ಬ್ರೊಕೋಲಿಯನ್ನು ಆಹಾರದಲ್ಲಿ ಯಾವ ರೀತಿ ಸೇರಿಸಿಕೊಳ್ಳಬಹುದು? ಇಲ್ಲಿದೆ ಮಾಹಿತಿ
ಬ್ರೊಕೋಲಿ ಅತ್ಯಂತ ರುಚಿಕರ ಮತ್ತು ಪೌಷ್ಟಿಕ ತರಕಾರಿಗಳಲ್ಲಿ ಒಂದಾಗಿದೆ. ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಬ್ರೊಕೋಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಫ್ರೀ ರಾಡಿಕಲ್ ಹಾನಿಯನ್ನು ಎದುರಿಸುತ್ತದೆ, ಹಲವಾರು ರೋಗಗಳ ಅಪಾಯವನ್ನು ತಡೆಯುತ್ತದೆ. ಹಾಗಾದರೆ ಬ್ರೊಕೋಲಿಯನ್ನು ಹೇಗೆ ಸೇವನೆ ಮಾಡುವುದು ಎಂದು ಯೋಚಿಸುತ್ತಿದ್ದೀರಾ? ನಿಮ್ಮ ದೈನಂದಿನ ಆಹಾರದಲ್ಲಿ ಬ್ರೊಕೋಲಿಯನ್ನು ಸೇರಿಸಲು ಮತ್ತು ಅದರ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಪೌಷ್ಟಿಕತಜ್ಞರು ಶಿಫಾರಸು ಮಾಡಿದ 7 ಮಾರ್ಗಗಳು ಇಲ್ಲಿವೆ.

ಬ್ರೊಕೋಲಿ ಅತ್ಯಂತ ರುಚಿಕರ ಮತ್ತು ಪೌಷ್ಟಿಕ ತರಕಾರಿಗಳಲ್ಲಿ ಒಂದಾಗಿದೆ. ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಬ್ರೊಕೋಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಫ್ರೀ ರಾಡಿಕಲ್ ಹಾನಿಯನ್ನು ಎದುರಿಸುತ್ತದೆ, ಹಲವಾರು ರೋಗಗಳ ಅಪಾಯವನ್ನು ಕೂಡ ತಡೆಯುತ್ತದೆ. ಇದನ್ನು ಊಟ, ತಿಂಡಿಗಳಲ್ಲಿ ಹಲವಾರು ರೀತಿಯಲ್ಲಿ ಬಳಸಬಹುದು. ಹಾಗಾದರೆ ಬ್ರೊಕೋಲಿಯನ್ನು ಆಹಾರದಲ್ಲಿ ಯಾವ ರೀತಿ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಬ್ರೊಕೋಲಿಯನ್ನು ಏಕೆ ಆಹಾರದಲ್ಲಿ ಸೇರಿಸಿಕೊಳ್ಳಬೇಕು?
