಿ ಅಳವಡಿಸಲು ಯೋಚಿಸುತ್ತಿದ್ದಾರೆ. ಹೀಗಾಗಿ ಮುಂದೊಂದು ದಿನ ಆಲ್ಕೋಹಾಲ್-ಐಸ್​ ಕ್ರೀಮ್ ಯಂತ್ರ ಭಾರತಕ್ಕೂ ಕಾಲಿಟ್ಟರೂ ಅಚ್ಚರಿ ಪಡಬೇಕಿಲ್ಲ.

ಇದನ್ನೂ ಓದಿ: Health Tips : ಇದು ನಿಮಗೆ ಗೊತ್ತೇ? ಬೆಳ್ಳುಳ್ಳಿ ಸಿಪ್ಪೆಯಿಂದ ಸಿಗುತ್ತೆ ಹಲವು ಪ್ರಯೋಜನಗಳು

ಇದನ್ನೂ ಓದಿ: India vs England: 2ನೇ ಟೆಸ್ಟ್ ವೇಳೆ ಮಳೆಯಾಗಲಿದೆಯಾ? ಇಲ್ಲಿದೆ 5 ದಿನಗಳ ಸಂಪೂರ್ಣ ಹವಾಮಾನ ವರದಿ

ಇದನ್ನೂ ಓದಿ: Toyota Cars: ಜೋಳ ನೀಡಿ ಟೊಯೋಟಾ ಕಾರು ಖರೀದಿಸುವ ಅವಕಾಶ

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು