Gold Cleaning Hacks: ಮನೆಯಲ್ಲಿಯೇ ಸುಲಭವಾಗಿ ಆಭರಣ ಸ್ವಚ್ಛಗೊಳಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

ಹೆಣ್ಣು ಮಕ್ಕಳಿಗೆ ಚಿನ್ನ ಆಭರಣವೆಂದರೆ ಬಲು ಪ್ರಿಯ, ಇದು ಪ್ರತಿಷ್ಠೆಯ ಸಂಕೇತವು ಆಗಿದೆ. ಆಭರಣಗಳನ್ನು ಖರೀದಿಸುವ ಮಹಿಳೆಯರು ಅದನ್ನು ಜೋಪಾನವಾಗಿಟ್ಟುಕೊಳ್ಳುವುದು ಅಷ್ಟೇ ಮುಖ್ಯ. ಈ ಬೆಲೆಬಾಳುವ ಆಭರಣಗಳನ್ನು ಅಂಗಡಿಯಲ್ಲಿ ಸ್ವಚ್ಚಗೊಳಿಸಲು ಕೊಡುವ ಬದಲು ಮನೆಯಲ್ಲಿ ಸುಲಭವಾಗಿ ಫಳಫಳನೆ ಹೊಳೆಯುವಂತೆ ಮಾಡಬಹುದು. ಅದೇಗೆ ಅಂತೀರಾ ಈ ಕೆಲವು ಸಲಹೆಗಳನ್ನು ಅನುಸರಿಸಿದರೆ ಸಾಕು.

Gold Cleaning Hacks: ಮನೆಯಲ್ಲಿಯೇ ಸುಲಭವಾಗಿ ಆಭರಣ ಸ್ವಚ್ಛಗೊಳಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 21, 2024 | 5:27 PM

ಹಬ್ಬ ಹರಿದಿನಗಳು ಹತ್ತಿರ ಬರುತ್ತಿದ್ದಂತೆ ಹೆಣ್ಣು ಮಕ್ಕಳು ಚಿನ್ನದ ಆಭರಣಗಳನ್ನು ಧರಿಸುತ್ತಾರೆ. ಆದರೆ ಈ ಒಡವೆಗಳು ಕಳೆಗುಂದಿದ್ದರೆ ನೋಡಲು ಆಕರ್ಷಕವಾಗಿ ಕಾಣುವುದಿಲ್ಲ. ಅಂಗಡಿಯಲ್ಲಿ ಪಾಲಿಶ್ ಕೊಡಲು ಸಮಯವಿಲ್ಲ ಎನ್ನುವವರು ಮನೆಯಲ್ಲಿ ಸುಲಭವಾಗಿ ನಿಮ್ಮ ಬಂಗಾರದ ಆಭರಣಗಳನ್ನು ತೊಳೆಯುವ ಮೂಲಕ ಒಡವೆಗಳನ್ನು ಫಳಫಳನೆ ಹೊಳೆಯುವಂತೆ ಮಾಡಬಹುದು.

* ಡಿಟರ್ಜೆಂಟ್ ಸೋಪ್ : ಒಂದು ಬಟ್ಟಲಿನಲ್ಲಿ ಡಿಟರ್ಜೆಂಟ್ ಸೋಪ್ ದ್ರವವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ ಮಿಶ್ರಣ ಮಾಡಿ ಚಿನ್ನದ ಆಭರಣವನ್ನು ನೆನೆಸಿಟ್ಟುಕೊಳ್ಳಿ. ಹತ್ತು ಹದಿನೈದು ನಿಮಿಷಗಳ ಬಳಿಕ ಮೃದುವಾದ ಟೂತ್ ಬ್ರಷ್ ನಿಂದ ಕೊಳೆಯಾಗಿರುವ ಒಡವೆಗಳ ಭಾಗವನ್ನು ಚೆನ್ನಾಗಿ ಉಜ್ಜಿ ತೊಳೆಯಿರಿ. ಒಣಗಿರುವ ಕಾಟನ್ ಬಟ್ಟೆಯಿಂದ ಈ ಒಡವೆಗಳನ್ನು ಒರೆಸಿದರೆ ಆಭರಣಗಳು ಫಳಫಳನೆ ಹೊಳೆಯುತ್ತದೆ.