ನಿಮ್ಮ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಬ್ರೊಕೋಲಿ ತಿನ್ನಬಹುದಾಗಿದೆ. ಇದು ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಈ ವಿಷಯದ ಬಗ್ಗೆ ಪೌಷ್ಟಿಕತಜ್ಞ ನುಪುರ್ ಪಾಟೀಲ್ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, “ವಿಟಮಿನ್ ಸಿ ಮತ್ತು ಕೆ, ಫೋಲೇಟ್ ಮತ್ತು ಫೈಬರ್ ನಿಂದ ತುಂಬಿರುವ ಬ್ರೊಕೋಲಿಯು ರೋಗನಿರೋಧಕ ವ್ಯವಸ್ಥೆಯನ್ನು ಬೆಂಬಲಿಸುತ್ತದೆ, ರಕ್ತ ಹೆಪ್ಪುಗಟ್ಟುವಿಕೆಗೆ ಸಹಾಯ ಮಾಡುತ್ತದೆ ಮತ್ತು ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ. ಇದರ ಹೆಚ್ಚಿನ ಉತ್ಕರ್ಷಣ ನಿರೋಧಕ ಅಂಶವು ಉರಿಯೂತವನ್ನು ಎದುರಿಸಲು ಸಹಾಯ ಮಾಡುತ್ತದೆ, ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕೂಡ ಕಡಿಮೆ ಮಾಡುತ್ತದೆ. ಸಲ್ಫೋರಾಫೇನ್ ನಿಂದ ಸಮೃದ್ಧವಾಗಿರುವ ಇದು ಹಾನಿಕಾರಕ ಸಂಯುಕ್ತಗಳನ್ನು ತಟಸ್ಥಗೊಳಿಸುವ ಮೂಲಕ ಕ್ಯಾನ್ಸರ್ ತಡೆಗಟ್ಟುವಿಕೆಗೆ ಕೊಡುಗೆ ನೀಡಬಹುದು. ಹೆಚ್ಚುವರಿಯಾಗಿ, ಇದರ ಫೈಬರ್ ಅಂಶವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಹೊಟ್ಟೆ ತುಂಬಿದ ಭಾವನೆಯನ್ನು ಉತ್ತೇಜಿಸುತ್ತದೆ, ತೂಕ ನಿರ್ವಹಣೆಯನ್ನು ಬೆಂಬಲಿಸುತ್ತದೆ. ಆದ್ದರಿಂದ, ನಿಮ್ಮ ದೈನಂದಿನ ಆಹಾರದಲ್ಲಿ ಬ್ರೊಕೋಲಿಯನ್ನು ಸೇರಿಸುವುದರಿಂದ ಪೌಷ್ಟಿಕ ಮತ್ತು ಸಮತೋಲಿತ ಆಹಾರವನ್ನು ಸೇವನೆ ಮಾಡಿದ ಹಾಗಾಗುತ್ತದೆ.
ಬ್ರೊಕೋಲಿ ತಿನ್ನಲು 7 ಆಹ್ಲಾದಕರ ಮಾರ್ಗಗಳು ಇಲ್ಲಿವೆ
1. ಸಲಾಡ್: ಬ್ರೊಕೋಲಿಯನ್ನು ಸಲಾಡ್ಗಳಲ್ಲಿ ಸೇರಿಸುವ ಮೂಲಕ ಪೋಷಕಾಂಶ ಭರಿತ ಆಹಾರವಾಗಿ ಪರಿವರ್ತಿಸಿಕೊಳ್ಳಿ. ಇದರ ಜೊತೆಯಲ್ಲಿ ಕೆಲವು ಸೊಪ್ಪು, ಚೆರ್ರಿ, ಟೊಮೆಟೊ ಮತ್ತು ರುಚಿಕರವಾದ ತರಕಾರಿಗಳನ್ನು ಸೇರಿಸಿಕೊಳ್ಳಿ. ಬ್ರೊಕೋಲಿ ನಿಮ್ಮ ಸಲಾಡ್ನ ಪರಿಮಳವನ್ನು ಹೆಚ್ಚಿಸುತ್ತದೆ ಅದರ ಜೊತೆಗೆ ಕುರುಕಲು ರುಚಿಯನ್ನು ಕೂಡ ನಿಮಗೆ ನೀಡುತ್ತದೆ.
2. ಸೂಪ್: ಚಳಿಗಾಲದಲ್ಲಿ ನೀವು ಸೂಪ್ ಅನ್ನು ಆನಂದಿಸಲು ಇಷ್ಟಪಡುತ್ತಿದ್ದರೆ, ಬ್ರೊಕೋಲಿಯೊಂದಿಗೆ ಅದನ್ನು ಇನ್ನಷ್ಟು ಆರೋಗ್ಯಕರವಾಗಿಸಬಹುದು. ಬೇಯಿಸಿದ ಬ್ರೊಕೋಲಿಯನ್ನು ಬೆಳ್ಳುಳ್ಳಿ ಮತ್ತು ಈರುಳ್ಳಿಯೊಂದಿಗೆ ಬೆರೆಸುವುದರಿಂದ ರುಚಿ ಇನ್ನಷ್ಟು ಹೆಚ್ಚಾಗುತ್ತದೆ. ಜೊತೆಗೆ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲವಾಗಿ ಕಾರ್ಯ ನಿರ್ವಹಿಸುತ್ತದೆ. ಅದಲ್ಲದೆ ನಿಮ್ಮ ರುಚಿಗೆ ತಕ್ಕಂತೆ ವಿವಿಧ ಮಸಾಲೆಗಳನ್ನು ಇದಕ್ಕೆ ಸೇರಿಸಿಕೊಳ್ಳಬಹುದು.
3. ಪಾಸ್ತಾ: ಬ್ರೊಕೋಲಿ ಸೇವನೆಯನ್ನು ಹೆಚ್ಚಿಸಲು, ಇದನ್ನು ನಿಮ್ಮ ಪಾಸ್ತಾಗಳಿಗೆ ಸೇರಿಸಿಕೊಳ್ಳಬಹುದು. ಇದನ್ನು ಕತ್ತರಿಸಿ ನಿಮ್ಮ ಪಾಸ್ತಾ ಮಾಡುವ ಒಂದೆರಡು ನಿಮಿಷಗಳ ಮೊದಲು ಕುದಿಯುವ ನೀರಿಗೆ ಹಾಕಿಕೊಳ್ಳಿ. ಈ ತ್ವರಿತ ಸೇರ್ಪಡೆಯು ಪೌಷ್ಠಿಕಾಂಶದ ಮೌಲ್ಯವನ್ನು ಹೆಚ್ಚಿಸುತ್ತದೆ ಅದಲ್ಲದೆ ಬ್ರೊಕೋಲಿಯನ್ನು ಆನಂದಿಸಲು ಇದು ಅತ್ಯಂತ ರುಚಿಕರವಾದ ಮಾರ್ಗವಾಗಿದೆ.
4. ಸ್ಮೂಥಿ: ಪೋಷಕಾಂಶಗಳಿಂದ ತುಂಬಿದ ಬ್ರೊಕೋಲಿಯನ್ನು ನಿಮ್ಮ ಬೆಳಿಗ್ಗೆ ಸ್ಮೂಥಿಯಲ್ಲಿ ಮಿಶ್ರಣ ಮಾಡಿ. ಇದರ ಸೌಮ್ಯ ರುಚಿಯು ಬೆರ್ರಿ ಮತ್ತು ಬಾಳೆಹಣ್ಣುಗಳಂತಹ ಹಣ್ಣುಗಳೊಂದಿಗೆ ಚೆನ್ನಾಗಿ ಬೆರೆಯುತ್ತದೆ, ಇದರ ಸೇರ್ಪಡೆಯೂ ನಿಮ್ಮ ಆಹಾರಕ್ಕೆ ಜೀವಸತ್ವಗಳು, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳ ಪ್ರಮಾಣವನ್ನು ಒದಗಿಸುತ್ತದೆ, ಆರೋಗ್ಯಕರ ಆಹಾರವನ್ನು ಉತ್ತೇಜಿಸುತ್ತದೆ.
ಇದನ್ನೂ ಓದಿ: ನೀವೇ ತಿನ್ಕೊಳ್ಳಿ ನಿಮ್ ಕ್ಯಾರೆಟ್, ಬ್ರೊಕೋಲಿ; ನಿರಾಕರಣೆಯ ವ್ರತದಲ್ಲಿ ಈ ಶ್ವಾನೋತ್ತಮರು
5. ವೆಜಿಟೇಬಲ್ ಸ್ಟಿರ್- ಫ್ರೈ: ಬ್ರೊಕೋಲಿಯನ್ನು ತರಕಾರಿ ಸ್ಟಿರ್- ಫ್ರೈನಲ್ಲಿ ಸೇರಿಸುವ ಮೂಲಕ ನಿಮ್ಮ ದೈನಂದಿನ ಆಹಾರದಲ್ಲಿ ಸಲೀಸಾಗಿ ಸೇರಿಸಿ. ರುಚಿಕರವಾದ ಮತ್ತು ಪೌಷ್ಟಿಕ ಆಹಾರಕ್ಕಾಗಿ ಬ್ರೊಕೋಲಿಯನ್ನು ಹುರಿದುಕೊಳ್ಳಬಹುದು. ಇದರ ಪರಿಮಳವನ್ನು ಇನ್ನಷ್ಟು ಹೆಚ್ಚಿಸಲು, ನೀವು ಬೆಳ್ಳುಳ್ಳಿ, ಶುಂಠಿ ಮತ್ತು ಸೋಯಾ ಸಾಸ್ನ ಸ್ಪ್ಲಾಶ್ ಅನ್ನು ಸಹ ಸೇರಿಸಬಹುದು. ಇದು ತ್ವರಿತ, ಆರೋಗ್ಯಕರ ಮಾರ್ಗವಾಗಿದೆ, ಅಲ್ಲದೆ ಇದು ರಾತ್ರಿ ಭೋಜನಕ್ಕೂ ಕೂಡ ಆರೋಗ್ಯಕರ ಆಯ್ಕೆಯಾಗಿದೆ.