* ವಿನೆಗರ್ : ಒಂದು ಬಟ್ಟಲಿನಲ್ಲಿ ನೀರು ತೆಗೆದುಕೊಂಡು ಅದಕ್ಕೆ ವಿನೆಗರ್ ಬೆರೆಸಿ ಮಿಶ್ರಣ ಮಾಡಿಟ್ಟುಕೊಳ್ಳಿ. ಟೂತ್ ಬ್ರಷ್ ಬಳಸಿ ಒಡವೆಗಳನ್ನು ಈ ಮಿಶ್ರಣದಿಂದ ತೊಳೆಯಿರಿ. ಆ ಬಳಿಕ ಒಣ ಬಟ್ಟೆಯಲ್ಲಿ ಒರೆಸಿದರೆ ಆಭರಣವು ಸ್ವಚ್ಛವಾಗುತ್ತದೆ.

* ಟೂತ್ ಪೇಸ್ಟ್ : ಆಭರಣಗಳು ಟೂತ್ಪೇಸ್ಟ್ ಬಳಸಬಹುದು. ಇದರಲ್ಲಿ ಫ್ಲೂರೈಡ್ ಒಡವೆಗಳನ್ನು ಸ್ವಚ್ಛಗೊಳಿಸಿ ಹೊಳಪನ್ನು ಮರಳಿ ತರುತ್ತದೆ. ಟೂತ್ ಪೇಸ್ಟ್ ನಿಂದ ಉಜ್ಜಿ ತೊಳೆದರೆ ನೀರಿನಲ್ಲಿ ತೊಳೆದರೆ ಆಭರಣಗಳು ಹೊಳಪು ಕಾಣುತ್ತವೆ.

* ಬೇಕಿಂಗ್ ಸೋಡಾ : ಕೇವಲ ಆಭರಣಗಳನ್ನು ಸ್ವಚ್ಛ ಮಾಡಲು ಬೇಕಿಂಗ್ ಸೋಡಾವನ್ನು ಬಳಸಬಹುದು. ಒಂದು ಪಾತ್ರೆಗೆ ನೀರು ಹಾಗೂ ಬೇಕಿಂಗ್ ಸೋಡಾ ಸೇರಿಸಿ ಇದರಿಂದ ಆಭರಣಗಳನ್ನು ಸ್ವಚ್ಛಗೊಳಿಸಿ ಬಟ್ಟೆಯಿಂದ ಒರೆಸಿದರೆ ಹೊಸದರಂತೆ ಕಾಣುತ್ತವೆ.​