6. ಮನೆಯಲ್ಲಿ ತಯಾರಿಸಿದ ಪಿಜ್ಜಾಗಳಲ್ಲಿ ಸೇರಿಸಿಕೊಳ್ಳಿ: ಮನೆಯಲ್ಲಿ ತಯಾರಿಸಿದ ಪಿಜ್ಜಾಗಳೊಂದಿಗೆ ಬ್ರೊಕೋಲಿ ಸೇವನೆಯನ್ನು ಹೆಚ್ಚಿಸಿಕೊಳ್ಳಬಹುದು. ಬ್ರೊಕೋಲಿಯನ್ನು ಸಣ್ಣದಾಗಿ ಕತ್ತರಿಸಿ ಬೇಕಿಂಗ್ ಮಾಡುವ ಮೂಲಕ ನಿಮ್ಮ ಪಿಜ್ಜಾಗಳಲ್ಲಿ ಸೇರಿಸಿ. ಆ ಶಾಖವು ಬ್ರೊಕೋಲಿಯನ್ನು ಮೃದುಗೊಳಿಸುತ್ತದೆ, ಜೊತೆಗೆ ಅದರ ಪರಿಮಳವನ್ನು ಹೆಚ್ಚಿಸುತ್ತದೆ. ಹಾಗಾಗಿ ಇದು ಬ್ರೊಕೋಲಿಯನ್ನು ಆನಂದಿಸಲು ಸಂತೋಷದಾಯಕ ಮತ್ತು ಸುಲಭ ಮಾರ್ಗವಾಗಿದೆ.
7. ಆಮ್ಲೆಟ್ಗಳಲ್ಲಿ ಬ್ರೊಕೋಲಿ: ನಿಮ್ಮ ಬೆಳಗಿನ ಆಮ್ಲೆಟ್ ಅಥವಾ ಬೇಯಿಸಿದ ಮೊಟ್ಟೆಗಳಿಗೆ ಬ್ರೊಕೋಲಿಯನ್ನು ಸೇರಿಸುವ ಮೂಲಕ ಪೌಷ್ಟಿಕ ಉಪಾಹಾರದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ. ಬ್ರೊಕೋಲಿ ಹೂವುಗಳನ್ನು ನಿಮ್ಮ ಇತರ ನೆಚ್ಚಿನ ತರಕಾರಿಗಳ ಜೊತೆಯಲ್ಲಿ ಹುರಿಯಿರಿ ಮತ್ತು ಅವುಗಳನ್ನು ಆಮ್ಲೆಟ್ಗಳಲ್ಲಿ ಸುತ್ತಿಕೊಂಡು ರೋಲ್ ರೀತಿಯಲ್ಲಿ ತಿನ್ನಿರಿ. ಇದು ನಿಮ್ಮ ಪೌಷ್ಠಿಕಾಂಶವನ್ನು ಹೆಚ್ಚಿಸುವುದಲ್ಲದೆ ಒಳ್ಳೆಯ ರುಚಿಯನ್ನು ನೀಡುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