ಇದನ್ನೂ ಓದಿ: ಶ್ರೀಕೃಷ್ಣ ಜನ್ಮಾಷ್ಟಮಿಗೆ ಮನೆಯ ಅಲಂಕಾರ ಹೀಗಿರಲಿ

* ನಿಂಬೆ ರಸ : ಒಂದು ಪಾತ್ರೆಯಲ್ಲಿ ನಿಂಬೆಹಣ್ಣಿನ ರಸ ಹಿಂಡಿಕೊಂಡು ಅದರಲ್ಲಿ ಒಡವೆಗಳನ್ನು ನೆನೆಸಿಟ್ಟುಕೊಳ್ಳಿ. ಟೂತ್ ಬ್ರಷ್ ನಲ್ಲಿ ನಿಂದ ಕೊಳೆಯಿರುವಲ್ಲಿ ಉಜ್ಜಿದರೆ ಒಡವೆಗಳ ಕೊಳೆಯೂ ದೂರವಾಗಿ ಆಭರಣವು ಹೊಳೆಯುತ್ತದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಂಪಾದನೆ ಎಷ್ಟೇ ಇರಲಿ ಉಳಿತಾಯ ಮಾಡಲೇಬೇಕು: ಭವ್ಯಾ ಗೌಡ
ಸಂಪಾದನೆ ಎಷ್ಟೇ ಇರಲಿ ಉಳಿತಾಯ ಮಾಡಲೇಬೇಕು: ಭವ್ಯಾ ಗೌಡ
ತ್ರಿವಿಕ್ರಮ ಜೊತೆ ಗೆಳೆತನ ಅಷ್ಟೇ, ಪೊಸ್ಸೆಸ್ಸಿವ್​ನೆಸ್ ಇರಲಿಲ್ಲ: ಭವ್ಯಾ
ತ್ರಿವಿಕ್ರಮ ಜೊತೆ ಗೆಳೆತನ ಅಷ್ಟೇ, ಪೊಸ್ಸೆಸ್ಸಿವ್​ನೆಸ್ ಇರಲಿಲ್ಲ: ಭವ್ಯಾ
‘ನನ್ನ, ತ್ರಿವಿಕ್ರಮ್ ನಡುವೆ ಏನೂ ಇಲ್ಲ, ಪದೇ ಪದೇ ಇದೇ ಹೇಳೋಕಾಗಲ್ಲ’: ಭವ್ಯಾ
‘ನನ್ನ, ತ್ರಿವಿಕ್ರಮ್ ನಡುವೆ ಏನೂ ಇಲ್ಲ, ಪದೇ ಪದೇ ಇದೇ ಹೇಳೋಕಾಗಲ್ಲ’: ಭವ್ಯಾ
ವಿಜಯೇಂದ್ರ ವಿರುದ್ಧ ನಡ್ಡಾ ಜೀಗೆ ಪತ್ರ ಬರೆದಿರುವುದು ನಿಜ: ಯತ್ನಾಳ್
ವಿಜಯೇಂದ್ರ ವಿರುದ್ಧ ನಡ್ಡಾ ಜೀಗೆ ಪತ್ರ ಬರೆದಿರುವುದು ನಿಜ: ಯತ್ನಾಳ್
ಹೊಸ ಗೆಟಪ್ ನಲ್ಲಿ ಸಭೆಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್!
ಹೊಸ ಗೆಟಪ್ ನಲ್ಲಿ ಸಭೆಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್!
ರೈಲ್ವೆ ಟಿಕೆಟ್ ಕಲೆಕ್ಟರ್ ವೇಗಕ್ಕೆ ಶರಣಾದ ಕ್ರಿಕೆಟ್ ಸಾಮ್ರಾಟ..!
ರೈಲ್ವೆ ಟಿಕೆಟ್ ಕಲೆಕ್ಟರ್ ವೇಗಕ್ಕೆ ಶರಣಾದ ಕ್ರಿಕೆಟ್ ಸಾಮ್ರಾಟ..!
ಪಕ್ಷದ ನಾಯಕರು ಒಂದೆಡೆ ಸೇರಿ ಊಟ ಮಾಡುವುದು ತಪ್ಪಲ್ಲ: ಸಿದ್ದರಾಮಯ್ಯ
ಪಕ್ಷದ ನಾಯಕರು ಒಂದೆಡೆ ಸೇರಿ ಊಟ ಮಾಡುವುದು ತಪ್ಪಲ್ಲ: ಸಿದ್ದರಾಮಯ್ಯ
ಬಿಜೆಪಿ ಆಂತರಿಕ ಕಚ್ಚಾಟ ನೆಚ್ಚಿಕೊಂಡು ಸರ್ಕಾರ ನಡೆಸುತ್ತಿಲ್ಲ: ಶಿವಕುಮಾರ್
ಬಿಜೆಪಿ ಆಂತರಿಕ ಕಚ್ಚಾಟ ನೆಚ್ಚಿಕೊಂಡು ಸರ್ಕಾರ ನಡೆಸುತ್ತಿಲ್ಲ: ಶಿವಕುಮಾರ್
ಎಸ್ಟಿ ಸಮುದಾಯದ ಶ್ರೀಗಳು ಜಾತ್ರೆಗೆ ಆಹ್ವಾನಿಸಲು ಬಂದಿದ್ದರು: ಪರಮೇಶ್ವರ್
ಎಸ್ಟಿ ಸಮುದಾಯದ ಶ್ರೀಗಳು ಜಾತ್ರೆಗೆ ಆಹ್ವಾನಿಸಲು ಬಂದಿದ್ದರು: ಪರಮೇಶ್ವರ್
ವಿರಾಟ್ ಕೊಹ್ಲಿ ಒಂದಂಕಿಗೆ ಔಟ್ ಆಗುತ್ತಿದ್ದಂತೆ ಸ್ಟೇಡಿಯಂ ಖಾಲಿ ಖಾಲಿ
ವಿರಾಟ್ ಕೊಹ್ಲಿ ಒಂದಂಕಿಗೆ ಔಟ್ ಆಗುತ್ತಿದ್ದಂತೆ ಸ್ಟೇಡಿಯಂ ಖಾಲಿ ಖಾಲಿ